ಬೆಳೆಗಳಿಗೆ ಇರಲಿದೆ ಲೋಹದ ಹಕ್ಕಿ ಗಳ ನಿಗಾ

Team Udayavani, Nov 20, 2019, 10:26 AM IST

bng-tdy-1

ಬೆಂಗಳೂರು: ಬೆಳೆಗಳ ನಿರ್ವಹಣೆಗೆ ಬಳಸುವ ಡ್ರೋನ್‌ ಹಳೆಯದಾಯ್ತು. ಈಗ ಲೋಹದ ಹಕ್ಕಿಗಳ ನೆರವಿಂದ ಬೆಳೆಗಳ ಆರೋಗ್ಯದ ಮೇಲೆ ನಿಗಾ ಇಡುವ ವ್ಯವಸ್ಥೆ ಬರುತ್ತಿದೆ!

ವಿಮಾನಗಳಲ್ಲಿ ಮಲ್ಟಿ ಸ್ಪೆಕ್ಟರಲ್‌ ಕ್ಯಾಮೆರಾಗಳನ್ನು ಅಳವಡಿಸಿ, ಜಮೀನುಗಳ ಚಿತ್ರಗಳನ್ನು ಸೆರೆಹಿಡಿ ಯುವ ವ್ಯವಸ್ಥೆ ಅಭಿವೃದ್ಧಿಪಡಿಸಲಾಗಿದೆ. ಹೀಗೆ ಸೆರೆಹಿಡಿಯುವ ಚಿತ್ರಗಳು ಡ್ರೋನ್‌ಗಿಂತ ಹೆಚ್ಚು ಮಾಹಿತಿ ಒಳಗೊಂಡಿರುತ್ತದೆ. ಜತೆಗೆ ಎತ್ತರ ದಲ್ಲಿ ಹಾರಾಟ ಮಾಡಿ ಅಲ್ಪಾವಧಿಯಲ್ಲಿ ಅಧಿಕ ಪ್ರದೇಶ ಸುತ್ತುಹಾಕಿ, ಮಾಲೀಕರಿಗೆ ವರದಿ ಒಪ್ಪಿಸಲಿದೆ.

ಡ್ರೋನ್‌ ಅಬ್ಬಬ್ಟಾ ಎಂದರೆ, ನೆಲದಿಂದ 400 ಅಡಿ ಎತ್ತರದಲ್ಲಿ ಹಾರಾಡುತ್ತದೆ. ಅದಕ್ಕಿಂತ ಎತ್ತರಕ್ಕೆ ಹೋಗಲು ಅವಕಾಶ ಇಲ್ಲ. ವಿಮಾನವು4 ಸಾವಿರ  ಅಡಿ ಎತ್ತರದವರೆಗೂ ಹಾರುತ್ತದೆ. ಹಾಗಾಗಿ, ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದೇಶದ ಬೆಳೆಯ ನಿರ್ವಹಣೆ ಮಾಡಬಹುದು. ಇದಕ್ಕೆ ಮಲ್ಟಿ ಸ್ಪೆಕ್ಟರಲ್‌ ಕ್ಯಾಮೆರಾ ಅಳವಡಿಸಲಾಗಿರುತ್ತದೆ. ಅವುಗಳು ಭೂಮಿಯ ಮೇಲ್ಮೆಯಿಂದ ಕೇವಲ 1 ಮೀಟರ್‌ ಪಿಕ್ಸೆಲ್‌ನಲ್ಲಿ ಬೆಳೆಗಳ ಚಿತ್ರವನ್ನು ಸೆರೆಹಿಡಿದು ನಿಯಂತ್ರಣ ಕೊಠಡಿಗೆ ರವಾನಿಸುತ್ತದೆ. ಅದನ್ನು ವಿಶ್ಲೇಷಣೆ ಮಾಡಿ, ಅಗತ್ಯ ಕ್ರಮ ಕೈಗೊಳ್ಳಬ ಹುದು ಎಂದು ಅಮೆರಿಕ ಮೂಲದ ವಿರಿಡಿಸ್‌ ಆರ್‌ಎಸ್‌ ಲಿಸಂಸ್ಥಾಪಕ ಹಾಗೂ ಹಿರಿಯ ವಿಜ್ಞಾನಿ ಮಾರ್ಕ್‌ ಜಾನೆಟ್‌ ತಿಳಿಸಿದರು.

