ಆಶ್ರಮದ ಸಮಾಜಪರ ಕಾರ್ಯಗಳಿಗೆ ಸಹಕಾರ ಅಗತ್ಯ: ರಘು ಮೂಲ್ಯ

Team Udayavani, Nov 24, 2019, 3:00 PM IST

mumbai-tdy-2

ಮುಂಬಯಿ, ನ. 23: ಗೋರೆಗಾಂವ್‌ ಪೂರ್ವದ ಸಹಕಾರ್‌ವಾಡಿಯ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವತಿಯಿಂದ ವೈದ್ಯಕೀಯ ಸಹಾಯಕ ನಿಧಿ ಸಂಗ್ರಹಕ್ಕಾಗಿ ಯುವ ತಂಡದ ನೇತೃತ್ವದಲ್ಲಿ ನ. 17 ರಂದು ಲಾಡ್ಸ್‌ ಆಫ್‌ ಸದ್ಗುರು ತಂಡದಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ, ಸಂಗೀತ ನೃತ್ಯ ವೈಭವ ನಡೆಯಿತು.

ಲಾಡ್ಸ್‌ ಆಫ್‌ ಸದ್ಗುರು ತಂಡದ ಕಲಾವಿದರಾದ ರಚನಾ, ಪ್ರೇಕ್ಷಾ, ಶ್ರೇಯಾ ಅವರಿಂದ ನೃತ್ಯ ವೈವಿಧ್ಯ ರುಬರೂ ಪ್ರೋಡಕ್ಷನ್ಸ್‌ ಲತೇಶ್‌ ಪೂಜಾರಿ ಮತ್ತು ಪ್ರಮಿತ್‌ ಬಾರೊಟ್‌ ನಿರ್ದೇಶನದಲ್ಲಿ ಘರ್ವಾಳೆ ದುಲನಿಯಾ ದೇ ಜಾಯೆಂಗೆ ಹಿಂದಿ ಸಾಂಸಾರಿಕ ಹಾಸ್ಯಮಯ ನಾಟಕದ ಕಾರ್ಯಕ್ರಮವು ಸಾಂತಾಕ್ರೂಸ್‌ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಸಾಂಸ್ಕೃತಿಕ ಸಭೆಯಲ್ಲಿ ಸದ್ಗುರು ಕ್ಯಾಲೆಂಡರ್‌ 2020ನ್ನು ಅತಿಥಿ- ಗಣ್ಯರು ಅನಾವರಣಗೊಳಿಸಿದರು. ಅರುಣಾ ಗಣೇಶ್‌ ಶೆಟ್ಟಿ ವಿರಾರ್‌ ದಂಪತಿ ಹಾಗೂ ನಿರಂಜನಿ ಪದ್ಮನಾಭ ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಅಧ್ಯಕ್ಷ ಚಂದ್ರ ಶೇಖರ್‌ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವೈದ್ಯಕೀಯ ಸಹಾಯಾರ್ಥವಾಗಿ ಮಾಡುವ ಈ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಡಾ| ವಿಜಯ್‌ ಕುಮಾರ್‌ ಶೆಟ್ಟಿ ತೋನ್ಸೆ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಆಶ್ರಮದ ಗೌರವ ಅಧ್ಯಕ್ಷರಾದ ಮೋಹನದಾಸ್‌ ಪೂಜಾರಿ ಅವರೊಂದಿಗೆ ತನ್ನ ಹಲವಾರು ದಶಕದ ಸಂಬಂಧ ಮತ್ತು ಅವರ ಮುಗ್ಧ ವ್ಯಕ್ತಿತ್ವದ ಬಗ್ಗೆ ತಿಳಿಸಿದರು ಮತ್ತು ಆಶ್ರಮದ ಕಾರ್ಯಾಚರಣೆಯನ್ನು ಪ್ರಶಂಸಿಸಿದರು. ಇನ್ನೋರ್ವ ಅತಿಥಿ ಡಾ| ನಿಕೇಶ್‌ ಮೂಲ್ಯ

ಅವರು ವೈದ್ಯಕೀಯ ಶುಶ್ರೂಷೆ ಮತ್ತು ನಾವು ನಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡುವುದು ಅವಶ್ಯಕ ಎಂದು ನುಡಿದು, ಇನ್ನು ಮುಂದಕ್ಕೆ ಆಶ್ರಮದ ಸಮಾಜಪರ ಕಾರ್ಯದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ನುಡಿದು ಶುಭ ಹಾರೈಸಿದರು.

ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ ಅವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಆಶ್ರಮವು ತನ್ನ 55 ವರ್ಷದ ಕಾರ್ಯಕಾಲದಲ್ಲಿಆರೋಗ್ಯಮಖೀ ಮತ್ತು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೆ ಯೋಗ, ಕರಾಟೆ ತರಬೇತಿ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ನೃತ್ಯ ತರಬೇತಿ, ಸಂಗೀತ ಮತ್ತು ಧ್ಯಾನ, ಕ್ರೀಡಾ ಪಂದ್ಯ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಹಾಯಾರ್ಥಕವಾಗಿ ಸಹಕರಿಸಲಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿಯಾದ ಸಂತೋಷ್‌ ಸಾಲ್ಯಾನ್‌ ಅವರು ಕಾರ್ಯಕ್ರಮ ನಿರೂಪಿಸಿದರು. ವೈದ್ಯಕೀಯ ನಿಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಮೂಲ್ಯ ಅವರು, ನಿಧಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ತನ್ನ ಅಭಿನಂದನೆಯನ್ನು ವ್ಯಕ್ತಪಡಿಸಿದರು.

ವೈದ್ಯಕೀಯ ನಿಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್‌ ಪೂಜಾರಿ, ಜನಾರ್ದನ್‌ ಕೋಟ್ಯಾನ್‌, ಪ್ರೇಮಲತಾ ಮೂಲ್ಯ, ಮುಖ್ಯ ಸಂಯೋಜಕ ಡಾ| ಶೈಲೇಶ್‌ ಜಿ., ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಸಮಿತಿಯ ಶಶಿಕಲಾ ಕೋಟ್ಯಾನ್‌, ಬಬಿತಾ ಕೋಟ್ಯಾನ್‌, ಶಾಂಭವಿ ಪೂಜಾರಿ, ಪೂರ್ಣಿಮಾ ಶೆಟ್ಟಿ ಇವರು ಸಹಕರಿಸಿದರು. ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಗೋರೆಗಾಂವ್‌ ಪೂರ್ವದ ಸಹಕಾರ್‌ವಾಡಿಯ ಶ್ರೀ ಸದ್ಗುರು ನಿತ್ಯಾನಂದ ಆಶ್ರಮದ ವತಿಯಿಂದ ವೈದ್ಯಕೀಯ ಸಹಾಯಕ ನಿಧಿ ಸಂಗ್ರಹಕ್ಕಾಗಿ ಯುವ ತಂಡದ ನೇತೃತ್ವದಲ್ಲಿ ನ. 17 ರಂದು ಲಾಡ್ಸ್‌ ಆಫ್‌ ಸದ್ಗುರು ತಂಡದಿಂದ ಸಾಂಸ್ಕೃತಿಕ ನೃತ್ಯ ವೈವಿಧ್ಯ, ಸಂಗೀತ ನೃತ್ಯ ವೈಭವ ನಡೆಯಿತು.

ಲಾಡ್ಸ್‌ ಆಫ್‌ ಸದ್ಗುರು ತಂಡದ ಕಲಾವಿದರಾದ ರಚನಾ, ಪ್ರೇಕ್ಷಾ, ಶ್ರೇಯಾ ಅವರಿಂದ ನೃತ್ಯ ವೈವಿಧ್ಯ ರುಬರೂ ಪ್ರೋಡಕ್ಷನ್ಸ್‌ ಲತೇಶ್‌ ಪೂಜಾರಿ ಮತ್ತು ಪ್ರಮಿತ್‌ ಬಾರೊಟ್‌ ನಿರ್ದೇಶನದಲ್ಲಿ ಘರ್ವಾಳೆ ದುಲನಿಯಾ ದೇ ಜಾಯೆಂಗೆ ಹಿಂದಿ ಸಾಂಸಾರಿಕ ಹಾಸ್ಯಮಯ ನಾಟಕದ ಕಾರ್ಯಕ್ರಮವು ಸಾಂತಾಕ್ರೂಸ್‌ ಬಿಲ್ಲವ ಭವನದ ಬ್ರಹ್ಮಶ್ರೀ ನಾರಾಯಣ ಸಭಾಗೃಹದಲ್ಲಿ ವಿಜೃಂಭಣೆಯಿಂದ ಜರಗಿತು. ಕಾರ್ಯಕ್ರಮದ ಸಾಂಸ್ಕೃತಿಕ ಸಭೆಯಲ್ಲಿ ಸದ್ಗುರು ಕ್ಯಾಲೆಂಡರ್‌ 2020ನ್ನು ಅತಿಥಿ- ಗಣ್ಯರು ಅನಾವರಣಗೊಳಿಸಿದರು. ಅರುಣಾ ಗಣೇಶ್‌ ಶೆಟ್ಟಿ ವಿರಾರ್‌ ದಂಪತಿ ಹಾಗೂ ನಿರಂಜನಿ ಪದ್ಮನಾಭ ಕೋಟ್ಯಾನ್‌ ಅವರನ್ನು ಸಮ್ಮಾನಿಸಲಾಯಿತು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿಯ ಅಧ್ಯಕ್ಷ ಚಂದ್ರ ಶೇಖರ್‌ ಪೂಜಾರಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ವೈದ್ಯಕೀಯ ಸಹಾಯಾರ್ಥವಾಗಿ ಮಾಡುವ ಈ ಕೆಲಸ ಶ್ಲಾಘನೀಯ ಎಂದು ತಿಳಿಸಿದರು.

