ಅವಿಭಜಿತ ದಕ್ಷಿಣ ಕನ್ನಡದ ಟೋಲ್‌ಗಳು ಸಿದ್ಧ
ಡಿ. 1ರಿಂದ ಟೋಲ್ ಗೇಟ್‌ಗಳಲ್ಲಿ ಫಾಸ್ಟ್ಯಾಗ್
Team Udayavani, Nov 21, 2019, 5:26 AM IST
ಮಂಗಳೂರು/ಕೋಟ: ಕಡ್ಡಾಯ ಫಾಸ್ಟ್ಯಾ ಗ್‌ನಡಿ ಡಿ. 1ರಿಂದ ರಾಷ್ಟ್ರೀಯ ಹೆದ್ದಾರಿಯ ಎಲ್ಲ ಟೋಲ್ ಪ್ಲಾಝಾಗಳಲ್ಲಿ ತಲಾ ಒಂದು ಗೇಟ್ ಬಿಟ್ಟು ಮಿಕ್ಕುಳಿದ ಎಲ್ಲವೂ ನಗದು ರಹಿತ ವ್ಯವಹಾರ ನಡೆಸಲಿವೆ. ಎಲ್ಲ ವಾಹನಗಳೂ ಫಾಸ್ಟಾಗ್ ಅಳವಡಿಸಿಕೊಳ್ಳದ ಕಾರಣ ಆರಂಭದ ಕೆಲವು ವಾರ ಸಾದಾ ಸುಂಕ ವಸೂಲಿ ವ್ಯವಸ್ಥೆಯಿರುವ ಗೇಟ್‌ಗಳಲ್ಲಿ ವಾಹನ ದಟ್ಟಣೆ ಉಂಟಾಗುವ ಸಾಧ್ಯತೆಯಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಹಾಗೂ ದ.ಕ. ಜಿಲ್ಲೆಯ ಬ್ರಹ್ಮರಕೂಟ್ಲು, ಸುರತ್ಕಲ್ ಟೋಲ್ ಪ್ಲಾಝಾಗಳಲ್ಲಿ ಪ್ರಾಯೋಗಿಕ ಫಾಸ್ಟಾಗ್ ಆರಂಭಿಸಲಾಗಿದೆ. ಸೂಚನಾ ಫಲಕ ಅಳವಡಿಸಿ, ವಾಹನ ಸವಾರರಿಗೆ ಕರಪತ್ರ ವಿತರಿಸಿ ಮಾಹಿತಿ ನೀಡಲಾಗುತ್ತಿದೆ.
ಇಲಾಖೆಯ ಮಟ್ಟದಲ್ಲೂ ಸಿದ್ಧತೆಗಳಾಗಿದ್ದು, ಮಂಗಳವಾರ ಬೆಂಗಳೂರಿನಲ್ಲಿ ಡಿಜಿಪಿ ನೇತೃತ್ವದಲ್ಲಿ ರಾಜ್ಯದ ಎಲ್ಲ ಟೋಲ್ ಮ್ಯಾನೇಜರ್‌ಗಳ ಸಭೆ ನಡೆದಿದೆ. ಹೆದ್ದಾರಿ ಪ್ರಾಧಿಕಾರವೂ ಸಭೆಗಳನ್ನು ನಡೆಸಿ ಯೋಜನೆಯ ಅನುಷ್ಠಾನದ ಕುರಿತು ಚರ್ಚಿಸಿದೆ.
ನಗದು ರಾಹಿತ್ಯದ ಅನುಕೂಲ
ರೇಡಿಯೊ ಫ್ರೀ ಐಡೆಂಟಿಫಿಕೇಷನ್ (ಆರ್‌ಎಫ್‌ಐಡಿ) ಹೊಂದಿರುವ ” ಫಾಸ್ಟ್ಯಾಗ್’ ಅಳವಡಿಸಿದ ವಾಹನ ಟೋಲ್ ಬೂತ್‌ಗೆ ಆಗಮಿಸುತ್ತಿದ್ದಂತೆ ಟ್ಯಾಗ್ ಸ್ಕ್ಯಾನ್ ಆಗಿ ಖಾತೆಯಿಂದ ನಿಗದಿತ ಶುಲ್ಕ ಕಡಿತಗೊಳ್ಳುತ್ತದೆ. ಉಡುಪಿ, ದ.ಕ. ಜಿಲ್ಲೆಯಲ್ಲಿ ನಿತ್ಯ ಸಂಚರಿಸುವ ಶೇ. 30ಷ್ಟು ವಾಹನಗಳು ಈಗಾಗಲೇ ಫಾಸ್ಟ್ಯಾಗ್ ಅಳವಡಿಸಿಕೊಂಡಿವೆ. ಹೊಸ ವಾಹನಗಳ ಖರೀದಿ ವೇಳೆಗೆ ಫಾಸ್ಟ್ಯಾಗ್ ಅಳವಡಿಕೆ ಈಗಾಗಲೇ ಕಡ್ಡಾಯವಾಗಿದೆ.
