Big B, ಬಿಗ್ ಕೆ ಮಧ್ಯೆ ಬಿಗ್ ಎಸ್ ಇರಬೇಕಿತ್ತು !ಗೋವಾ ಚಿತ್ರೋತ್ಸವದಲ್ಲಿ ಅನುಪಮ ಸಮಾಗಮ
Team Udayavani, Nov 21, 2019, 12:36 PM IST
ಪಣಜಿ, ನ. 21: ಗೋವಾದ ಚಿತ್ರೋತ್ಸವದ ಉದ್ಘಾಟನಾ ವೇದಿಕೆಯಲ್ಲಿ ಬುಧವಾರ ಬಿಗ್ ಬಿ ಮತ್ತ ಬಿಗ್ ಕೆ ಕಂಗೊಳಿಸಿದಾಗ ಕೊರತೆ ಎನಿಸಿದ್ದು ಬಿಗ್ ಎಸ್!
ಬಾಲಿವುಡ್‌ನ ಶಹೆನ್‌ಷಾ ಬಿಗ್ ಬಿ ಅಮಿತಾಬ್ ಬಚ್ಚನ್ ಚಿತ್ರೋತ್ಸವವನ್ನುಉದ್ಘಾಟಿಸಿದರು. ಜತೆಗೆ ತಮ್ಮ ಗೆಳೆಯ ತಮಿಳು ಚಿತ್ರನಟ ರಜನೀಕಾಂತ್ [ಬಿಗ್ ಬಿ ಎಂದರೆ ಬಾಲಿವುಡ್‌ನಲ್ಲಿ ಬಿಗ್ ಎಂದರ್ಥ. ಬಿಗ್ ಟಿ ಎಂದರೆ ಕಾಲಿವುಡ್‌ನಲ್ಲಿ ಬಿಗ್ ಎಂದರ್ಥ. ಬಾಲಿವುಡ್ ಹಿಂದಿ ಚಿತ್ರರಂಗವಾದರೆ, ಕಾಲಿವುಡ್ ತಮಿಳು ಚಿತ್ರರಂಗ] ರಿಗೆ ಸುವರ್ಣ ಮಹೋತ್ಸವ ನೆನಪಿನ ಗೌರವ ನೀಡಿ ಅಭಿನಂದಿಸಿದರು.
ಆಗ ಇಬ್ಬರೂ ಮೊದಲು ನಮಸ್ಕರಿಸಿದ್ದು ತಮ್ಮ ಅಭಿಮಾನಿಗಳಿಗೆ. ಇಬ್ಬರ ಮಾತೂ ಒಂದೇ ತೆರನದ್ದಾಗಿತ್ತು. ‘ನಿಜ, ನಮ್ಮನ್ನು ಬೆಳೆಸಿದ್ದುನಿರ್ದೇಶಕರು, ಚಿತ್ರ ಪರಿಣಿತರು ಎಲ್ಲವೂ ನಿಜ. ಅವರಿಗೆ ನಮ್ಮ ಧನ್ಯವಾದಗಳಿವೆ. ಆದರೂ, ಈ ಸ್ಥಿತಿಗೆ ನಮ್ನನ್ನು ತಂದು ನಿಲ್ಲಿಸಿರುವುದು ನೀವು [ಅಭಿಮಾನಿಗಳು]. ನಿಮ್ಮ ಋಣವೇ ದೊಡ್ಡದು’ ಎಂದು ಹೇಳಿದರು. ಇಬ್ಬರ ಮಾತಿಗೂ ಪ್ರೇಕ್ಷಕರು ತಮ್ಮ ಅಮೋಘ ಕರತಾಡನದ ಮೂಲಕ ಮೊಹರು ಒತ್ತಿದ್ದೂ ನಿಜ.
ಕೊರತೆ ಎನಿಸಿದ್ದು ಬಿಗ್ ಎಸ್ !
ಭಾರತೀಯ ಚಿತ್ರರಂಗದ ಇಬ್ಬರು ದಿಗ್ಗಜರ ಒಟ್ಟಿನ ದೃಶ್ಯವೇ ವಿಶಿಷ್ಟ ಎನ್ನುವಂತಿತ್ತು. ಆಗ ಅಲ್ಲಿ ಕೊರತೆ ಎನಿಸಿದ್ದು ಎಂದರೆ, ಬಿಗ್ ಎಸ್ !
