ಕೊಹ್ಲಿ ಶತಕ: ಇಶಾಂತ್‌ ಮತ್ತೆ ಘಾತಕ

ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಸಂಭ್ರಮ ಭಾರತಕ್ಕೆ 241 ರನ್‌ ಮುನ್ನಡೆ ಅಪಾಯದಲ್ಲಿ ಬಾಂಗ್ಲಾ

Team Udayavani, Nov 23, 2019, 11:31 PM IST

mm-30

ಕೋಲ್ಕತಾ: ಕ್ಯಾಪ್ಟನ್‌ ವಿರಾಟ್‌ ಕೊಹ್ಲಿ ಅವರ ಆಕರ್ಷಕ ಶತಕದಿಂದ ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯ ರಂಗೇರಿಸಿಕೊಂಡಿದೆ. ಭಾರತದ ವೇಗಿಗಳು ಮತ್ತೆ ಘಾತಕ ಬೌಲಿಂಗ್‌ ನಡೆಸಿದ ಪರಿಣಾಮ ಬಾಂಗ್ಲಾದೇಶ ಅಪಾಯಕ್ಕೆ ಸಿಲುಕಿದೆ. ಮುಶ್ಫಿಕರ್‌ ರಹೀಂ ಅವರ ಹೋರಾಟದಿಂದ 5 ದಿನಗಳ ಪಂದ್ಯ ಎರಡೇ ದಿನಗಳಲ್ಲಿ ಮುಗಿಯುವ ಅವ ಮಾನದಿಂದ ಪಾರಾದುದೊಂದು ಸಮಾಧಾನ!

ಬಾಂಗ್ಲಾದೇಶದ 106 ರನ್ನುಗಳ ಸಣ್ಣ ಮೊತ್ತಕ್ಕೆ ಜವಾಬು ನೀಡಲಾರಂಭಿಸಿದ ಭಾರತ, 3 ವಿಕೆಟಿಗೆ 174 ರನ್‌ ಗಳಿಸಿ ಮೊದಲ ದಿನದಾಟ ಮುಗಿಸಿತ್ತು. ಶನಿವಾರ ಬ್ಯಾಟಿಂಗ್‌ ಮುಂದುವರಿಸಿ 9 ವಿಕೆಟಿಗೆ 347 ರನ್‌ ಮಾಡಿ ಇನ್ನಿಂಗ್ಸ್‌ ಬಿಟ್ಟುಕೊಟ್ಟಿತು. 241 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಬಾಂಗ್ಲಾ 13 ರನ್ನಿಗೆ 4 ವಿಕೆಟ್‌ ಉದುರಿಸಿಕೊಂಡಾಗ ಪಂದ್ಯ ಮೂರನೇ ದಿನಕ್ಕೂ ಕಾಲಿಡದು ಎಂಬ ದಟ್ಟ ಅನುಮಾನ ಕಾಡಿತ್ತು. ಆದರೆ ರಹೀಂ ಹೋರಾಟದ ಫ‌ಲದಿಂದ 6 ವಿಕೆಟಿಗೆ 152 ರನ್‌ ಗಳಿಸುವಲ್ಲಿ ಯಶಸ್ವಿಯಾಗಿದೆ. ರಹೀಂ 59 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ (70 ಎಸೆತ, 10 ಬೌಂಡರಿ).

ಉತ್ತಮವಾಗಿ ಆಡುತ್ತಿದ್ದ ಮಹಮದುಲ್ಲ 39 ರನ್‌ ಮಾಡಿ ಸ್ನಾಯು ಸೆಳೆತಕ್ಕೆ ಸಿಲುಕಿ ಕ್ರೀಸ್‌ ತೊರೆದಿದ್ದಾರೆ. ತೈಜುಲ್‌ ಇಸ್ಲಾಮ್‌ ಔಟಾದೊಡನೆ ದಿನದಾಟವನ್ನು ಕೊನೆಗೊಳಿಸಲಾಯಿತು. ಭಾರತ ವನ್ನು ಮರಳಿ ಬ್ಯಾಟಿಂಗಿಗೆ ಇಳಿಸಬೇಕಾದರೆ ಬಾಂಗ್ಲಾ ಇನ್ನೂ 89 ರನ್‌ ಗಳಿಸಬೇಕಿದೆ. ಟೀಮ್‌ ಇಂಡಿಯಾ ಮತ್ತೂಂದು ಇನ್ನಿಂಗ್ಸ್‌ ಗೆಲುವು ಸಾಧಿಸೀತೇ ಎಂಬುದು ರವಿವಾರದ ಕುತೂಹಲ.

