ಉಪ ಚುನಾವಣೆಯಲ್ಲಿದೆ ಹಲವು ವೈಶಿಷ್ಟ್ಯ
Team Udayavani, Nov 25, 2019, 3:08 AM IST
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ “ಜಿದ್ದಾಜಿದ್ದಿ’ ಹುಟ್ಟು ಹಾಕಿರುವ ಹಾಗೂ ಉಪ ಚುನಾವಣೆಗಳ ಸಂಖ್ಯೆಯನ್ನು ಶತಕದ ಗಡಿ ದಾಟಿಸಿರುವ 15 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಹಲವು ವೈಶಿಷ್ಟ್ಯತೆಗಳನ್ನೂ ಹೊಂದಿದೆ.
ಈಗ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿನ ಒಟ್ಟು ಮತದಾರರ ಸಂಖ್ಯೆಗಿಂತಲೂ ದೇಶದ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರ ಸಂಖ್ಯೆ ಕಡಿಮೆ ಇದೆ. ಅಲ್ಲದೇ ಈ ವರ್ಷ ಏಕಕಾಲಕ್ಕೆ ನಡೆಯುತ್ತಿರುವ ದೇಶದ ಎರಡನೇ ಅತಿದೊಡ್ಡ ಉಪ ಚುನಾವಣೆ ಇದಾಗಿದೆ.
ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ 15 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರ ಸಂಖ್ಯೆ ಒಟ್ಟು 37.77 ಲಕ್ಷ ಇದೆ. ಆದರೆ, ಹಿಮಾಚಲ ಪ್ರದೇಶ, ಜಮ್ಮು- ಕಾಶ್ಮೀರ, ತ್ರಿಪುರಾ, ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಸೇರಿ ದೇಶದ 16 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಅಲ್ಲಿನ ಮತದಾರರ ಸಂಖ್ಯೆ ಇದಕ್ಕಿಂತಲೂ ಕಡಿಮೆ ಇದೆ. ಆ ಅರ್ಥದಲ್ಲಿ ಇದು ದೇಶದ ಅತಿದೊಡ್ಡ ಉಪ ಚುನಾವಣೆಗಳ ಪೈಕಿ ಒಂದು ಎಂದು ಹೇಳಲಾಗುತ್ತಿದೆ.
ಅದೇ ರೀತಿ, ಈ ವರ್ಷ ಏಪ್ರಿಲ್‌ನಿಂದ ಇಲ್ಲಿವರೆಗೆ ಏಕಕಾಲಕ್ಕೆ ನಡೆದಿರುವ ದೇಶದ ಎರಡನೇ ಅತಿದೊಡ್ಡ ಉಪ ಚುನಾವಣೆ ಇದಾಗಿದೆ. 2019ರ ಏಪ್ರಿಲ್‌ನಲ್ಲಿ ತಮಿಳುನಾಡಿನ 18 ವಿಧಾನಸಭಾ ಕ್ಷೇತ್ರಗಳಿಗೆ ಏಕ ಕಾಲಕ್ಕೆ ಉಪ ಚುನಾವಣೆ ನಡೆದಿತ್ತು. ಈಗ ಕರ್ನಾಟಕದಲ್ಲಿ 15 ಕ್ಷೇತ್ರಗಳಿಗೆ ಏಕಕಾಲಕ್ಕೆ ಉಪ ಚುನಾವಣೆ ನಡೆಯುತ್ತಿದೆ.
ಚುನಾವಣಾ ಆಯೋಗದ ಮಾಹಿತಿಯಂತೆ ದೇಶದಲ್ಲಿ 2014 ಮತ್ತು 2019ರಲ್ಲಿ ನಡೆದ ಲೋಕಸಭಾ ಚುನಾವಣೆಗಳಲ್ಲಿ ಹಾಗೂ ಇದೇ ಅವಧಿಯಲ್ಲಿ ನಡೆದ ಆಯಾ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿ ಇದ್ದ ಒಟ್ಟು ಮತದಾರರ ಸಂಖ್ಯೆಗಿಂತಲೂ ನಮ್ಮ ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿರುವ 15 ಕ್ಷೇತ್ರಗಳಲ್ಲಿ ಹೆಚ್ಚು ಮತದಾರರು ಇದ್ದಾರೆ.
ಜಮ್ಮು-ಕಾಶ್ಮೀರ, ಹಿಮಾಚಲ ಪ್ರದೇಶದಲ್ಲಿ 30 ಲಕ್ಷ ಮೇಲ್ಪಟ್ಟು ಮತದಾರರು ಇದ್ದರೆ, ಮೇಘಾಲಯ, ನಾಗಲ್ಯಾಂಡ್, ಮಣಿಪುರ ಮತ್ತು ತ್ರಿಪುರಾಗಳಲ್ಲಿ 10 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಉಳಿದಂತೆ, ಗೋವಾ, ಪಾಂಡಿಚೇರಿ, ಅರುಣಾಚಲ ಪ್ರದೇಶ, ಸಿಕ್ಕಿಂ, ಮಿಜೋರಾಂ, ಚಂಡಿಗಢ, ಅಂಡಮಾನ್ ನಿಕೋಬಾರ್, ದಾದರ್ ಹವೇಲಿಯಲ್ಲಿ 1 ರಿಂದ 8 ಲಕ್ಷ ಮತದಾರರು ಇದ್ದರೆ, ದಮನ್ ಆ್ಯಂಡ್ ದಿವ್, ಲಕ್ಷದ್ವೀಪಗಳಲ್ಲಿ ಮತದಾರರು ಸಂಖ್ಯೆ ಸಾವಿರಗಳಲ್ಲಿದೆ.
