ಪೊಲೀಸ್ ಬಲೆಗೆ ಬಿದ್ದ ಸೈಕೋ ಕಾಮುಕ
Team Udayavani, Nov 23, 2019, 9:56 AM IST
ಬೆಂಗಳೂರು: ಡ್ರಾಪ್ ಮಾಡುವ ನೆಪದಲ್ಲಿ ಕಾರು ಹತ್ತಿಸಿಕೊಂಡು ಏಳು ದಿನದ ಅಂತರದಲ್ಲಿ ಮೂವರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ಸೈಕೋ ಕಾಮುಕನನ್ನು ಹೆಡೆಮುರಿಕಟ್ಟುವಲ್ಲಿ ಹಲಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ತಮಿಳುನಾಡು ಮೂಲದ ಜಹಾಂಗೀರ್ ಅಲಿಯಾಸ್ ಕಾರ್ತಿಕ್ ರೆಡ್ಡಿ ಬಂಧಿತ ಆರೋಪಿ. ಆರೋಪಿ ಬಂಧನದಿಂದ ಬೆಂಗಳೂರು ಹಾಗೂ ಚೆನೈನಲ್ಲಿ ಎಸಗಿರುವ ಮೂರು ಅತ್ಯಾಚಾರ ಪ್ರಕರಣಗಳು, ಒಂದು ಲೈಂಗಿಕ ದೌರ್ಜನ್ಯ ಹಾಗೂ ಎರಡು ವಂಚನೆ ಕೇಸ್ ಪತ್ತೆಯಾಗಿವೆ. ಆರೋಪಿ ಇನ್ನೂ ಹಲವು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿರುವ ಸಾಧ್ಯತೆಯಿದ್ದು ತನಿಖೆ ಮುಂದುವರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಬಿಎ ಪದವೀಧರನಾಗಿರುವ ಜಹಾಂಗೀರ್, ಸ್ವಂತ ಐಶಾರಾಮಿ ಕಾರು ಹೊಂದಿದ್ದಾನೆ. ನಿರರ್ಗಳವಾಗಿ ಇಂಗ್ಲಿಷ್, ಹಿಂದಿ ಮಾತನಾಡುತ್ತಾನೆ. ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಮಹಿಳೆಯರಿಗೆ ತಾನು ಶಾಸಕರ ಮಗ, ಉದ್ಯಮಿ, ಸ್ವಂತ ಕಂಪನಿ ಇದೆ. ಅಲ್ಲಿ ನಿಮಗೆ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದಾನೆ. ಜತೆಗೆ, ಪಿಸ್ತೂಲ್ ನಿಂದ ಶೂಟ್ ಮಾಡಿ ಸಾಯಿಸುವುದಾಗಿ ಬೆದರಿಸಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾನೆ.ನಿವೃತ್ತ ರೈಲ್ವೆ ಉದ್ಯೋಗಿಯ ಮಗನಾಗಿರುವ ಜಹಾಂಗೀರ್, ಈ ಹಿಂದೆ ಚೆನೈನ ಪ್ರತಿಷ್ಠಿತ ರೆಸಾರ್ಟ್ ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾನೆ. ಸ್ವಂತ ಕಾರು ಹೊಂದಿದ್ದು, ಮೂರು ಮೊಬೈಲ್‌ಗಳನ್ನು ಬಳಸುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿ ಮಹಿಳೆಯರ ಮೇಲೆ ದೌರ್ಜನ್ಯ ಎಸಗಲು ಓಯೋ ರೂಂಗಳನ್ನೇ ಬಳಸಿಕೊಂಡಿರುವುದು ಗೊತ್ತಾಗಿದೆ. ಹೀಗಾಗಿ, ಆರೋಪಿ ಓಯೋ ರೂಂಗಳಲ್ಲಿ ತಂಗಿರುವ ಕುರಿತ ದಾಖಲೆಗಳನ್ನು ಪರಿಶೀಲಿಸಿ ಮಾಹಿತಿ ನೀಡುವಂತೆ ಓಯೋ ಸಂಸ್ಥೆಗೆ ನೋಟಿಸ್ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೋಹಕ ಮಾತಿನಿಂದ ಮೋಡಿ: ಆರೋಪಿ ಜಹಾಂಗೀರ್ ಎಂ.ಜಿ ರಸ್ತೆಯ ಪ್ರತಿಷ್ಠಿತ ಹೋಟೆಲ್‌ಗಳ ಮುಂಭಾಗ ತನ್ನ ಐಶಾರಾಮಿ ಕಾರು ನಿಲ್ಲಿಸಿಕೊಂಡು ಒಂಟಿಯಾಗಿ ಇರುವ ಯುವತಿಯರನ್ನು ಪರಿಚಯಿಸಿ ಕೊಂಡು, “ನಾನು ಉದ್ಯಮಿ, ಕೆಲಸ ಕೊಡಿಸುತ್ತೇನೆ’ ಎಂದು ಹೇಳಿ ನಂಬಿಸುತ್ತಿದ್ದ. ಬಳಿಕ ಡ್ರಾಪ್ ಮಾಡುವುದಾಗಿ ಹೇಳಿ ಕಾರು ಹತ್ತಿಸಿಕೊಂಡು ಹೋಟೆಲ್‌ಗಳಲ್ಲಿ ರೂಮ್ ಬುಕ್ ಮಾಡಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ. ಈ ಕುರಿತು ಸಂತ್ರಸ್ತ ಯುವತಿಯೊಬ್ಬರು ನ.5ರಂದು ನಡೆದ ದೌರ್ಜನ್ಯದ ಬಗ್ಗೆ ದೂರು ನೀಡಿದ್ದರು. ಇದಾದ ನಾಲ್ಕು ದಿನದಲ್ಲಿಯೇ ಮತ್ತೂಬ್ಬ ಯುವತಿ ಅತ್ಯಾಚಾರ ಆರೋಪದ ದೂರು ದಾಖಲಿಸಿದ್ದರು.
