ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ಉಡುಗೆ
Team Udayavani, Nov 22, 2019, 4:12 AM IST
ಲಂಬಾಣಿ ಮಹಿಳೆಯರು ಕರ್ನಾಟಕ (ಸಂಡೂರ್, ಬಳ್ಳಾರಿ)ಯಲ್ಲಿ , ಆಂಧ್ರ, ತೆಲಂಗಾಣ ಪ್ರದೇಶದಲ್ಲಿ (ಲಂಬಾಣಿ) ಹಾಗೂ ರಾಜಸ್ಥಾನ ಮೊದಲಾದ ಪ್ರದೇಶಗಳಲ್ಲಿ ಬಂಜಾರ ಜನಾಂಗದ ಮಹಿಳೆಯರು ಎಂದು ಹೆಸರು ಪಡೆದಿದ್ದಾರೆ.
ಕರ್ನಾಟಕದ ಬಳ್ಳಾರಿಯ ಸಂಡೂರಿನಲ್ಲಿ ವಾಸಿಸುವ ಲಂಬಾಣಿ ಮಹಿಳೆಯರು ಉಡುಗೆಯ ಮೇಲೆ ತಯಾರಿಸುವ ಕಸೂತಿಗೆ “ಸಂಡೂರು’ ಕಸೂತಿ ಎಂದೇ ಹೆಸರು. ಅಲ್ಲಿ ಹಲವು ವರ್ಷಗಳವರೆಗೆ ಅಲ್ಲಲ್ಲಿ ಹಂಚಿಹೋಗಿದ್ದ ಈ ಕಲೆ, ಇಂದು ಸಂಡೂರು ಕಸೂತಿ ಕೇಂದ್ರದ ಹೆಸರಿನಲ್ಲಿ 400 ಲಂಮಾಣಿ ಮಹಿಳೆಯರ ಸಾಂಪ್ರದಾಯಿಕ ತೊಡುಗೆ ಹಾಗೂ ಕಸೂತಿಗೆ ಪ್ರೋತ್ಸಾಹ ನೀಡುತ್ತಿದೆ. 15 ಹಳ್ಳಿಗಳಲ್ಲಿ ಸಂಡೂರು ಕಸೂತಿ ತಯಾರಿಸುವ ಜನರಿದ್ದಾರೆ.
ಲಂಬಾಣಿ ಮಹಿಳೆಯರ ಸಾಂಪ್ರದಾಯಿಕ ತೊಡುಗೆಯ ಹೆಸರು ಫೆಥಿಯಾ ಕಂಚಲಿ ದಿರಿಸು. ಅಂದರೆ, ಸಡಿಲವಾದ ಸ್ಕರ್ಟ್‌ನಂತಹ ತೊಡುಗೆಗೆ ವಿವಿಧ ಆಭರಣಗಳಿಂದ ಸಿಂಗರಿಸಿದ ಕುಪ್ಪಸವನ್ನು ತೊಡಲಾಗುತ್ತದೆ.
ಇಂದಿನ ಆಧುನಿಕ ಮಹಿಳೆಯರ ಆಯ್ಕೆಗೆ ತಕ್ಕಂತೆ ಸಂಡೂರು ಕಸೂತಿಯನ್ನು ಇತರ ಚೂಡಿದಾರ, ಸಲ್ವಾರ್ ಹಾಗೂ ಬಗೆ ಬಗೆಯ ಕುಪ್ಪಸಗಳ ವಿನ್ಯಾಸಕ್ಕೂ ಬಳಸುತ್ತಾರೆ. ಸಂಡೂರಿನಲ್ಲಿ ತಯಾರಾಗುವ ವಿವಿಧ ಸಂಡೂರು ಕಸೂತಿಯ ಲಮಾಣಿ ಸಾಂಪ್ರದಾಯಿಕ ಹಾಗೂ ಆಧುನಿಕ ಉಡುಗೆಗಳು ಅಮೆರಿಕ, ಲಂಡನ್ ಹಾಗೂ ಜಪಾನ್‌ಗಳಿಗೆ ರಫ್ತಾಗುತ್ತಿದೆ.
