ರಾಜ್ಯಸಭೆಗೆ 250ನೇ ಅಧಿವೇಶನ ಸಂಭ್ರಮ: ಇಲ್ಲಿದೆ ಕೆಲವು ಕುತೂಹಲಕಾರಿ ಅಂಶಗಳು
Team Udayavani, Nov 19, 2019, 3:33 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಸೋಮವಾರದಿಂದ ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಈ ಅಧಿವೇಶನದ ಮೂಲಕ 67 ವರ್ಷಗಳ ಇತಿಹಾಸವುಳ್ಳ ರಾಜ್ಯಸಭೆ ತನ್ನ 250ನೇ ಆಧಿವೇಶನದ ಸಂಭ್ರಮದಲ್ಲಿದೆ. 1952ರ ಮೇ 13ರಂದು ಮೊದಲ ಅಧಿವೇಶನಕ್ಕೆ ಸಾಕ್ಷಿಯಾಗಿತ್ತು.
ಈ ಕುರಿತಂತೆ ಮೇಲ್ಮನೆಯ ಇತಿಹಾಸ ಮತ್ತು ಪ್ರಮುಖ ಘಟನೆಗಳನ್ನು ಸಾರುವ ಕೈಪಿಡಿಯನ್ನು ಉಪರಾಷ್ಟ್ರಪತಿಗಳು ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಹಲವಾರು ಕುತೂಹಲಕಾರಿ ಅಂಕಿ ಅಂಶಗಳನ್ನು ಉಲ್ಲೇಖಿಸಲಾಗಿದೆ.
ಆಸಕ್ತಿದಾಯಕ ಅಂಕಿ ಅಂಶಗಳು:
ಇದುವರೆಗೆ ಮೇಲ್ಮನೆ ಅಂಗೀಕರಿಸಿದ ಮಸೂದೆಗಳು : 3,924
ತಿರಸ್ಕರಿಸಿದ ಸಂವಿಧಾನ ತಿದ್ದುಪಡಿ ಮಸೂದೆಗಳು : 03
ರಾಜ್ಯಸಭೆಯಿಂದ ಉಚ್ಚಾಟನೆಗೊಂಡಿರುವ ಸದಸ್ಯರು : 03
ವಾಗ್ದಂಡನೆ ಪ್ರಕ್ರಿಯೆ : 01
ಲೋಕಸಭೆಯಲ್ಲಿ ಅಂಗೀಕೃತವಾಗಿ ರಾಜ್ಯಸಭೆಯು ತಿರಸ್ಕರಿಸಿದ ಮಸೂದೆಗಳ ಒಟ್ಟು ಸಂಖ್ಯೆ: 05
ರಾಜ್ಯಸಭೆ ಮಂಡಿಸಿದ ಮಸೂದೆಗಳು ಪಾಸ್ : 120
ರಾಜ್ಯಸಭೆಯಲ್ಲಿ ನಡೆದ ಕಾರ್ಯ ಕಲಾಪಗಳು : 5466
ಮಂಡಿಸಲಾದ ಒಟ್ಟು ಮಸೂದೆಗಳು : 944
ಹಿಂದಕ್ಕೆ ಪಡೆದ ಬಿಲ್‌ಗಳು : 104
ಬಾಕಿ ಉಳಿದಿರುವ ಬಿಲ್‌ಗಳು : 38
ರಾಜ್ಯಸಭೆ ಅನುಮೋದಿಸಿದ ಬಿಲ್‌ಗಳು : 3,817
ರಾಜ್ಯಸಭೆಗೆ ಈವರೆಗೆ ಆಯ್ಕೆಗೊಂಡಿರುವ ಒಟ್ಟು ಸದಸ್ಯರು : 2,282
ರಾಜ್ಯ ಸಭೆಯಲ್ಲಿ ಕಾರ್ಯನಿರ್ವಹಿಸಿದ ಮಹಿಳೆಯರು : 208
ಮಹಿಳೆಯರ ಮೀಸಲಾತಿ
ವರ್ಷ – ಸಂಸದೆಯರು – ಶೇ.
