ಸಂಭ್ರಮದ ಯಶಸ್ಸಿಗೆ ತುಳು -ಕನ್ನಡಿಗರ ಸಹಕಾರ ಅಗತ್ಯ : ಪಯ್ಯಡೆ
Team Udayavani, Nov 23, 2019, 5:23 PM IST
ಮುಂಬಯಿ, ನ. 22: ಸಮಾಜ ಸೇವಕ, ಉದ್ಯಮಿ, ಕೊಡುಗೈದಾನಿ, ಎಂಆರ್‌ಜಿ ಗ್ರೂಪ್ ಆಫ್ ಹೊಟೇಲ್ಸ್ ಇದರ ಕಾರ್ಯಾಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಕೊರಂಗ್ರಪಾಡಿ ಪ್ರಕಾಶ್ ಕೆ. ಶೆಟ್ಟಿ ಅವರಿಗೆ 60 ವರ್ಷ ತುಂಬಿದ ಸಂದರ್ಭದಲ್ಲಿ ಡಿ. 25 ರಂದು ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನದಲ್ಲಿ ಜರಗಲಿರುವ ಪ್ರಕಾಶಾಭಿನಂದನ 60 ರ ಸಂಭ್ರಮ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸುವ ಉದ್ದೇಶದಿಂದ ಬಂಟರ ಸಂಘ ಮುಂಬಯಿ ಮತ್ತು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಜಂಟಿ ಆಯೋಜನೆಯಲ್ಲಿ ನ. 20 ರಂದು ಸಂಜೆ ಬಂಟರ ಭವನದ ರಂಜನಿ ಸುಧಾಕರ ಹೆಗ್ಡೆ ಎನೆಕ್ಸ್ ಸಂಕೀರ್ಣದಲ್ಲಿ ಸಮಾಲೋಚನಾ ಸಭೆಯನ್ನು ಆಯೋಜಿಸಲಾಗಿತ್ತು.
ಈ ಸಭೆಯ ಅಧ್ಯಕ್ಷತೆಯನ್ನು ಬಂಟರ ಸಂಘದ ಅಧ್ಯಕ್ಷ ಪದ್ಮನಾಭ ಎಸ್. ಪಯ್ಯಡೆ ಅವರು ವಹಿಸಿ ಮಾತನಾಡಿ, ಬಂಟರ ಸಂಘದ ಮಹಾದಾನಿಯಾಗಿ ಸಂಘದ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಯೋಜನೆಗೆ ಪ್ರತೀವರ್ಷ ರೂ. 5 ಲಕ್ಷ ರೂ. ಗಳಂತೆ ನೆರವು ನೀಡುತ್ತಾ ಬಂದಿರುವ ಕೆ. ಪ್ರಕಾಶ್ ಶೆಟ್ಟಿಯವರು ಸಂಘದ ಬೆನ್ನೆಲುಬಾಗಿ ವಿವಿಧ ಯೋಜನೆಗಳಿಗೂ ನೆರವಿನ ಹಸ್ತ ನೀಡಿದವರು. ಅವರ 60 ರ ಹುಟ್ಟುಹಬ್ಬದ ಸಂದರ್ಭದಲ್ಲಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರೆತಿರುವುದು ಯೋಗಾನುಯೋಗವೇ ಸರಿ. ಸಮಾಜದ ಕಷ್ಟ-ಸುಖಗಳಿಗೆ ಸದಾ ಸ್ಪಂದಿಸುತ್ತಿರುವ ಅವರ ಅಭಿನಂದನಾ ಸಮಾರಂಭದಲ್ಲಿ ಮುಂಬಯಿ ಬಂಟರು, ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕರೆನೀಡಿದರು.
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಅವರು ಮಾತನಾಡಿ, ಕೆ. ಪ್ರಕಾಶ್ ಶೆಟ್ಟಿಯವರು ಸಮಾಜದ ಆಸ್ತಿಯಾಗಿದ್ದಾರೆ. ಯಾವುದೇ ಪ್ರಚಾರ ಬಯಸದೆ, ಯಾರಿಗೂ ತಿಳಿಯದಂತೆ, ತಮ್ಮಷ್ಟಕ್ಕೆ ತಾವು ಕೊಡುಗೈ ದಾನ ನೀಡುವ ಅವರಂಥವರು ಅತೀ ವಿರಳ. ಅವರನ್ನು ಗೌರವಿಸುವಂತಹ ಸುಸಂದರ್ಭ ಒದಗಿದೆ. ಮುಂಬಯಿಗರಾದ ನಾವೆಲ್ಲರೂ ಅತಿಥಿಗಳಂತೆ ಭಾಗವಹಿಸದೆ ಸ್ವಯಂ ಸೇವಕರಂತೆ ಒಂದುಗೂಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸೋಣ ಎಂದರು.