ಡಾ| ವಿಜಯ್‌ ಕುಮಾರ್‌ ಶೆಟ್ಟಿ ತೋನ್ಸೆ ಅವರು ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿ, ಆಶ್ರಮದ ಗೌರವ ಅಧ್ಯಕ್ಷರಾದ ಮೋಹನದಾಸ್‌ ಪೂಜಾರಿ ಅವರೊಂದಿಗೆ ತನ್ನ ಹಲವಾರು ದಶಕದ ಸಂಬಂಧ ಮತ್ತು ಅವರ ಮುಗ್ಧ ವ್ಯಕ್ತಿತ್ವದ ಬಗ್ಗೆ ತಿಳಿಸಿದರು ಮತ್ತು ಆಶ್ರಮದ ಕಾರ್ಯಾಚರಣೆಯನ್ನು ಪ್ರಶಂಸಿಸಿದರು. ಇನ್ನೋರ್ವ ಅತಿಥಿ ಡಾ| ನಿಕೇಶ್‌ ಮೂಲ್ಯ

ಅವರು ವೈದ್ಯಕೀಯ ಶುಶ್ರೂಷೆ ಮತ್ತು ನಾವು ನಮ್ಮ ಆರೋಗ್ಯದ ಬಗ್ಗೆ ಚಿಂತನೆ ಮಾಡುವುದು ಅವಶ್ಯಕ ಎಂದು ನುಡಿದು, ಇನ್ನು ಮುಂದಕ್ಕೆ ಆಶ್ರಮದ ಸಮಾಜಪರ ಕಾರ್ಯದಲ್ಲಿ ನನ್ನ ಸಂಪೂರ್ಣ ಸಹಕಾರವಿದೆ ಎಂದು ನುಡಿದು ಶುಭ ಹಾರೈಸಿದರು.

ಆಶ್ರಮದ ಅಧ್ಯಕ್ಷರಾದ ರಘು ಮೂಲ್ಯ ಅವರು ತನ್ನ ಪ್ರಾಸ್ತಾವಿಕ ಭಾಷಣದಲ್ಲಿ ಆಶ್ರಮವು ತನ್ನ 55 ವರ್ಷದ ಕಾರ್ಯಕಾಲದಲ್ಲಿಆರೋಗ್ಯಮಖೀ ಮತ್ತು ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿದೆ. ಅಲ್ಲದೆ ಯೋಗ, ಕರಾಟೆ ತರಬೇತಿ, ಭಾರತೀಯ ಸಂಸ್ಕೃತಿಯ ಪ್ರತೀಕವಾದ ನೃತ್ಯ ತರಬೇತಿ, ಸಂಗೀತ ಮತ್ತು ಧ್ಯಾನ, ಕ್ರೀಡಾ ಪಂದ್ಯ ಇತ್ಯಾದಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯ ಸಹಾಯಾರ್ಥಕವಾಗಿ ಸಹಕರಿಸಲಿದೆ ಎಂದು ತಿಳಿಸಿದರು.

ಪ್ರಧಾನ ಕಾರ್ಯದರ್ಶಿಯಾದ ಸಂತೋಷ್‌ ಸಾಲ್ಯಾನ್‌ ಅವರು ಕಾರ್ಯಕ್ರಮ ನಿರೂಪಿಸಿದರು. ವೈದ್ಯಕೀಯ ನಿಧಿ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಮೂಲ್ಯ ಅವರು, ನಿಧಿಗೆ ಸಹಕರಿಸಿದ ಎಲ್ಲಾ ದಾನಿಗಳಿಗೆ ಹಾಗೂ ಕಾರ್ಯಕರ್ತರಿಗೆ ತನ್ನ ಅಭಿನಂದನೆಯನ್ನು ವ್ಯಕ್ತಪಡಿಸಿದರು.

ವೈದ್ಯಕೀಯ ನಿಧಿಯಲ್ಲಿ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸತೀಶ್‌ ಪೂಜಾರಿ, ಜನಾರ್ದನ್‌ ಕೋಟ್ಯಾನ್‌, ಪ್ರೇಮಲತಾ ಮೂಲ್ಯ, ಮುಖ್ಯ ಸಂಯೋಜಕ ಡಾ| ಶೈಲೇಶ್‌ ಜಿ., ಕೋಶಾಧಿಕಾರಿ ಮುಂಡಪ್ಪ ಮೂಲ್ಯ, ಸಮಿತಿಯ ಶಶಿಕಲಾ ಕೋಟ್ಯಾನ್‌, ಬಬಿತಾ ಕೋಟ್ಯಾನ್‌, ಶಾಂಭವಿ ಪೂಜಾರಿ, ಪೂರ್ಣಿಮಾ ಶೆಟ್ಟಿ ಇವರು ಸಹಕರಿಸಿದರು. ಫಲಾಹಾರದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.

ಟಾಪ್ ನ್ಯೂಸ್

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಲಕ್ಸಂಬರ್ಗ್‌ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ

ಇಂಗ್ಲೆಂಡ್‌ನ‌ ರಾದರಮ್‌ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ

Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ

Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’

Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್‌

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.