ಅನರ್ಹ ಶಾಸಕರ ತ್ಯಾಗದಿಂದ ಬಿಜೆಪಿ ಸರ್ಕಾರ ರಚನೆ: ಮುರಳೀಧರಾವ್
Team Udayavani, Nov 21, 2019, 2:21 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 17 ಮಂದಿ ಶಾಸಕರ ರಾಜೀನಾಮೆಯಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ಯಡಿಯೂರಪ್ಪ ನೇತೃತ್ವದಲ್ಲಿ ಸುಭದ್ರವಾಗಿ ಸರ್ಕಾರ ನಡೆಯುತ್ತಿದೆಯೆಂದು ಬಿಜೆಪಿ ರಾಜ್ಯ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರಾವ್ ತಿಳಿಸಿದರು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಪರ ಪ್ರಚಾರ ನಡೆಸಿದ ಬಳಿಕ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದರು.
ಡಾ.ಕೆ.ಸುಧಾಕರ್ ಮತ್ತು ಉಳಿದ ಮಾಜಿ ಶಾಸಕರ ಬೆಂಬಲದಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆ. ಆಗಿದೆ.ಮಾಜಿ ಶಾಸಕರ ಸಹಕಾರದಿಂದ ಸರ್ಕಾರ ಉತ್ತಮವಾಗಿ ಆಡಳಿತ ನಡೆಸ್ತಿದೆ. ಅಭಿವೃದ್ಧಿಗಾಗಿ ಜನ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸುವ ವಿಶ್ವಾಸ ಇದೆ ಎಂದರು
ಹಿಂದಿನ ಸಮ್ಮಿಶ್ರ ಸರ್ಕಾರದಲ್ಲಿ ಕಿತ್ತಾಟ ಮಿತಿಮೀರಿತ್ತು. ಅವರು ಕೆಲವೇ ಶಾಸಕರ ಕ್ಷೇತ್ರಗಳಿಗೆ ಆದ್ಯತೆ ಕೊಟ್ಟಿದ್ದರು.. ಸಮ್ಮಿಶ್ರ ಸರ್ಕಾರದಲ್ಲಿ ಸಮಗ್ರ ಅಭಿವೃದ್ದಿ ಆಗುತ್ತಿರಲಿಲ್ಲ. ಈ 17 ಮಾಜಿ ಶಾಸಕರ ಕ್ಷೇತ್ರಗಳೂ ಸೇರಿದಂತೆ ಹಲವು ಕ್ಷೇತ್ರಗಳ ಅಭಿವೃದ್ಧಿಗೆ ಒತ್ತು ಕೊಟ್ಟಿರಲಿಲ್ಲ ಎಂದರು. ಹಾಗಾಗಿ ಇವರೆಲ್ಲ ರಾಜೀನಾಮೆ ಕೊಟ್ಟು ಬಿಜೆಪಿಗೆ ಬೆಂಬಲಿಸಿದ್ರು. ಮೋದಿ ನಾಯಕತ್ವದ ಮೇಲೆ ಇವರಿಗೆಲ್ಲ ನಂಬಿಕೆ ಇದೆ ಎಂದರು.
ಅನರ್ಹರಿಗೆ ವಿರೋಧಿಸುತ್ತಿರುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮುರಳೀಧರ್ ರಾವ್ ಎಚ್ಚರಿಕೆ ನೀಡಿದರು. ನಮ್ಮದು ಶಿಸ್ತಿನ ಪಕ್ಷ ಶಿಸ್ತಿನ ಪಕ್ಷ ನೀಡುವ ಸೂಚನೆಗಳನ್ನು, ನಿರ್ಧಾರಗಳನ್ನು ನಮ್ಮ ಕಾರ್ಯಕರ್ತರು ಮೀರಲ್ಲ. ನಮ್ಮ ಕಾರ್ಯಕರ್ತರಿಗೆ ಮಾಜಿ ಶಾಸಕರನ್ನು ಬೆಂಬಲಿಸುವಂತೆ ಸೂಚಿಸಲಾಗಿದೆ ಎಂದರು. ಪಕ್ಷದ ಸೂಚನೆಗಳನ್ನು ಪಾಲಿಸದವರ ವಿರುದ್ಧ ಕ್ರಮವನ್ನೂ ಕೈಗೊಳ್ಳುವುದಾಗಿ ತಿಳಿಸಿದರು.