ಎರಡೂ ಪ್ರತ್ಯೇಕ ಪ್ರಕರಣಗಳ ತನಿಖೆ ಚುರುಕುಗೊಳಿಸಿ ಆರೋಪಿ ಜಹಾಂಗೀರ್‌ನನ್ನು ಬಂಧಿಸಿದಾಗ, ನ.1ರಿಂದ 4ರವರೆಗಿನ ಅವಧಿಯಲ್ಲಿ ಮಹದೇವಪುರ ವ್ಯಾಪ್ತಿಯಲ್ಲಿ ಯುವತಿ ಮೇಲಿನ ಅತ್ಯಾಚಾರ, ಮೇ ತಿಂಗಳಲ್ಲಿ ಮಹಿಳೆಯೊಬ್ಬರಿಗೆ ವಂಚನೆ ಎಸಗಿರುವುದು ಬೆಳಕಿಗೆ ಬಂದಿತು. ಜತೆಗೆ, ಚೆನೈನಲ್ಲಿ ಈತನ ವಿರುದ್ಧ ಎರಡು ಅತ್ಯಾಚಾರ ಕೇಸ್‌ಗಳು ದಾಖಲಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ವಿವರಿಸಿದರು.
2017ರಲ್ಲಿ ಜೈಲು ಸೇರಿದ್ದ: ಮಹಿಳೆಯೊಬ್ಬರಿಂದ 2.97 ಲಕ್ಷ ರೂ. ಪಡೆದು ವಂಚನೆ ಮಾಡಿದ ಪ್ರಕರಣದಲ್ಲಿ ಆರೋಪಿ ಜಹಾಂಗೀರ್ ಚೆನೈ ಪೊಲೀಸರಿಂದ ಬಂಧನಕ್ಕೊಳಗಾಗಿ ಜೈಲು ಸೇರಿದ್ದ. ಜಾಮೀನು ಆಧಾರದಲ್ಲಿ ಬಿಡುಗಡೆಗೊಂಡ ಬಳಿಕ ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿಕೊಂಡು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸುತ್ತಿರುವುದು ಕಂಡು ಬಂದಿದೆ.
ಯುವತಿಯರ ಮೊಬೈಲ್‌ನಿಂದಲೇ ರೂಂ ಬುಕಿಂಗ್: ಆರೋಪಿ ಜಹಾಂಗೀರ್, ಒಬ್ಬೊಬ್ಬ ಮಹಿಳೆ, ಯುವತಿ ಪರಿಚಯವಾದಾಗಲೂ ಒಂದೊಂದು ಹೆಸರು ಹೇಳಿಕೊಂಡಿದ್ದಾನೆ. ಕಿರಣ್ ರೆಡ್ಡಿ, ಕಾರ್ತಿಕ್ ರೆಡ್ಡಿ ಹೀಗೆ ಹಲವು ನಕಲಿ ಹೆಸರುಗಳನ್ನು ಹೇಳಿ ಪರಿಚಯ ಮಾಡಿಕೊಂಡಿದ್ದಾನೆ. ಪೊಲೀಸರಿಗೆ ಯಾವುದೇ ಕಾರಣಕ್ಕೂ ಸಿಕ್ಕಿಬೀಳಬಾರದು ಎಂಬ ಉದ್ದೇಶದಿಂದ ಸಂತ್ರಸ್ತ ಯುವತಿ, ಮಹಿಳೆಯರ ಮೊಬೈಲ್ ನಂಬರ್‌ನಿಂದಲೇ ಓಯೋ ಹೋಟೆಲ್‌ಗಳಲ್ಲಿ ಕೊಠಡಿ ಬುಕ್ ಮಾಡುತ್ತಿದ್ದ. ಅವರ ಬ್ಯಾಂಕ್ ಅಕೌಂಟ್‌ನಿಂದಲೇ ಹಣ ಪಾವತಿಸುತ್ತಿದ್ದ. ಜತೆಗೆ ಫೇಸ್‌ಬುಕ್ ಸೇರಿ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಆತ ಅಕೌಂಟ್ ಹೊಂದಿಲ್ಲ. ಸಂತ್ರಸ್ತರು ತನ್ನೊಂದಿಗೆ ಬರಲು ಪಿಸ್ತೂಲ್ ನಿಂದ ಕೊಲೆ ಮಾಡುವುದಾಗಿ ಹೆದರಿಸುತ್ತಿದ್ದ ಎಂದು ಪೊಲೀಸರು ಹೇಳಿದರು.
