ಸತ್ತವನ ಹೆಸರಲ್ಲಿ ನಕಲಿ ಗುರುತಿನ ಚೀಟಿ


Team Udayavani, Nov 24, 2019, 5:10 PM IST

Udayavani Kannada Newspaper

ಮಂಡ್ಯ: ಸತ್ತವನ ಹೆಸರಲ್ಲಿ ನಕಲಿ ಚುನಾವಣಾ ಗುರುತಿನ ಚೀಟಿ ಸೃಷ್ಟಿಸಿ ಆತನಿಗೆ ಸೇರಿದ ಎರಡು ಎಕರೆ ಜಮೀನನ್ನು ಹಲವರು ಕಬಳಿಸಿರುವ ಸಂಗತಿ ನಾಗಮಂಗಲ ತಾಲೂಕು ಹೊಣಕೆರೆ ಹೋಬಳಿ ಪಡುವಲಪಟ್ಟಣ ಗ್ರಾಮದಲ್ಲಿ ನಡೆದಿದೆ.

ಈ ಸಂಬಂಧ 11 ಮಂದಿ ಆರೋಪಿಗಳ ವಿರುದ್ಧ ಗೊಲ್ಲರಹಳ್ಳಿ ಗ್ರಾಮದ ಚಿನ್ನೇಗೌಡರ ಪತ್ನಿ ಸರೋಜಮ್ಮ ಅವರು ಜಿಲ್ಲಾ ಪೊಲೀಸ್‌ ಅಧೀಕ್ಷಕರಿಗೆ ದೂರು ಸಲ್ಲಿಸಿದ್ದಾರೆ. ಮಾರುತಿ ಸ್ಟೋನ್‌ ಕ್ರಷರ್‌ ಪಾಲುದಾರರಾದ ಕೆ.ಎಂ. ರವಿ, ಎಚ್‌.ಬಿ.ಪ್ರಕಾಶ್‌, ಎಸ್‌.ನಂಜಪ್ಪ, ಚನ್ನರಾಯಪಟ್ಟಣದ ಡಿ.ಆರ್‌. ರವಿಕುಮಾರ್‌, ಪಡುವಲಪಟ್ಟಣದ

ಎಚ್‌.ಪಿ.ಕೃಷ್ಣಪ್ಪ, ಬಂಕಾಪುರ ಗ್ರಾಮದ ಲಕ್ಷ್ಮಮ್ಮ, ಮಕ್ಕಳಾದ ಬಿ.ಕೆ.ಬೋರೇಗೌಡ, ಬಿ.ಕೆ.ಮರೀಗೌಡ, ಬಿ.ಕೆ.ನಂಜೇಗೌಡ, ಲಕ್ಷ್ಮಮ್ಮ ಸೊಸೆಯಂದಿರಾದ ಕಾಮಾಕ್ಷಮ್ಮ, ಭಾಗ್ಯಮ್ಮ, ಕಲಾವತಿ ವಿರುದ್ಧ ಸರೋಜಮ್ಮ ದೂರು ದಾಖಲಿಸಿದ್ದಾರೆ.

ಏನಿದು ಪ್ರಕರಣ?:  ನಾಗಮಂಗಲ ತಾಲೂಕಿನ ಗೊಲ್ಲರಹಳ್ಳಿ ಗ್ರಾಮದ ಹಳೇ ಸ.ನಂ.5ರ (ಹೊಸ ಸರ್ವೆ ನಂ.34) ಪಡುವಲಪಟ್ಟಣ ಗ್ರಾಮದ ವಾಸಿ ಹೊನ್ನೇಗೌಡರಿಗೆ ದರಖಾಸ್ತು ಆಧಾರದ ಮೇಲೆ 1961ನೇ ಸಾಲಿನಲ್ಲಿ ಸರ್ಕಾರದಿಂದ ಷರತ್ತಿಗೊಳಪಟ್ಟು ಎರಡು ಎಕರೆ ಜಮೀನು ಮಂಜೂರಾಗಿತ್ತು. ನಂತರ ಈ ಜಮೀನನ್ನು ಹೊನ್ನೇಗೌಡರು ಬಂಕಾಪುರ ಗ್ರಾಮದ ವಾಸಿ ನಂಜೇಗೌಡರಿಗೆ 1973ರಲ್ಲಿ ಆಧಾರ ಮಾಡಿದ್ದು, ನಂತರ 1974ರಲ್ಲಿ ಕ್ರಯ ಮಾಡಿಕೊಡಲಾಗಿದೆ. ಆದರೆ, ಸರ್ಕಾರದ ದರಖಾಸ್ತು ಷರತ್ತನ್ನು ಪಾಲಿಸದೆ ಮುಂಗಡವಾಗಿ ಜಮೀನನ್ನು ಮಾರಾಟ ಮಾಡಿದ್ದರಿಂದ ನಂಜೇಗೌಡರಿಗೆ ಇದುವರೆಗೂ ಖಾತೆಯಾಗದೆ ಆರ್‌ ಟಿಸಿಯು ಹೊನ್ನೇಗೌಡರ ಹೆಸರಿನಲ್ಲೇ ಮುಂದುವರಿದಿದೆ.

