ಪುಣ್ಚಪ್ಪಾಡಿ ಶಾಲಾ ಮಕ್ಕಳಿಗೆ ಪ್ರಕೃತಿ ಪಾಠದ ಸಂಭ್ರಮ
Team Udayavani, Nov 25, 2019, 5:07 AM IST
ಸವಣೂರು: ಅದು ವಿಸ್ತಾರವಾದ ಗದ್ದೆ. ತೆನೆ ತುಂಬಿ ಹಳದಿ ಬಣ್ಣಕ್ಕೆ ತಿರುಗಿದ ಭತ್ತದ ಪೈರುಗಳು ಕಣ್ಣಿಗೆ ಹಬ್ಬದಂತಿದ್ದವು. ರಮಣೀಯವಾದ ತೋಟಗಳ ಮಧ್ಯೆ ವಿಸ್ತಾರವಾಗಿ ಕಂಗೊಳಿಸುತ್ತಿರುವ ಆ ಗದ್ದೆಯನ್ನು ಉಳಿಸಿಕೊಂಡು ಬಂದದ್ದು, ಕೃಷಿಕ ವಿವೇಕ್ ಆಳ್ವ ಪುಣcಪ್ಪಾಡಿ.
ಆ ದಿನ ಗದ್ದೆಯ ತುಂಬೆಲ್ಲ ಸಮವಸ್ತ್ರ ಧರಿಸಿದ ಪುಟ್ಟ ಮಕ್ಕಳ ಓಡಾಟ, ಚಂದದ ಪೈರಿನ ಅಂದಕ್ಕೆ ಮತ್ತೂಂದು ಮೆರುಗು ನೀಡುತ್ತಿತ್ತು. ಅಲ್ಲಿ ಒಂದಷ್ಟು ಔಷಧೀಯ ಗಿಡಗಳು. ಒಂದಷ್ಟು ಅಪೂರ್ವ ಸಸಿಗಳು. ಸುತ್ತಲೂ ಮನಸ್ಸಿಗೆ ಮುದ ನೀಡುವ ಹಸುರು. ಇದು ಪುಣ್ಚಪ್ಪಾಡಿ ಶಾಲಾ ಮಕ್ಕಳ ಪ್ರಕೃತಿ ಪಾಠದ ಸೊಬಗು.
ಪುಣ್ಚಪ್ಪಾಡಿ ಶಾಲೆ ಈ ಬಾರಿ ಇಕೋ ಕ್ಲಬ್ ವತಿಯಿಂದ ಕೃಷಿಕರಾದ ವಿವೇಕ್ ಆಳ್ವ ಪುಣ್ಚಪ್ಪಾಡಿ ಅವರ ಗದ್ದೆ ನೋಡುವ ಭಾಗ್ಯವನ್ನು ಮಕ್ಕಳಿಗೆ ಒದಗಿಸಿತ್ತು. ಮನೆಯಂಗಳಕ್ಕೆ ಬರು ತ್ತಿದ್ದಂತೆಯೇ ಮಕ್ಕಳನ್ನು ಸ್ವಾಗತಿಸಿದ್ದು ಹಿಂದಿನ ಕಾಲದಲ್ಲಿ ಭತ್ತ ಕುಟ್ಟುತ್ತಿದ್ದ ಒನಕೆ ಮತ್ತು ನೆಲಗುಳಿ (ನೆಲಕ್ಕುರಿ). ಈ ನೆಲ ಗುಳಿಯಲ್ಲಿ ಭತ್ತವನ್ನು ಕುಟ್ಟಿ ಚಾಲನೆ ನೀಡಿದವರು ನಾಟಿ ವೈದ್ಯ ಬಾಲಕೃಷ್ಣ ರೈ ಮುಂಡಾಜೆ.
ಭತ್ತವನ್ನು ಕುಟ್ಟುವ ಸಂಪ್ರದಾಯ, ಅಕ್ಕಿ ಮಾಡುವ ಪರಿಚಯ ನೀಡಿದರು.ಅನಂತರ ಮಕ್ಕಳು ಓಡಿದ್ದು ಗದ್ದೆಯ ಕಡೆಗೆ. ಕೃಷಿಕರಾದ ವಿವೇಕ್ ಆಳ್ವ ಅವರು ಮಕ್ಕಳಿಗೆ ಗದ್ದೆ ಹದ ಮಾಡುವುದರಿಂದ ಹಿಡಿದು ಪೈರು ಕಟಾವು ಮಾಡುವ ವರೆಗೆ ಸಂಪೂರ್ಣ ಮಾಹಿತಿ ತಿಳಿಸಿದರು. ಭತ್ತದ ತಳಿಗಳು, ತಾವೇ ಆವಿಷ್ಕರಿಸಿದ ಕೃಷಿ ಉಪಕರಣಗಳು, ಅಡಿಕೆಯಿಂದ ತಯಾರಿಸಿದ ದಂತಚೂರ್ಣ, ಮಣ್ಣಿನಿಂದ ತಯಾರಿಸಿದ ಮೈಕ್ರೋವೇವ್ ಓವನ್ ಬಗ್ಗೆ ತಿಳಿಸಿದರು.