ಮಹಮದುಲ್ಲ ಗಾಯಾಳು
ರಹೀಂ ಜತೆ ಉತ್ತಮ ಬ್ಯಾಟಿಂಗ್‌ ನಡೆಸುತ್ತಿದ್ದ ಮಹಮದುಲ್ಲ ಸ್ನಾಯು ಸೆಳೆತಕ್ಕೆ ಸಿಲುಕಿದ್ದರಿಂದ ಬಾಂಗ್ಲಾ ಸಂಕಟ ಬಿಗಡಾಯಿಸಿತು. ಮಹಮದುಲ್ಲ ಮೈದಾನ ತೊರೆದಿದ್ದು, ರವಿವಾರ ಮರಳಿ ಆಡಲಿಳಿಯಬಹುದು ಎಂಬ ವಿಶ್ವಾಸ ತಂಡದ್ದಾಗಿದೆ. ಇದಕ್ಕೂ ಮುನ್ನ ಇಶಾಂತ್‌ ಎಸೆತವೊಂದು ಮೊಹಮ್ಮದ್‌ ಮಿಥುನ್‌ ಅವರ ಹೆಲ್ಮೆಟ್‌ಗೆ ಹೋಗಿ ಬಡಿದಿತ್ತು. ಆದರೆ ಅವರು ಬ್ಯಾಟಿಂಗ್‌ ಮುಂದುವರಿಸಿದರು. 3ನೇ ದಿನ ಇಂಥ ಪರಿಸ್ಥಿತಿ ಎದುರಾದರೆ ನಜ್ಮುಲ್‌ ಹಸನ್‌ ಅವರನ್ನು ಬದಲಿ ಆಟಗಾರನಾಗಿ ಆಡಿಸಲು ಬಾಂಗ್ಲಾ ನಿರ್ಧರಿಸಿದೆ.

ಕೊಹ್ಲಿ ಶತಕ ಸಂಭ್ರಮ
ತಮ್ಮ ಪ್ರಚಂಡ ಬ್ಯಾಟಿಂಗ್‌ ಫಾರ್ಮನ್ನು ಪಿಂಕ್‌ ಬಾಲ್‌ ಟೆಸ್ಟ್‌ ಪಂದ್ಯಕ್ಕೂ ವಿಸ್ತರಿಸಿದ ಕೊಹ್ಲಿ 27ನೇ ಶತಕದ ಸಂಭ್ರಮವನ್ನಾಚರಿಸಿದರು. ಇದರೊಂದಿಗೆ ಡೇ-ನೈಟ್‌ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಭಾರತದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾದರು. ಕೊಹ್ಲಿ ಕೊಡುಗೆ 194 ಎಸೆತಗಳಿಂದ 136 ರನ್‌. ಸಿಡಿಸಿದ್ದು 18 ಬೌಂಡರಿ.

ಈಡನ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ನೆರೆದಿದ್ದ ವೀಕ್ಷಕರು ಭಾರತೀಯ ಕಪ್ತಾನನ ಆಟವನ್ನು ಅತ್ಯಂತ ಖುಷಿಯಿಂದ ಆಸ್ವಾದಿಸಿದರು. ಇವರಿಗೆ ಉತ್ತಮ ಬೆಂಬಲ ನೀಡಿದ ಅಜಿಂಕ್ಯ ರಹಾನೆ 51 ರನ್‌ ಬಾರಿಸಿದರು (69 ಎಸೆತ, 7 ಬೌಂಡರಿ). ನಾಯಕ-ಉಪನಾಯಕರ ಜತೆಯಾಟದಲ್ಲಿ 99 ರನ್‌ ಒಟ್ಟುಗೂಡಿತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಭಾರತ ಪಟಪಟನೆ ವಿಕೆಟ್‌ಗಳನ್ನು ಕಳೆದುಕೊಳ್ಳುತ್ತ ಹೋಯಿತು.

