ನಾಳೆ ಕಾರಟಗಿ ಬಂದ್
Team Udayavani, Nov 24, 2019, 2:19 PM IST
ಕಾರಟಗಿ: ತುಂಗಭದ್ರಾ ಎಡದಂಡೆ ಕಾಲುವೆಗೆ ಏ. 30ರವರೆಗೆ ನೀರು ಹರಿಸುವಂತೆ ಆಗ್ರಹಿಸಿ ನ. 25ರಂದು ಕಾರಟಗಿ ಬಂದ್‌ಗೆ ಕರೆ ನೀಡಲಾಗಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಪಟ್ಟಣದ ಕೆರೆಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ನಡೆದ ರೈತರ, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಜಲಾಶಯದಲ್ಲಿ ಸಾಕಷ್ಟುನೀರಿನ ಸಂಗ್ರಹವಿದೆ. ಈಗಲೂ ನೀರು ನಿತ್ಯ ಜಲಾಶಯಕ್ಕೆ ಹರಿದು ಬರುತ್ತಿದ್ದರೂ ಏ. 30ರವರೆಗೆ ನೀರು ಬಿಡಲು ಅಧಿಕಾರಿಗಳು ಒಪ್ಪುತ್ತಿಲ್ಲವೇಕೆ. ಅಧಿಕಾರಿಗಳು ನೀರು ಮಾರಿಕೊಳ್ಳಲು ಸಂಚು ನಡೆಸಿ ರೈತರಿಗೆ ದ್ರೋಹ ಮಾಡುತ್ತಿದ್ದಾರೆ. ಹಿಂದೆ ಡ್ಯಾಂನಲ್ಲಿ
67 ಟಿಎಂಸಿ ನೀರು ಸಂಗ್ರಹವಿದ್ದಾಗ ರೈತರಿಗೆ ತೊಂದರೆಯಾಗಬಾರದೆಂಬ ಉದ್ದೇಶದಿಂದ ನೀರು ಹರಿಸಲಾಗಿತ್ತು. ಈಗ 97 ಟಿಎಂಸಿ ನೀರು ಶೇಖರಣೆ ಇದ್ದರೂ ನೀರು ಹರಿಸಲು ಹಿಂದೇಟು ಹಾಕುತ್ತಿದ್ದಾರೆ. ಶಾಸಕರು ಸಭೆಯಲ್ಲಿ ಕುಳಿತು ತಲೆ ಅಲ್ಲಾಡಿಸಿ ಬರುತ್ತಾರೆ ಹೀಗಾಗಿ ಅಧಿ ಕಾರಿಗಳು ಶಾಸಕರ ಮಾತಿಗೆ ಬೆಲೆ ಕೊಡುತ್ತಿಲ್ಲ. ನೀರಾವರಿ ಸಲಹಾ ಸಮಿತಿ ಸಭೆ ನಡೆದ 3 ದಿನಗಳಲ್ಲಿ ಜಲಾಶಯಕ್ಕೆ 14 ಸಾವಿರ ಕ್ಯೂಸೆಕ್ ನೀರು ಹರಿದು ಬಂದಿದೆ. ಇನ್ನು ತಿಂಗಳ ಕಾಲ ನೀರು ಹರಿದು ಬರುತ್ತದೆ. ಅದನ್ನು ಗಮನದಲ್ಲಿಟ್ಟುಕೊಳ್ಳದೆ ರೈತರಿಗೆ ಅನಾವಶ್ಯವಾಗಿ ತೊಂದರೆ ಕೊಡುವುದು ಸರಿಯಲ್ಲ. ನೀರು ಹರಿಸುವ ವಿಚಾರದಲ್ಲಿ ಸಚಿವರು ನೀಡುವ ಉತ್ತರದಲ್ಲಿ ಸ್ಪಷ್ಟತೆ ಇಲ್ಲ. ಇನ್ನು ಅಧಿ ಕಾರಿಗಳು ನೀಡುವ ಉತ್ತರದ ಮೇಲೆ ಯಾವ ಸ್ಪಷ್ಟತೆ ಇರುತ್ತದೆ,
ಜಲಾಶಯದಲ್ಲಿ ನೀರು ಸಂಗ್ರವಿದ್ದ ಮೇಲೆ ರೈತರಿಗೆ ಅನುಕೂಲವಾಗುವಂತೆ ನೀರು ಬಿಡುವ ಸಮಯ ನಿಗದಿಪಡಿಸಬೇಕು. ಸುಮ್ಮನೆ ಸಲಹಾ ಸಮಿತಿ ಸಭೆ ಕರೆದು ಬಾಯಿಗೆ ಬಂದಂತೆ ಮಾತನಾಡಿ, ನಿಮ್ಮಿಷ್ಟದಂತೆ ಮಾರ್ಚ್ ವರೆಗೆ ನೀರು ಬಿಡುತ್ತೇನೆಂದರೆ ಒಪ್ಪುವುದಿಲ್ಲ. ಯಾವುದೇ ಸರಕಾರವಿರಲಿ ಮೊದಲು ರೈತರ ಹಿತ ಮುಖ್ಯ. ಈ ನಿಟ್ಟಿನಲ್ಲಿ 2020ರ ಏ. 30ರವರೆಗೆ ಕಾಲುವೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿ ನ. 25ರಂದು ಕಾರಟಗಿ ಸಂಪೂರ್ಣ ಬಂದ್‌ಗೆ ಕರೆ ನೀಡಲಾಗಿದೆ. ಪಟ್ಟಣದ ಎಲ್ಲ ವರ್ತಕರು, ಉದ್ದಿಮೆದಾದಾರರು, ಸಂಘ ಸಂಸ್ಥೆಗಳು ಬೆಂಬಲ ಸೂಚಿಸಿವೆ.
