ಅಂದು ಏಳಡಿ ಪೆನ್ನು, ಈಗ 19 ಅಡಿ ಪೆನ್!
Team Udayavani, Nov 24, 2019, 6:09 PM IST
ಸಾಗರ: ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಗೊಳ್ಳುತ್ತಿರುವ 19 ಅಡಿ ಉದ್ದದ ಪೆನ್ ಮಕ್ಕಳ ವಿಶೇಷ ಆಕರ್ಷಣೆಯ ವಸ್ತುವಾಗಿದೆ. ಕೃಷ್ಣಮೂರ್ತಿ ಆಚಾರ್ ಅವರು ಅಕೇಶಿಯಾ ಮರ ಬಳಸಿ ರಚಿಸಿದ ಪೆನ್ನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಶಾಲಾ ಮಕ್ಕಳು, ಪುಟಾಣಿಗಳು ಪೆನ್ ಬಳಿ ನಿಂತು ಸೆಲ್ಫಿ ತೆಗೆದುಕೊಳ್ಳುವ, ಅದನ್ನು ಮುಟ್ಟುವ ದೃಶ್ಯ ಕಂಡುಬರುತ್ತಿದೆ.
ಈ ಹಿಂದೆ ಕೃಷ್ಣಮೂರ್ತಿ ಅವರು 6.5 ಅಡಿ ಉದ್ದದ ಪೆನ್ ರೂಪಿಸಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಉಡುಗೊರೆ ನೀಡಿದ್ದರು. ಆ ನಂತರ 7 ಅಡಿ ಉದ್ದ ಪೆನ್ ನಿರ್ಮಿಸಿದ್ದರು. ಅದನ್ನು ಈ ಹಿಂದಿನ ತಾಲೂಕಿನ ಸಾಹಿತ್ಯ ಸಮ್ಮೇಳನದಲ್ಲಿ ವೇದಿಕೆ ಬಳಿ ಪ್ರದರ್ಶನಕ್ಕೆ ಇಡಲಾಗಿತ್ತು.
ಅದೀಗ ಶಿವಮೊಗ್ಗದ ಕಸಾಪ ಪದಾಧಿಕಾರಿಗಳೊಬ್ಬರು ಖರೀದಿಸಿ ಒಯ್ದಿದ್ದಾರೆ ಎಂಬ ಮಾತಿದೆ. ಈ 19 ಅಡಿಯ ಪೆನ್ನು ಬರೂಬ್ಬರಿ ಮೂರು ಕ್ವಿಂಟಾಲ್ ತೂಕವಿದೆ ಎಂದು ಕಸಾಪ ಅಧ್ಯಕ್ಷ ಎಸ್.ವಿ. ಹಿತಕರ್ ಜೈನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.