ಮತ್ತೆ ಇಶಾಂತ್‌ ಆಕ್ರಮಣ
ಬಾಂಗ್ಲಾದ ದ್ವಿತೀಯ ಸರದಿಯಲ್ಲೂ ಅನುಭವಿ ವೇಗಿ ಇಶಾಂತ್‌ ಶರ್ಮ ಆಕ್ರಮಣಗೈದರು. ಮೊದಲ ಓವರಿನಿಂದಲೇ ವಿಕೆಟ್‌ ಉಡಾಯಿಸತೊಡಗಿದರು. ಆರರಲ್ಲಿ 4 ವಿಕೆಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡರು. ಉಳಿದೆರಡು ವಿಕೆಟ್‌ ಉಮೇಶ್‌ ಯಾದವ್‌ ಪಾಲಾಗಿದೆ. ಅಶ್ವಿ‌ನ್‌ ಈ ಪಂದ್ಯದಲ್ಲಿ ಮೊದಲ ಸಲ ಬೌಲಿಂಗ್‌ ಅವಕಾಶ ಪಡೆದು 5 ಓವರ್‌ ಎಸೆದಿದ್ದಾರೆ.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ ಪ್ರಥಮ ಇನ್ನಿಂಗ್ಸ್‌ 106
ಭಾರತ ಪ್ರಥಮ ಇನ್ನಿಂಗ್ಸ್‌

ಅಗರ್ವಾಲ್‌ ಸಿ ಮೆಹಿದಿ ಬಿ ಅಮಿನ್‌ 14
ರೋಹಿತ್‌ ಎಲ್‌ಬಿಡಬ್ಲ್ಯು ಇಬಾದತ್‌ 21
ಪೂಜಾರ ಸಿ ಶದ್ಮಾನ್‌ ಬಿ ಇಬಾದತ್‌ 55
ವಿರಾಟ್‌ ಕೊಹ್ಲಿ ಸಿ ತೈಜುಲ್‌ ಬಿ ಇಬಾದತ್‌ 136
ಅಜಿಂಕ್ಯ ರಹಾನೆ ಸಿ ಇಬಾದತ್‌ ಬಿ ತೈಜುಲ್‌ 51
ರವೀಂದ್ರ ಜಡೇಜ ಬಿ ಜಾಯೇದ್‌ 12
ವೃದ್ಧಿಮಾನ್‌ ಸಾಹಾ ಔಟಾಗದೆ 17
ಆರ್‌. ಅಶ್ವಿ‌ನ್‌ ಎಲ್‌ಬಿಡಬ್ಲ್ಯು ಅಲ್‌ ಅಮಿನ್‌ 9
ಉಮೇಶ್‌ ಸಿ ಶದ್ಮಾನ್‌ ಬಿ ಜಾಯೇದ್‌ 0
ಇಶಾಂತ್‌ ಎಲ್‌ಬಿಡಬ್ಲ್ಯು ಅಲ್‌ ಅಮಿನ್‌ 0
ಮೊಹಮ್ಮದ್‌ ಶಮಿ ಔಟಾಗದೆ 10

ಇತರ 22
ಒಟ್ಟು (9 ವಿಕೆಟಿಗೆ ಡಿಕ್ಲೇರ್‌) 347
ವಿಕೆಟ್‌ ಪತನ: 1-26, 2-43, 3-137, 4-236, 5-289, 6-308, 7-329, 8-330, 9-331.

ಬೌಲಿಂಗ್‌:
ಅಲ್‌ ಅಮಿನ್‌ ಹೊಸೈನ್‌ 22.4-3-85-3
ಅಬು ಜಾಯೇದ್‌ 21-0-77-2
ಇಬಾದತ್‌ ಹೊಸೈನ್‌ 21-3-91-3
ತೈಜುಲ್‌ ಇಸ್ಲಾಮ್‌ 25-2-80-1