ಅಂದು ಬೆಳಗ್ಗೆ 8 ಗಂಟೆಯಿಂದ ಸಂಜೆ 5:00 ಗಂಟೆಯವರೆಗೂ ಬಂದ್ ಆಚರಿಸಲಾಗುವುದು. ಬೆಳಗ್ಗೆ 11ಕ್ಕೆ ಎಪಿಎಂಸಿ ಯಾರ್ಡ್‌ನಿಂದ ಮುಖ್ಯ ರಸ್ತೆ ಮಾರ್ಗವಾಗಿ ಬೃಹತ್ ಪ್ರತಿಭಟನಾ ಮೆರವಣಿಗೆ ಮೂಲಕ ಕನಕದಾಸವೃತ್ತಕ್ಕೆ ತೆರಳಿ ಜಿಲ್ಲಾಧಿ ಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ರೈತರು ಸೇರಿದಂತೆವರ್ತಕರು, ಉದ್ದಿಮೆದಾರರು, ಸಂಘ ಸಂಸ್ಥೆಗಳ ಪದಾ ಧಿಕಾರಿಗಳು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Tawargera: ಚಲಿಸುತ್ತಿದ್ದ ಬಸ್ಸಿಗೆ ಡಿಕ್ಕಿ ಹೊಡೆದು ನಂತರ ಕುರಿಗಳ ಮೇಲೆ ಹರಿದ ಕ್ಯಾಂಟರ್
Gangavathi: ಪತ್ನಿ ವರದಕ್ಷಿಣೆ ತಂದಿಲ್ಲ ಎಂದು ಮನೆಗೆ ಬೀಗ ಹಾಕಿ ಪತಿ ಹಾಗೂ ಮನೆಯವರು ಪರಾರಿ
Koppala ಗವಿಮಠ ಜಾತ್ರೆಗೆ ನಟ ಅಮಿತಾಬ್ ಬಚ್ಚನ್?
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
MUST WATCH
ಹೊಸ ಸೇರ್ಪಡೆ
Kerala High Court: ಸಿಎಂಗೆ ಕಪ್ಪು ಬಾವುಟ ಪ್ರದರ್ಶನ ತಪ್ಪಲ್ಲ
Supreme Court: ಜ್ಞಾನವಾಪಿ ಮತ್ತಷ್ಟು ಸಮೀಕ್ಷೆಗೆ ಕೋರಿಕೆ: ಮಸೀದಿಗೆ ನೋಟಿಸ್
Sangli: ಮಹಾರಾಷ್ಟ್ರ ರಸಗೊಬ್ಬರ ಘಟಕದಲ್ಲಿ ವಿಷಾನಿಲ ಸೋರಿಕೆ: 3 ಸಾವು
ಮೆಜೆಂಟಾ ಮೊಬಿಲಿಟಿ ಸಂಸ್ಥೆ ವಾಹನ ಬಳಗಕ್ಕೆ ಟಾಟಾ ಏಸ್ ಇವಿ ಸೇರ್ಪಡೆ
Supreme Court: ತುರ್ತು ಪರಿಸ್ಥಿತಿ ವೇಳೆ ಸಂಸತ್ತು ಮಾಡಿದ್ದೆಲ್ಲ ತಪ್ಪಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.