1952 – 15 – 6.94
2014 – 31 – 12.76
2019 – 26 – 10.83
ಪ್ರಸ್ತುತ ಏಳನೇ ಅವಧಿಗೆ ಆಯ್ಕೆಗೊಂಡಿರುವ ಬಿಜೆಪಿಯ ಮಹೇಂದ್ರ ಪ್ರಸಾದ್ ಅವರು ರಾಜ್ಯಸಭೆಯಲ್ಲಿ ಅತಿ ದೀರ್ಘಕಾಲ ಸೇವೆ ಸಲ್ಲಿಸಿರುವ ಸದಸ್ಯರಾಗಿದ್ದಾರೆ. ಆ ಬಳಿಕದ ಸ್ಥಾನದಲ್ಲಿ ಮಾಜೀ ಪ್ರಧಾನಿ ಮತ್ತು ಹಣಕಾಸು ತಜ್ಞ ಡಾ| ಮನಮೋಹನ್ ಸಿಂಗ್ ಅವರಿದ್ದು, ಒಟ್ಟು ಆರು ಸಲ ಇವರು ರಾಜ್ಯಸಭೆಗೆ ಆಯ್ಕೆಯಾಗಿದ್ದಾರೆ. ಮಣಿಪುರದ ರಾಜ್ಯಪಾಲೆಯಾಗಿರುವ ನಜ್ಮಾ ಹೆಫ್ತುಲ್ಲಾ ಅವರು ರಾಜ್ಯಸಭೆಯಲ್ಲಿ 36 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದ ಮಹಿಳೆಯಾಗಿದ್ದಾರೆ.
ಅಪರೂಪದ ದಾಖಲೆಗಳು
ರಾಜ್ಯಸಭೆಯು 2 ಬಾರಿ ಬೇರೆ ರಾಜ್ಯಗಳಲ್ಲಿ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಅನುಮತಿ ನೀಡಿತ್ತು. ಸಂವಿಧಾನದ ವಿಧಿ 356(3)ರ ಅಡಿ ಲೋಕಸಭೆಯನ್ನು ವಿರ್ಜಿಸಿದ್ದ ಸಂದರ್ಭದಲ್ಲಿ ರಾಜ್ಯಸಭೆಯು ಈ ಕೆಲಸ ಮಾಡಿತ್ತು.
- 1977ರಲ್ಲಿ ಮೊದಲಬಾರಿಗೆ ತಮಿಳುನಾಡು ಮತ್ತು ನಾಗಾಲ್ಯಾಂಡ್.
- 1991ರಲ್ಲಿ ಹರಿಯಾಣದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು.
1 ಟೈ-ಟೈ
1991ರಲ್ಲಿ ಅಪರಾಧ ಪ್ರಕ್ರಿಯೆಯ ತಿದ್ದುಪಡಿ ಸುಗ್ರೀವಾಜ್ಞೆಗೆ ಒಪ್ಪಿಗೆ ಪಡೆಯಲಾಗುತ್ತಿತ್ತು. ಇದನ್ನು ಮತಕ್ಕೆ ಹಾಕಿದಾಗ ಪರ-ವಿರುದ್ಧ ತಲಾ 39 ಮತಗಳು ಬಂದಿದ್ದವು. ಇಂತಹ ಪರಿಸ್ಥಿತಿ ಎದುರಾದಾಗ ಸಭಾಧ್ಯಕರ ಮತಕ್ಕೆ ಮೌಲ್ಯ ಬರುತ್ತದೆ. ಆಗ ಸಭಾಪತಿ ಪೀಠದಲ್ಲಿದ್ದ ಸಿಪಿಎಂ ಸದಸ್ಯ ಎಂ.ಎ. ಬೇಬಿ ಅವರು ನಿರ್ಣಯದ ಪರ ಮತ ಚಲಾಯಿಸಿದ್ದರು. ಇದು ಏಕೈಕ ಉದಾಹರಣೆಯಾಗಿದೆ.
9 ಮಧ್ಯರಾತ್ರಿ ಕಲಾಪ
– ಒಂಬತ್ತು ಬಾರಿ ಮಧ್ಯರಾತ್ರಿಯವರೆಗೂ ಕಲಾಪ ನಡೆಸಿದ ದಾಖಲೆಯನ್ನು ರಾಜ್ಯಸಭೆ ಹೊಂದಿದೆ.