ಡ್ರಾಪ್ ನೆಪದಲ್ಲಿ 40 ಸಾವಿರ ರೂ. ದೋಚಿದ! : ಆಂಧ್ರಪ್ರದೇಶ ಮೂಲದ ಮಹಿಳೆಯೊಬ್ಬರು ಇದೇ ವರ್ಷ ಮೇ ತಿಂಗಳಲ್ಲಿ ಮಗನ ಜತೆ ತಿರುಪತಿಗೆ ತೆರಳಿದ್ದು, ಬೆಂಗಳೂರು ಮಾರ್ಗವಾಗಿ ವಾಪಸ್ ಹೈದ್ರಾಬಾದ್‌ಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಆಕೆಗೆ ಡ್ರಾಪ್ ಕೊಡುವುದಾಗಿ ನಂಬಿಸಿ ಕಾರು ಹತ್ತಿಸಿಕೊಂಡಿದ್ದ ಜಹಾಂಗೀರ್, ವೈಟ್‌ಫೀಲ್ಡ್‌ನ ಶಾಪಿಂಗ್ ಮಾಲ್ ಒಂದರ ಮುಂಭಾಗ ಕಾರು ನಿಲ್ಲಿಸಿ, ಆಕೆಯ ಮಗನಿಗೆ ಬೊಂಬೆ ತರುತ್ತೇನೆ ಎಂದು ಹೇಳಿ ಆಕೆಯದ್ದೇ ಡೆಬಿಟ್ ಕಾರ್ಡ್ ಪಡೆದು ಹೋಗಿದ್ದ. ಬಳಿಕ ಕಾರ್ಡ್ ಮೂಲಕ 40,200 ರೂ. ಡ್ರಾ ಮಾಡಿಕೊಂಡು, ಕಾರ್ಡ್ ವಾಪಸ್ ಕೊಟ್ಟಿದ್ದ. ಬಳಿಕ ಬೊಂಬೆ ಪ್ಯಾಕ್ ಮಾಡಿಸಿಕೊಂಡು ಬರುತ್ತೇನೆ ಎಂದು ಹೇಳಿ ಆಕೆಯನ್ನು ಕಾರಿನಿಂದ ಇಳಿಸಿ ಎಸ್ಕೇಪ್ ಆಗಿದ್ದ ಎಂದು ಪೊಲೀಸರು ವಿವರಿಸಿದರು. ಪ್ರಕರಣದ ತನಿಖಾ ತಂಡದಲ್ಲಿ ಹಲಸೂರು ಉಪವಿಭಾಗದ ಎಸಿಪಿ ಮಂಜುನಾಥ್ ಟಿ., ಇನ್ಸ್ ಪೆಕ್ಟರ್ ದಿವಾಕರ್ ಎಂ., ಪಿಎಸ್‌ಐ ಸುರೇಶ್ ಸೇರಿ ಠಾಣೆಯ ಸಿಬ್ಬಂದಿ ಭಾಗಿಯಾಗಿದ್ದರು.
ಆರೋಪಿ ಜಹಾಂಗೀರ್‌ನಿಂದ ವಂಚನೆಗೊಳಗಾದ, ದೌರ್ಜನ್ಯಕ್ಕೆ ಒಳಗಾದ ಯುವತಿಯರು ದೂರು ನೀಡಿದರೆ ತನಿಖೆ ನಡೆಸಲಾಗುವುದು. ದೂರುದಾರರ ಮಾಹಿತಿ ಗೌಪ್ಯವಾಗಿಡಲಾಗುವುದು. –ಹಲಸೂರು ಠಾಣೆ ಪೊಲೀಸರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Belthangady: ಈ ಪುಟ್ಟ ಪೋರನಿಗಿದೆ 300 ವಿದೇಶಿ ಹಣ್ಣಿನ ಗಿಡ ಪರಿಚಯ!
Dharwad: ಡ್ರಗ್ಸ್ ಯುವ ಶಕ್ತಿಗೆ ಮಾರಕ… ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.