1988ರಲ್ಲಿ ಜಮೀನಿನ ಮಾಲೀಕ ಹೊನ್ನೇಗೌಡರು ನಿಧನರಾಗಿದ್ದಾರೆ. ಬಳಿಕ ಆರೋಪಿಗಳೆಲ್ಲರೂ ಜಮೀನನ್ನು ಕಬಳಿಸುವ ಉದ್ದೇಶದಿಂದ ಜಮೀನಿನ ವಾರಸುದಾರ ಹೊನ್ನೇಗೌಡರು ಮೃತರಾಗಿದ್ದರೂ ಪಡುವಲಪಟ್ಟಣ ಗ್ರಾಮದ ವಾಸಿ ದಾನಮ್ಮನ ಹಾರುವೇಗೌಡರ ಮಗ ಕೃಷ್ಣಪ್ಪ ಅವರನ್ನು ಮೃತ ಹೊನ್ನೇಗೌಡ ಎಂದು ಬಿಂಬಿಸಿ ನಕಲಿ ಚುನಾವಣಾ ಗುರುತಿನ ಚೀಟಿ ಮಾಡಿಸಿದ್ದಾರೆ. ಬಳಿಕ ಬಂಕಾಪುರ ಗ್ರಾಮದ ಕುಳ್ಳೇಗೌಡನ ಹೆಂಡತಿ ಲಕ್ಷ್ಮಮ್ಮ ಅವರಿಗೆ 2016ರ ಆಗಸ್ಟ್‌ ನಲ್ಲಿ ಬೋಗಸ್‌ ಕ್ರಯ ಮಾಡಿದ್ದಾರೆ. ನಂತರ ಅದೇ ವರ್ಷದ ಅಕ್ಟೋಬರ್‌ನಲ್ಲಿ ಲಕ್ಷ್ಮಮ್ಮರವರು ತಮ್ಮ ಮೂವರು ಗಂಡುಮಕ್ಕಳೊಂದಿಗೆ ಗೊಲ್ಲರಹಳ್ಳಿ ಗ್ರಾಮದ ನಂಜಪ್ಪರವರಿಗೆ ಭೋಗ್ಯಪತ್ರ ಮಾಡಿಕೊಟ್ಟಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಭೋಗ್ಯವಾಗಿ ಪಡೆದ ಜಮೀನನ್ನು ನಂಜಪ್ಪರವರು ಹೊಸೂರು ಗ್ರಾಮದ ಪ್ರಕಾಶ್‌ ಮತ್ತು ಬಂಕಾಪುರ ಗ್ರಾಮದ ಕೆ.ಎಂ.ರವಿ ಅವರೊಂದಿಗೆ ಪಾಲುದಾರಿಕೆ ಮಾಡಿ ಕೊಂಡು ಮಾರುತಿ ಸ್ಟೋನ್‌ ಕ್ರಷರ್‌ ಮತ್ತು ಎಂ-ಸ್ಯಾಂಡ್‌ ಕಂಪನಿಯನ್ನು ಯಾವುದೇ ಪರವಾನಗಿ ಪಡೆಯದೆ, ಹಾಗೂ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಗಳಿಗೆ ಬಳಸಲು ಭೂ ಪರಿವರ್ತನೆಯನ್ನು ಮಾಡಿಸದೆ ಆರೋಪಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