ಜವಾಬ್‌ನ ಅಧ್ಯಕ್ಷ ಸಿಎ ಐ. ಆರ್. ಶೆಟ್ಟಿ ಅವರು ಮಾತನಾಡಿ, ಕೆ. ಪ್ರಕಾಶ್ ಶೆಟ್ಟಿಯವರು ಸಮಾಜದ ಧೀಮಂತ ವ್ಯಕ್ತಿ. ಜವಾಬ್ ಪರಿವಾರದ ಸಂಪೂರ್ಣ ಸಹಕಾರವಿದೆ. ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸೋಣ ಎಂದು ನುಡಿದರು. ಮುಲುಂಡ್ ಬಂಟ್ಸ್‌ನ ಅಧ್ಯಕ್ಷ ಪಲಿಮಾರು ವಸಂತ್ ಶೆಟ್ಟಿ ಅವರು ಮಾತನಾಡಿ, ಎತ್ತರದ ಶಿಖರಕ್ಕೇರಿರುವ ಕೆ. ಪ್ರಕಾಶ್ ಶೆಟ್ಟಿ ಅವರು ಸಮಾಜದ ಚಿಂತಕ, ಮೇರು ವ್ಯಕ್ತಿತ್ವದೊಂದಿಗೆ ಎಲ್ಲರಲ್ಲೂ ಒಂದಾಗಿದ್ದಾರೆ ಎಂದರು.
ಥಾಣೆ ಬಂಟ್ಸ್‌ನ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಅವರು ಮಾತನಾಡಿ, ಬಂಟರಲ್ಲಿ ಐಶ್ವರ್ಯವಂತರು ಬಹಳಷ್ಟಿದ್ದಾರೆ. ಆದರೆ ಪ್ರಕಾಶ್ ಶೆಟ್ಟಿ ಅವರಂತಹ ಶ್ರೀಮಂತ ಮನಸ್ಸಿನವರನ್ನು ನಾನೆಂದೂ ಕಂಡಿಲ್ಲ ಎಂದು ಹೇಳಿದರು. ಬಂಟರ ಸಂಘ ಮಹಿಳಾ ವಿಭಾಗದ
ಕಾರ್ಯಾಧ್ಯಕ್ಷೆ ರಂಜನಿ ಸುಧಾಕರ ಹೆಗ್ಡೆ ಮಾತನಾಡಿ, ಕೆ. ಪ್ರಕಾಶಣ್ಣ ಅವರದ್ದು ಸಾಮರಸ್ಯದ ಬದುಕು. ಎಷ್ಟೋ ಮಂದಿಯನ್ನು ಕತ್ತಲೆಯಿಂದ ಬೆಳಕಿನತ್ತ ಕೊಂಡೊಯ್ದ ಅವರು
ತಮ್ಮ ವಿಶೇಷ ವ್ಯಕ್ತಿತ್ವದಿಂದ ಎಲ್ಲರ ಪ್ರೀತಿ,ಗೌರವಕ್ಕೆ ಪಾತ್ರರಾಗಿದ್ದಾರೆ ಎಂದರು. ಮಾತೃಭೂಮಿ ಕೋ. ಆಪರೇಟಿವ್‌ಸೊಸೈಟಿಯ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ ಮುಂಡ್ಕೂರು ಅವರು ಮಾತನಾಡಿ, ಕೆ. ಪ್ರಕಾಶ್ ಶೆಟ್ಟಿ ಅವರ ಅಭಿನಂದನಾ ಸಮಾಲೋಚನಾ ಸಭೆಯು ತುಳು-ಕನ್ನಡಿಗ ಸಂಘ-ಸಂಸ್ಥೆಗಳ ಜೊತೆಗೆ ಮಗದೊಮ್ಮೆ ನಡೆಯಲಿದೆ. ಮುಂಬಯಿಯಿಂದ ಬಸ್ ಮತ್ತು ರೈಲ್ವೇ ವ್ಯವಸ್ಥೆ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಮುಂದೆ ತಿಳಿಸಲಾಗುವುದು ಎಂದರು.
