ರಾಗಿ ಬೆಳೆ ಕಣ್ಮುಂದೆ ಭೂಮಿ ಪಾಲು


Team Udayavani, Nov 22, 2019, 4:57 PM IST

tk-tdy-1

ತಿಪಟೂರು: ತಾಲೂಕಿನಾದ್ಯಂತ ಈ ಬಾರಿ ರಾಗಿ ಬೆಳೆ ಭರ್ಜರಿಯಾಗಿ ಬೆಳೆದು ಹಚ್ಚ ಹಸಿರಾಗಿ ಉತ್ಕೃಷ್ಟ ತೆನೆಗಟ್ಟಿನೊಂದಿಗೆ ರೈತರ ಮೊಗದಲ್ಲಿ ಸಂತಸ ಮೂಡಿಸಿತ್ತು. ಆದರೆ ರಾಗಿ ಪೈರು ಅಳತೆ ಮೀರಿ ಬೆಳೆದ ಪರಿಣಾಮ ಹಾಗೂ ಕಾಳು ಬಲಿತ ಮೇಲೂ ಮಳೆ ಬಂದಿದ್ದರಿಂದ ರಾಗಿ ಫ‌ಸಲು ಕೈ ಸೇರುವ ನಿರೀಕ್ಷೆ ಹುಸಿಯಾಗಿದೆ.

ಕಟಾವು ಮಾಡುವ ವೇಳೆ ರಾಗಿ ಪೈರುಬಾಗಿ ಅಡ್ಡಾದಿಡ್ಡಿಯಾಗಿ ನೆಲಕ್ಕೆ ಬಿದ್ದಿದ್ದು, ಭೂಮಿತಾಯಿ ಪಾಲಾಗುತ್ತಿರುವುದರಿಂದ ಅನ್ನದಾತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿ ರೈತನ ಬದುಕು ಅತಂತ್ರ ವಾಗಿದೆ. ರಾಗಿ ಬೆಳೆ ಹುಲುಸಾಗಿ ಬೆಳೆದು ತೆನೆಹಾಗೂ ಕಡ್ಡಿ ತೂಕ ಹೆಚ್ಚಾಗಿ ಬೆಳೆದ ಪೈರು ಸಂಪೂರ್ಣ ನೆಲಕಚ್ಚುವ ಮೂಲಕ ಭೂಮಿ ತಾಯಿ ಪಾಲಾಗಿದೆ. ಇದರಿಂದ ರಾಗಿ ತೆನೆಮತ್ತು ಜಾನುವಾರುಗಳ ಮೇವು ರೈತನ ಕಣ್ಣ ಮುಂದೆಯೇ ಹಾಳಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರುವ ಆಸೆ ಇಲ್ಲದೇ ರೈತನ ಕನಸು ನುಚ್ಚು ನೂರಾಗಿದೆ.

ಬಿತ್ತಿದ ನಂತರ ಮೊಳಕೆಯೊಡೆದು ಚನ್ನಾಗಿ ಬೆಳೆದು ಬಂದ ಬಿರುಸು ನೋಡಿದರೆ ರೈತನ ಕಣಜ ತುಂಬ ಬೇಕಾಗಿದ್ದ ರಾಗಿ ವರ್ಷಪೂರ ತಿಂದರೂ ಸವೆಯದಂತೆ ಬವಣೆಗೆ ಸೇರ ಬೇಕಾಗಿದ್ದ ರಾಗಿ ಹುಲ್ಲು ನೋಡ ನೋಡುತ್ತಲೆ ನೆಲಕ್ಕುರುಳಿದೆ. ಕಟಾವು ಮಾಡಬೇಕಾಗಿರುವ ರಾಗಿ ಪೈರೆಲ್ಲಾ ಅಡ್ಡಾದಿಡ್ಡಿಯಾಗಿ ಬಿದ್ದಿರು ವುದರಿಂದ ಕಟಾವು ಮಾಡುವುದು ಕಷ್ಟವಾಗಿದೆ. ರಾಗಿ ತೆನೆಗಳೆಲ್ಲಾ ಕರಗಿದಂತಾಗಿ ಕಳಚಿ ಬೀಳುತ್ತಿದ್ದು, ರಾಗಿ ಕಾಳುಗಳು ಭೂಮಿಗೇ ಉದುರಿ ಮೊಳಕೆ ಯೊಡೆಯುತ್ತಿವೆ.

ಕಟಾವಿನ ಚಿಂತೆ: ರಾಗಿ ಪೈರು ಈಗಾಗಲೇ ಕಟಾವು ಮಾಡುತ್ತಿದ್ದು, ಕಟಾವು ಮಾಡುವುದು ಹೇಗೆ ಎಂಬ ಚಿಂತೆಯಾಗಿದೆ. ಕಟಾವು ಮಾಡುವ ಕಾರ್ಮಿಕರಿಗೂ ಕಷ್ಟವಾಗಿರುವುದರಿಂದ ಮಾಮೂಲಿ ಕೂಲಿಗಿಂತ ಒಂದೂವರೆ ಪಟ್ಟು ಹೆಚ್ಚು ಕೂಲಿ ಕೇಳುತ್ತಿದ್ದಾರೆ. ಆದರೆ ಕೇಳಿದಷ್ಟು ಹಣ ಕೊಟ್ಟರೂ ಕೆಲಸ ಮಾಡುವವರೂ ಸಕಾಲಕ್ಕೆ ಸಿಗದಂತಾಗಿ ಕಾರ್ಮಿಕರಿ ಗಾಗಿ ಊರೂರು ಅಲೆದಾಡು ವಂತಾಗಿದೆ.

