ಅರಿವು ಸ್ವರೂಪನೇ ಗುರು: ಶಿವಕುಮಾರ ಶ್ರೀ

Team Udayavani, Nov 24, 2019, 2:39 PM IST

24-November-31

ಬೀದರ: ಸಂಸಾರದ ಮೇಲಿನ ಮೋಹ ಬಿಟ್ಟು ಪರಮಾರ್ಥದ ಕಡೆಗೆ ಬರಬೇಕು. ಅರಿವು ಸ್ವರೂಪನೇ ಗುರು. ಗುರುವನ್ನು ಎಲ್ಲ ಮನುಷ್ಯರಂತೆ ನೋಡಬೇಡಿ. ಸದ್ಗುರು ಜ್ಞಾನಸ್ವರೂಪನು ಆಗಿದ್ದಾನೆ. ಯಾವ ಜ್ಞಾನದಿಂದ ಮರಣ ತಪ್ಪುವದೋ ಅಂತಹ ವಿದ್ಯೆಯೇ ನಿಜವಿದ್ಯೆ. ಇದನ್ನು ಕಲಿಸುವವನೆ ಗುರು ಎಂದು ಡಾ|ಶಿವಕುಮಾರ ಮಹಾಸ್ವಾಮಿಗಳು ಹೇಳಿದರು.

ನಗರದ ಶ್ರೀ ಚಿದಂಬರಾಶ್ರಮದ ಸಿದ್ಧಾರೂಢ ಮಠದಲ್ಲಿ ನಡೆದ ಡಾ| ಶಿವಕುಮಾರ ಮಹಾಸ್ವಾಮಿಗಳ 75ನೇ ಜಯಂತಿ ಮಹೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ನರನನ್ನು ಹರನಾಗಿ ಮಾಡುವ ಶಕ್ತಿ ಗುರುವಿನಲ್ಲಿದೆ. ಭವಿಯೆಂಬುವುದನ್ನು ಬಿಡಿಸಿ ಭಕ್ತನಾಗಿ ಮಾಡುವುದು ಗುರುವೇ. ನಾನಾರು? ನನ್ನ ಸ್ವರೂಪವೇನು ಎಂಬುವುದನ್ನು ತಿಳಿಸಿಕೊಡುವವನೆ ಸದ್ಗುರು. ಕೊನೆಗೆ ಅವನೇ ದೇವರು. ಸದ್ಗುರುವಿನ ದರ್ಶನವಾದರೆ ಸಮಸ್ಥ ದೇವತೆಗಳ ದರ್ಶನವಾದಂತೆ ಎಂದರು.

ನಮ್ಮಲ್ಲಿ ಪ್ರವೃತ್ತಿ ಮಾರ್ಗ ನಿವೃತ್ತಿ ಮಾರ್ಗ ಎಂದು ಎರಡು ಮಾರ್ಗಗಳಿವೆ.
ಎಲ್ಲರಂತೆ ಹುಟ್ಟಿ ಎಲ್ಲರಂತೆ ಸಾಯುವುದು ಪ್ರವೃತ್ತಿ ಮಾರ್ಗ. ನಿವೃತ್ತಿ ಮಾರ್ಗದಲ್ಲಿ ಇಂದ್ರಿಯಗಳ ಕೆಲಸವಿಲ್ಲ. ನಂಬಿಕೆಯೊಂದೇ ಅದರ ಕೆಲಸ. ಪರಮಾತ್ಮನಲ್ಲಿ ವಿಶ್ವಾಸ ಮಾಡುವುದಲ್ಲ, ಶ್ರದ್ಧೆ ಇಡಬೇಕು. ತಂದೆ-ತಾಯಿ ದೇವರೆಂದು ವಿಶ್ವಾಸ ಮಾಡುವುದಲ್ಲ ಶ್ರದ್ಧೆ ಇಡಬೇಕು. ಶ್ರದ್ಧೆ ಇದ್ದವನಿಗೆ ಆ ವಸ್ತುವಿನ ಜ್ಞಾನವಾಗುತ್ತದೆ ಎಂದು ಹೇಳಿದರು.

ಕಲಬುರಗಿಯ ಮಾತಾ ಲಕ್ಷ್ಮಿದೇವಿ ಮಾತನಾಡಿ, ಗುರುವಿನ ಮಾರ್ಗದರ್ಶನ
ಪಡೆದರೂ ಸಾಧಕನಿಗೆ ಅರಿವಿನ ಎತ್ತರಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ಕಾರಣ ಭಕ್ತಿಯ ಕೊರತೆ. ಗುರು ಚರಣದಲ್ಲಿ ಶ್ರದ್ಧೆ ಇಟ್ಟು ನಡೆಯುವುದು ನಿಜವಾದ ಭಕ್ತಿ ಎಂದರು.

