![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Nov 19, 2019, 1:11 PM IST
ಚಿಕ್ಕಮಗಳೂರು: ಯಾರು ಯಾರ ಮನೆಗೆ ಭೇಟಿ ಕೊಟ್ರೂ, ಫಲಿತಾಂಶವನ್ನು ನೀವೇ ನೋಡಿ, ಹುಣಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ದೊಡ್ಡ ಬಹುಮತದಿಂದ ಗೆಲ್ಲುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿಕೆ ನೀಡಿದ್ಧಾರೆ.
ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರ ಮನೆಗೆ ಅನರ್ಹ ಶಾಸಕ, ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ಭೇಟಿ ನೀಡಿದ ಹಿನ್ನಲೆ ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ವಿಶ್ವನಾಥ್ ಅವರನ್ನು ಗೌರವದಿಂದ ನೋಡಿಕೊಂಡಿದ್ದೀವಿ. ಅವರು ಜೆಡಿಎಸ್ ಸೇರಿ ಶಾಸಕರಾದರು, ಈಗ ಬಿಜೆಪಿ ಸೇರಿದ್ದಾರೆ. ಅವರಿಗೆ ಯಾವ ಸಿದ್ದಾಂತ, ನೈತಿಕತೆ ಇದೆ. ವಿಶ್ವನಾಥ್ ಯಾವ ಕಾರಣಕ್ಕೆ ಬಿಜೆಪಿ ಸೇರಿದ್ದಾರೆ ಅನ್ನೋದು ರಾಜ್ಯಕ್ಕೆ ಗೊತ್ತು ನೈತಿಕತೆ ಇಲ್ಲದವರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ. ವಿಶ್ವನಾಥ್ ಈ ಮಟ್ಟಕ್ಕೆ ಇಳಿದರಲ್ಲ ಎಂದು ನನಗೆ ತುಂಬಾ ನೋವಾಗುತ್ತೆ ಎಂದರು.
You seem to have an Ad Blocker on.
To continue reading, please turn it off or whitelist Udayavani.