ಸಂಡೂರು ಕಸೂತಿಯಲ್ಲಿ 39 ಬಗೆಬಗೆಯ ಹೊಲಿಗೆಗಳಿವೆ. ಹಿರಿಯ ಮಹಿಳೆಯರು ಇಂದಿನ ತರುಣಿಯರಿಗೆ ಹಂತ ಹಂತವಾಗಿ ಈ ಎಲ್ಲಾ ಹೊಲಿಗೆಗಳನ್ನು ಕಲಿಸುತ್ತಾರೆ. ಶಾಂತಿಬಾಯಿ ಹಾಗೂ ಗೌರಿ ಬಾಯಿ ಎಂಬ ಹಿರಿಯ ಲಂಬಾಣಿ ಮಹಿಳೆಯರು ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಸಂಡೂರು ಲಂಬಾಣಿ ಕಸೂತಿ ಕಲೆಗೆ ಜಿಯೋಗ್ರಾಫಿಕಲ್ ಇಂಡೆಕ್ಸ್‌ಯನ್ನು 2008ರಲ್ಲಿ ನೀಡಿ ಗೌರವಿಸಲಾಗಿದೆ.
ಗೌರಿಬಾಯಿ ಎಂಬ ಲಂಬಾಣಿ ಹಿರಿ ಮಹಿಳೆಯ ಸಾಧನೆಯೆಂದರೆ ಲಂಡನ್ ಫ್ಯಾಶನ್ ವೀಕ್‌ನಲ್ಲಿ ರ್‍ಯಾಂಪ್ ಮೇಲೆ ವಾಕ್ (ಕ್ಯಾಂಪ್‌ವಾಕ್) ಮಾಡಿದ್ದು ! ಆಕರ್ಷಕ ಕಸೂತಿಯ ವೈಭವಯುತ ದಿರಿಸಿನಂತೆ ಕಾಣುವ ಸಾಂಪ್ರದಾಯಿಕ ತೊಡುಗೆ ತೊಟ್ಟಾಗ ವೀಕ್ಷಕರಿಂದ ಕರತಾಡನದ ಸ್ವಾಗತವಾಯಿತು. ಕೆಲವರು ಕೇಳಿದ ಪ್ರಶ್ನೆಯೆಂದರೆ ಇಂತಹ ಅಂದದ ಕಸೂತಿಯ ದಿರಿಸನ್ನು ನಿತ್ಯ ಉಡುವುದಾದರೆ ಲಂಬಾಣಿ ಮಹಿಳೆಯರು ಎಷ್ಟು ಸಿರಿವಂತರು! ಅವರ ಸಾಂಪ್ರದಾಯಿಕ ಅಲೆಮಾರಿ ಜೀವನದಲ್ಲಿ ಎಲ್ಲಿದ್ದರೂ ತಮ್ಮ ಉಡುಗೆ-ತೊಡುಗೆಯ ಕಸೂತಿಯ ಅಂದವನ್ನು ಬದಲಿಸದೇ ಇರುವುದು ವಿಶೇಷ ದಾಖಲೆ ಎನ್ನಬಹುದು. ಈ ಕಸೂತಿಯ ವಿವಿಧ ದಿರಿಸಿಗೆ 400ರಿಂದ 4000 ರೂಪಾಯಿಗಳವರೆಗೆ ಮೌಲ್ಯವಿದೆ. ರಾಜಸ್ಥಾನ ಗುಜರಾತಿನಲ್ಲಿ ಮಧ್ಯಪ್ರದೇಶ ಸಿಂಧ್ ಪ್ರಾಂತ್ಯಗಳಲ್ಲಿ ಅಧಿಕವಾಗಿ ಹರಡಿರುವ ಈ ಬಂಜಾರ ಮಹಿಳೆಯರು ಭಾರತದ ಜಿಪ್ಸಿ ಮಹಿಳೆಯರು ಎಂಬ ಹೆಸರು ಪಡೆದುಕೊಂಡಿದ್ದಾರೆ.