ಆರಂಭದಲ್ಲಿ ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಮೀಳಾ ಶೆಟ್ಟಿ ಪ್ರಾರ್ಥನೆಗೈದರು. ಬಂಟರವಾಣಿಯ ಗೌರವ ಸಂಪಾದಕ ಅಶೋಕ್ ಪಕ್ಕಳ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ವೇದಿಕೆಯಲ್ಲಿ ಬಂಟರ ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸಿಎ ಸಂಜೀವ ಶೆಟ್ಟಿ, ಗೌರವ ಕೋಶಾಧಿಕಾರಿ ಪ್ರವೀಣ್ ಭೋಜ ಶೆಟ್ಟಿ, ಜತೆ ಕಾರ್ಯದರ್ಶಿ ಮಹೇಶ್ ಎಸ್. ಶೆಟ್ಟಿ, ಜತೆ ಕೋಶಾಧಿಕಾರಿ ಗುಣಪಾಲ್ ಶೆಟ್ಟಿ ಐಕಳ, ಯುವ ವಿಭಾಗದ ಕಾರ್ಯಾಧ್ಯಕ್ಷ ಶರತ್ ವಿ. ಶೆಟ್ಟಿ ಉಪಸ್ಥಿತರಿದ್ದರು. ಬಂಟರ ಸಂಘದ ಮಾಜಿ ಅಧ್ಯಕ್ಷರುಗಳಾದ ಸಿಎ ಶಂಕರ್ ಶೆಟ್ಟಿ, ಪ್ರಭಾಕರ ಎಲ್. ಶೆಟ್ಟಿ, ಒಕ್ಕೂಟದ ನಿರ್ದೇಶಕರು, ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರು, ಉಪ ಸಮಿತಿಗಳ ಕಾರ್ಯಾಧ್ಯಕ್ಷರು, ಪ್ರಾದೇಶಿಕ ಸಮಿತಿಗಳ ಪದಾಧಿಕಾರಿಗಳು, ಮಹಿಳಾ ವಿಭಾಗ,ಯುವ ವಿಭಾಗದ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಉಪಾಧ್ಯಕ್ಷ ಕರ್ನಿರೆವಿಶ್ವನಾಥ ಶೆಟ್ಟಿ ಅವರ ಹುಟ್ಟುಹಬ್ಬವನ್ನು ಆಚರಿಸಿ ಅಭಿನಂದಿಸಲಾಯಿತು. ಸಂಘದ ಮಹಾಪ್ರಬಂಧಕ ಪ್ರವೀಣ್ ಶೆಟ್ಟಿ ವರಂಗ, ಪ್ರಬಂಧಕ ಸುಕುಮಾರ್ ಶೆಟ್ಟಿ ಸಹಕರಿಸಿದರು.
ಚಿತ್ರ-ವರದಿ : ಪ್ರೇಮನಾಥ್ ಶೆಟ್ಟಿ ಮುಂಡ್ಕೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Daily Horoscope: ಅವಿವಾಹಿತರಿಗೆ ಸಂಬಂಧ ಕೂಡಿಬರುವ ಸೂಚನೆ, ಆರೋಗ್ಯದ ಕಡೆಗೆ ಗಮನ ಇರಲಿ
Election Results: ಝಾರ್ಖಂಡ್, ಮಹಾರಾಷ್ಟ್ರದಲ್ಲಿ ಪಟ್ಟ ಯಾರಿಗೆ?
Udupi: ಜಾಗ ಖರೀದಿಗೆ ಕರಾರು ಮಾಡಿಸಿ ವಂಚನೆ: ಪ್ರಕರಣ ದಾಖಲು
Adani ಗ್ರೂಪ್‌ಗೆ ಸಾಲ: ಜಾಗತಿಕ ಬ್ಯಾಂಕ್‌ಗಳಿಂದ ತಾತ್ಕಾಲಿಕ ಬ್ರೇಕ್?
Bangaluru; ವ್ಯಕ್ತಿ ಹೊಟ್ಟೆಯಿಂದ 50 ಟೂತ್‌ಬ್ರೆಷ್ ಹೊರತೆಗೆದ ವೈದ್ಯರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.