ದೀನ್‌ದಯಾಳ್ ಅಂತ್ಯೋದಯ ಯೋಜನೆಗೆ ಅನುದಾನ ಬರ
Team Udayavani, Nov 23, 2019, 2:43 PM IST
ಬಾಲಪ್ಪ ಎಂ. ಕುಪ್ಪಿ
ಕಕ್ಕೇರಾ: ನಿರುದ್ಯೋಗಿಗಳಿಗೆ ಹಾಗೂ ಸ್ವ-ಸಹಾಯ ಸಂಘಗಳಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೂರಕವಾದ ದಿನ್ ದಯಾಳ್ ಅಂತ್ಯೋದಯ ಜೀವನೋಪಾಯ ಅಭಿಯಾನ ಯೋಜನೆಗೆ ಎರಡು ವರ್ಷಗಳಿಂದಲೂ ಅನುದಾನಕ್ಕೆ ಬರ ಬಿದ್ದಿದೆ.
ಕಕ್ಕೇರಾ ಪುರಸಭೆ ಹಾಗೂ ಜಿಲ್ಲೆಯ ಪುರಸಭೆ, ನಗರಸಭೆಯಲ್ಲಿ ಅನುದಾನದ ಸಮಸ್ಯೆಯಾಗಿದೆ ಎನ್ನಲಾಗಿದೆ. ಕಕ್ಕೇರಾ ಪುರಸಭೆಗೆ 2019-20ನೇ ಸಾಲಿಗಾಗಿ ಅರ್ಜಿಗಳನ್ನು ಸಲ್ಲಿಸಲಾಗಿದೆ. ಇನ್ನು ವಿಚಿತ್ರ ಎಂದರೆ ಕಳೆದ ವರ್ಷದ ಅನುದಾನವೇ ಬಂದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದವರಿಗೆ ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್‌ನಿಂದ ಸಾಲವೂ ಸಿಗುತ್ತಿಲ್ಲ. ಎರಡು ವರ್ಷ ಸಾಲಕ್ಕಾಗಿ ಕಾಯ್ದು ಬೇಸತ್ತಿದ್ದೇವೆ ಎಂದು ನಿರುದ್ಯೋಗಿಗಳು ನೋವು ತೋಡಿಕೊಂಡಿದ್ದಾರೆ.
ಕಳೆದ 2018-19 ಹಾಗೂ 2019-2020 ಸಾಲಿನ ಒಟ್ಟು 5.31 ಲಕ್ಷ ರೂ. ಅನುದಾನ ಬರಬೇಕಿದೆ. ಹೀಗಾಗಿ ಈ ಹಿಂದೆ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ವಿತರಿಸುವಂತೆ ಪುರಸಭೆಯಿಂದ ಬ್ಯಾಂಕ್‌ಗೆ ಸಲ್ಲಿಸಿದ ವರದಿ ಕೊಳೆಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ನಿರುದ್ಯೋಗ ಯುವಕ ಅಥವಾ ಯುವತಿಯರಿಗೆ ಹಾಗೂ ಸ್ವ-ಸಹಾಯ ಮಹಿಳಾ ಗುಂಪುಗಳಿಗೆ ಅಥವಾ ವೈಯಕ್ತಿಕವಾಗಿ 50 ಸಾವಿರದಿಂದ ಎರಡು ಲಕ್ಷದವರೆಗೂ ಶೇ.4ರ ಬಡ್ಡಿದಲ್ಲಿ ಆರ್ಥಿಕ ನೆರವು ನೀಡಬೇಕು. ಅಲ್ಲದೇ ಶಿಕ್ಷಣದಲ್ಲಿ ನಿರತ (ಎಸ್‌ಎಸ್‌ಎಲ್‌ಸಿ.
ಪಿಯುಸಿ. ಐಟಿಐ ಹಾಗೂ ಪದವಿ ವ್ಯಾಸಂಗ) ಎಸ್‌ಎಸ್-ಎಸ್‌ಟಿ ಹಾಗೂ ಸಾಮಾನ್ಯ ಎಲ್ಲ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಮತ್ತು ವಿವಿಧ ತರಬೇತಿಗೆ ಪ್ರೋತ್ಸಾಹಿಸಬೇಕು. ಅಲ್ಲದೇ ಪ್ರಸಕ್ತ ಸಾಲಿಗೆ 19 ನೂತನ ಸ್ವ-ಸಹಾಯ ಸಂಘ ರಚಿಸುವ ಗುರಿ ಇದ್ದು. ಪ್ರತಿ ಮಹಿಳಾ ಸಂಘಕ್ಕೆ 10 ಸಾವಿರ ರೂ. ಆವರ್ತಕ ನಿಧಿ ವಿತರಿಸಲಾಗುತ್ತಿದೆ.
2019-20ನೇ ಸಾಲಿಗೆ ತರಬೇತಿ ಗುರಿ 107, ವೈಯಕ್ತಿಕ ಸಾಲ ಸೌಲಭ್ಯ 14, ಸ್ವ-ಸಹಾಯ ಸಂಘಗಳಿಗೆ ಸಾಲ-11 ಸೇರಿದಂತೆ ಒಟ್ಟು 132 ಗುರಿ ಇವೆ. ಅಲ್ಲದೇ ಕಳೆದ 2018-19ನೇ ಸಾಲಿನಲ್ಲಿ ತರಬೇತಿಗೆ-26, ವೈಯಕ್ತಿಕ ಸಾಲ-5, ಸ್ವ-ಸಹಾಯ ಸಂಘ-1 ಹೀಗೇ ಗುರಿ ನಿಗದಿಪಡಿಸಲಾಗಿದೆ. ಇದನ್ನು ಗಮನಿಸಿದರೆ ಪ್ರಸಕ್ತ ಸಾಲಿನಲ್ಲಿ ಗುರಿ ಹೆಚ್ಚಿಸಲಾಗಿದೆ. 2016ರಿಂದ ಈವರೆಗೂ 15 ಮಹಿಳಾ ಸ್ವ-ಸಹಾಯ ಸಂಘ ರಚನೆ ಮಾಡಲಾಗಿದೆ ಎಂದು ಸಮುದಾಯ ಸಂಘಟಕ ಶ್ಯಾಮಸುಂದರ ಪಾಣಿಬಾತೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ
ಧಾರವಾಡ: ಅವಸಾನದತ್ತ ಶತಮಾನದ ಕೆಲಗೇರಿ ಕೆರೆ
MUST WATCH
ಹೊಸ ಸೇರ್ಪಡೆ
Waqf Notice: ನೋಟಿಸ್ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್
ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್
Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ
Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.