ನಿಂಬಿಯಾ ಬನದಲ್ಲಿ…
ನಳ ನಳಿಸುತ್ತಿವೆ ಸಾವಯವ ಹಣ್ಣುಗಳು
Team Udayavani, Nov 25, 2019, 5:00 AM IST
ಕಳೆದ 22 ವರ್ಷಗಳಿಂದ ಹೂವಿನ ಕೃಷಿಯಲ್ಲಿ ತೊಡಗಿದ್ದ ರೈತ ದ್ಯಾಮಣ್ಣನವರು, ಯಾವುದಾದರೂ ಬೆಳೆಯನ್ನು ಬೆಳೆಯಲು ನಿರ್ಧರಿಸಿದರು. ಆ ಸಂದರ್ಭದಲ್ಲಿ ಅವರು ಹಲವು ನಿಂಬೆ ತೋಟಗಳಿಗೆ ಭೇಟಿ ನೀಡಿದರು. ಪ್ರಾರಂಭದಿಂದಲೇ ದ್ಯಾಮಣ್ಣನವರು ನೈಸರ್ಗಿಕ ವಿಧಾನಗಳನ್ನು ಬಳಸಿ ನಿಂಬೆ ಬೆಳೆಯುತ್ತಿದ್ದವರಿಂದ ಪ್ರಭಾವಿತರಾಗಿದ್ದರು.
ರೈತ ದ್ಯಾಮಣ್ಣನವರಿಗೆ ಪುಷ್ಪ ಕೃಷಿಯೇ ಅವರ ಬದುಕು. ಚೆಂಡು, ಗಲಾಟೆ, ಕಾಕಡ ಹೀಗೆ ತನ್ನ ಒಂದೂವರೆ ಎಕರೆಯಲ್ಲಿ ಬೆಳೆಯದ ಹೂವುಗಳೆ ಇಲ್ಲ. ಏನೇ ಬೆಳೆಯುವುದಿದ್ದರೂ ಸಾವಯವ ಪದ್ಧತಿಯನ್ನು ಅನುಸರಿಸಿಕೊಂಡು ಬೆಳೆಯಬೇಕೆನ್ನುವುದು ಅವರ ಯೋಚನೆಯಾಗಿತ್ತು. ಅದರಂತೆ ಕಳೆದ ಮೂರು ವರ್ಷಗಳ ಹಿಂದೆ ತನ್ನ ಒಂದು ಎಕರೆಯಲ್ಲಿ ನಿಂಬೆ ಗಿಡ ನೆಡುವ ಪ್ರಯತ್ನಕ್ಕಿಳಿದರು. ಇದೀಗ ಕುಷ್ಠಗಿ ತಾಲೂಕಿನ ಮದ್ನಾಳದ ದ್ಯಾಮಣ್ಣಹಟ್ಟಿ ನಿಂಬೆಯಿಂದಲೇ ಅತ್ಯಧಿಕ ಆದಾಯವನ್ನು ಪಡೆಯುತ್ತಿದ್ದಾರೆ. ನಿಂಬೆ ಕೃಷಿ ಮಾಡುವುದಕ್ಕೆ ಮುಂಚೆ ಹಲವು ನಿಂಬೆ ತೋಟಗಳಿಗೆ ಭೇಟಿ ಕೊಟ್ಟಿದ್ದರು. ಪ್ರಾರಂಭದಲ್ಲಿಯೇ ಅವರು ನೈಸರ್ಗಿಕ ವಿಧಾನಗಳನ್ನು ಬಳಸಿ ನಿಂಬೆ ಬೆಳೆಯುತ್ತಿದ್ದವರಿಂದ ಪ್ರಭಾವಿತರಾಗಿದ್ದರು. ಅವರಿಂದಲೇ ಮಾರ್ಗದರ್ಶನ ಪಡೆದು ನೆಟ್ಟ 200 ನಿಂಬೆ ಗಿಡಗಳು ಇದೀಗ ಇಳುವರಿಯನ್ನು ನೀಡುತ್ತಿವೆ. ಪುಷ್ಪ ಕೃಷಿಯೊಂದಿಗೆ ನಿಂಬೆಯು ನಿತ್ಯ ಆದಾಯ ನೀಡುತ್ತಿದೆ.