ರಾಗಿ ಕಟಾವು ಮಾಡುವ ಮಷಿನ್‌ಗಳಿಂದಲೂ ಮಾಡಿಸಲಾಗುತ್ತಿಲ್ಲ. ರಾಗಿ ಬೆಳೆಯುವುದೇ ನಷ್ಟದ ಕೃಷಿಯಾಗಿದ್ದು, ಉಳುಮೆ, ಬಿತ್ತನೆ, ಬೆಳೆಯಲು ತಗುಲುತ್ತಿರುವ ಖರ್ಚು,ಕಟಾವು, ಕಣದ ಕೆಲಸ ಇವೆಲ್ಲವನ್ನೂ ಲೆಕ್ಕ ಹಾಕಿದರೆ ರಾಗಿಗೆ ಮಾಡುವ ಖರ್ಚು ರೈತರ ಮೈಮೇಲೆಯೇ ಬರುವಂತಾಗಿದೆ. ಶ್ರಮ ಹಾಕಿ ಬೆಳೆದ ಬೆಳೆ ಕುಯಿಲು ಮಾಡದೆ ಬಿಡಲೂ ಆಗದೆ ರಾಗಿ ಬೆಳೆಗಾರರು ರಾಗಿ ಸಹವಾಸ ಸಾಕಪ್ಪ ಎನ್ನುತ್ತಿದ್ದಾರೆ.

ಹಾಳಾಗಿರುವ ಮೇವು: ರಾಗಿ ಪೈರು ನೆಲಕಚ್ಚಿ ರುವುದರಿಂದ ಹುಲ್ಲು ಗೆದ್ದಲು ಹಿಡಿಯು ತ್ತಿದ್ದು, ಬಹುತೇಕ ರಾಗಿಯಗುಣಮಟ್ಟವೂ ಹಾಳಾಗಿದೆ. ಇದರಿಂದ ಇತ್ತ ಉತ್ತಮ ರಾಗಿಯೂ ಇಲ್ಲ, ಮೇವು ಇಲ್ಲದಂತಾಗಿದೆ. ಶೇ.80 ರಾಗಿ ಹೊಲಗಳು ಕಣ್ಣ ಮುಂದೆಯೇ ಹಾಳಾಗುತ್ತಿರುವುದರಿಂದ ರೈತರ ನೆಮ್ಮದಿ ಹಾಳಾಗಿದೆ. ಕೃಷಿ ಯಾವತ್ತೂ ಲಾಭದಾಯಕವಾಗ ಲಾರದು ಎಂಬುದನ್ನ ರಾಗಿ ಬೆಳೆ ಮತ್ತೆ ಮತ್ತೆ ಸಾಬೀತುಪಡಿಸುತ್ತಿರುವುದು ನೋಡಿದರೆ ಈಗಾಗಲೆ ಅಳಿವಿನಂಚಿನಲ್ಲಿರುವ ಕೃಷಿ ಕಾಯಕಕ್ಕೆ ಮತ್ತಷ್ಟು ಹೊಡೆತ ಬೀಳ ಬಹುದು. ಸಾವಿರಾರು ರೂಪಾಯಿ ಸಾಲ ತಂದು ದುಬಾರಿ ಖರ್ಚಿನೊಂದಿಗೆ ಬೀಜ-ಗೊಬ್ಬರ ಖರೀದಿಸಿ ಹೊಲ ಉತ್ತು, ಬಿತ್ತಿ ಹಗಲಿರುಳು ಜೋಪಾನ ಮಾಡಿದ್ದ ರಾಗಿ ಬೆಳೆ ಕಣ್ಣ ಮುಂದೆಯೂ ನೆಲ ಕಚ್ಚಿರುವುದನ್ನು ನೋಡಿದರೆ ರೈತನ ಭವಿಷ್ಯಕ್ಕೆ ಕೃಷಿ ಯಾವತ್ತೂ ಲಾಭ ದಾಯಕವಲ್ಲ ಎಂಬುದನ್ನು ಸಾಬೀತುಪಡಿಸಿದೆ.

 

-ಬಿ. ರಂಗಸ್ವಾಮಿ

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

24-pavagada

Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ

10-tumkur

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

Drone Prathap: ನೀರಿಗೆ ಸ್ಫೋಟಕ ಎಸೆದ ಪ್ರಕರಣ; ಪ್ರತಾಪ್‌ಗೆ 10 ದಿನ ನ್ಯಾಯಾಂಗ ಬಂಧನ

suicide (2)

Huliyar; ಕೆಮ್ಮಿನ ಔಷಧವೆಂದು ಭಾವಿಸಿ ಕೀಟನಾಶಕ ಸೇವಿಸಿದ ರೈತ ಸಾ*ವು

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

ಕೃಷಿ ಹೊಂಡದಲ್ಲಿ ಅದೇನೋ ಮಾಡಲು ಹೋಗಿ ಅರೆಸ್ಟ್ ಅದ ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.