ವಿದ್ಯುತ್ ಬಳಸದೇ ನೀರು ಪೂರೈಕೆ!
Team Udayavani, Nov 25, 2019, 4:50 AM IST
ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ನಿಯಮಿತವಾಗಿ ಇರುವುದಿಲ್ಲ. ಬೆಳೆಗಳಿಗೆ ಸಕಾಲದಲ್ಲಿ ನೀರು ಪೂರೈಸಲು ಆಗುವುದಿಲ್ಲ. ಇಂಥ ಸಮಯದಲ್ಲಿ ನೆರವಾಗುವ ನಿಟ್ಟಿನಲ್ಲಿ ಈ ನೀರೆತ್ತುವ ಯಂತ್ರವನ್ನು ರೂಪಿಸಲಾಗಿದೆ. ಸರಳವಾಗಿರುವ ಈ ಯಂತ್ರವನ್ನು ಚಾಲೂ ಮಾಡಲು ವಿದ್ಯುತ್ ಅಗತ್ಯವಿಲ್ಲ. 2 ಎಕರೆ ವಿಸ್ತೀರ್ಣದ ಒಳಗಿನ ಹೊಲ ಗದ್ದೆ ಹೊಂದಿರುವವರು ಈ ಯಂತ್ರವನ್ನು ಉಪಯೋಗಿಸಿ, ತೆರೆದ ಬಾವಿ, ಕೊಳವೆ ಬಾವಿಯಿಂದ ನೀರನ್ನು ಎತ್ತಬಹುದು. ಗ್ರಾಮೀಣ ಪ್ರದೇಶಗಳಲ್ಲಿ ಮಾತ್ರವಲ್ಲದೆ, ನಗರಪ್ರದೇಶಗಳ ಜನರೂ ಇದನ್ನು ಬಳಸಿಕೊಳ್ಳಬಹುದು. ಬೆಳಿಗ್ಗೆ ವಿದ್ಯುತ್ ಕೈಕೊಟ್ಟಂಥ ಸಂದರ್ಭಗಳಲ್ಲಿ, ತುರ್ತು ಇದ್ದಾಗ ಈ ಉಪಕರಣವನ್ನು ಬಳಸಿ ತಾತ್ಕಾಲಿಕ ಅಗತ್ಯಗಳಿಗೆ ನೀರನ್ನು ಪಡೆದುಕೊಳ್ಳಬಹುದು.
ಈ ಯಂತ್ರ, ನೆಲದಿಂದ 100 ಅಡಿ ಆಳದಿಂದ ನೀರನ್ನು ಮೇಲೆತ್ತುತ್ತದೆ. ನೆಲಮಟ್ಟದಲ್ಲಿ ಸುಮಾರು 750 ಅಡಿ ದೂರದವರೆಗೂ ನೀರನ್ನು ಪಂಪ್ ಮಾಡಬಹುದು. ಸಣ್ಣಪುಟ್ಟ ಕೈತೋಟವಿದ್ದರೆ ಹನಿ ನೀರಾವರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು. ಮಹಡಿ ಮನೆಗಳಲ್ಲಾದರೆ ಮೂರನೇ ಅಂತಸ್ತಿನವರೆಗೂ ನೀರು ಪಂಪ್ ಮಾಡಬಹುದು.
ಯಂತ್ರದ ಕಾರ್ಯಾಚರಣೆ
ಈ ಯಂತ್ರದಲ್ಲಿ ಪೆಡಲ್‌ಗಳನ್ನು ಅಳವಡಿಸಲಾಗಿದೆ. ಸೈಕಲ್ ತುಳಿಯುವ ಮಾದರಿಯಲ್ಲಿಯೇ ಈ ಯಂತ್ರದಲ್ಲಿರುವ ಪೆಡಲ್‌ಗಳನ್ನು ತುಳಿದರೆ ಸಾಕು, ನೀರು ಪೂರೈಕೆಯಾಗುತ್ತದೆ. ಈ ನೀರೆತ್ತುವ ಯಂತ್ರವನ್ನು ಬಳಸುವುದರಿಂದ ವ್ಯಾಯಾಮವೂ ಆಗುತ್ತದೆ ಎನ್ನುವುದು ಹೆಗ್ಗಳಿಕೆ. ಹ್ಯಾಂಡ್ ಪಂಪ್ ಕಾರ್ಯಾಚರಿಸುವ ಮಾದರಿಯಲ್ಲಿಯೇ ಈ ಯಂತ್ರವೂ ಕೆಲಸ ಮಾಡುತ್ತದೆ. ಈ ಪೆಡಲ್‌ಗಳನ್ನು ನಿರಾಯಾಸವಾಗಿ ತುಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಅರ್ಧ ಗಂಟೆ ಪೆಡಲ್ ಮಾಡಿದರೆ ಮೂರು ಸಾವಿರ ಲೀಟರ್ ನೀರು ಪೂರೈಕೆಯಾಗುತ್ತದೆ ಎನ್ನಲಾಗಿದೆ! ಈ ಉಪಕರಣ “ಜೈಲಮ್’ ಎನ್ನುವ ಹೆಸರಿನಲ್ಲಿ ದೊರೆಯುತ್ತಿದೆ.
ಸಂಪರ್ಕ: 9448334131
-ಕುಮಾರ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Video: ಜೈಲಿನಿಂದ ಬಿಡುಗಡೆಯಾದ ಖುಷಿ… ಜೈಲು ಅಧಿಕಾರಿಗಳ ಎದುರೇ ಯುವಕನ ಬ್ರೇಕ್ ಡ್ಯಾನ್ಸ್
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Stock Market: ಷೇರುಪೇಟೆ ಸಂವೇದಿ ಸೂಚ್ಯಂಕ 1,000 ಅಂಕ ಕುಸಿತ; ಲಾಭಗಳಿಸಿದ ಷೇರು ಯಾವುದು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.