ನೀರನ್ನು ಕಡಿಮೆ ಬಳಸುವ ವಿಧಾನ
ನಾಟಿಗೆ ಬೇಕಾದ ಗಿಡವನ್ನು ನರ್ಸರಿಯಿಂದ ತಂದು, ಇಪ್ಪತ್ತು ಅಡಿ ಅಂತರ ಬಿಟ್ಟು ಎರಡು ಅಡಿ ಸುತ್ತಳತೆಯ ಗುಂಡಿ ತೆಗೆದು ಗಿಡಗಳನ್ನು ನಾಟಿ ಮಾಡಿದ್ದಾರೆ. ನಾಟಿ ಮಾಡುವಾಗ ಪ್ರತಿ ಬುಡಕ್ಕೆ ಒಂದು ಬುಟ್ಟಿ ಕೊಟ್ಟಿಗೆ ಗೊಬ್ಬರವನ್ನು ನೀಡಿದರು. ನಂತರ ವರ್ಷಕ್ಕೊಂದು ಬಾರಿ, ಅಂದರೆ ಜುಲೈ ತಿಂಗಳಲ್ಲಿ ಪ್ರತಿ ಬುಡಕ್ಕೆ ಒಂದು ಬುಟ್ಟಿಯಂತೆ ಕೊಟ್ಟಿಗೆ ಗೊಬ್ಬರವನ್ನು ನೀಡುತ್ತಿದ್ದಾರೆ. ನಿಂಬೆ ಬೆಳೆಗೆ ಹೆಚ್ಚು ನೀರಾವರಿಯ ಅಗತ್ಯವಿದೆ. ಅವರು ನೀರಿನ ಖರ್ಚನ್ನು ಕಡಿಮೆಗೊಳಿಸುವ ನಿಟ್ಟಿನಲ್ಲಿ ಪ್ರತಿದಿನ ಕೊಟ್ಟಿಗೆ ತೊಳೆದ ನೀರು ಗಿಡಗಳಿಗೆ ಹರಿದು ಬರುವ ವ್ಯವಸ್ಥೆ ಮಾಡಿದ್ದಾರೆ. ವರ್ಷಪೂರ್ತಿ ಹನಿ ನೀರಾವರಿ ವಿಧಾನದ ಮೂಲಕ ಜೀವಾಮೃತವನ್ನು ನೀಡುತ್ತಿದ್ದಾರೆ. ಇದರಿಂದಾಗಿ ಗಿಡಗಳು ಚೆನ್ನಾಗಿ ಬೆಳೆಯುವುದರ ಜೊತೆಗೆ ನೆಟ್ಟು ಎರಡೇ ವರ್ಷಗಳಲ್ಲಿ ಕಾಯಿ ನೀಡಲು ಆರಂಭಿಸಿವೆ. ಮೂರನೇ ವರ್ಷದಿಂದ ಉತ್ತಮ ಫಸಲು ಇವರಿಗೆ ದೊರೆಯುತ್ತಿದೆ.
ಸಾವಯವಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತೆ
ನಿಂಬೆ ಗಿಡ ವರ್ಷದುದ್ದಕ್ಕೂ ಕಾಯಿಯನ್ನು ನೀಡುತ್ತದೆ. ಸಾಮಾನ್ಯವಾಗಿ ಒಂದು ಗಿಡ ವರ್ಷಕ್ಕೆ ಎರಡು ಸಾವಿರ ಕಾಯಿಗಳಷ್ಟನ್ನು ನೀಡುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲೇ ಒಂದು ನಿಂಬೆ ಹಣ್ಣಿಗೆ ಒಂದು ರೂಪಾಯಿ ಸಿಗುತ್ತದೆ. ಮೊದಲ ಬೆಳೆಯಲ್ಲೇ ದ್ಯಾಮಣ್ಣನವರು ಹಾಕಿದ್ದ ಬಂಡವಾಳ ಕೈಸೇರಿತ್ತು.
ನೀರಾವರಿ ವ್ಯವಸ್ಥೆಯಿದ್ದವರು ನಿಂಬೆ ಬೆಳೆಯುವುದು ಸುಲಭ. ಒಮ್ಮೆ ನೆಟ್ಟರೆ ಸುಮಾರು ಇಪ್ಪತ್ತು ವರ್ಷಗಳವರೆಗೆ ಗಿಡ ಬದುಕುತ್ತದೆ. ಸಾವಯವಕ್ಕೆ ಸುಲಭವಾಗಿ ಒಗ್ಗಿಕೊಳ್ಳುತ್ತದೆ. ಆದರೆ, ನೀರಿಲ್ಲದಿದ್ದರೆ ಕಾಯಿ ಉದುರುವ ರೋಗ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ದ್ಯಾಮಣ್ಣ. ಕಾಯಿ ಕಟಾವು ಮಾಡುವ ಬದಲು ಹಣ್ಣಾದಾಗ ಹಣ್ಣು ಮರದಿಂದ ಉದುರುತ್ತದೆ. ಹಣ್ಣನ್ನು ಹೆಕ್ಕಿ ಮಾರಾಟ ಮಾಡುವುದು ಉತ್ತಮ. ಹೆಚ್ಚಿ ಬಿಸಿಲಿದ್ದೆಡೆ ಬೆಳೆಯುವುದು ಕಷ್ಟ. ತೆಂಗಿನ ತೋಟದ ಮಧ್ಯೆಯೂ ಬೆಳೆಸಬಹುದಾಗಿದೆ.
ಸಂಪರ್ಕ: 9731416007 (ದ್ಯಾಮಣ್ಣ ಹಟ್ಟಿ)
– ಚಂದ್ರಹಾಸ ಚಾರ್ಮಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ
Mandya: ಬಹುಮಾನ ಗೆದ್ದ ಹಳ್ಳಿಕಾರ್ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!
Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.