ಕಾರವಾರದ ಪ್ಲಾಸ್ಟಿಕ್ ತ್ಯಾಜ್ಯ ಇನ್ಮುಂದೆ ಬೆಳಗಾವಿಗೆ
Team Udayavani, Nov 24, 2019, 2:26 PM IST
ಕಾರವಾರ: ಇಲ್ಲಿನ ಶಿರವಾಡ ಕಸ ಸಂಗ್ರಹ ಘನತ್ಯಾಜ್ಯ ಘಟಕದಿಂದ ಪ್ಲಾಸ್ಟಿಕ್‌ನ್ನು ಇನ್ನು ಮುಂದೆ ಪ್ರತಿವಾರ ಟ್ರಕ್‌ನಲ್ಲಿ ಬೆಳಗಾವಿಗೆ ಸಾಗಿಸಲಾಗುತ್ತಿದೆ.
ಶಿರವಾಡ ಘಟಕದಲ್ಲಿನ ಬೇರ್ಪಡಿಸಿದ ಪ್ಲಾಸ್ಟಿಕ್‌ನ್ನು ಸಿಮೆಂಟ್ ಕಾರ್ಖಾನೆಯಲ್ಲಿ ಮರುಬಳಸಲು ಕೊಂಡಯ್ಯಲಾಗುತ್ತಿದೆ. ಜಿಲ್ಲೆಯಲ್ಲಿ ಇಂಥ ಪ್ರಯೋಗವನ್ನು ಮೊದಲ ಬಾರಿಗೆ ಆರಂಭಿಸಿದ ಕೀರ್ತಿ ಕಾರವಾರ ನಗರಸಭೆಗೆ ಪ್ರಾಪ್ತವಾಗಿದೆ. ಪ್ಲಾಸ್ಟಿಕ್ ತುಂಬಿದ 45 ಬಂಡಲ್‌ಗಳನ್ನು ಟ್ರಕ್ ಮೊದಲ ಬಾರಿಗೆ ಹೊತ್ತು ಬೆಳಗಾವಿಯತ್ತ ಸಾಗಿತು.ತ್ಯಾಜ್ಯ ಪ್ಲಾಸ್ಟಿಕ್ ಇದೀಗ ದಾಲ್ಮಿಯಾ ಸಿಮೆಂಟ್‌ಕಾರ್ಖಾನೆಯಲ್ಲಿ ಮರು ಬಳಕೆಯಾಗಲಿದೆ. ಇನ್ನು ಮುಂದೆ ಪ್ರತಿವಾರಕ್ಕೊಮ್ಮೆ ಪ್ಲಾಸ್ಟಿಕ್ ಕಸ ತೆಗದುಕೊಂಡು ಹೋಗಲು ದಾಲ್ಮಿಯಾ ಕಂಪನಿ ಟ್ರಕ್ ಬರಲಿದೆ. ಇದಕ್ಕಾಗಿ ನಗರಸಭೆಗೆ ಉಚಿತ ಸೇವೆಯನ್ನು ದಾಲ್ಮಿಯಾ ಕಂಪನಿ ನೀಡಲು ಮುಂದಾಗಿದೆ.
ಬೆಳಗಾವಿ ಯರವಾಡದಲ್ಲಿನ ಸಿಮೆಂಟ್ ಘಟಕಕ್ಕೆ ಕಾರವಾರದ ತ್ಯಾಜ್ಯ ಪ್ಲಾಸ್ಟಿಕ್ ಸಾಗಟವಾಗಲಿದೆ. ಪರಿಸರ ರಕ್ಷಣೆ ದೃಷ್ಟಿಯಿಂದ ಇದು ಮಹತ್ವದ ಹೆಜ್ಜೆಯಾಗಿದ್ದು, ಶಿರವಾಡದ ಜನತೆ ಸಹ ತ್ಯಾಜ್ಯ ಪ್ರತಿವಾರ ಸಾಗಾಟ ಆಗುವುದರಿಂದ ಸಮಾಧಾನದ ನಿಟ್ಟುಸಿರು
ಬಿಡುವ ಲಕ್ಷಣಗಳಿವೆ. ದಾಲ್ಮಿಯಾ ಕಂಪನಿ ಪ್ಲಾಸ್ಟಿಕ್ ಸಾಗಾಟದ ಸೇವೆ ನೀಡಲು ಮುಂದಾಗಿದೆ ಎಂದು. ತ್ಯಾಜ್ಯದ ಮರುಬಳಕೆ ಪರ್ಯಾಯವನ್ನು ಜಿಲ್ಲೆಯಲ್ಲಿ ಮೊದಲ ಬಾರಿಗೆ ಕಾರವಾರ ನಗರಸಭೆ ಬಳಸಿಕೊಂಡಿದೆ ಎಂದು ಪೌರಾಯುಕ್ತ ಎಸ್.ಯೋಗೇಶ್ವರ ತಿಳಿಸಿದ್ದಾರೆ. ಶಿರವಾಡದ ಘನತ್ಯಾಜ್ಯ ಘಟಕದ ಸೂಕ್ತ ನಿರ್ವಹಣೆಗೆ ಸಹ ಹಲವು ಉಪ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dandeli: ಅಧಿಕಾರಿಗಳಿಂದ ರೈಲು ಮಾರ್ಗದ ವಿದ್ಯುದ್ದೀಕರಣ ಪರಿಶೀಲನೆ
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
MUST WATCH
ಹೊಸ ಸೇರ್ಪಡೆ
Road Mishap: ಶಬರಿಮಲೆ ಯಾತ್ರಿಕರಿದ್ದ ಬಸ್ ಡಿಕ್ಕಿ: ಮೊಪೆಡ್ ಸವಾರ ಸಾವು
Madhu Bangarappa ; ಟ್ರೋಲ್ ಗಳಿಗೆ ಬಗ್ಗಲ್ಲ.. ಕಿಡಿ ಕಿಡಿಯಾದ ಶಿಕ್ಷಣ ಸಚಿವ!
Vijayapura: 22 ಲಕ್ಷ ರೂ.ಮೌಲ್ಯದ ಗಾಂಜಾ ಜಪ್ತಿ, 2 ಕಾರು ವಶಕ್ಕೆ ಪಡೆದ ಪೊಲೀಸರು
IFFI 2024;ರಾಜಕೀಯ ಕಾರಣಗಳಿಂದಲೇ ಸಾವರ್ಕರ್‌ಗೆ ಸಿಗಬೇಕಾದ ಮನ್ನಣೆ ಸಿಕ್ಕಿಲ್ಲ:ರಣದೀಪ್ ಹೂಡಾ
Bidar; ಲಂಚ ಸ್ವೀಕರಿಸುತ್ತಿದ್ದ ಬುಡಾ ಆಯುಕ್ತ ಸೇರಿ ಮೂವರು ಲೋಕಾಯುಕ್ತ ಬಲೆಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.