ದೇಶವ್ಯಾಪಿ ಎನ್‌ಆರ್‌ಸಿ; ರಾಜ್ಯಸಭೆಯಲ್ಲಿ ಅಧಿಕೃತ ಮಾಹಿತಿ ನೀಡಿದ ಗೃಹ ಸಚಿವ ಅಮಿತ್ ಶಾ
ಯಾವ ಧರ್ಮೀಯರೂ ಭಯಪಡುವ ಅಗತ್ಯವಿಲ್ಲ ಎಂದು ಭರವಸೆ
Team Udayavani, Nov 21, 2019, 6:30 AM IST
ಹೊಸದಿಲ್ಲಿ: ಅಸ್ಸಾಂನಲ್ಲಿ ನಡೆಸಿದ ರಾಷ್ಟ್ರೀಯ ನಾಗರಿಕತ್ವ ನೋಂದಣಿ (ಎನ್‌ಆರ್‌ಸಿ)ಅನ್ನು ದೇಶವ್ಯಾಪಿ ವಿಸ್ತ ರಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ರಾಜ್ಯಸಭೆಯಲ್ಲಿ ಮಾತನಾಡಿದ ಅವರು, ದೇಶದ ನಾನಾ ರಾಜ್ಯಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರನ್ನು, ಅದರಲ್ಲೂ 1971ರ ಅನಂತರ ಬಾಂಗ್ಲಾದೇಶದಿಂದ ಇಲ್ಲಿಗೆ ಬಂದು ತೂರಿಕೊಂಡಿರುವ ಬಾಂಗ್ಲಾ ನಿವಾಸಿಗಳನ್ನು ಪತ್ತೆ ಮಾಡಲು ಎನ್‌ಆರ್‌ಸಿಯನ್ನು ಜಾರಿ ಮಾಡಲಾಗುತ್ತಿದೆ. ಹಾಗೆಂದು ಯಾವುದೇ ಧರ್ಮದವರೂ ಎನ್‌ಆರ್‌ಸಿಯಿಂದ ತಮಗೇನೋ ಆಗಿಬಿಡುತ್ತದೆ ಎಂದು ಅಂಜಿಕೊಳ್ಳಬೇಕಾ ಗಿಲ್ಲ ಎಂದು ಅಭಯ ನೀಡಿದ್ದಾರೆ. ಎನ್‌ಆರ್‌ಸಿಯಿಂದ ಯಾರಿಗೂ ಏನೂ ಆಗುವುದಿಲ್ಲ. ಎಲ್ಲರನ್ನೂ ಎನ್‌ಆರ್‌ಸಿ ಯೊಳಗೆ ತರುವ ಸಲುವಾಗಿಯೇ ಈ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂಬುದು ಅಮಿತ್ ಶಾ ಅವರ ಸ್ಪಷ್ಟನೆ. ಜತೆಗೆ ಅಸ್ಸಾಂ ನಲ್ಲಿಯೂ ಮತ್ತೆ ಎನ್‌ಆರ್‌ಸಿ ಮಾಡ ಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈಗಾಗಲೇ ಅಸ್ಸಾಂನಲ್ಲಿ ನಡೆಸಲಾಗಿ ರುವ ಎನ್‌ಆರ್‌ಸಿ ಬಗ್ಗೆ ಸ್ವತಃ ಬಿಜೆಪಿಯೇ ವಿರೋಧ ವ್ಯಕ್ತಪಡಿಸಿದೆ. ಜತೆಗೆ ಅಸ್ಸಾಂ ಹಣಕಾಸು ಸಚಿವ ಹಿಮಾಂತ್ ಬಿಸ್ವಾ ಅವರು, ರಾಜ್ಯದಲ್ಲಿ ಮತ್ತೂಮ್ಮೆ ಎನ್‌ಆರ್‌ಸಿಯಾಗಲಿ ಎಂದು ಆಗ್ರಹಿಸಿದ್ದಾರೆ. ಯಾರನ್ನೂ ಹೊರಗೆ ಹಾಕುವುದಿಲ್ಲ ಅಸ್ಸಾಂನಲ್ಲಿ 19 ಲಕ್ಷ ಜನರು ಪರಿಷ್ಕೃತ ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿದಿರುವುದನ್ನು ಪ್ರಸ್ತಾವಿಸಿದ ಅವರು, ಪಟ್ಟಿಯಿಂದ ಹೊರಗುಳಿದವರು ತಾಲೂಕು ಮಟ್ಟದಲ್ಲಿ ಸ್ಥಾಪಿಸಲಾಗಿರುವ ನ್ಯಾಯಪೀಠ ಗಳಿಗೆ ತಮ್ಮ ಅಹವಾಲು ಸಲ್ಲಿಸಬಹುದು. ಕಾನೂನು ಹೋರಾಟ ನಡೆಸಲು ಹಣವಿಲ್ಲ ದವರಿಗೆ ಅಸ್ಸಾಂ ಸರಕಾರವೇ ಧನ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ವಕೀಲರಿಗೆ ತಗಲುವ ಖರ್ಚನ್ನೂ ಅಸ್ಸಾಂ ಸರಕಾರವೇ ಭರಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಬಂಗಾಲದಲ್ಲಿ ಜಾರಿಯಾಗಲು ಬಿಡಲ್ಲ