ನಗರದ ಅರಮನೆ ಆವರಣದಲ್ಲಿ ನಡೆಯುತ್ತಿರುವ 3 ದಿನಗಳ ಬೆಂಗಳೂರು ಟೆಕ್‌ ಸಮಿಟ್‌ನಲ್ಲಿ ಮಂಗಳವಾರ “ಇಂಟೆಲಿಜೆಂಟ್‌ ಸಿಸ್ಟಮ್ಸ್‌ ಇನ್‌ ಅಗ್ರಿಕಲ್ಚರ್‌’ (ಕೃಷಿಯಲ್ಲಿ ಚತುರ ವ್ಯವಸ್ಥೆಗಳ ಪ್ರಯೋಗ) ಕುರಿತ ಗೋಷ್ಠಿಯಲ್ಲಿ ಭಾಗವಹಿಸಿ ನಂತರ “ಉದಯವಾಣಿ’ಯೊಂದಿಗೆ ಮಾತನಾಡಿದರು. ವಾರದಲ್ಲಿ 1.50 ಲಕ್ಷ ಹೆಕ್ಟೇರ್‌ ಪ್ರದೇಶದ ಕೃಷಿ ಬೆಳೆಗಳ ಚಿತ್ರಣವನ್ನು ನೀಡುವ ಸಾಮರ್ಥ್ಯವನ್ನು ಈ ವಿಮಾನ ಹೊಂದಿದೆ. ಇದೇ ಅವಧಿಯಲ್ಲಿ ಇಷ್ಟೊಂದು ಪ್ರದೇಶದ ನಿರ್ವಹಣೆಗೆ 35 ಡ್ರೋನ್‌ಗಳು ಬೇಕಾಗುತ್ತವೆ. ಸಾಮಾನ್ಯ ವಿಮಾನಗಳಿಗಿಂತ ಕೃಷಿ ನಿರ್ವಹಣೆಗಾಗಿ ಪರಿಚಯಿ ಸಿದ ಲೋಹದ ಹಕ್ಕಿಯ ವಿನ್ಯಾಸ ಭಿನ್ನವಾಗಿರುತ್ತದೆ. ಇದರ ರೆಕ್ಕೆಗಳಿಗೆ ಕ್ಯಾಮೆರಾಗಳನ್ನು ಅಳವಡಿ ಸಲಾ ಗಿರುತ್ತದೆ. ಇದರ ಹಾರಾಟಕ್ಕೆ ನಾಗರಿಕ ವಿಮಾನ ಯಾನ ಮಹಾ  ನಿರ್ದೇಶನಾಲಯದ ಅನುಮತಿ ಕಡ್ಡಾಯ. ಇದು ನಮಗೆ ಸವಾಲಾಗಿದ್ದು, ಸ್ಥಳೀಯ ಸರ್ಕಾರಗಳ ನೆರವಿನಿಂದ ಇದರ ಅನುಮತಿ ದೊರೆಯುವ ವಿಶ್ವಾಸವಿದೆ ಎಂದರು.

ಮಹಾರಾಷ್ಟ್ರ, ಗುಜರಾತ್‌ ಆಸಕ್ತಿ: “ಸಣ್ಣಹಿಡುವಳಿ ದಾ ರರಿಗೆ ಇದು ಅನುಕೂಲ ಆಗುವುದಿಲ್ಲ. ದೊಡ್ಡ ಹಿಡುವಳಿದಾರರು ಒಟ್ಟಾಗಿ ಮಾಡಬಹುದು. ಈ ನಿಟ್ಟಿನಲ್ಲಿ ಮಹಾರಾಷ್ಟ್ರ ಮತ್ತು ಗುಜರಾತ್‌ ಸರ್ಕಾರಗಳು ಮುಂದೆಬಂದಿವೆ. ಯಾವ ಬೆಳೆಗಳ ನಿರ್ವಹಣೆ ಬೇಕಾದರೂ ಮಾಡಬಹುದು. ಸದ್ಯಕ್ಕೆ ಹತ್ತಿ, ದ್ರಾಕ್ಷಿ ಮತ್ತಿತರ ಬೆಳೆಗಳ ಮೇಲೆ ಪ್ರಯೋಗ ಮಾಡಲು ಚಿಂತನೆ ನಡೆದಿದೆ’ ಎಂದರು.

-ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

PM Modi: ಇಂದು ಕೆನ್‌-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ

AB-Vajapaee

A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್‌ ಬಿಹಾರಿ ವಾಜಪೇಯಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-agri

Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Road Mishap: 2 ಲಾರಿಗಳ ಮಧ್ಯೆ ಸಿಲುಕಿ ಚಾಲಕ ಸಾವು; ಕೇಸ್‌

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

Fraud Case: ಟೆಕಿಗೆ ವಂಚನೆ ಕೇಸ್‌; ಆರೋಪಿ ಪತ್ತೆಗೆ ತಂಡ ರಚನೆ

5

New Year: ಹೊಸ ವರ್ಷಾಚರಣೆಗೆ 7ಲಕ್ಷ ಜನ ಭಾಗಿ ನಿರೀಕ್ಷೆ; ಪರಂ

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

Fraud case: ಚಿನ್ನಾಭರಣ ವಂಚನೆ ಕೇಸ್‌; ವಿಚಾರಣೆಗೆ ಬಾರದ ವರ್ತೂರ್‌ಗೆ 3ನೇ ನೋಟಿಸ್‌ 

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

4-max

Max: ಇಂದು ಸುದೀಪ್‌ ಮ್ಯಾಕ್ಸ್‌ ತೆರೆಗೆ; ಆ್ಯಕ್ಷನ್‌ ಅಡ್ಡದಲ್ಲಿ ಕಿಚ್ಚ ಮಿಂಚು

3-

Gundlupete: ಬೋನಿಗೆ ಬಿದ್ದ ಗಂಡು ಚಿರತೆ

2-

Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

ICC U19 ವನಿತಾ ಟಿ20 ವಿಶ್ವಕಪ್‌: ಭಾರತಕ್ಕೆ ನಿಕಿ ಪ್ರಸಾದ್‌ ನಾಯಕಿ

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Maharashtra: ಬಾಸ್‌ ಜತೆ ಸೆ*ಕ್ಸ್‌ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.