ರೈತರಿಗೆ ಕಳಪೆ ಭತ್ತದ ಬೀಜ ಪೂರೈಕೆ


Team Udayavani, Nov 19, 2019, 4:40 PM IST

kopala-tdy-1

ಗಂಗಾವತಿ: ಬೇಸಿಗೆಯಲ್ಲಿ ಭತ್ತ ನಾಟಿ ಮಾಡಲು ರೈತರು ಈಗಾಗಾಗಲೇ ಭತ್ತದ ಸಸಿ ಮಡಿ ಹಾಕುವ ಕಾರ್ಯ ಆರಂಭಿಸಿದ್ದಾರೆ. ಸಾಣಾಪೂರ, ಆನೆಗೊಂದಿ, ಬಸಾಪೂರ ಸೇರಿ ಆನೆಗೊಂದಿ, ವಿಜಯನಗರ ಕಾಲುವೆ ಪ್ರದೇಶ ರೈತರು ಖಾಸಗಿ ಕಂಪನಿಯಿಂದ ಭತ್ತದ ಬೀಜ ಖರೀದಿ ಮಾಡಿದ್ದು, ಸಸಿ ಮಡಿ ಮೊಳಕೆ ಒಡೆಯದೇ ರೈತರು ಆತಂಕಗೊಂಡಿದ್ದಾರೆ.

ಬೀಜ ಪೂರೈಕೆ ಮಾಡಿದ ಕಂಪನಿ ರೈತರಿಗೆ ಮೋಸ ಮಾಡಿದ್ದು ಕೃಷಿ ಇಲಾಖೆಯ ಗಮನಕ್ಕಿದ್ದರೂ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಬೇಸಿಗೆ ಹಂಗಾಮಿನಲ್ಲಿ 100-120 ದಿನಗಳ ಒಳಗೆ ಕಟಾವಿಗೆ ಬರುವ ಭತ್ತವನ್ನು ರೈತರು ಪ್ರತಿ ವರ್ಷ ನಾಟಿ ಮಾಡುತ್ತಾರೆ. ಕಳೆದ ನಾಲ್ಕೆ ದು ವರ್ಷಗಳಿಂದ ಬೇಸಿಗೆಯಲ್ಲಿ ಭತ್ತ ಬೆಳೆದಿಲ್ಲವಾದ್ದರಿಂದ ರೈತರ ಹತ್ತಿರ ಬೇಸಿಗೆ ಭತ್ತದ ಬೀಜದ ಕೊರತೆಯಾಗಿದೆ.

ಇದನ್ನು ಮನಗಂಡ ಹೊಸ್ಕೇರಾ ಕ್ಯಾಂಪಿನ ಆಂಧ್ರಪ್ರದೇಶ ಮೂಲದ ವ್ಯಕ್ತಿಯ ಮಾಲೀಕತ್ವದ ಕಂಪನಿ ಬೇಸಿಗೆ ಭತ್ತದ ಬೀಜ ಪೂರೈಕೆ ಮಾಡಿದೆ. ಈ ಬೀಜಗಳು ಯಾವುದೇ ಬೀಜೋಪಚಾರಗಳಿಲ್ಲದೇ ಇರುವುದರಿಂದ ಸಸಿ ಮಡಿ ಹಾಕಿ ಹಲವು ದಿನಗಳಾದರೂ ಮೊಳಕೆ ಒಡೆದಿಲ್ಲ. ಸಸಿ ಮಡಿ ಹಾಕಲು ಪ್ರತಿ ಎಕರೆಗೆ ಸುಮಾರು 8ರಿಂದ 10 ಸಾವಿರ ರೂ. ಖರ್ಚು ಮಾಡಿದ ರೈತರು ಇದೀಗ ತಲೆಯ ಮೇಲೆ ಕೈ ಹೊತ್ತು ಕುಳಿತ್ತಿದ್ದಾರೆ. ಸಾಣಾಪೂರ, ಜಂಗ್ಲಿ ರಂಗಾಪೂರ, ತಿರುಮಲಾಪೂರ, ವಿರೂಪಾಪೂರಗಡ್ಡಿ, ಹನುಮನಹಳ್ಳಿ, ಗೂಗಿಬಂಡಿ ಸೇರಿ ಮುಂಗಾರಿನ ಭತ್ತ ಕಟಾವು ಮಾಡಿದ ಪ್ರದೇಶದ ರೈತರು ಖಾಸಗಿ ಕಂಪನಿಯ ಬೀಜ ಖರೀದಿ ಮಾಡಿದ್ದಾರೆ.