ಬಾಂಗ್ಲಾದೇಶ ದ್ವಿತೀಯ ಇನ್ನಿಂಗ್ಸ್‌
ಶದ್ಮಾನ್‌ ಇಸ್ಲಾಮ್‌ ಎಲ್‌ಬಿಡಬ್ಲ್ಯು ಇಶಾಂತ್‌ 0
ಇಮ್ರುಲ್‌ ಕಯೆಸ್‌ ಸಿ ಕೊಹ್ಲಿ ಬಿ ಇಶಾಂತ್‌ 5
ಮೊಮಿನುಲ್‌ ಹಕ್‌ ಸಿ ಸಾಹಾ ಬಿ ಇಶಾಂತ್‌ 0
ಮಿಥುನ್‌ ಸಿ ಶಮಿ ಬಿ ಯಾದವ್‌ 6
ಮುಶ್ಫಿಕರ್‌ ರಹೀಂ ಬ್ಯಾಟಿಂಗ್‌ 59
ಮಹಮದುಲ್ಲ ಗಾಯಾಳಾಗಿ ನಿವೃತ್ತಿ 39
ಮೆಹಿದಿ ಹಸನ್‌ ಸಿ ಕೊಹ್ಲಿ ಬಿ ಇಶಾಂತ್‌ 15
ತೈಜುಲ್‌ ಇಸ್ಲಾಮ್‌ ಸಿ ರಹಾನೆ ಬಿ ಯಾದವ್‌ 11

ಇತರ 17
ಒಟ್ಟು (6 ವಿಕೆಟಿಗೆ) 152
ವಿಕೆಟ್‌ ಪತನ: 1-0, 2-2, 3-9, 4-13, 5-133, 6-152.

ಬೌಲಿಂಗ್‌:
ಇಶಾಂತ್‌ ಶರ್ಮ 9-1-39-4
ಉಮೇಶ್‌ ಯಾದವ್‌ 10.3-0-40-2
ಮೊಹಮ್ಮದ್‌ ಶಮಿ 8-0-42-0
ಆರ್‌. ಅಶ್ವಿ‌ನ್‌ 5-0-19-0

ವಿರಾಟ್‌ ಕೊಹ್ಲಿ: ದಾಖಲೆಗಳಿಗೆ ಕೊನೆಯಿಲ್ಲ
ಕೊಹ್ಲಿ: ನಾಯಕನಾಗಿ 20 ಸೆಂಚುರಿ
ವಿರಾಟ್‌ ಕೊಹ್ಲಿ ಪಿಂಕ್‌ ಬಾಲ್‌ ಟೆಸ್ಟ್‌ನಲ್ಲಿ ಸೆಂಚುರಿ ಹೊಡೆದ ಭಾರತದ ಮೊದಲ ಕ್ರಿಕೆಟಿಗನೆಂಬ ಹೆಗ್ಗಳಿಕೆಯ ಜತೆಯಲ್ಲೇ ಹೊಸ ಎತ್ತರವೊಂದನ್ನು ತಲುಪಿದರು. ಇದು ಅವರ 27ನೇ ಟೆಸ್ಟ್‌ ಶತಕ. ನಾಯಕನಾಗಿ 20ನೇ ಸೆಂಚುರಿ. ಇದರೊಂದಿಗೆ ಟೆಸ್ಟ್‌ ಇತಿಹಾಸದಲ್ಲಿ ಅತ್ಯಧಿಕ ಶತಕ ಬಾರಿಸಿದ ನಾಯಕರ ಯಾದಿಯಲ್ಲಿ ಕೊಹ್ಲಿ ದ್ವಿತೀಯ ಸ್ಥಾನ ಅಲಂಕರಿಸಿದರು. 19 ಶತಕ ಬಾರಿಸಿದ ರಿಕಿ ಪಾಂಟಿಂಗ್‌ ಮೂರಕ್ಕಿಳಿದರು. ವಿಶ್ವದಾಖಲೆ ದಕ್ಷಿಣ ಆಫ್ರಿಕಾದ ಗ್ರೇಮ್‌ ಸ್ಮಿತ್‌ ಹೆಸರಲ್ಲಿದೆ (25 ಶತಕ).

ಸಚಿನ್‌ ದಾಖಲೆ ಮುರಿದ ಕೊಹ್ಲಿ
ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ವಿರಾಟ್‌ ಕೊಹ್ಲಿ ಬಾರಿಸಿದ 70ನೇ ಶತಕ. ಅವರು ಅತೀ ಕಡಿಮೆ 438 ಇನ್ನಿಂಗ್ಸ್‌ ಗಳಲ್ಲಿ ಈ ಸಾಧನೆಗೈದು ಸಚಿನ್‌ ತೆಂಡುಲ್ಕರ್‌ ದಾಖಲೆಯನ್ನು ಮುರಿದರು. ಸಚಿನ್‌ 70 ಶತಕಗಳಿಗಾಗಿ 505 ಇನ್ನಿಂಗ್ಸ್‌ ಆಡಿದ್ದರು. 70 ಸೆಂಚುರಿ ಬಾರಿಸಿದ ಮತ್ತೋರ್ವ ಸಾಧಕ ರಿಕಿ ಪಾಂಟಿಂಗ್‌ ಇದಕ್ಕಾಗಿ 649 ಇನ್ನಿಂಗ್ಸ್‌ ತೆಗೆದುಕೊಂಡಿದ್ದರು.

