ಮರ ತೆರವು ಪ್ರಕ್ರಿಯೆಗೆ ಹೊಸ ತಂತ್ರಾಂಶ
Team Udayavani, Nov 20, 2019, 10:34 AM IST
ಸಾಂಧರ್ಬಿಕ ಚಿತ್ರ
ಬೆಂಗಳೂರು: ವಾಣಿಜ್ಯೋದ್ದೇಶಕ್ಕಾಗಿ ಖಾಸಗಿ ಜಮೀನಿನಲ್ಲಿ ಬೆಳೆಸಿದ ಮರಗಳ ತೆರವು ಹಾಗೂ ಸಾಗಣೆ ಅನುಮತಿಗಾಗಿ ಅರಣ್ಯ ಇಲಾಖೆ ಕಚೇರಿಗೆ ಇನ್ನು ಅಲೆದಾಡಬೇಕಿಲ್ಲ. ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳೇ ನಿಮ್ಮ ಬಳಿ ಬರಲಿದ್ದಾರೆ.
ಇದಕ್ಕಾಗಿ ನೀವು ಮಾಡಬೇಕಾಗಿರುವುದಿಷ್ಟೇ – ಮರದ ಚಿತ್ರವನ್ನು ಕ್ಲಿಕ್ಕಿಸಿ, ಅದಕ್ಕೆ ಪೂರಕ ದಾಖಲೆಗಳೊಂದಿಗೆ ಆನ್ ಲೈನ್ ಮೂಲಕ ಮನವಿ ಸಲ್ಲಿಸಿದರೆ ಸಾಕು. ಇಂತಹದೊಂದು ನೂತನ ತಂತ್ರಾಂಶ “ಈ ಫೆಲ್ಲಿಂಗ್ ಅಂಡ್ ಟ್ರಾನ್ಸಿ ಟ್ ಪರ್ಮಿಷನ್’ ಅನ್ನು ಅರಣ್ಯ ಇಲಾಖೆಯ ಮಾಹಿತಿ ತಂತ್ರಜ್ಞಾನ ಘಟಕವು ಸಿದ್ಧಪಡಿಸಿದೆ. ಈ ನೂತನ ತಂತ್ರಾಂಶವನ್ನು ಟೆಕ್ ಸಮ್ಮಿಟ್ ನಲ್ಲಿ ಸಾಧರ ಪಡಿಸಿದ್ದು, ಶೀಘ್ರದಲ್ಲಿಯೇ ಜಾರಿಗೆ ತರಲಿದೆ.
ಅನುಮತಿ ಪ್ರಕ್ರಿಯೆ ಸುಲಭ: ಯಾರೇ ಆಗಲಿ ಖಾಸಗಿ ಜಮೀನಿನಲ್ಲಿ ಬೆಳೆಸಿರುವ ಒಂದು ಮರವನ್ನು ಕಡಿಯಬೇಕಾದರೂ ಹಾಗೂ ಸಾಗಣೆ ಮಾಡಬೇಕಾದರೂ ಅರಣ್ಯ ಇಲಾಖೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂಬ ನಿಯಮವಿದೆ. ಆದರೆ, ಅನುಮತಿ ಪ್ರಕ್ರಿಯೆ ಸಾಕಷ್ಟು ತಡವಾಗುತ್ತಿದೆ ಹಾಗೂ ಭ್ರಷ್ಟಾಚಾರಕ್ಕೆ ಆದ್ಯತೆ ನೀಡುತ್ತದೆ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬರುತ್ತಿದೆ. ಹೀಗಾಗಿ, ಅನುಮತಿ ಪ್ರಕ್ರಿಯೆಯನ್ನು ಸ್ಪತ್ಛ ಹಾಗೂ ಸುಲಭವಾಗಿಸಲು ತಂತ್ರಜ್ಞಾನ ಬಳಸಲು ಅರಣ್ಯ ಇಲಾಖೆ ಮುಂದಾಗಿದೆ. ಸಾಗಣೆ ಸಂದರ್ಭದಲ್ಲಿ ತಂತ್ರಾಂಶ ಮೂಲಕ ಎಲ್ಲಿಂದ- ಎಲ್ಲಿಗೆ, ಯಾವ ಮರ ಯಾರು ಎಲ್ಲಿ ತೆರವು ಮಾಡಿದ್ದು, ಎಂಬೆಲ್ಲಾ ಮಾಹಿತಿ ನೀಡಿ ಒಪ್ಪಿಗೆ ಪಡೆಯಬೇಕು. ಈ ಮೂಲಕ ಮೂಲಕ ಮರಗಳ ಕಳ್ಳತನ, ಅಕ್ರಮ ಸಾಗಾಟ, ತೆರವು ಹತೋಟಿಗೆ ಬರಲಿದೆ. ಜತೆಗೆ ಈ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಲಿದೆ ಎಂದು ಆರ್‌ಎಫ್ ಅಕ್ಷತಾ ತಿಳಿಸಿದರು.
