ಸೂಫಿ -ಶರಣರ ಸಂಗಮ ಕೇಂದ್ರ ಬೀದರ್‌

ಸೂಫಿ ಸಾಹಿತ್ಯ ಪರಿಷತ್‌ ಉದ್ಘಾಟನೆ"ಬೀದರ್‌ ಜಿಲ್ಲೆ ಸೂಫಿಗಳು' ಕೃತಿ ಬಿಡುಗಡೆ

Team Udayavani, Nov 24, 2019, 4:51 PM IST

24-November-22

ಹುಮನಾಬಾದ: ಬೀದರ್‌ ಜಿಲ್ಲೆ ಸೂಫಿ -ಶರಣದ ಸಂಗಮದ ಕೇಂದ್ರ. ಜನಸಾಮಾನ್ಯರ ಭಾವನೆಗೆ ನೇರವಾಗಿ ಸ್ಪಂದಿಸಿ, ಹಿಂದೂ-ಮುಸ್ಲಿಮರ ಮಧ್ಯೆ ಪರಸ್ಪರ ಭಾವೈಕ್ಯ ಬೆಸೆಯುವುದೇ ಸೂಫಿ ಸಾಹಿತ್ಯದ ಮೂಲ ಉದ್ದೇಶವಾಗಿತ್ತು ಎಂದು ಹಿರಿಯ ಸಾಹಿತಿ ರಂಜಾನ್‌ ದರ್ಗಾ ಹೇಳಿದರು.

ಪಟ್ಟಣದ ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಮಾಣಿಕಪ್ರಭು ಸಾಹಿತ್ಯ ಸೇವಾ ಪ್ರತಿಷ್ಠಾನ ಶನಿವಾರ ಏರ್ಪಡಿಸಿದ್ದ ಸೂಫಿ ಸಾಹಿತ್ಯ ಪರಿಷತ್‌ ಉದ್ಘಾಟನೆ ಹಾಗೂ ಸಾಹಿತಿ ಐ.ಎಸ್‌.ಶಕೀಲ್‌ ಅವರ “ಬೀದರ್‌ ಜಿಲ್ಲೆ ಸೂಫಿಗಳು’ ಕೃತಿ ಸಮಾರಂಭದಲ್ಲಿ ಅವರು ಮಾತನಾಡಿದರು.

ಸೂಫಿಗಳು ಯಾವತ್ತೂ ಪವಾಡಗಳನ್ನು ಮಾಡುತ್ತಿರಲಿಲ್ಲ ಆದರೆ ಮಾಡಿದ್ದೆಲ್ಲವೂ ಪವಾಡವಾಗುತ್ತಿತು ಎನ್ನುವುದೇ ಅವರ ವಿಶೇಷ. ಅನಾರೋಗ್ಯದಿಂದ ಹಾಸಿಗೆ ಹಿಡಿದ ಮಗುವಿನ ತಲೆ ಮೇಲೆ ಕೈ ಇಟ್ಟು ಆಶೀರ್ವದಿಸಿದರೆ ಗುಣಮುಖ ಆಗತ್ತದೋ ಇಲ್ಲವೋ ಎರಡನೇ ವಿಷಯ. ಆದರೇ ಆ ಬಗ್ಗೆ ಹೊಂದಿರುವ ಆತ್ಮವಿಶ್ವಾಸ, ಧನಾತ್ಮಕ ಚಿಂತನೆ ಮೂಲಕ ನಂಬುವಂತೆ ಮಾಡುವ ಮನಸ್ಸಿನಲ್ಲೇ ಅದನ್ನು ಗುಣಮುಖವಾಗಿಸುವ ಶಕ್ತಿ ಇರುತ್ತದೆ ಎಂಬುದೇ ಇರದಲ್ಲಿನ ವಿಶೇಷ ಎಂದರು.