ಅನರ್ಹರು ಬಿಜೆಪಿ ಸರ್ಕಾರ ರಚನೆಗೆ ಸಹಕರಿಸಿದ್ದಾರೆ. ನಾವು ಅವರ ಗೆಲುವಿಗೆ ಸಹಕರಿಸಬೇಕು.ಪಕ್ಷದ ಸರ್ವರೂ ಈ ಸೂಚನೆಗಳನ್ನು ಪಾಲಿಸಲೇಬೇಕು. ಉಪ ಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಲ್ಲಿ ಒಗ್ಗಟ್ಟು ಇದೆ, ಯಾವುದೇ ವಿರೋಧ ಇಲ್ಲ. ಎಲ್ರೂ ಒಗ್ಗಟ್ಟಾಗಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸ್ತೇವೆ ಎಂದರು
ರಾಷ್ಟ್ರೀಯ ನಾಯಕರು ಸ್ಟಾರ್ ಪ್ರಚಾರರಾಗಿಲ್ಲದ ವಿಚಾರಕ್ಕೆ ಪ್ರತಿಕ್ರಯಿಸಿದ ಅವರು, ನಾನೂ ರಾಷ್ಟ್ರೀಯ ನಾಯಕ. ನಾನು ಪ್ರಚಾರಕ್ಕೆ ಬಂದಿಲ್ಲವೇ. ನಮ್ಮ ವರಿಷ್ಠರು ರಾಜ್ಯದ ಉಪಚುನಾವಣೆ ಬಗ್ಗೆ ತುಂಬಾ ಆಸಕ್ತರಾಗಿದ್ದಾರೆ. ಖುದ್ದು ಅಮಿತ್ ಷಾ ಅವರು ನಿತ್ಯ ಚುನಾವಣಾ ವಿವರ ಪಡೀತಿದ್ದಾರೆ. ರಾಜ್ಯದಲ್ಲಿ ಯಡಿಯೂರಪ್ಪ ನಾಯಕತ್ವದ ಬಿಜೆಪಿ ಸರ್ಕಾರ ಮುಂದುವರೆಸೋದು ವರಿಷ್ಠರ ಉದ್ದೇಶವಾಗಿದೆ.
ಶರತ್ ಬಚ್ಚೇಗೌಡ ಬಂಡಾಯ
ಬಿಜೆಪಿ ಕಾರ್ಯಕರ್ತರು ಪಕ್ಷದ ನಿಲುವು ಅರ್ಥ ಮಾಡ್ಕೋತಾರೆ. ಯಾರು ಯಾರಿಗೆ ಬೇಸರ ಇದೆ. ಅವರ ಜೊತೆ ಮಾತುಕತೆ ಮಾಡಲಾಗುತ್ತದೆ. ಪಕ್ಷದಲ್ಲಿ ಯಾರನ್ನೂ ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಬಂಡಾಯ ಏಳೋದು, ಅಶಿಸ್ತು, ಬೇರೆ ಸ್ಥಾನ ಬಯಸೋದು ಇಂಥ ಸಂದರ್ಭದಲ್ಲಿ ಸಹಜ. ಎಲ್ಲರ ಜೊತೆ ಚರ್ಚಿಸಿ ಪರಿಸ್ಥಿತಿ ಸರಿಪಡಿಸಲಾಗುತ್ತದೆ. ಎಲ್ಲರೂ ಒಗ್ಗಟ್ಟಾಗಿ ಮಾಜಿ ಶಾಸಕರ ಪರ ಕೆಲಸ ಮಾಡುವ ವಿಶ್ವಾಸವಿದೆ. ಪಕ್ಷದ ಕಾರ್ಯಕರ್ತರು ಮೋದಿ, ಅಮಿತ್ ಶಾ ಮೇಲೆ ನಂಬಿಕೆ ಇಟ್ಟಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ
Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್: ಆರ್. ಅಶೋಕ್ ಆರೋಪ
Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ
Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್
Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.