ಶ್ರೀ ಶ್ರದ್ಧಾನಂದ ಸ್ವಾಮಿಗಳು ಮಾತನಾಡಿ, ಇಂದ್ರೀಯಗಳ ವ್ಯವಹಾರ ಬೇರೆ ಬೇರೆ ಇದೆ. ಅರಿವು ಮಾತ್ರ ಭಿನ್ನ. ಗುರು ನರನಲ್ಲ. ನರನೆಂದವಗೆ ನರಕ ತಪ್ಪದು ಎಂದರು. ಶ್ರೀ ಗಣೇಶಾನಂದ ಮಹಾರಾಜ ಮಾತನಾಡಿ, ಗುರು ಚರಣದೋಳು
ಅನನ್ಯಭಕ್ತಿ ಇರಿಸಿ ಜೀವನ ಸುಖೀ ಮಾಡಿಕೊಳ್ಳುವುದೇ ನಮ್ಮೆಲ್ಲರ ಪರಮ ಧ್ಯೇಯವಾಗಬೇಕು. ಸದ್ಗುರು ಜನನ ಮರಣ ಬಂಧನ ಬಿಡಿಸಿ, ಆತ್ಮ ಸ್ಥಿತಿಯ ಅರಿವು ಮೂಡಿಸುವನು. ಅಂತಹ ಸದ್ಗುರು ಚರಣದಲ್ಲಿ ಭಕ್ತಿ ಇಟ್ಟು ನಡೆಯುವುದೇ ಅಹೋಭಾಗ್ಯ ಎಂದರು.

ಅಜ್ಜಪ್ಪಾ ಗಿರಡ್ಡಿ ಮತ್ತು ಶೋಭಾ ಶಿವಾಜಿರಾವ್‌ ಅವರು ಶ್ರೀಗಳಿಗೆ ನಾಣ್ಯಗಳಿಂದ ತುಲಾಭಾರ ಸೇವೆ ಸಲ್ಲಿಸಿದರು. ಶ್ರೀ ಜಡಿಸಿದ್ದೇಶ್ವರ ಸ್ವಾಮಿಜಿ, ಶ್ರೀ ದಯಾನಂದ ಸ್ವಾಮೀಜಿ, ಶ್ರೀ ಶಂಕರಾನಂದ ಸ್ವಾಮೀಜಿ, ಶ್ರೀ ಅದ್ವೈತಾನಂದ ಸ್ವಾಮೀಜಿ, ಸದ್ರೂಪಾನಂದ ಸ್ವಾಮೀಜಿ, ಸಿದ್ದೇಶ್ವರಿ ತಾಯಿ, ಆನಂದಮಯಿ ತಾಯಿ, ಸುಶಾಂತ ತಾಯಿ, ಜ್ಞಾನೇಶ್ವರಿ ತಾಯಿ, ಅಮೃತಾನಂದ ತಾಯಿ, ಶಶಿಕಲಾತಾಯಿ, ಸಂಗೀತಾದೇವಿ ಯಶವಂತ ಶಾಸ್ತ್ರೀಗಳು, ಶ್ರೀ ಸತೀಶ ದೇವರು ನೇತೃತ್ವ ವಹಿಸಿದ್ದರು.

ಸಂಸ್ಥೆಯ ಕಾರ್ಯದರ್ಶಿ ಡಾ| ಚನ್ನಬಸಪ್ಪ ಹಾಲಹಳ್ಳಿ, ಬಸವರಾಜ ಜಾಬಶೆಟ್ಟಿ, ಬಿ.ಜಿ. ಶಟಕಾರ, ಮಡಿವಾಳಪ್ಪಾ ಗಂಗಶೆಟ್ಟಿ, ಶಿವಶರಣಪ್ಪಾ ಸಾವಳಗಿ, ಶರಣಪ್ಪಾ ತಿರ್ಲಾಪೂರೆ, ಉದಯಭಾನು ಹಲವಾಯಿ, ಸುಭಾಷ ಉಪ್ಪೆ, ಈಶ್ವರಗೌಡ ಕಮಡಳ್ಳಿ, ಭಾರತಿಬಾಯಿ ಕಣಜಿ, ಶ್ರೀನಾಥ ಮಸ್ಕಲೆ, ಪುರ್ಣೇಶ ಮಠಾಳಕರ, ಡಾ|ಹಾವಗಿರಾವ್‌ ಮೈಲಾರೆ, ಸಹಾಜನಂದ ಕಣಜಿ, ಪ್ರಭು ಬೆಣ್ಣೆ, ಡಾ| ಚಂದ್ರಪ್ಪ ಭತಮುರ್ಗೆ, ಲಕ್ಷ್ಮಣ ಪೂಜಾರಿ, ಶಿವಶರಣಪ್ಪಾ, ಕಲ್ಯಾಣರಾವ್‌ ಬುಜುರಕೆ, ರಾಜೇಂದ್ರ ಉದ್ರವಾಡಿ, ಡಾ| ವಿ.ಎಸ್‌. ಪಾಟೀಲ, ಉಪಸ್ಥಿತರಿದ್ದರು. ಪ್ರೊ|ಪರಮೇಶ್ವರ ಭಟ್ಟ ನಿರೂಪಿಸಿದರು.

ಟಾಪ್ ನ್ಯೂಸ್

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

Wadi: ನಿರ್ಜನ ಪ್ರದೇಶದಲ್ಲಿ ಎಸೆದ ನವಜಾತ ಶಿಶುವನ್ನು ಬದುಕಿಸಲು ಪೊಲೀಸರ ಪರದಾಟ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

6

Karkala: ದುರ್ಗಾ ಗ್ರಾಮ ಪಂಚಾಯತ್; ರಸ್ತೆ ಸಂಪೂರ್ಣ ದುರವಸ್ಥೆ

5

Udupi: ಜಿಲ್ಲೆಯ ಬ್ಲ್ಯಾಕ್‌ ಸ್ಪಾಟ್‌ 30ರಿಂದ 20ಕ್ಕೆ ಇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.