ನಂಬಿಕೆಯಲ್ಲಿ ಎಷ್ಟು ಶಕ್ತಿ ಇದೆ ಎಂಬುದಕ್ಕೆ ಬಸವಣ್ಣನವರ “ನೀನೊಲಿದರೆ ಕೊರಡು ಕೊನರುವುದಯ್ಯ, ನೀನೊಲಿದಲೆ ಬರಡು ಹಯನುವುದಯ್ಯ, ನೀನೊಲಿದರೆ ವಿಷವೂ ಅಂಮೃತವಹುದಯ್ಯ’ ಎಂಬ ವಚನ ಉತ್ತಮ ನಿದರ್ಶನ. ಸೂಫಿಗಳು, ಶರಣರು, ಸಂತರು, ದಾಸರು ಮಾಡಿದ್ದು ಇದನ್ನೇ. ಸಂತರೆಲ್ಲರೂ ಸರ್ವಧರ್ಮ ಸಮನ್ವಯತೆ ಸಾರುತ್ತಾರೆ ಎನ್ನುವುದಕ್ಕೆ ಈ ಭಾಗದ ಮಾಣಿಕಪ್ರಭುಗಳು ಉತ್ತಮ ನಿದರ್ಶನ ಎಂದರು. ಮುಸ್ಲಿಂ ಧರ್ಮ, ಲಿಂಗಾಯತ ಧರ್ಮಗಳೆರಡೂ ಏಕದೇವೋಪಾಸನೆಯನ್ನು ಬಲವಾಗಿ  ಬಿದವು.
ಆದರೆ ಅದನ್ನೀಗ ಲಿಂಗಾಯತರಾರೂ ಪಾಲಿಸುತ್ತಿಲ್ಲ. ವಿಚಿತ್ರ ಎಂದರೇ 400ವರ್ಷಗಳ ಹಿಂದೆ ಗುರುನಾನಕರು “ಏಕ ಓಂಕಾರ’ ಎಂಬ ಮಂತ್ರ ಪಠಣ ಮೂಲಕ ಏಕದೇವೋಪಾಸನೆ ಅಕ್ಷರಶಃ ಪಾಲಿಸಿಕೊಂಡು ಬರುವಂತೆ ಸಾರಿದರು. ಅದನ್ನೀಗ ಸಿಖ್ಖರೆಲ್ಲರೂ ಪಾಲಿಸಿಕೊಂಡು ಬರುತ್ತಿದ್ದಾರೆ.

ಚಾತುವರ್ಣ ಪದ್ಧತಿ ಅಳಿಸಿ, ಎಲ್ಲರನ್ನೂ ಸಮಾನರನ್ನಾಗಿ ಕಾಣುವುದೇ ಸೂಫಿ, ಸಂತರು ಮತ್ತು ಶರಣರ ಮೂಲ ಉದ್ದೇಶ ಎಂದರು. ಬಿಡುವಿಲ್ಲದ ಪೊಲೀಸ್‌ ಇಲಾಖೆಯಲ್ಲಿ ಸೇವೆ ಮಾಡಿಕೊಂಡು ಸತತ ಪರಿಶ್ರಮದಿಂದ ಸಾಹಿತ್ಯ ಕೃಷಿ ಮಾಡಬಹುದು ಎಂಬುದಕ್ಕೆ ಐ.ಎಸ್‌.ಶಕೀಲ್‌ ನಿದರ್ಶನ. ಪ್ರತಿಭೆ ಎನ್ನುವುದು ಯಾವುದೇ ಭಾಷಾ ವಿಷಯ ಪಂಡಿತರಿಗೆ ಸೀಮಿತವಲ್ಲ. ಪೊಲೀಸ್‌.