– 1981ರ ಡಿ. 17ರಂದು ನಡೆದ ಚರ್ಚೆಯು ಮರುದಿನ ನಸುಕಿನ 4.43ರ ವರೆಗೆ ನಡೆದಿತ್ತು. ಇದು ಮೇಲ್ಮನೆಯ ಇತಿಹಾಸದಲ್ಲಿ ದಾಖಲಾಗಿರುವ ಅತೀ ಸುದೀರ್ಘ ಕಲಾಪವಾಗಿದೆ.
– 1986ರ ಡಿ.29ರಂದು ಬೊಫೋರ್ಸ್ ಗನ್ ಖರೀದಿಗಾಗಿ ನಡೆದ ಚರ್ಚೆಯು ಮರುದಿನ ನಸುಕಿನ 3.22ರ ವರೆಗೆ ನಡೆದಿತ್ತು.
ಉಚ್ಚಾಟನೆಗೊಂಡವರು
ಸುಬ್ರಮಣಿಯನ್ ಸ್ವಾಮಿ ಅವರು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಅವರ ನಡವಳಿಕೆಗಳು ಸದನಕ್ಕೆ ಅಗೌರವ ತರುವಂತಿತ್ತು ಎಂಬ ಕಾರಣಕ್ಕೆ ನ.15, 1976ರಂದು ಉಚ್ಚಾಟನೆಗೊಂಡಿದ್ದರು.
ಛತ್ರಪಾಲ್ ಸಿಂಗ್ ಲೋಧ ಅವರು ರಾಜ್ಯಸಭೆಯಲ್ಲಿ ಪ್ರಶ್ನೆ ಕೇಳಲು ಹಣ ಕೊಡುವಂತೆ ಬೇಡಿಕೆ ಮಂಡಿಸಿದ ಕಾರಣ 2005ರಲ್ಲಿ ಉಚ್ಚಾಟನೆಗೊಂಡಿದ್ದರು. ಸಂಸದರ ಕ್ಷೇತ್ರಾಭಿವೃದ್ಧಿಗಾಗಿ ಸರಕಾರ ಕೊಡುವ ನಿಧಿ ದುರ್ಬಳಕೆ ಆರೋಪದಲ್ಲಿ ಸಾಕ್ಷಿ ಮಹರಾಜ್ ಅವರನ್ನು 2006ರಲ್ಲಿ ಉಚ್ಚಾಟಿಸಲಾಗಿತ್ತು.
120 ತಿದ್ದುಪಡಿ
– ಲೋಕಪಾಲ ಮತ್ತು ಲೋಕಾಯುಕ್ತ ಮಸೂದೆಗಳು ಸೇರಿದಂತೆ ಲೋಕಸಭೆಯು ಅಂಗೀಕರಿಸಿದ್ದ ಒಟ್ಟು 120 ಮಸೂದೆಗಳಿಗೆ ರಾಜ್ಯಸಭೆ ಅನುಮೋದನೆ ನೀಡಿದೆ.
ಸುದೀರ್ಘ ಚರ್ಚೆಗಳು
12.04 ಗಂಟೆ: 1991ರ ಜೂನ್ 4ರಂದು ರಾಜೀವ್ ಗಾಂಧಿ ಅವರಿಗೆ ಭದ್ರತೆ ಒದಗಿಸುವಲ್ಲಿ ಆಗಿರುವ ವೈಫಲ್ಯದ ಬಗ್ಗೆ ನಡೆದ ಚರ್ಚೆಯ ಅವಧಿ.
11.37 ಗಂಟೆ: 1992ರ ಡಿ. 18 ಮತ್ತು 21ರಲ್ಲಿ ಬಾಬರಿ ಮಸೀದಿ ಕೆಡವಿದ ವಿಚಾರವಾಗಿ ನಡೆದ ಚರ್ಚೆಯ ಅವಧಿ.
10.06 ಗಂಟೆ: 2007ರ ಡಿ. 4 ಮತ್ತು 12ರಂದು ಭಾರತ- ಅಮೆರಿಕ ಅಣು ಒಪ್ಪಂದ ಕುರಿತ ಚರ್ಚೆಯ ಅವಧಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.