ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕುವ ನೀಲಿ ಸಿಗ್ನಲ್
ವಾಣಿಜ್ಯ ನಗರಿ ಸಹೋದರಿಯಿಂದ ಮಾದರಿ ಯೋಜನೆ
Team Udayavani, Nov 20, 2019, 2:59 PM IST
ಮುಂಬಯಿ : ಹವಮಾನ ವೈಪರೀತ್ಯಗಳು ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಹಣ ಕೊಟ್ಟು ಆಮ್ಲಜನಕವನ್ನು ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಸ್ಯೆಯ ತೀವ್ರತೆ ಅರಿತು ಹೆಚ್ಚುತ್ತಿರುವ ಮಾಲಿನ್ಯ ನಿಯಂತ್ರಣಕ್ಕೆ ರಾಷ್ಟ್ರ ವಾಣಿಜ್ಯ ನಗರದ ಘಾಟ್ಕೊಪರ್ ಪ್ರದೇಶದ ಇಬ್ಬರು ಸಹೋದರಿಯರು ಪರಿಹಾರ ಮಾರ್ಗವೊಂದನ್ನು ಸೂಚಿಸಿದ್ದಾರೆ.
ನಗರ ಪ್ರದೇಶದ ವಾಯುಮಾಲಿನ್ಯದಿಂದಾಗಿ ಜನಸಾಮಾನ್ಯರು ತೊಂದರೆಗೊಳಗಾಗುತ್ತಿದ್ದಾರೆ. ಅದರಲ್ಲೂ ರಾಷ್ಟ್ರ ರಾಜಧಾನಿ ಜನತೆ ವಿಷಗಾಳಿಯಿಂದ ತೀವ್ರ ಸಮಸ್ಯೆ ಎದುರಾಗಿದೆ. ಈ ವಿಷಯವನ್ನು ಗಮನದಲ್ಲಿರಿಸಿಕೊಂಡ ಶಿವಾನಿ ಖೋಟ್ ಹಾಗೂ ಇಶಾ ಖೋಟ್ ಸಹೋದರಿಯರು “ಬ್ಲೂ ಸಿಗ್ನಲ್’ ಎಂಬ ಪರಿಹಾರವನ್ನು ಕಂಡುಹಿಡಿದಿದ್ದಾರೆ.
ಇಂಧನ ಉಳಿಸುವ ನೀಲಿ ಸಿಗ್ನಲ್
ಟ್ರಾಫಿಕ್ ಸಿಗ್ನಲ್ ಗಳಲ್ಲಿ ಈಗಾಗಲ್ಲೇ ಇರುವ ಕೆಂಪು, ಹಳದಿ ಮತ್ತು ಹಸಿರು ಬಣ್ಣಗಳ ಜತೆಗೆ ನೀಲಿ ಬಣ್ಣವಿರಲಿದ್ದು, ಕೆಂಪು ಬಣ್ಣದ ಬಳಿಕ ಈ ಹೊಸತಾಗಿ ಅಳವಡಿಸಿರುವ ನೀಲಿ ಬಣ್ಣ ಸಿಗ್ನಲ್ ನಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಿಗ್ನಲ್ ವಾಹನ ಚಾಲಕರು ತಮ್ಮ ವಾಹನದ ಇಂಜಿನ್ ಆಫ್ ಮಾಡುವಂತೆ ಸೂಚಿಸಲಿದ್ದು, ಇಂಧನ ಉಳಿತಾಯದ ಜತೆಗೆ ಪರಿಸರ ಮಾಲಿನ್ಯ ತಪ್ಪಿಸಬಹುದು ಎಂದು ಸಹೋದರಿಯರಾದ ಶಿವಾನಿ ಖೋಟ್ ಹಾಗೂ ಇಶಾ ಖೋಟ್‌ಹೇಳಿದ್ದಾರೆ.
ಕೆಂಪು ಸಿಗ್ನಲ್ ಬಂದ 10 ಸೆಕೆಂಡ್‌ಗಳ ನಂತರ ಬ್ಲೂ ಸಿಗ್ನಲ್ ಆನ್ ಆಗುತ್ತದೆ. ಅದೇ ಕೆಂಪು ಸಿಗ್ನಲ್ ಆಫ್ ಆಗುವ 10 ಸೆಕೆಂಡ್‌ಗೂ ಮುನ್ನ ಈ ಬ್ಲೂ ಸಿಗ್ನಲ್ ಆಫ್ ಆಗುತ್ತದೆ. ಆ ವೇಳೆ ಮತ್ತೆ ವಾಹನ ರಿಸ್ಟಾರ್ಟ್ ಮಾಡಿ ಸಿಗ್ನಲ್ ಬಿಟ್ಟ ನಂತರ ವಾಹನವನ್ನು ಮುಂದೆ ಚಲಾಯಿಸಬಹುದು. ಈ ಬಗ್ಗೆ ಮಾತನಾಡಿರುವ ಶಿವಾನಿ ಖೋಟ್ ದೇಶ ಸದ್ಯ ವಾಯುಮಾಲಿನ್ಯ ಎಂಬ ಪ್ರಮುಖ ಸಮಸ್ಯೆಯಲ್ಲಿ ಸಿಲುಕಿದ್ದು, ವಿಷಪೂರಿತ ಗಾಳಿಯಿಂದ ಹಲವು ಜನ ಸಾವನ್ನಪುತ್ತಿದ್ದಾರೆ. ನಮ್ಮ ರಾಜಧಾನಿ ದೆಹಲಿಯಲ್ಲಂತೂ ವಾಯುಮಾಲಿನ್ಯ ಅಪಾಯದ ಮಟ್ಟ ತಲುಪಿದೆ. ಇನ್ನೂ ಈ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಅಳವಡಿಸಿಕೊಳ್ಳಬಹುದಾಗಿದ್ದು, ಮನುಷ್ಯ ಜೀವಕ್ಕಿಂತ ಯಾವುದೂ ದೊಡ್ಡದಲ್ಲ. ಹೀಗಾಗಿ ನೀಲಿ ಸಿಗ್ನಲ್ ಅಳವಡಿಸಿ ಅಪಾಯವನ್ನು ಕೊಂಚ ಮಟ್ಟಿಗೆ ತಪ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.