ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಸುವ ಮುನ್ನ
Team Udayavani, Nov 22, 2019, 1:18 AM IST
ಬೈಕ್ ಖರೀದಿಸುವ ಆಸೆ ಎಲ್ಲರಿಗೂ ಇರುತ್ತದೆ. ಆದರೆ ವಿವಿಧ ಕಾರಣಗಳಿಗಾಗಿ ಕೆಲವರು ಸೆಕೆಂಡ್ ಹ್ಯಾಂಡ್ ಬೈಕ್ ಸಾಕು ಎಂಬ ತೀರ್ಮಾನಕ್ಕೆ ಬಂದಿರುತ್ತಾರೆ. ವೆಚ್ಚ ಮಾಡುವ ಹಣ, ಬಳಕೆಯಾಗುವ ವಿಧಾನ ಎಲ್ಲವೂ ಇದರಲ್ಲಿ ಪ್ರಮುಖವಾಗಿರುತ್ತದೆ. ಆದ್ದರಿಂದ ಹಲವರು ಸೆಕೆಂಡ್ ಹ್ಯಾಂಡ್ ಬೈಕ್ ನೆಚ್ಚಿಕೊಳ್ಳುತ್ತಾರೆ. ಹೀಗೆ ಬೈಕ್ ಖರೀದಿಗೆ ಮುನ್ನ ಯಾವೆಲ್ಲ ಅಂಶಗಳನ್ನು ಗಮನಿಸಬೇಕು ನೋಡೋಣ.
ರಿಜಿಸ್ಟ್ರೇಷನ್ ಸರ್ಟಿಫಿಕೇಟ್
ಬೈಕ್ ಖರೀದಿಗೆ ಮುನ್ನ ಅದರ ರಿಜಿಸ್ಟ್ರೇಶನ್ ನಂಬರ್ ಪಡೆದು, ಅದನ್ನು ಆರ್‌ಟಿಒ ಅಥವಾ ಆನ್‌ಲೈನ್‌ನಲ್ಲಿ ಮಾಲಕರ ಹೆಸರು, ವಿಳಾಸ ಸರಿಯಾಗಿದೆಯೇ ಎಂದು ಪರಿಶೀಲಿಸಿ. ಆರ್‌ಟಿಒ ವ್ಯಾಪ್ತಿಯಲ್ಲಿ ಯಾವುದಾದರೂ ದಂಡ/ಕಾನೂನು ವಿರೋಧಿ ಕೃತ್ಯದಲ್ಲಿ ಭಾಗಿಯಾದ ಕೇಸು ಹೊಂದಿದೆಯೇ ಎಂದು ಪರಿಶೀಲಿಸಿ.
ಇನ್ಸೂರೆನ್ಸ್
ಇನ್ಸೂರೆನ್ಸ್ ಲಭ್ಯವಾದರೆ ಇನ್ಸೂರೆನ್ಸ್ ಕಂಪೆನಿಗೆ ಫೋನ್ ಮಾಡಿ ನಿರ್ದಿಷ್ಟ ಬೈಕ್‌ಗೆ ಅಪಘಾತ ಕ್ಲೇಮು ಮಾಡಿಸಿದ್ದಾರೆಯೇ ಎಂದು ಕೇಳಿ. ಬೈಕ್ ಯಾವ ರೀತಿಯ ಇನ್ಸೂರೆನ್ಸ್ (ಫಸ್ಟ್ ಪಾರ್ಟಿ/ ಥರ್ಡ್ ಪಾರ್ಟಿ ಹೊಂದಿದೆ?) ಪಾವತಿಸಿದ್ದಾರೆಯೇ? ಎಂದೂ ಪರಿಶೀಲಿಸಿ.