ಹಿತ್ತಲ ಮದ್ದಿನ ಪರಿಚಯ
ನಾಟಿ ವೈದ್ಯ ಬಾಲಕೃಷ್ಣ ರೈ ಮುಂಡಾಜೆ ಅವರು ಔಷಧಿ ಗಿಡಗಳ ಬಗ್ಗೆ ವಿಸ್ತƒತ ಪರಿಚಯ ನೀಡಿದರು. ನಮ್ಮ ಹಿತ್ತಲಲ್ಲೇ ದೊರಕುವ ಆಡುಸೋಗೆ, ನೆಕ್ಕಿ ಸೊಪ್ಪು, ರಾಮಫಲ, ನಾಚಿಕೆಮುಳ್ಳು, ಕೇಪುಳು, ಕಹಿಬೇವು, ಕರಿಬೇವು, ತುಳಸಿ, ಒಂದೆಲಗ, ಬಾಳೆ, ಪಳ್ಳಿ ಸೊಪ್ಪು ಹೀಗೆ ಹಲವು ಸಸ್ಯಗಳನ್ನು ಪರಿಚಯಿಸಿ, ಅವುಗಳ ಔಷಧೀಯ ಗುಣಗಳ ಮಾಹಿತಿ ನೀಡಿದರು. ಪಳ್ಳಿ ಸೊಪ್ಪು ಮೈಯಲ್ಲಿ ಬೀಳುವುದಕ್ಕೆ ಹಚ್ಚಲು ದಿವೌÂಷಧ ಎಂದು ತಿಳಿದ ಮಕ್ಕಳು ಬೆರಗಾದರು.
ಆಹಾರ ವೈವಿಧ್ಯ
ಹಿರಿಯರಾದ ಅಂಬುಜಾಕ್ಷಿ ಆಳ್ವ ಅವರು ಆಹಾರದಿಂದ ಮನುಷ್ಯನ ಮೇಲಾಗುವ ಪರಿಣಾಮಗಳ ಮಾಹಿತಿ ನೀಡಿದರು. ಮನೆಯಲ್ಲಿ ಕುಟ್ಟಿ ಮಾಡಿದ ಅವಲಕ್ಕಿಯಿಂದ 10 ಬಗೆಯ ತಿನಿಸುಗಳನ್ನು ತಯಾರಿಸಿ ತೋರಿಸಿದರು. ಮಕ್ಕಳು ಅವುಗಳನ್ನು ಸವಿದು ಖುಷಿಪಟ್ಟರು. ಆರೋಗ್ಯಕರ ಎಳ್ಳು ಜ್ಯೂಸ್ ಕುಡಿದರು.
ಉಪನ್ಯಾಸಕಿ ಸ್ಮಿತಾ ವಿವೇಕ್, ಪುಣcಪ್ಪಾಡಿ ಶಾಲಾ ಮುಖ್ಯಗುರು ರಶ್ಮಿತಾ ನರಿಮೊಗರು, ಶಿಕ್ಷಕರಾದ ಶೋಭಾ ಕೆ., ಫ್ಲಾವಿಯಾ, ಅತಿಥಿ ಶಿಕ್ಷಕ ಯತೀಶ್ ಕುಮಾರ್, ಗೌರವ ಶಿಕ್ಷಕಿ ಯಮುನಾ ಬಿ., ಪೋಷಕರಾದ ಕಾವೇರಿ ಅಜಿಲೋಡಿ ಕಾರ್ಯಕ್ರಮ ನಿರ್ವಹಿಸಿದರು.
ಅಚ್ಚಳಿಯದ ನೆನಪು
ಮಕ್ಕಳು ನಮ್ಮ ಮನೆಗೆ ಬಂದಿದ್ದು ಬಹಳ ಖುಷಿಯಾಯಿತು. ಮಕ್ಕಳಿಗೆ ಈ ರೀತಿ ಪ್ರಕೃತಿಯಲ್ಲಿ ಅನುಭವದ ಪಾಠ ಸಿಕ್ಕಿದಾಗ ಮಕ್ಕಳ ಮನಸ್ಸಿನಲ್ಲಿ ಅದು ಅಚ್ಚಳಿಯದೆ ಉಳಿಯುತ್ತದೆ.
– ವಿವೇಕ ಆಳ್ವ, ಪ್ರಗತಿಪರ ಕೃಷಿಕರು, ಪುಣ್ಚಪ್ಪಾಡಿ
ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.