ಅನಧಿಕೃತ’ ಆದೇಶ ಹಿಂಪಡೆದ ಸರ್ಕಾರ
Team Udayavani, Nov 20, 2019, 2:15 PM IST
ಬ್ಯಾಡಗಿ: ಪುರಸಭೆ ವ್ಯಾಪ್ತಿಗೆ ಒಳಪಡುವಂತೆ (ಲಿಮಿಟೇಶನ್ ಎಕ್ಸಟೆನ್ಶನ್) ಬ್ಯಾಡಗಿ ಹಾಗೂ ಸುತ್ತಲಿನ ಕಂದಾಯ ಗ್ರಾಮ (ಸಾಜಾ) ಗಳಿಂದ ಕೈಬಿಟ್ಟಿದ್ದ ಕೆಲ ರಿಜಿಸ್ಟರ್ ಸರ್ವೇ ನಂಬರ್ ಸೇರ್ಪಡೆಗೊಳಿಸಿ ನೀಲನಕ್ಷೆ ಸಿದ್ಧಪಡಿಸಿದ ರಾಜ್ಯ ಸರ್ಕಾರವು ಅದಕ್ಕಾಗಿ ಆದೇಶವೊಂದನ್ನು ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.
2013ರಲ್ಲಿ ಸರ್ಕಾರದ ಆದೇಶದನ್ವಯ ಪುರಸಭೆ ಸುತ್ತಲಿನ ಗ್ರಾಮಗಳ ರಿ.ಸ.ನಂ. ಸೇರ್ಪಡೆಗೊಳಿಸಿ ವ್ಯಾಪ್ತಿಯ ಹೆಚ್ಚಳಕ್ಕೆ ನಗರಾಭಿವೃದ್ಧಿ ಇಲಾಖೆಗೆ ಅನುಮೋದನೆಗಾಗಿ ನೀಲನಕ್ಷೆ ಕಳುಹಿಸಿಕೊಟ್ಟಿತ್ತು. ಆದರೆ, ಸ್ಥಳ ಪರಿಶೀಲನೆ ನಡೆಸಿದ ನಗರಾಭಿವೃದ್ಧಿ ಇಲಾಖೆ, ಪುರಸಭೆ ಸಲ್ಲಿಸಿದ ವರದಿಯಲ್ಲಿ ಬರುವ ರಿ.ಸ.ನಂ.ಗಳಲ್ಲಿ ಈಗಾಗಲೇ ಅನ ಧೀಕೃತವಾಗಿ ಬಿನ್ ಶೇತ್ಕಿ, ಬಡಾವಣೆ ಹಾಗೂ ಕಟ್ಟಡಗಳಿರುವುದನ್ನು ಗಮನಿಸಿ ಕಡತವನ್ನು ತಿರಸ್ಕರಿಸಿದೆ. ಅಲ್ಲದೇ, ಆದೇಶವೊಂದನ್ನು ಹೊರಡಿಸುವ ಮೂಲಕ ಸದರಿ ರಿಸನಂ.ಗಳನ್ನು ಪುರಸಭೆಯ ಎಲ್ಲ ಕಡತಗಳಿಂದ ತೆಗೆದುಹಾಕುವಂತೆ ಎಚ್ಚರಿಕೆ ನೀಡಿತ್ತು.
ಕೋಟ್ಯಂತರ ತೆರಿಗೆ ಸಂದಾಯ: ನಗರಾಭಿವೃದ್ಧಿ ಇಲಾಖೆ ಈ ಆದೇಶದಿಂದ ಪಟ್ಟಣದ ವ್ಯಾಪ್ತಿಯಲ್ಲಿ ಬಡಾವಣೆ ನಿರ್ಮಿಸಲು ನಿರಪೇಕ್ಷಣಾ ಪತ್ರ, ಅಭಿವೃದ್ಧಿ ಶುಲ್ಕ, ಮೇಲುಸ್ತುವಾರಿ ಶುಲ್ಕ, ಕಟ್ಟಡ ನಿರ್ಮಾಣಕ್ಕೆ ಪರವಾನಗಿ ಶುಲ್ಕ ಹಾಗೂ ಸ್ವಯಂ ಘೋಷಿತ ಆಸ್ತಿ ತೆರಿಗೆ ಸೇರಿದಂತೆ ಪುರಸಭೆಗೆ ಕೋಟ್ಯಾಂತರ ರೂ. ಹಣ ಸಂದಾಯ ಮಾಡಿದ್ದ ನೂರಾರು ಸಂಖ್ಯೆಯ ಸಾರ್ವಜನಿಕರು ಮುಂದೇನು ಎಂಬ ಚಿಂತನೆಗೊಳಗಾಗಿದ್ದರು.
ಸದರಿ ರಿಸನಂ.ಗಳಲ್ಲಿ ಆಸ್ತಿಗೆ ಸಂಬಂಧಿಸಿದ ಪಹಣಿ ಸಿಗದೆ ನಿವೇಶನಗಳ ಮಾರಾಟ, ಸಾಲಸೌಲಭ್ಯ, ಹೊಸ ಕಟ್ಟಡಗಳಿಗೆ ಅನುಮತಿ, ಸರ್ಕಾರದಿಂದ ಸಹಾಯಧನ ಪಡೆಯಬೇಕಾಗಿದ್ದ ಕೈಗಾರಿಕಾ ನಿವೇಶನಗಳ ಮಾಲೀಕರು ಸೇರಿದಂತೆ ಆಸ್ತಿಗಳನ್ನು ಹೊಂದಿದ್ದ ಬಹಳಷ್ಟು ಸಾರ್ವಜನಿಕರು ಮೂರ್‍ನಾಲ್ಕು ವರ್ಷಗಳಿಂದ ಕಂಗಾಲಾಗಿ ಹೋಗಿದ್ದರು. ಇನ್ನೂಕೋಟಿಗಳಟ್ಟಲೇ ಬಂಡವಾಳ ಹೂಡಿ ರಿಯಲ್ ಎಸ್ಟೇಟ್‌ನಲ್ಲಿ ತೊಡಗಿದ್ದ ಹೂಡಿಕೆದಾರರಿಗೂ ರಿಲೀಫ್ ಸಿಗಲಿದೆ.
ಸರ್ಕಾರದ ಇಂದಿನ ನಿರ್ಧಾರದಿಂದ ಕಳೆದ ಮೂರ್‍ನಾಲ್ಕು ವರ್ಷಗಳಿಂದ ಉದ್ಭವಿಸಿದ್ದ ಸದರಿ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ನಿವೇಶನದ ಮಾಲೀಕರಿಗೆ ಅರಿವಿಲ್ಲದೆಯೇ ಅನಧೀಕೃತ ಎನಿಸಿದ್ದ ಪುರಸಭೆ ಕಡತದಿಂದ ತೆರವಾಗಿದ್ದ ಸದರಿ ರಿಸನಂ. ಗಳಲ್ಲಿ ಎಲ್ಲ ವಹಿವಾಟುಗಳು ಸಕ್ರಮವಾಗುವ ಸಾಧ್ಯತೆಗಳಿವೆ. ಇದರಿಂದ ಪುರಸಭೆ ಸಿಬ್ಬಂದಿ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆ ಸೇರಿದಂತೆ ಇನ್ನಿತರ ಎಲ್ಲ ಸಂಘರ್ಷಗಳಿಗೂ ತೆರೆ ಬೀಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.