ಇನ್ಸೂರೆನ್ಸ್, ಆರ್‌ಟಿಒ ಪರಿಶೀಲನೆ ಬಳಿಕ ಬೈಕ್ ಅನ್ನು ಖುದ್ದು ವೀಕ್ಷಿಸಿ. ಬೈಕ್‌ನಲ್ಲಿ ಅಪಘಾತದಿಂದಾಗಿ ಗುಳಿಗಳು ಬಿದ್ದಿದೆಯೇ, ಫೈಬರ್ ಪಾರ್ಟ್ಸ್ಗಳು ಒಡೆದು ಹೋಗಿವೆಯೇ ಎಂದು ನೋಡಿ. ಬ್ರೇಕ್, ಇಂಡಿಕೇಟರ್, ಹೆಡ್‌ಲೈಟ್, ಹಾರನ್ ಚಾಲೂ ಆಗುತ್ತಿದೆಯೇ ಎಂದು ಗಮನಿಸಿ. ಬೈಕ್‌ನಲ್ಲಿ ಕೂತು ಹ್ಯಾಂಡಲ್ ಸರಿಯಾಗಿದೆಯೇ ನೋಡಿ. ಬೈಕ್ ಸ್ಟಾರ್ಟ್ ಮಾಡಿದ ಬಳಿಕ ಎಂಜಿನ್‌ನಿಂದ ಯಾವುದೇ ಕೆಟ್ಟ ಶಬ್ದ ಬರುತ್ತಿಲ್ಲ ಎನ್ನುವುದನ್ನು ಗಮನಿಸಿ. ಇತ್ತೀಚೆಗೆ ಸರ್ವೀಸ್ ಮಾಡಿಸಿದ ಬಗ್ಗೆ ಮಾಲೀಕರ ಬಳಿ ಕೇಳಿ ತಿಳಿದುಕೊಳ್ಳಿ. ಒಂದು ವೇಳೆ ಕಂಪೆನಿ ಸರ್ವೀಸ್ ಸೆಂಟರ್‌ಗಳಲ್ಲಿ ಮಾಡಿಸಿದ್ದಾಗಿ ಅವರು ಹೇಳಿದರೆ ಕಂಪೆನಿ ಸರ್ವೀಸ್‌ನಲ್ಲಿ ಬೈಕ್‌ನ ಟ್ರ್ಯಾಕ್ ರೆಕಾರ್ಡ್ ಸಿಗುತ್ತದೆ.
ಹಣ ಪಾವತಿಯ ಮುನ್ನ
ಒಪ್ಪಿಗೆಯಾಗಿದ್ದಲ್ಲಿ ಮಾತ್ರ ಸೂಕ್ತ ದಾಖಲೆಗಳನ್ನು ಪಡೆದು ಬೈಕ್ ಖರೀದಿಸಿ. ಆಲೆಷನ್ ಮಾಡಿದ ಬೈಕ್‌ಗಳನ್ನು ಖರೀದಿಸಲು ಹೋಗಬೇಡಿ. ಇದರಿಂದ ಓನರ್‌ಶಿಪ್ ಬದಲಾಗುವ ವೇಳೆ ಸಮಸ್ಯೆ ಎದುರಾಗಬಹುದು. ಎಂಜಿನ್ ಕಂಡೀಷನ್ ಬಗ್ಗೆ ತಿಳಿಯಲು ಸಾಧ್ಯವಿಲ್ಲ ಎಂದಾದರೆ, ಬೈಕ್‌ಗಳ ಬಗ್ಗೆ ಅನುಭವ ಇರುವವರು ಅಥವಾ ಮೆಕ್ಯಾನಿಕ್ ಅವರನ್ನು ಜತೆಗೆ ಕರೆದುಕೊಂಡು ಹೋಗಿ ಸರಿಯಾಗಿ ಪರಿಶೀಲಿಸುವುದು ಉತ್ತಮ.
ಚಾಲನೆ ಅನುಭವ
ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಮುನ್ನ ಚಾಲನೆ ಅನುಭವ ಪಡೆದುಕೊಳ್ಳುವುದು ಕಡ್ಡಾಯ. ಇದರಿಂದ ಬೈಕ್‌ನಲ್ಲಿರುವ ದೋಷಗಳು, ಇತರ ಸಮಸ್ಯೆಗಳು ಅರಿವಿಗೆ ಬರುತ್ತವೆ. ಬೈಕ್ ಚಾಲನೆ ವೇಳೆ ಬ್ರೇಕ್, ಕ್ಲಚ್, ಶಾಕ್ಸ್‌ಗಳು, ಸ್ಟೀರಿಂಗ್ ಬೇರಿಂಗ್, ಫೋರ್ಕ್‌ಗಳು ಸರಿಯಾಗಿವೆಯೇ ಎಂಬುದನ್ನು ತಿಳಿದುಕೊಳ್ಳಬಹುದು. ಜತೆಗೆ ಅಕ್ಸಲರೇಶನ್‌ಗೆ ಬೈಕ್ ಸ್ಪಂದಿಸುವ ರೀತಿ, ಮೀಟರ್ ಇತ್ಯಾದಿಗಳು ಸರಿಯಾಗಿ ಕೆಲಸ ಮಾಡುತ್ತಿವೆಯೇ ಎಂದೂ ಪರಿಶೀಲಿಸಿ. ಟಯರ್‌ಗಳು ಸವೆದಿವೆಯೇ? ಎಷ್ಟು ಸಮಯ ಇನ್ನು ಓಡಿಸಬಹುದು ಎಂಬುದನ್ನೂ ಅಂದಾಜಿಸಿ. ತಿರುವಿನಲ್ಲಿ ಬೈಕ್ ಒಂದು ಬದಿಗೆ ಎಳೆದಂತಾಗುತ್ತದೆಯೇ ಎಂಬುದನ್ನೂ ಗಮನಿಸಿರಿ.
- ಈಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.