ವಾಟ್ಲಿಂಗ್ ದ್ವಿಶತಕ; ಗೆಲುವಿನತ್ತ ಕಿವೀಸ್
Team Udayavani, Nov 24, 2019, 11:00 PM IST
ಮೌಂಟ್ ಮೌಂಗನುಯಿ: ವಿಕೆಟ್ ಕೀಪರ್ ಬ್ರಾಡ್ಲಿ ವಾಟ್ಲಿಂಗ್ ಬಾರಿಸಿದ ಮೊದಲ ದ್ವಿಶತಕ (205) ಮತ್ತು ಮಿಚೆಲ್ ಸ್ಯಾಂಟ್ನರ್ ಅವರ ಮೊದಲ ಶತಕ (126) ಸಾಹಸದಿಂದ ಪ್ರಚಂಡ ಬ್ಯಾಟಿಂಗ್ ಪ್ರದರ್ಶನ ತೋರ್ಪಡಿಸಿದ ನ್ಯೂಜಿಲ್ಯಾಂಡ್, ಮೌಂಟ್ ಮೌಂಗನುಯಿ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ ವಿರುದ್ಧ ಗೆಲುವಿನತ್ತ ದಾಪುಗಾಲಿಕ್ಕಿದೆ.
ಇಂಗ್ಲೆಂಡಿನ 353 ರನ್ನುಗಳಿಗೆ ಜವಾಬಾಗಿ ಪಂದ್ಯದ 4ನೇ ದಿನವಾದ ರವಿವಾರ ನ್ಯೂಜಿಲ್ಯಾಂಡ್ 9 ವಿಕೆಟಿಗೆ 615 ರನ್ ಪೇರಿಸಿ ಇನ್ನಿಂಗ್ಸ್ ಡಿಕ್ಲೇರ್ ಮಾಡಿತು. 262 ರನ್ ಹಿನ್ನಡೆಗೆ ಸಿಲುಕಿದ ಇಂಗ್ಲೆಂಡ್ ದ್ವಿತೀಯ ಸರದಿಯಲ್ಲಿ 3 ವಿಕೆಟಿಗೆ 55 ರನ್ ಗಳಿಸಿ ಸಂಕಟಕ್ಕೆ ಸಿಲುಕಿದೆ.
ಡ್ರಾ ಸಾಧ್ಯವೇ?
ಸೋಮವಾರ ಪಂದ್ಯದ ಅಂತಿಮ ದಿನವಾಗಿದ್ದು, ಇಂಗ್ಲೆಂಡ್ ಉಳಿದ 7 ವಿಕೆಟ್ಗಳ ನೆರವಿನಿಂದ ಈ ಪಂದ್ಯವನ್ನು ಉಳಿಸಿಕೊಂಡೀತೇ ಎಂಬುದೊಂದು ಕುತೂಹಲ.
ವಾಟ್ಲಿಂಗ್ 473 ಎಸೆತ ಎದುರಿಸಿ ಜೀವನಶ್ರೇಷ್ಠ ಬ್ಯಾಟಿಂಗ್ ಪ್ರದರ್ಶಿಸಿದರು (24 ಬೌಂಡರಿ, 1 ಸಿಕ್ಸರ್). ಸ್ಯಾಂಟ್ನರ್ 269 ಎಸೆತಗಳ ಇನ್ನಿಂಗ್ಸ್ನಲ್ಲಿ 11 ಬೌಂಡರಿ, 5 ಸಿಕ್ಸರ್ ಒಳಗೊಂಡಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.