ಬಂಜಾರಾ ಮಹಿಳೆಯರ ಕಸೂತಿಯ ದಿರಿಸಿನ ವೈಶಿಷ್ಟ್ಯವು ಉದಾಹರಣೀಯ. ಇವರು ಅಫಘಾನಿಸ್ಥಾನದಿಂದ ಬಂದು ರಾಜಸ್ಥಾನದಲ್ಲಿ (ಮಿರವರ್) ಪ್ರದೇಶದಲ್ಲಿ ನೆಲೆನಿಂತರು ಎಂಬ ಐತಿಹ್ಯವಿದೆ. ಇವರು ಧರಿಸುವ ಸಾಂಪ್ರದಾಯಿಕ ತೊಡುಗೆಯ ಮೇಲೆ “ಲೆಪೊ’ ಎಂಬ ವಿಶಿಷ್ಟ ವಿಧಾನದ ಕಸೂತಿ ಕಲೆಯನ್ನು ಪಡಿಮೂಡಿಸುತ್ತಾರೆ. ಗಾಢ ರಂಗಿನ ವರ್ಣಮಯ ತಿಪೋ ಕಸೂತಿಯ ಜೊತೆಗೆ ಮಿರರ್ ವರ್ಕ್ (ಪುಟ್ಟ ಕನ್ನಡಿಗಳನ್ನು) ಬಳಸುತ್ತಾರೆ. ಈ ದಿರಿಸಿನೊಂದಿಗೆ ವಿಶಿಷ್ಟ ರೀತಿಯ ನತ್ತು, ಕಿವಿಯ ಓಲೆ, ತಲೆಯ ಮೇಲೆ ಧರಿಸುವ ವಸ್ತ್ರವನ್ನು ಧರಿಸುತ್ತಾರೆ. ಅಸ್ಥಿಯಂತಹ ಬಿಳಿ ಬಣ್ಣದ ಹಲವು ಬಳೆಗಳನ್ನು ಧಾರಣೆ ಮಾಡುತ್ತಾರೆ. ಇವರು ಕಸೂತಿಯ ಜೊತೆಗೆ ಬಣ್ಣ ಹಚ್ಚಲು (ಪೇಂಟಿಂಗ್), ಹಚ್ಚೆ ಹಾಕುವುದು (ಟ್ಯಾಟೂ) ಹಾಗೂ ವಿಶೇಷ ರಂಗೋಲಿಗಳನ್ನು ರಚಿಸುವಲ್ಲಿಯೂ ಬಹಳ ಪ್ರವೀಣರು.
ಶ್ರಾವಣ ಮಾಸದಲ್ಲಿ ಬಂಜಾರಾ ಮಹಿಳೆಯರು “ತೀಜ್’ ಎಂಬ ಹಬ್ಬವನ್ನು ಆಚರಿಸುತ್ತಾರೆ. ಆ ಸಮಯದಲ್ಲಿ ಆಕರ್ಷಕ ಸಾಂಪ್ರದಾಯಿಕ ಉಡುಗೆ ತೊಡುಗೆಯ ಜೊತೆಗೆ ನೃತ್ಯ, ಸಂಗೀತಗಳು ಮಹತ್ವ ಪಡೆದುಕೊಂಡಿವೆ.
ಹಂಪಿಯಲ್ಲೂ ವಾಸಿಸುವ ಲಂಬಾಣಿ ಮಹಿಳೆಯರು ಲೆಪೋ ವಿಧದ ಕಸೂತಿಯ ಪೆಥಿಯಾ ಎಂಬ ಸ್ಕರ್ಟ್‌ನಂತಹ ಲಂಗ, ಕಂಚಲಿ ಎಂಮ ಕುಪ್ಪಸ, ಜೊತೆಗೆ ಶಿರೋವಸ್ತ್ರವನ್ನು ಧರಿಸುತ್ತಾರೆ. ಲೆಪೋ ಬಗೆಯ ಲಂಬಾಣಿ ಮಹಿಳೆಯರು ತಮ್ಮ ಉಡುಗೆಯಲ್ಲಿ ಮಣಿಗಳನ್ನು ಸಮುದ್ರದ ಪುಟ್ಟ ಶಂಖ ಹಾಗೂ ನಾಣ್ಯ (ಕಾಯಿನ್) ಬಳಸುವುದು ವಿಶಿಷ್ಟ.
ಅನುರಾಧಾ ಕಾಮತ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.