ಫಾಸ್ಟ್ಯಾಗ್ ಅಳವಡಿಕೆ ಹೇಗೆ?
ಎಲ್ಲ ಟೋಲ್ ಪ್ಲಾಜಾಗಳಲ್ಲಿ, ಆಯ್ದ ಬ್ಯಾಂಕ್ ಶಾಖೆಗಳಲ್ಲಿ ಫಾಸ್ಟ್ಯಾಗ್ ಅಳವಡಿಸಿಕೊಡಲಾಗುತ್ತದೆ. ಮೈಫಾಸ್ಟಾಗ್, ಫಾಸ್ಟ್ಯಾಗ್ ಪಾರ್ಟನರ್, ಫಾಸ್ಟ್ಯಾಗ್ ಮುಂತಾದ ಹಲವಾರು ಆ್ಯಪ್‌ಗ್ಳಿವೆ. ಪೇಟಿಎಂ, ಗೂಗಲ್ ಪೇಗಳಲ್ಲೂ ಈ ವ್ಯವಸ್ಥೆ ಇದೆ.
ಸಮಯ ಉಳಿತಾಯ; ಕಾರ್ಮಿಕರಿಗೆ ಚಿಂತೆ
ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಂಡಲ್ಲಿ ಸಮಯದ ಉಳಿತಾಯದ ಜತೆಗೆ ಚಿಲ್ಲರೆ ಸಮಸ್ಯೆಗೂ ಮುಕ್ತಿ ದೊರೆಯಲಿದೆ. ಆದರೆ ಟೋಲ್‌ನಲ್ಲಿ ಇದುವರೆಗೆ ಕಾರ್ಯ ನಿರ್ವಹಿಸುತ್ತಿದ್ದ ಸಿಬಂದಿಗೆ ಉದ್ಯೋಗ ನಷ್ಟದ ಭೀತಿ ಎದುರಾಗಲಿದೆ.
ಉಡುಪಿ ಜಿಲ್ಲೆಯ ಹೆಜಮಾಡಿ, ಸಾಸ್ತಾನ ಹಾಗೂ ದ.ಕ. ಜಿಲ್ಲೆಯ ತಲಪಾಡಿ, ಬ್ರಹ್ಮರಕೂಟ್ಲು, ಎನ್‌ಐಟಿಕೆ ಟೋಲ್ ಪ್ಲಾಝಾಗಳಲ್ಲಿ ಪ್ರಾಯೋಗಿಕ ಫಾಸ್ಟಾಗ್ ಆರಂಭಿಸಲಾಗಿದೆ. ಡಿ. 1ರಿಂದ ಕಡ್ಡಾಯವಾಗಿ ಜಾರಿಯಾಗಲಿದೆ.
– ಶಿಶುಪಾಲನ್, ಉಭಯ ಜಿಲ್ಲೆಗಳ , ಎನ್‌ಎಚ್‌ಎಐ ಪ್ರಾಜೆಕ್ಟ್ ಡೈರೆಕ್ಟರ್
ಹೆಜಮಾಡಿ, ತಲಪಾಡಿ ಮತ್ತು ಸಾಸ್ತಾನ ಟೋಲ್‌ಗಳಲ್ಲಿ ಫಾಸ್ಟಾಗ್ ಪ್ರಾಯೋಗಿಕ ಪ್ರಕ್ರಿಯೆ ನಡೆಯುತ್ತಿದೆ. ಡಿ.1ರಿಂದ ಈ ಮೂರೂ ಟೋಲ್‌ಗಳಲ್ಲಿ ಒಂದು ಗೇಟ್ ವಿನಾ ಮಿಕ್ಕೆಲ್ಲ ಕ್ಯಾಶ್‌ಲೆಸ್ ಆಗಲಿವೆ.
– ಶಿವಪ್ರಸಾದ್ ರೈ, ಹೆಜಮಾಡಿ, ತಲಪಾಡಿ, ಸಾಸ್ತಾನ ಟೋಲ್ ಮ್ಯಾನೇಜರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.