ಕನ್ನಡ ಚಿತ್ರರಂಗ [ಸ್ಯಾಂಡಲ್‌ವುಡ್]ದ ಮೇರು ನಟ ಡಾ. ರಾಜಕುಮಾರ್ ಬಿಗ್ ಎಸ್ ಆಗಿ ಇದೇ ವೇದಿಕೆಯಲ್ಲಿ ಇವರೊಂದಿಗೆ ಇದ್ದಿದ್ದರೆ [ಅವರಿಗೆ ೯೦ ವರ್ಷವಾಗಿರುತ್ತಿತ್ತು. ಅತಿ ಹಿರಿಯ ನಟನೆಂಬ ಖ್ಯಾತಿಗೂ ಒಳಗಾಗಿರುತ್ತಿದ್ದರು]ಆ ದೃಶ್ಯವೇ ಬೇರಾಗುತ್ತಿತ್ತು.
ಈ ಮೂವರೂ ತಮ್ಮ ತಮ್ಮ ಚಿತ್ರರಂಗದಲ್ಲಿ ಗಳಿಸಿದ ಜನಪ್ರಿಯತೆ, ನಿರ್ಮಿಸಿದ ಜನಪ್ರಿಯತೆಯ ಅಲೆ ಅನನ್ಯ. ಕೆಲವು ವಿಷಯಗಳಲ್ಲಿ ನಡೆ ನುಡಿಯ ಮಧ್ಯೆ ಸಮನ್ವಯತೆಯನ್ನೂ ಇಟ್ಟುಕೊಂಡು ಬೆಳೆದವರು. ಪರಸ್ಪರ ಗೌರವ ತೋರುತ್ತಲೇ ಬಾಳಿದವರು. ಕೆಲವು ವಿವಾದದ ಸಂದರ್ಭದಲ್ಲೂ ತಮ್ಮಸಂಬಂಧಗಳನ್ನು ಗೋಜಲು ಮಾಡಿಕೊಳ್ಳದೇ ನಿರ್ವಹಿಸಿದವರು. ಈ ಮೂವರೂ ಒಂದೇ ವೇದಿಕೆಯಲ್ಲಿ, ಅದರಲ್ಲೂ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವದ ಸುವರ್ಣ ಮಹೋತ್ಸವ ವೇದಿಕೆಯಲ್ಲಿ. ಎಂಥಾ ದೃಶ್ಯವಾಗಿರುತ್ತಿತ್ತು.
ಈ ಮೂರೂ ಚಿತ್ರರಂಗದಲ್ಲಿ ಕಂಡುಬರುತ್ತಿರುವ ಕೊರತೆ ಈಗ ಒಂದೇ ಈ ಮೂರೂ ಬಿಗ್‌ಗಳ ನಂತರ ಹೊಸ ಬಿಗ್‌ಗಳೇ ತೋರುತ್ತಿಲ್ಲ !
ಇಲ್ಲಿ ಬಿಗ್ ಎಸ್ ಎಂದರೆ ಸ್ಯಾಂಡಲ್‌ವುಡ್‌ನ ಬಿಗ್ ಎಂದಷ್ಟೇ ಅಲ್ಲ. ಹಿರಿಯ ನಟನಾಗಿ ಭಾರತೀಯ ಚಿತ್ರರಂಗದ ಷಹೆನ್‌ಷಾ [ಅನಭಿಷಿಕ್ತ ಚಕ್ರವರ್ತಿ] ಆಗಿ ಕಂಗೊಳಿಸುತ್ತಿದ್ದರು ಡಾ. ರಾಜಕುಮಾರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Choreographer ರೆಮೋ ಡಿಸೋಜಾ ವಿರುದ್ಧದ ಪ್ರಕರಣ ದೆಹಲಿ ಕೋರ್ಟ್ ಗೆ ವರ್ಗಾಯಿಸಿದ ಸುಪ್ರೀಂ
Viral Photo: ಬಾಲಿವುಡ್ ನಟ ಆಮಿರ್ ಖಾನ್ ಭೇಟಿಯಾದ ಕಿಚ್ಚ ಸುದೀಪ್; ಫ್ಯಾನ್ಸ್ ಥ್ರಿಲ್
IFFI 2024: ತಾಲಿಯಾ..ತಾಲಿಯಾ…ಜೋರ್ ದಾರ್ ತಾಲಿಯಾ..!
A.R.Rahman Divorce: ಎ.ಆರ್.ರೆಹಮಾನ್ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?
55th IFFI Goa: 55ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ವಿಧ್ಯುಕ್ತ ಚಾಲನೆ
MUST WATCH
ಹೊಸ ಸೇರ್ಪಡೆ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Naxal Activity: ಮಲೆನಾಡಿನವರೊಂದಿಗೆ ಆತ್ಮೀಯವಾಗಿ ಬೆರೆಯುತ್ತಿದ್ದ ವಿಕ್ರಂ ಗೌಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.