ಮಕ್ಕಳ ಮುಂದಿನ ಭವಿಷ್ಯಕ್ಕಾಗಿ ಉತ್ತಮ ಪರಿಸರ ಮುಖ್ಯ
Team Udayavani, Nov 24, 2019, 3:00 AM IST
ನೆಲಮಂಗಲ: ಬೆಳೆಯುವ ಮಗುವಿನ ಸುತ್ತಮುತ್ತಲಿನ ಸಮಾಜದ ಜನರ ಸಹವಾಸ, ಒಡನಾಟ, ಅಭ್ಯಾಸ, ನಡವಳಿಕೆಯ ಮೇಲೆ ಮಕ್ಕಳ ಮುಂದಿನ ಭವಿಷ್ಯ ನಿರ್ಮಾಣವಾಗುತ್ತದೆ ಎಂದು ರಾಮನಗರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಿ.ಸಿ ಪ್ರೀತುಗೌಡ ಸಲಹೆ ನೀಡಿದರು. ನೆಲಮಂಗಲ ವಿಧಾನ ಸಭಾಕ್ಷೇತ್ರದ ಸೋಲೂರಿನ ಬ್ರಿಲಿಯಂಟ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ವಿಜ್ಞಾನದ ಮಾದರಿಗಳ ಪ್ರದರ್ಶನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತಾಯಿಯ ಮಮತೆಯಿಂದ ಶಾಲೆಯ ಶಿಕ್ಷಣ ಮುಗಿಸುವ ತನಕ ಮಕ್ಕಳು ಪೋಷಕರ, ಶಿಕ್ಷಕರ, ಸ್ನೇಹಿತರ ಹಾಗೂ ಸಮಾಜದ ಸುತ್ತಮುತ್ತಲ ಜನರ ನಡೆವಳಿಕೆಯನ್ನು ಅನುಸರಿಸಿ ನಡೆಯುತ್ತಾರೆ, ನಾವು ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಕಲಿಸಿದ ಶಿಕ್ಷಣ ವಿದ್ಯಾರ್ಥಿಯನ್ನು ಸಮಾಜದ ಉತ್ತಮ ಶಿಲ್ಪಿಯಾಗಲು ಮಾರ್ಗದರ್ಶನವಾಗಿರುತ್ತದೆ, ಪಠ್ಯಶಿಕ್ಷಣದ ಜೊತೆ ಪ್ರಯೋಗಿಕ ಶಿಕ್ಷಣವು ಮುಖ್ಯವಾಗಿದೆ.
ಆ ನಿಟ್ಟಿನಲ್ಲಿ ಫ್ರೀ ನರ್ಸರಿಯಿಂದ 9 ನೇ ತರಗತಿಯ ಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನದ ಅರಿವು ನೀಡುವ ಮೂಲಕ ಸಮಾಜಕ್ಕೆ ಅನುಕೂಲವಾಗುವ ಮಾದರಿಗಳನ್ನು ತಯಾರಿಸಿ ಅದರ ಉಪಯೋಗ ತಿಳಿಸುತ್ತಿರುವುದು ನಮ್ಮ ಜಿಲ್ಲೆಯಲ್ಲಿ ಇದೇ ಮೊದಲು, ಸಣ್ಣ ವಯಸ್ಸಿನಿಂದ ಮಕ್ಕಳು ಪ್ರಶ್ನೆ ಮಾಡಿ ಕಲಿಯುವ ಕಲಿಕೆಯನ್ನು ಬ್ರಿಲಿಯಂಟ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲೆಯು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಸಪ್ತಗಿರಿ ಆಸ್ಪತ್ರೆಯ ಮುಖ್ಯಸ್ಥ ಬಿ.ಆರ್ ಡಾ.ಕುಮಾರ್ ಮಾತನಾಡಿ ಗ್ರಾಮಾಂತರ ಪ್ರದೇಶದ ಮಕ್ಕಳಲ್ಲಿ ವೈಜ್ಞಾನಿಕ ಕಲೆ, ಸಂಸ್ಕೃತಿ, ವಿಶೇಷ ಪ್ರತಿಭೆ, ಸಾಧನೆಯ ಚಲವಿರುತ್ತದೆ, ಅಂತಹ ಮಕ್ಕಳಿಗೆ ಶಿಕ್ಷಣ ಹಂತದಲ್ಲಿ ಪ್ರೋತ್ಸಾಹ ನೀಡಿದರೆ ಸಮಾಜದ ಅತ್ಯುತ್ತಮ ಸಾಧಕರಾಗುವುದರಲ್ಲಿ ಸಂಶಯವಿಲ್ಲ, ಶಾಲೆಯ ಮಕ್ಕಳು ವಿಜ್ಞಾನ ಮಾದರಿಗಳನ್ನು ತಯಾರಿಸಿ ಅದರ ಬಗ್ಗೆ ಮಾಹಿತಿ ನೀಡುತ್ತಿರುವುದು ನಿಜಕ್ಕೆ ಮಕ್ಕಳ ಪ್ರತಿಭೆಯ ಕೈಕನ್ನಡಿಯಾಗಿದೆ ಎಂದರು.