ತಂತ್ರಾಂಶ ಕಾರ್ಯನಿರ್ವಹಣೆ ಹೇಗೆ?: ಮುಂದಿನ ದಿನಗಳಲ್ಲಿ ಇ-ಫೆಲ್ಲಿಂಗ್ ಅಂಡ್ ಟ್ರಾನ್ಸಿಟ್ ಪರ್ಮಿಷನ್ ತಂತ್ರಾಂಶದ ಲಿಂಕ್ ಅನ್ನು ಅರಣ್ಯ ಇಲಾಖೆ ವೆಬ್‌ಸೈಟ್‌ನಲ್ಲಿ ನೀಡಲಾಗುತ್ತದೆ. ಈ ತಂತ್ರಾಂಶಕ್ಕೆ ಭೇಟಿ ನೀಡಿದರೆ ಅಲ್ಲಿ ಮೊದಲು ಕಡಿಯಲು ಉದ್ದೇಶಿಸಿರುವ ಮರದ ವಿಧವನ್ನು ಆಯ್ಕೆ ಮಾಡಬೇಕು. ನಂತರ ಮರದ ಛಾಯಾಚಿತ್ರ, ಸ್ಥಳ, ಭೂಮಿಯ ದಾಖಲೆ ಪತ್ರ ಸೇರಿದಂತೆ ಇತರೆ ಮಾಹಿತಿ ದಾಖಲಿಸಬೇಕು. ಜತೆಗೆ ಯಾಕೆ ಮರವನ್ನು ಕಡಿಯಲು ಬಯಸುತ್ತೀರಾ ಎಂದು ವಿವರ ನೀಡಿ ಅರ್ಜಿಯನ್ನು ಸಲ್ಲಿಸಬೇಕು.
ಇನ್ನು ತೆರವುಗೊಳಿಸುತ್ತಿರುವ ಪ್ರದೇಶದಲ್ಲಿ ಮರ ತೆರವಿಗೆ ಅನುಮತಿ ನೀಡದಿಲ್ಲಲ್ಲಿ ಅಥವಾ ಮರವು ಅತ್ಯಂತ ಸೂಕ್ಷ್ಮವಾಗಿದ್ದಲ್ಲಿ ಆಯ್ಕೆ ಮಾಡುವ ಸಮಯದಲ್ಲಿಯೇ ತೆರವು ಸಾಧ್ಯವಿಲ್ಲ ಎಂದು ತಂತ್ರಾಂಶವು ತೋರಿಸಲಿದೆ. ಅರ್ಜಿ ಸಲ್ಲಿಸಿದ ಕೂಡಲೇ ತಮ್ಮ ಮರ ಅಧಿಕಾರಿ ಯಾರು ಎಂಬುದನ್ನು ಆ ತಂತ್ರಾಂಶ ತೋರಿಸುತ್ತದೆ. ಜತೆಗೆ ಅರ್ಜಿ ಸಂಖ್ಯೆಯನ್ನು ನೀಡಲಿದೆ. ಈ ಅರ್ಜಿ ಸಂಖ್ಯೆಯನ್ನಿಟ್ಟುಕೊಂಡು ರೈತರು ಅಥವಾ ಜಮೀನು ಮಾಲೀಕರು ಆರ್‌ಎಫ್ಒ ಬಳಿ ಹೋಗಿ, ಮೂಲ ದಾಖಲೆಗಳನ್ನು ಪ್ರಸ್ತುತಪಡಿಸಿದರೆ, ಅಧಿಕಾರಿಗಳು ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿ ಆನಂತರ ವಲಯ ಅರಣ್ಯಾಧಿಕಾರಿಗಳಿಗೆ ವರದಿ ಸಲ್ಲಿಸುತ್ತಾರೆ. ಆ ಬಳಿಕ ವಲಯ ಅರಣ್ಯಾಧಿಕಾರಿ ಸಮಾಧಾನ ಎನಿಸಿದರೆ ಮರ ಕಡಿಯಲು ಅನುಮತಿಯನ್ನು ಅನುಮೋದಿಸುತ್ತಾರೆ. ಅನುಮಾನ ವ್ಯಕ್ತವಾದರೆ ಸ್ಥಳ ಪರಿಶೀಲನೆ ನಡೆಸುತ್ತಾರೆ.
-ಜಯಪ್ರಕಾಶ್ ಬಿರಾದಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.