ಇಡೀ ರಾಷ್ಟ್ರದಲ್ಲೇ ಎನ್‌ಆರ್‌ಸಿ ವಿಸ್ತರಣೆ ಯಾದರೂ ಪಶ್ಚಿಮ ಬಂಗಾಲದಲ್ಲಿ ಮಾತ್ರ
ಅದನ್ನು ಜಾರಿಗೊಳಿಸಲು ಅವಕಾಶ ನೀಡು ವುದಿಲ್ಲ ಎಂದು ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಪುನರುತ್ಛರಿಸಿದ್ದಾರೆ. ಮಾಧ್ಯಮಗಳ ಜತೆ ಮಾತನಾಡಿದ ಅವರು, “ಪಶ್ಚಿಮ ಬಂಗಾಲದಲ್ಲಿ ಧರ್ಮದ ಆಧಾರದ ಮೇಲೆ ಜನರನ್ನು ಒಡೆಯುವ ಯಾವುದೇ ಪ್ರಯತ್ನಗಳನ್ನು ನಮ್ಮ ಸರಕಾರ ಬೆಂಬಲಿಸುವುದಿಲ್ಲ. ಎನ್‌ಆರ್‌ಸಿ ಜಾರಿಗೆ ನಾವು ಅವಕಾಶ ನೀಡುವುದಿಲ್ಲ’ ಎಂದರು. ಈ ಹಿಂದೆಯೂ ಎನ್‌ಆರ್‌ಸಿ ಜಾರಿಗೆ ಬಿಡುವುದಿಲ್ಲ ಎಂದು ಹೇಳಿದ್ದರು.
ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಯತ್ನ
ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆ ಜಾರಿಗೆ ಎಲ್ಲ ರೀತಿಯಲ್ಲೂ ಪ್ರಯತ್ನ ಮಾಡಲಾಗುವುದು ಎಂದು ಅಮಿತ್ ಶಾ ಸದನಕ್ಕೆ ಹೇಳಿದರು. ಈ ಮಸೂದೆಯ ಉದ್ದೇಶ, ಬಾಂಗ್ಲಾದೇಶ, ಪಾಕಿಸ್ಥಾನ ಮತ್ತು ಅಫ್ಘಾನಿಸ್ಥಾನದಿಂದ ವಲಸೆ ಬಂದಿರುವ ಮುಸ್ಲಿಮೇತರ ಅಂದರೆ ಹಿಂದೂಗಳು, ಬೌದ್ಧರು, ಜೈನರು, ಕ್ರೈಸ್ತರು, ಸಿಕ್ಖರು ಹಾಗೂ ಪಾರ್ಸಿಗಳಿಗೆ ಭಾರತದ ನಾಗರಿಕತ್ವ ನೀಡುವುದಾಗಿದೆ. ಸರಕಾರ ಇವರಿಗೆ ನಾಗರಿಕತ್ವ ನೀಡುವ ಆಶಯ ಹೊಂದಿದೆ. ಈ ಹಿಂದೆ ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರವಾಗಿತ್ತು. ಅನಂತರ ಆಯ್ಕೆ ಸಮಿತಿಗೂ ಹೋಗಿತ್ತು. ರಾಜ್ಯಸಭೆಯಲ್ಲಿ ಅದು ಬಿದ್ದು ಹೋಯಿತು. ಈಗ ಮತ್ತೂಮ್ಮೆ ಬಂದಿದೆ. ಆದರೆ ಇದಕ್ಕೂ ಎನ್‌ಆರ್‌ಸಿಗೂ ಸಂಬಂಧವಿಲ್ಲ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Notice: ಈ ಆಹಾರ ಪದ್ಧತಿಯಿಂದಲೇ ಪತ್ನಿಯ ಕ್ಯಾನ್ಸರ್ ಗುಣವಾಯಿತೆಂದ ಸಿಕ್ಸರ್ ಸಿಧುಗೆ ನೋಟಿಸ್
Champions Trophy; ಭಾರತ ತಂಡ ಪಾಕಿಸ್ಥಾನಕ್ಕೆ ತೆರಳುವುದು ಅಸಂಭವ: ದೃಢಪಡಿಸಿದ MEA
PM Modi ಭೇಟಿಯಾಗಿ ವಿಶೇಷ ಮನವಿ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ
Maharashtra: ಬೈಕ್ ಸವಾರನನ್ನು ತಪ್ಪಿಸಲು ಹೋಗಿ ಬಸ್ ಪಲ್ಟಿ… 10 ಮಂದಿ ಮೃತ್ಯು
Karnataka ಸೇರಿ 4ರಾಜ್ಯಗಳಿಗೆ ಬೇಕಿದ್ದ ಹಂತಕ ಅರೆಸ್ಟ್, 2000 CCTV ಪರಿಶೀಲಿಸಿದ್ದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.