2019ರಲ್ಲಿ ಬೋಗಸ್‌ ಕ್ರಯದ ರೂಪದಲ್ಲಿ ಪಡೆದಿದ್ದ ಜಮೀನನ್ನು ಲಕ್ಷ್ಮಮ್ಮ ಅವರು ತಮ್ಮ ಮೂವರು ಸೊಸೆಯಂದಿರಿಗೆ ದಾನಪತ್ರ ಮೂಲಕ ರಿಜಿಸ್ಟರ್‌ ಮಾಡಿಸಿದ್ದಾರೆ. ನಂತರ ಅದೇ ವರ್ಷ ಲಕ್ಷ್ಮಮ್ಮ ಹಾಗೂ ಅವರ ಮೂವರು ಸೊಸೆಯಂದಿರು ಸೇರಿಕೊಂಡು ಜಮೀನನ್ನು ಚನ್ನರಾಯಯಪಟ್ಟಣದ ರವಿಕುಮಾರ್‌ ಅವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಲಾಗಿದೆ. ಅಕ್ರಮವಾಗಿ ಸರ್ಕಾರದ ದರಖಾಸ್ತು ಜಮೀನನ್ನು ಕಬಳಿಸಿರುವುದಲ್ಲದೆ, ವಿನಾ ಕಾರಣ ನಮಗೆ ತೊಂದರೆ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರೋಜಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಟಾಪ್ ನ್ಯೂಸ್

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Kharge

Adani ಕುಟುಂಬ ವಶಕ್ಕೆ ಪಡೆದು ತನಿಖೆ ನಡೆಸಲಿ : ಖರ್ಗೆ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚUdupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Udupi: ಗೀತಾರ್ಥ ಚಿಂತನೆ 102: ಆತ್ಮವಿಕಾಸ- ಆತ್ಮಸಂಕೋಚ

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Pro-Kabaddi League: ಯುಪಿ ಯೋಧಾಸ್‌ಗೆ ಶರಣಾದ ತಮಿಳ್‌ ತಲೈವಾಸ್‌

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

Adelaide Test: ಫಿಲಿಪ್‌ ಹ್ಯೂಸ್‌ ಸ್ಮರಣೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

China Badminton: ಚಿರಾಗ್‌- ಸಾತ್ವಿಕ್‌ ಸೆಮಿಫೈನಲ್‌ಗೆ

ಬೈಡೆನ್‌ “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು

Joe Biden “ಮರೆಗುಳಿ’ತನ ಕುರಿತ ಹೇಳಿಕೆ: ರಾಹುಲ್‌ ಕ್ಷಮೆಗೆ ವೈದ್ಯರ ಪಟ್ಟು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

ಮಹಿಷಿ ವರದಿ ಅಧಿಕೃತ ಶಾಸನವಾಗಲಿ: ಗೊ.ರು. ಚನ್ನಬಸಪ್ಪ

Cheluvaraya-swamy

By Election: ಮಗನ ಚುನಾವಣೆಗಾಗಿ ಎಚ್‌ಡಿಕೆ ಸಾವಿರಾರು ಕೋಟಿ ಸಂಗ್ರಹ: ಚಲುವರಾಯಸ್ವಾಮಿ

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Suside-Boy

Karkala: ಬೋಳ ಗ್ರಾಮದ ವ್ಯಕ್ತಿ ಆತ್ಮಹತ್ಯೆ

Suside-Boy

Mudubidre: ಅಂತಿಮ ಬಿಬಿಎಂ ವಿದ್ಯಾರ್ಥಿ ಆತ್ಮಹತ್ಯೆ

Suside-Boy

Belthangady: ಕಲ್ಮಂಜ: ರಿಕ್ಷಾ ಚಾಲಕ ಆತ್ಮಹತ್ಯೆ

DK–BJP-Protest

Mangaluru: ತುಳುನಾಡಿನ ದೈವ-ದೇವರ ಜಾಗ ಉಳಿಸಲು ಹೋರಾಟ: ಸಂಸದ ಚೌಟ

Suside-Boy

Punjalakatte: ಕೊಯಿಲದ ವ್ಯಕ್ತಿ ಹಾಸನದಲ್ಲಿ ನಿಗೂಢ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.