ಟೋಲ್ ನಾಕಾ ರದ್ದತಿಗೆ ಆಗ್ರಹಿಸಿ ಮನವಿ-ನಿರಶನ
Team Udayavani, Nov 24, 2019, 12:20 PM IST
ಬೈಲಹೊಂಗಲ: ಸರಕಾರವು ಬಾಗೇವಾಡಿಯಿಂದ ಬೈಲಹೊಂಗಲ ಮಾರ್ಗವಾಗಿ ಸವದತ್ತಿ ರಸ್ತೆಗೆ ಪ್ರಾರಂಭಿಸಲಿರುವ ಟೋಲ್ ನಾಕಾಗಳನ್ನು ರದ್ದುಗೊಳಿಸದಿದ್ದರೆ ಸಾರ್ವಜನಿಕರೊಂದಿಗೆ ಪ್ರತಿಭಟಿಸಿ, ಟೋಲ್ ನಾಕಾ ಕಿತ್ತೆಸೆಯಲಾಗುವದು ಎಂದು ಭಾರತೀಯ ಕೃಷಿಕ ಸಮಾಜ, ಕರವೇ (ಪ್ರವೀಣ ಶೆಟ್ಟಿ ಬಣ), ಅಟೋಚಾಲಕರ ಸಂಘ ಹಾಗೂ ವಿವಿಧ ಸಂಘಟನೆ ಸದಸ್ಯರು ಪಟ್ಟಣದಲ್ಲಿ ಪ್ರತಿಭಟಿಸಿ ಉಪವಿಭಾಗಾಧಿಕಾರಿ ಮೂಲಕ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳಗೆ ಶನಿವಾರ ಮನವಿ ಸಲ್ಲಿಸಿದರು.
ಎಪಿಎಂಸಿ ಸದಸ್ಯ ಫಕ್ಕೀರಗೌಡ ಸಿದ್ದನಗೌಡರ ಮಾತನಾಡಿ, ಬಾಗೇವಾಡಿಯಿಂದ ಬೈಲಹೊಂಗಲ ಮಾರ್ಗವಾಗಿ ಸವದತ್ತಿ ರಸ್ತೆ ಸಂಪೂರ್ಣ ಹದಗೆಟ್ಟ ವೇಳೆ ಜನರು ಹೋರಾಟ ಮಾಡಿದ್ದಕ್ಕೆ ಸರಕಾರ ಎಚ್ಚೆತ್ತುಕೊಂಡು ರಸ್ತೆ ನಿರ್ಮಿಸಿ ಟೋಲ್ ಹೊರೆ ನೀಡುತ್ತಿದೆ. ಈಗ ಕೇವಲ 60 ಕಿ.ಮೀ. ರಸ್ತೆಗೆ ಸಾಣಿಕೊಪ್ಪ ಮತ್ತು ಕರೀಕಟ್ಟಿ ಹತ್ತಿರ ಟೋಲ್ ನಿರ್ಮಿಸಿ ಕರ ವಸೂಲಿಗೆ ಮುಂದಾಗಿರುವ ಸರ್ಕಾರದ ನೀತಿಯಿಂದ ಜನರು ಕಂಗೆಟ್ಟಿದ್ದಾರೆ. ರೈತ ಸಮುದಾಯ ಬಿಟ್ಟರೆ ಯಾವುದೇ ಬೃಹತ್ ಉದ್ಯಮಗಳ ಅಥವಾ ಕೈಗಾರಿಕಾ ಸಂಬಂಧಿ ಸಿದ ವಾಹನಗಳು ಸಂಚರಿಸುವದಿಲ್ಲ. ಟೋಲ್ ಸಮೀಪದ 20 ಕಿ.ಮೀ. ಒಳಗಿನ ಜನರಿಗೆ ರಿಯಾಯತಿ ನೀಡಬೇಕಾದ ನಿಯಮವಿದೆ. ಟೋಲ್ ನಿಯಮದಂತೆ 80 ಕಿ.ಮೀ. ವ್ಯಾಪ್ತಿಯ ರಸ್ತೆ ನಿರ್ಮಾಣವಾಗಿಲ್ಲ. ಟೋಲ್ ಸಂಗ್ರಹಕ್ಕಾಗಿ ಸವದತ್ತಿ ಸಮೀಪ ಟೋಲ್ ನಿರ್ಮಿಸಿ ಸುಂಕ ಸಂಗ್ರಹಕ್ಕೆ ತನ್ನ ವ್ಯಾಪ್ತಿ ಹೆಚ್ಚಿಸಿಕೊಂಡಿರುವುದು ಸರಿಯಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ ಮಾತನಾಡಿ, ಕೇವಲ 5 ಕಿ.ಮೀ. ಅಂತರದ ಗ್ರಾಮೀಣ ಪ್ರದೇಶದ ಜನತೆಗೆ ಇದು ಹೊರೆಯಾಗಲಿದೆ. ಬೇರೆ ರಾಜ್ಯಗಳಲ್ಲಿ ರಾಜ್ಯ ಹೆದ್ದಾರಿಗಳಿಗೆ ಟೋಲ್‌ಗಳಿಂದ ವಿಮುಕ್ತಗೊಳಿಸುತ್ತಿದ್ದು, ಇಲ್ಲೂ ರದ್ದು ಪಡಿಸಬೇಕೆಂದು ಒತ್ತಾಯಿಸಿದರು. ಶ್ರೀಕಾಂತ ಸುಂಕದ, ಮುರಿಗೆಪ್ಪ ಬಡೇಘರ, ಶ್ರೀಶೈಲ ಶರಣಪ್ಪನವರ, ಚಂದ್ರಶೇಖರ ಕೊಪ್ಪದ, ರಾಜು ನರಸನ್ನವರ, ಸಂತೋಷ ಹಡಪದ, ಉಮೇಶ ಲಾಳ, ಉಮೇಶ ಗೌರಿ, ಸೋಮಪ್ಪ ಯರಡಾಲ, ಗೌಡಪ್ಪ ಹೊಸಮನಿ, ಸುರೇಶ ಹೊಳಿ, ಗೂಳಪ್ಪ ಹೋಳಿ, ಉಳವಪ್ಪ ಕಲಬಾಂವಿ, ಈರಪ್ಪ ಹುಬ್ಬಳ್ಳಿ, ಮಡಿವಾಳಪ್ಪ ಜಳ್ಳಿ, ಮೋಹನ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Belagavi: ಗೆಳೆಯರ ಜೊತೆ ಪಾರ್ಟಿಗೆಂದು ಹೋದ ವ್ಯಕ್ತಿ ಅನುಮಾನಾಸ್ಪದವಾಗಿ ಸಾ*ವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.