ಡೇ-ನೈಟ್‌ ಟೆಸ್ಟ್‌ ದಾಖಲೆ
ವಿರಾಟ್‌ ಕೊಹ್ಲಿ 136 ರನ್‌ ಬಾರಿಸಿ ಡೇ-ನೈಟ್‌ ಟೆಸ್ಟ್‌ ಪಂದ್ಯದಲ್ಲಿ ಅತ್ಯಧಿಕ ರನ್‌ ಬಾರಿಸಿದ ನಾಯಕನ ದಾಖಲೆಯನ್ನು ಸರಿದೂಗಿಸಿದರು. ಇಂಗ್ಲೆಂಡಿನ ನಾಯಕ ಜೋ ರೂಟ್‌ ವೆಸ್ಟ್‌ ಇಂಡೀಸ್‌ ಎದುರಿನ 2017ರ ಬರ್ಮಿಂಗ್‌ಹ್ಯಾಮ್‌ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 136 ರನ್‌ ಹೊಡೆದಿದ್ದರು.

5 ಕೇಂದ್ರಗಳಲ್ಲಿ ಶತಕ
ವಿರಾಟ್‌ ಕೊಹ್ಲಿ ಕೋಲ್ಕತಾದಲ್ಲಿ ಮೊದಲ ಟೆಸ್ಟ್‌ ಶತಕ ದಾಖಲಿಸಿದರು. ಇದರೊಂದಿಗೆ ಭಾರತದ 5 ಪ್ರಧಾನ ಕ್ರಿಕೆಟ್‌ ಕೇಂದ್ರಗಳಾದ ಮುಂಬಯಿ, ಕೋಲ್ಕತಾ, ಚೆನ್ನೈ, ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿ ಸೆಂಚುರಿ ಹೊಡೆದ 4ನೇ ಕ್ರಿಕೆಟಿಗನೆನಿಸಿದರು. ಉಳಿದವರೆಂದರೆ ಜಿ.ಆರ್‌. ವಿಶ್ವನಾಥ್‌, ಸುನೀಲ್‌ ಗಾವಸ್ಕರ್‌ ಮತ್ತು ಸಚಿನ್‌ ತೆಂಡುಲ್ಕರ್‌.

ಭಾರತದ ಮೊದಲ ಶತಕ ವೀರರು
ಟೆಸ್ಟ್‌: ಲಾಲಾ ಅಮರನಾಥ್‌ (1933-34). ಡೇ ನೈಟ್‌ ಟೆಸ್ಟ್‌: ವಿರಾಟ್‌ ಕೊಹ್ಲಿ (2019). ವನ್‌ ಡೇ: ಕಪಿಲ್‌ದೇವ್‌ (1983). ಡೇ ನೈಟ್‌ ವನ್‌ ಡೇ: ಸಂಜಯ್‌ ಮಾಂಜ್ರೆàಕರ್‌ (1991). ಟಿ20: ಸುರೇಶ್‌ ರೈನಾ (2010). ಡೇ ನೈಟ್‌ ಟಿ20: ರೋಹಿತ್‌ ಶರ್ಮ (2015).

141 ಇನ್ನಿಂಗ್ಸ್‌ಗಳಲ್ಲಿ 27 ಶತಕ
ಕೊಹ್ಲಿ 141 ಇನ್ನಿಂಗ್ಸ್‌ಗಳಿಂದ 27 ಶತಕ ಹೊಡೆದರು. ಇನ್ನಿಂಗ್ಸ್‌ ಲೆಕ್ಕಾಚಾರದಲ್ಲಿ ಇದು ಜಂಟಿ 2ನೇ ವೇಗದ ಸಾಧನೆಯಾಗಿದೆ. ತೆಂಡುಲ್ಕರ್‌ ಕೂಡ 141 ಇನ್ನಿಂಗ್ಸ್‌ಗಳಿಂದ 27 ಶತಕ ಬಾರಿಸಿದ್ದರು. ದಾಖಲೆ ಡಾನ್‌ ಬ್ರಾಡ್‌ಮನ್‌ ಹೆಸರಲ್ಲಿದೆ (70 ಇನ್ನಿಂಗ್ಸ್‌).