ಕೆಎಸ್‌ಆರ್‌ಟಿಸಿ, ವೈದ್ಯಕೀಯ ಇಲಾಖೆ, ವ್ಯಾಪಾರ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ಇದ್ದ ಅದೆಷ್ಟೋ ಜನ ಸಾಹಿತ್ಯ ಕೃಷಿ ಮಾಡಿರುವ ನಿದರ್ಶನಗಳಿವೆ. ಆಯಾ ಇಲಾಖೆಯ ಹಿರಿಯ ಅಧಿಕಾರಿಗಳು ಅಂಥವರನ್ನು ಗುರುತಿಸಿ, ಪ್ರೋತ್ಸಾಹಿಸಲು ವೇದಿಕೆ ಕಲ್ಪಿಸಿಕೊಟ್ಟಾಗ ಇನ್ನೂ ಹೆಚ್ಚಿನ ಸಾಧನೆ ಮಾಡುಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಸಾಹಿತಿಗಳಾದ ಡಾ|ಸೋಮನಾಥ ಯಾಳವಾರ, ಡಿವೈಎಸ್ಪಿ ಎಸ್‌.ಬಿ.ಮಹೇಶ್ವರಪ್ಪ, ತಹಶೀಲ್ದಾರ್‌ ನಾಗಯ್ಯಸ್ವಾಮಿ ಹಿರೇಮಠ, ಕ್ಷೇತ್ರಶಿಕ್ಷಣಾಧಿಕಾರಿ ಶಿವರಾಚ³ ವಾಲಿ, ವೀರಭದ್ರೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಕಾರ್ಯದರ್ಶಿ ಗುಂಡಪ್ಪ ದೊಡ್ಮನಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಧರಿನಾಡು ಕನ್ನಡ ಸಂಘದ ಜಿಲ್ಲಾ ಗೌರವಾಧ್ಯಕ್ಷ ದೇಶಾಂಶ ಹುಡಗಿ ಐ.ಎಸ್‌.ಶಕೀಲ್‌ ಅವರ ಸಾಹಿತ್ಯ ಕೃಷಿ ಶ್ಲಾಘಿಸಿದರು. ರ್ಥಪ್ಪ ಭೀಮಶಟ್ಟಿ ವಚನಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿಗಳಾದ ಬಿ.ಎಸ್‌.ಖೂಬಾ, ಎಚ್‌. ಕಾಶಿನಾಥರೆಡ್ಡಿ, ಡಾ|ಗವಿಸಿದ್ದಪ್ಪ ಪಾಟೀಲ, ಪ್ರಭಾಕರ್‌ ಕುಲಕರ್ಣಿ, ಶಿವಸ್ವಾಮಿ ಚೀನಕೇರಾ, ರುಕ್ಮೋದ್ದಿನ್‌
ಇಸ್ಲಾಂಪೂರ, ವೀರಶಟ್ಟಿ ಇಮ್ರಾಪೂರ, ವೀರಣ್ಣ ಕುಂಬಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರವೀಂದ್ರರೆಡ್ಡಿ ಮಾಲಿ ಪಾಟೀಲ, ರಮೇಶ ಸಲಗರ್‌, ಶಿವರಾಜ ಮೇತ್ರೆ, ಸುನೀಲ ಬಿರಾದಾರ, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಸಚ್ಚಿದಾನಂದ ಮಠಪತಿ, ಮಾಜಿ ಅಧ್ಯಕ್ಷ ರವಿಕುಮಾರ ಭಂಡಾರಿ, ಕರವೇ ಅಧ್ಯಕ್ಷ ಮನೋಜಕುಮಾರ ಸಿತಾಳೆ, ಭೀಮಸೇನ ಗಾಯಕವಾಡ, ಶಾಂತವೀರ ಯಲಾಲ್‌, ವೀರಂತರೆಡ್ಡಿ ಜಂಪಾ, ಈಶ್ವರ ತಡೋಳಾ ಗಣ್ಯರು ಇದ್ದರು. ತಿಮ್ಮಣ್ಣ ಪ್ರಾರ್ಥಿಸಿದರು. ಸಾಹಿತಿ ಕೆ.ವೀರಾರೆಡ್ಡಿ ಸ್ವಾಗತಿಸಿದರು. ಭುವನೇಶ್ವರಿ ಗಂಗಶೆಟ್ಟಿ ನಿರೂಪಿಸಿದರು. ಉಮೇಶ ಮಠದ ವಂದಿಸಿದರು.

ಟಾಪ್ ನ್ಯೂಸ್

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

7-munirathna

Munirathna ವಿರುದ್ಧದ ಅತ್ಯಾಚಾರ ಆರೋಪ ರುಜುವಾತು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

10-mng

Train Service: ಮಂಗಳೂರು – ವಿಜಯಪುರ ವಿಶೇಷ ರೈಲು ವಿಸ್ತರಣೆ

9-

Delhi ಗಣರಾಜ್ಯೋತ್ಸವ; ಹೆಬ್ರಿಯ ಮಹಿಳೆಗೆ ವಿಶೇಷ ಅವಕಾಶ

8-utkhader

U. T. Khader: ಹೆಬ್ಟಾಳ್ಕರ್‌-ಸಿ.ಟಿ. ರವಿ ಪ್ರಕರಣ ಹಕ್ಕು ಭಾದ್ಯತಾ ಸಮಿತಿಗೆ: ಖಾದರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

Bengaluru: New Year celebrations allowed only till 1 am: Police Commissioner

Bengaluru ರಾತ್ರಿ 1 ಗಂಟೆವರೆಗೆ ಮಾತ್ರ ಹೊಸ ವರ್ಷಾಚರಣೆಗೆ ಅವಕಾಶ: ಪೊಲೀಸ್‌ ಆಯುಕ್ತ

12-heart-attack

Heart attack; ಹೃದಯಾಘಾತ: ಖಂಡಿತವಾಗಿಯೂ ನಿರ್ಲಕ್ಷ್ಯ ಬೇಡ

Jhansi: Teacher watched obscene video in class; student who noticed was beaten up

Jhansi: ತರಗತಿಯಲ್ಲಿ ಅಶ್ಲೀಲ ವಿಡಿಯೋ ನೋಡಿದ ಶಿಕ್ಷಕ; ಗಮನಿಸಿದ ವಿದ್ಯಾರ್ಥಿಗೆ ಥಳಿತ

11

Kasaragodu: ಹೊಳೆಯಲ್ಲಿ ಮುಳುಗಿ ಮೂವರು ಬಾಲಕರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.