ವಕೀಲರಿಗೆ ನಾಯಕತ್ವ ಗುಣ ಅಗತ್ಯ
ಅನ್ಯಾಯಕ್ಕೊಳಗಾದವರ ಪರ ವಾದಿಸಿ ನ್ಯಾಯ ಕೊಡಿಸಿ: ಪ್ರೊ| ರೆಡಿ
Team Udayavani, Nov 24, 2019, 4:07 PM IST
ಚಿತ್ರದುರ್ಗ: ವಕೀಲ ವೃತ್ತಿಯಿಂದ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಿದೆ ಎಂದು ದಾವಣಗೆರೆ ಆರ್.ಎಲ್. ಕಾನೂನು ಕಾಲೇಜು ಪ್ರಾಚಾರ್ಯ ಪ್ರೊ| ಬಿ.ಎಸ್. ರೆಡ್ಡಿ ಹೇಳಿದರು.
ನಗರದ ಸರಸ್ವತಿ ಕಾನೂನು ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಬೆಂಗಳೂರು ವಲಯ ಮಟ್ಟದ ಯುವಜನೋತ್ಸವ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ವಕೀಲರಿಗೆ ನಾಯಕತ್ವ ಗುಣ ಇರಬೇಕು. ಸಮಾಜದಲ್ಲಿ ಯಾರಿಗೇ ಅನ್ಯಾಯವಾದರೂ ಅವರ ಪರವಾಗಿ ನ್ಯಾಯಯುತ ಹೋರಾಟ ಮಾಡಿ ನ್ಯಾಯ ಕೊಡಿಸಬೇಕು ಕರೆ ನೀಡಿದರು. ಕಾನೂನು ವಿದ್ಯಾರ್ಥಿಗಳು ವಿವಿಧ ಕೌಶಲ್ಯಗಳನ್ನು ಅಳವಡಿಕೊಂಡರೆ ವೃತ್ತಿಯಲ್ಲಿ ಮುಂದುವರಿಯಲು ಸಹಕಾರಿಯಾಗುತ್ತದೆ. ವಿಶೇಷ ವ್ಯಕ್ತಿತ್ವ ಹಾಗೂ ಸತತ ಪರಿಶ್ರಮದಿಂದ ವೃತ್ತಿಯಲ್ಲಿ ಉನ್ನತ ಸ್ಥಾನಮಾನ ಪಡೆಯಬಹುದು. ಕೇವಲ ಪಠ್ಯಗಳಿಗೆ ಅಂಟಿಕೊಳ್ಳದೆ ಪ್ರಯೋಗಶೀಲ ಗುಣಗಳನ್ನು ಬೆಳೆಸಿಕೊಳ್ಳಬೇಕು.
ಪ್ರಯೋಗಾತ್ಮಕವಾಗಿದ್ದಾಗ ಮಾತ್ರ ವಕೀಲರಾಗಿ ನೀವು ಯಶ ಕಾಣಲು ಸಾಧ್ಯ. ನಿರಂತರ ಪರಿಶ್ರಮ ಇದ್ದರೆ ನೀವು ನ್ಯಾಯಾಧೀಶರಾಗಬಹುದು ಎಂದರು. ಯುವಜನೋತ್ಸವದಿಂದ ನಡವಳಿಕೆ, ಶ್ರಮ, ಬದ್ಧತೆ, ಕ್ರಿಯಾಶೀಲತೆ, ಸಾಮರ್ಥ್ಯ, ತೃಪ್ತಿ, ಮಾನವೀಯತೆ, ಸಮಾನತೆ ಬಗ್ಗೆ ತಿಳಿದು ಅನುಸರಿಸಬೇಕು. ಹಿರಿಯರ ಗಾದೆಮಾತುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ವ್ಯಕ್ತಿತ್ವ ವಿಕಸನವಾಗುತ್ತದೆ ಎಂದು ತಿಳಿಸಿದರು. ಹಿರಿಯ ನ್ಯಾಯವಾದಿ ಫಾತ್ಯರಾಜನ್
ಮಾತನಾಡಿ, ಇಂದು ಕಾನೂನು ವಿದ್ಯಾರ್ಥಿಗಳಿಗೆ ಎಲ್ಲೆಡೆ ತೀವ್ರ ಸ್ಪರ್ಧೆ ಇದೆ.
ವೃತ್ತಿಗೆ ಬರುವವರಿಗೆ ಬದ್ಧತೆ ಇರಬೇಕು. ಕಾನೂನು ಪದವಿ ಮುಗಿಸಿ ವಕೀಲಿ ವೃತ್ತಿಗೆ ಬಂದು ನ್ಯಾಯಾದ್ಧೀಶರ ಮುಂದೆ ನಿಂತಾಗ ಶಿಸ್ತು ಇರಬೇಕು. ನೀವು ವಕಾಲತ್ತು ಮಾಡುವ ಕೇಸುಗಳ ಬಗ್ಗೆ ಸ್ಪಷ್ಟವಾದ ತಿಳಿವಳಿಕೆ ಹೊಂದಿರಬೇಕು ಎಂದು ಸಲಹೆ ನೀಡಿದರು.
ಸರಸ್ವತಿ ಕಾನೂನು ಕಾಲೇಜಿನ ಕಾರ್ಯದರ್ಶಿ ಹಾಗೂ ಹಿರಿಯ ನ್ಯಾಯವಾದಿ ಡಿ.ಕೆ. ಶೀಲಾ ಮಾತನಾಡಿ, ವಕೀಲ ವೃತ್ತಿಗೆ ಬರುವವರ ಜೀವನ ಸ್ವಚ್ಛವಾಗಿರಬೇಕು. ಕನ್ನಡದ ಜೊತೆ ಬೇರೆ ಭಾಷೆಗಳನ್ನು ಸಹ ಕಲಿಯಬೇಕು ಎಂದು ತಿಳಿಸಿದರು. ಸರಸ್ವತಿ ಕಾನೂನು ಕಾಲೇಜಿನ ಪ್ರಾಚಾರ್ಯರಾದ ಎಂ.ಎಸ್. ಸುಧಾದೇವಿ, ಸಹಾಯಕ ಪ್ರಾಧ್ಯಾಪಕ ಡಾ| ರವಿಕುಮಾರ್, ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!
MUST WATCH
ಹೊಸ ಸೇರ್ಪಡೆ
Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ
Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ
Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್ ರೈ
MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ
Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.