ತವರಲ್ಲಿ 10 ಸೆಂಚುರಿ
ಕೊಹ್ಲಿ ನಾಯಕನಾಗಿ ತವರಿನಲ್ಲಿ ಸರ್ವಾಧಿಕ 10 ಟೆಸ್ಟ್‌ ಶತಕ ಹೊಡೆದು ಭಾರತೀಯ ದಾಖಲೆ ಸ್ಥಾಪಿಸಿದರು. ಸುನೀಲ್‌ ಗಾವಸ್ಕರ್‌ ದ್ವಿತೀಯ ಸ್ಥಾನಕ್ಕಿಳಿದರು (9). ತವರಲ್ಲಿ ಅತೀ ಹೆಚ್ಚು ಶತಕ ಬಾರಿಸಿದ ದಾಖಲೆ ರಿಕಿ ಪಾಂಟಿಂಗ್‌ ಹೆಸರಲ್ಲಿದೆ (11).

ನಾಯಕನಾಗಿ 41 ಶತಕ
ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಒಟ್ಟು 41 ಶತಕ ಬಾರಿಸುವ ಮೂಲಕ ರಿಕಿ ಪಾಂಟಿಂಗ್‌ ದಾಖಲೆಯನ್ನು ಕೊಹ್ಲಿ ಸರಿದೂಗಿಸಿದರು. ರಿಕಿ ಪಾಂಟಿಂಗ್‌ ಇದಕ್ಕೆ 376 ಇನ್ನಿಂಗ್ಸ್‌ ತೆಗೆದುಕೊಂಡರೆ, ಕೊಹ್ಲಿ ಸರಿ ಅರ್ಧದಷ್ಟು ಇನ್ನಿಂಗ್ಸ್‌ ಗಳಲ್ಲಿ (188) ಈ ಸಾಧನೆ ದಾಖಲಿಸಿದ್ದು ವಿಶೇಷ.

ಸ್ವದೇಶದಲ್ಲಿ 9 ಸಾವಿರ ರನ್‌
ವಿರಾಟ್‌ ಕೊಹ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಪಂದ್ಯಗಳಿಂದ ತವರಲ್ಲಿ 9 ಸಾವಿರ ರನ್‌ (9,032) ಪೂರ್ತಿಗೊಳಿಸಿದ ಭಾರತದ 3ನೇ, ವಿಶ್ವದ 12ನೇ ಬ್ಯಾಟ್ಸ್‌ ಮನ್‌ ಎನಿಸಿದರು. ಅಗ್ರಸ್ಥಾನದಲ್ಲಿರುವವರು ತೆಂಡುಲ್ಕರ್‌ (14,192 ರನ್‌). ಭಾರತದ ಮತ್ತೋರ್ವ ಸಾಧಕ ರಾಹುಲ್‌ ದ್ರಾವಿಡ್‌ (9,004 ರನ್‌).

ಟಾಪ್ ನ್ಯೂಸ್

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

1-ronak

National Badminton: ರೋಣಕ್‌ ಚೌಹಾಣ್‌ ಸೆಮಿಗೆ

ICC

Champions Trophy: ದುಬಾೖಯಲ್ಲಿ ಭಾರತದ ಪಂದ್ಯಗಳು: ನಾಕೌಟ್‌ ಹಂತಕ್ಕೇರಿದರೆ?

1-sq

Squash event: ಭಾರತದ ಅನಾಹತ್‌,ಮಲೇಷ್ಯಾದ ಚಂದರನ್‌ ಚಾಂಪಿಯನ್‌

1-a-bb

Pro Kabaddi: ಬೆಂಗಳೂರು ಬುಲ್ಸ್‌ ಗೆ 18ನೇ ಸೋಲು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-sambhal

Sambhal; ದೇಗುಲ ಬಳಿಕ 150 ವರ್ಷ ಹಳೆ ಬಾವಿ ಪತ್ತೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.