80 ಉಪ ಚುನಾವಣೆಗಳು: ರಾಜ್ಯಗಳ ವಿಧಾನಸಭೆಗಳಿಗೆ ಉಪ ಚುನಾವಣೆಗಳು ಹೊಸದಲ್ಲ. ಆಯಾ ರಾಜ್ಯಗಳಲ್ಲಿ ಪ್ರತಿ ವಿಧಾನಸಭೆಯ ಅವಧಿಯಲ್ಲಿ ವಿವಿಧ ಕಾರಣಗಳಿಗೆ ಉಪ ಚುನಾವಣೆಗಳು ನಡೆಯುತ್ತಲೇ ಬಂದಿದೆ. ಅದರಂತೆ, 2019ರಲ್ಲಿ ಇಲ್ಲಿವರೆಗೆ ದೇಶದಲ್ಲಿ ಒಟ್ಟು 80 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ. 2019ರ ಎಪ್ರಿಲ್‌ನಿಂದ ಅಕ್ಟೋಬರ್‌ವರೆಗೆ ತಮಿಳುನಾಡಿನಲ್ಲಿ 24, ಉತ್ತರ ಪ್ರದೇಶದಲ್ಲಿ 14, ಪಶ್ಚಿಮ ಬಂಗಾಳದಲ್ಲಿ 11, ಗುಜರಾತಿನಲ್ಲಿ 16 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದಿದೆ.
ರಾಜ್ಯ/ಕೇಂದ್ರಾಡಳಿತ ಪ್ರದೇಶ ಮತದಾರರು
ಕರ್ನಾಟಕ 37.77 ಲಕ್ಷ (15 ಕ್ಷೇತ್ರಗಳು)
ಜಮ್ಮು-ಕಾಶ್ಮೀರ 35.66 ಲಕ್ಷ
ಹಿಮಾಚಲಪ್ರದೇಶ 30.98 ಲಕ್ಷ
ತ್ರಿಪುರಾ 20.23 ಲಕ್ಷ
ಮಣಿಪುರ 14.12 ಲಕ್ಷ
ಮೇಘಾಲಯ 10.78 ಲಕ್ಷ
ನಾಗಾಲ್ಯಾಂಡ್ 10.38 ಲಕ್ಷ
ಗೋವಾ 8.17 ಲಕ್ಷ
ಪಾಂಡಿಚೇರಿ 7.40 ಲಕ್ಷ
ಅರುಣಾಚಲ ಪ್ರದೇಶ 5.96 ಲಕ್ಷ
ಚಂಡಿಗಢ 4.53 ಲಕ್ಷ
ಮಿಜೋರಾಂ 4.33 ಲಕ್ಷ
ಸಿಕ್ಕಿಂ 3.08 ಲಕ್ಷ
ಅಂಡಮಾನ್ ನಿಕೋಬಾರ್ 1.90 ಲಕ್ಷ
ದಾದರ್ ಹವೇಲಿ 1.65 ಲಕ್ಷ
ದಮನ್ ಆ್ಯಂಡ್ ದಿವ್ 87 ಸಾವಿರ
ಲಕ್ಷ ದ್ವೀಪ 43 ಸಾವಿರ
* ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಕ್ಕಳನ್ನು ಶಾಲೆಗೆ ಸೇರಿಸೋದು ಮುಖ್ಯವಲ್ಲ, ನಿತ್ಯವೂ ಕಳುಹಿಸಿ… :ಸಚಿವ ಮಧು ಬಂಗಾರಪ್ಪ
Protest: ಡಿ.10 ರಂದು ಸುವರ್ಣಸೌಧಕ್ಕೆ 5 ಸಾವಿರ ಟ್ರ್ಯಾಕ್ಟರ್ ಮುತ್ತಿಗೆ; ಕೂಡಲಸಂಗಮ ಶ್ರೀ
Dandeli: ಬೇಡರ ಶಿರಗೂರಿನ ರೈತರ ಗದ್ದೆಗಳಲ್ಲಿ ಮತ್ತೆ ಕಾಣಿಕೊಂಡ ಕಾಡಾನೆಗಳು
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Police Raid: ಮಾದಕವಸ್ತು, ಅಕ್ರಮ ಮದ್ಯಮಾರಾಟದ ವಿರುದ್ಧ ವಿಶೇಷ ಕಾರ್ಯಾಚರಣೆ: ಪ್ರಕರಣ ದಾಖಲು
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
Rashmika Mandanna: ಸಾವಿರಾರು ಜನರ ಮುಂದೆ ಮದುವೆ ಆಗುವ ಹುಡುಗನ ಬಗ್ಗೆ ಮಾತನಾಡಿದ ರಶ್ಮಿಕಾ
Stock Market: ಷೇರುಪೇಟೆ ಸೂಚ್ಯಂಕ 1,300 ಅಂಕ ಜಿಗಿತ; ಅದಾನಿ ಗ್ರೂಪ್ ಷೇರು ಮೌಲ್ಯ ಏರಿಕೆ
Bidar: ವಕ್ಫ್ ಹೋರಾಟ ಆರಂಭಿಸಿದ ಯತ್ನಾಳ್- ಜಾರಕಿಹೊಳಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.