ಈ ಕಂಪನಿ 20 ಕೆಜಿ ತೂಕದ 1 ಲಕ್ಷ ಪ್ಯಾಕೆಟ್‌ ಬೀಜ ತಯಾರಿಸಿದ್ದು, ದಾವಣಗೆರೆ, ಹರಿಹರ, ಹಗರಿಬೊಮ್ಮನಹಳ್ಳಿ, ಕಂಪ್ಲಿ, ಸಿರಗುಪ್ಪಾ, ಹೊಸಪೇಟೆ ಭಾಗದ ಡೀಲರ್‌ಗಳಿಗೆ ಬೀಜ ಪೂರೈಕೆ ಮಾಡಿದೆ. ಅಲ್ಲಿಯೂ ಸಸಿ ಮಡಿ ಮೊಳಕೆ ಒಡೆಯದಿರುವ ಕುರಿತು ಮಾಹಿತಿ ಇದೆ. ರೈತರಿಗೆ ಸರಿಯಾಗಿ ರಶೀದಿ ನೀಡಿದೇ ಬಿಳಿ ಪಟ್ಟಿಯಲ್ಲಿ ಬೀಜ ಮಾರಾಟ ಬಿಲ್‌ ನೀಡಿ ವಂಚನೆ ಮಾಡಲಾಗಿದೆ ಎನ್ನಲಾಗುತ್ತಿದೆ. ರೈತರು ಕೃಷಿ ಇಲಾಖೆಯ ಕೇಂದ್ರಗಳಲ್ಲಿ ಬೀಜ ಇಲ್ಲ ಎಂದು ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳು ಹೇಳುತ್ತಿದ್ದಾರೆ.

ಖಾಸಗಿ ಕಂಪನಿಗಳ ಬೀಜ ಖರೀದಿ ಮಾಡಿ ರೈತರು ಮೋಸ ಹೋಗಿದ್ದಾರೆ. ಆದರೂ ಕೃಷಿ ಇಲಾಖೆ ಮತ್ತು ಕೃಷಿ ವಿಶ್ವವಿದ್ಯಾಲಯ ಸಂಶೋಧನಾ ಕೇಂದ್ರ ಮತ್ತು ಕೃಷಿ ವಿಜ್ಞಾನ ಕೇಂದ್ರದ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿಲ್ಲ. ಸದ್ಯ ನಕಲಿ  ಬೀಜ ಪೂರೈಕೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳದೇ ಕಣ್ಮುಚ್ಚಿ ಕುಳಿತ್ತಿದ್ದಾರೆ. ರೈತರು ತಮ್ಮ ಕಷ್ಟವನ್ನು ಯಾರು ಹತ್ತಿರ ಹೇಳಿಕೊಳ್ಳಲಾಗುತ್ತಿಲ್ಲ.

 

-ಕೆ. ನಿಂಗಜ್ಜ

ಟಾಪ್ ನ್ಯೂಸ್

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavati: 15 ದಿನದಲ್ಲೇ ಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು…

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

Gangavathi: ಬ್ರಹ್ಮಾವರ ಮೂಲದ ದೇಗುಲ ಕಟ್ಟಡ ಎಂಜಿನಿಯರ್‌ ಕೊಪ್ಪಳದಲ್ಲಿ ಆತ್ಮಹ*ತ್ಯೆ

13(1

Tawargera: ಲಾರಿ-ಬುಲೆರೋ ವಾಹನ ಡಿಕ್ಕಿ; ಇಬ್ಬರು ಸಾವು

12-

Kanakagiri: ಬ್ಯಾಂಕಿನಲ್ಲಿಯೇ ವೃದ್ಧ ಗ್ರಾಹಕನ ಹಣ ಎಗರಿಸಿದ ಖದೀಮರು

Shivaraj-Tangadagi

Koppal: ರಾಜ್ಯದಲ್ಲಿ ನಾವು ಸ್ಟ್ರಾಂಗ್‌ ಇದ್ದಿದ್ದರಿಂದ ಇವಿಎಂ ಕಿತಾಪತಿ ನಡೆದಿಲ್ಲ; ತಂಗಡಗಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Kanadka-Dooja

Surathkal: ಆರು ಬಾರಿಯ ಚಾಂಪಿಯನ್‌, ಕಂಬಳ ವೀರ ಕಾನಡ್ಕ ದೂಜನಿಗೆ ಸಮ್ಮಾನ

Yakshagana-Academy

Udupi: ಮಕ್ಕಳಲ್ಲಿ ತಾಳ್ಮೆ, ಏಕಾಗ್ರತೆ ಬೆಳೆಸಲು ಯಕ್ಷಗಾನ ತರಬೇತಿ ಅವಶ್ಯ: ಯು.ಟಿ. ಖಾದರ್‌

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.