120 ಮಾದರಿಗಳ ಪ್ರದರ್ಶನ: ಜಿಲ್ಲೆಯಲ್ಲಿ ಮೊದಲ ಭಾರಿಗೆ 3 ವರ್ಷದಿಂದ 15 ವರ್ಷದವರೆಗಿನ ಮಕ್ಕಳು ತಯಾರಿಸಿದ ವಿಜ್ಞಾನ ಮಾದರಿಗಳ ಪ್ರದರ್ಶನವನ್ನು ಬ್ರಿಲಿಯಂಟ್ ವ್ಯಾಲಿ ಇಂಟರ್‌ನ್ಯಾಷನಲ್ ಶಾಲೆಯು ನಡೆಸಿದೆ. ಪ್ರದರ್ಶನದಲ್ಲಿ 300 ವಿದ್ಯಾರ್ಥಿಗಳು ಮಳೆನೀರುಕೊಯ್ಲು, ರಸ್ತೆಸುರಕ್ಷೆ, ಕಾಡುಗಳ ಸಂರಕ್ಷಣೆ, ವಾಯುಮಾಲಿನ್ಯ ತಡೆಕಟ್ಟುವಿಕೆ, ಸಮಗ್ರಕೃಷಿ, ಸೌರಶಕ್ತಿ, ವಾಯುಶಕ್ತಿ, ರಾಕೇಟ್, ವಿದ್ಯುತ್ ತಯಾರಿಕೆ ಸೇರಿದಂತೆ 120 ವಿಜ್ಞಾನ ಮಾದರಿಗಳನ್ನು ಪ್ರದರ್ಶನ ಮಾಡಲಾಗಿತ್ತು. ಪ್ರದರ್ಶನ ವೀಕ್ಷಣೆಗೆ ಪೋಷಕರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಮಾಡಿಕೊಡಲಾಗಿತ್ತು.
ವಿದ್ಯಾರ್ಥಿಗಳಿಂದ ರಕ್ತಪರೀಕ್ಷೆ: ವಿಜ್ಞಾನ ಪ್ರದರ್ಶನದಲ್ಲಿ ಶಾಲೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸ್ಥಳದಲ್ಲಿ ಮಕ್ಕಳ ಪೋಷಕರ ರಕ್ತ ಪರೀಕ್ಷೆ ಮಾಡಿ ರಕ್ತದ ಗುಂಪಿನ ಬಗ್ಗೆ ಮಾಹಿತಿ ನೀಡಿದರು, ವೈಧ್ಯರಿಂದ ತರಭೇತಿ ಪಡೆದ ವಿದ್ಯಾರ್ಥಿಗಳು ರಕ್ತಪರೀಕ್ಷೆಯಲ್ಲಿ ಭಾಗವಹಿಸಿದ್ದರು. ಸಂದರ್ಭದಲ್ಲಿ ಎಮ್.ಆರ್.ಆರ್ ಪ್ರಕೃತಿ ಆಸ್ಪತ್ರೆಯ ಮುಖ್ಯವೈಧ್ಯ ಡಾ. ಶ್ರೀಶೈಲಾ, ಬ್ರಿಲಿಯಂಟ್ ವ್ಯಾಲಿ ಶಾಲೆಯ ಪ್ರಾಂಶುಪಾಲ ಶ್ರೀನಿವಾಸ್ ಮಡ್ಡಿ , ವಿಜ್ಞಾನ ಶಿಕ್ಷಕರಾದ ಮಮತ, ನವ್ಯ, ಶಿಕ್ಷಕರಾದ ಪ್ರಶಾಂತ್, ರವಿಕುಮಾರ್, ಮಧುಸೂಧನ್,ಗೀತಾ, ಪುಷ್ಪಲತಾ,ಪಲ್ಲವಿ,ಪಾವನ ಹಾಗೂ ಪೋಷಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gas cylinder leakage: ಮನೆ ಛಿದ್ರ ಛಿದ್ರ, ಇಬ್ಬರಿಗೆ ಗಾಯ
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Nelamangala: ಸಾಕು ನಾಯಿ ಸತ್ತಿದ್ದಕ್ಕೆ ಮಾಲಕ ಆತ್ಮಹ*ತ್ಯೆ
Doddaballapur: ಹೊಲದಲ್ಲಿ ಹೂ ಬಿಡಿಸುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ: ಸಾವು
Road Mishap: ಬೈಕ್ ವ್ಹೀಲಿಂಗ್ ಮಾಡುವಾಗ ಕ್ಯಾಂಟರ್‌ಗೆ ಡಿಕ್ಕಿ; ಇಬ್ಬರು ಸಾವು
MUST WATCH
ಹೊಸ ಸೇರ್ಪಡೆ
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Review Meeting: ಉನ್ನತ ಶಿಕ್ಷಣಕ್ಕೆ ಬೋಧಕರ ಕೊರತೆ: ಸಿಎಂ ಸಿದ್ದರಾಮಯ್ಯ ಗರಂ
ನಕ್ಸಲರನ್ನು ಅಮಿತ್ ಶಾ ಸ್ವಾಗತಿಸಿದಾಗ ಏಕೆ ಬೆಚ್ಚಿ ಬಿದ್ದಿಲ್ಲ?: ಸಿಎಂ ತಿರುಗೇಟು
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.