ಪ್ರಚಾರವಿಲ್ಲದ ಮ್ಯೂಸಿಯಂಗೆ ಬೇಕಿದೆ ಕಾಯಕಲ್ಪ
ಆರು ತಿಂಗಳಲ್ಲಿ ಈ ಸರಕಾರಿ ಮ್ಯೂಸಿಯಂಗೆ 60 ವರ್ಷ
Team Udayavani, Nov 25, 2019, 5:59 AM IST
ಮಹಾನಗರ: ಆರು ತಿಂಗಳು ಕಳೆದರೆ ಈ ಮ್ಯೂಸಿಯಂ 60 ವರ್ಷ ಪೂರೈಸುತ್ತದೆ. ಆದರೆ ಆರು ದಶಕಗಳಿಂದ ಇಲ್ಲೊಂದು ಮ್ಯೂಸಿಯಂ ಇದೆ ಎಂದು ಜನಸಾಮಾನ್ಯರಿಗೆ ಗೊತ್ತೇ ಇಲ್ಲ. ಪ್ರವಾಸಿ ತಾಣವಾದರೂ ಆಡಳಿತ ವರ್ಗದ ನಿರ್ಲಕ್ಷ್ಯದಿಂದಾಗಿ ಸರಕಾರಿ ಮ್ಯೂಸಿಯಂ ಸೊರಗುತ್ತಿದೆ.
ಪ್ರವಾಸಿತಾಣಗಳ ಪಟ್ಟಿಯಲ್ಲಿದ್ದರೂ ಇಲ್ಲದಂತಿರುವ ಮಂಗಳೂರಿನ ಏಕೈಕ ಸರಕಾರಿ ವಸ್ತು ಸಂಗ್ರಹಾಲಯವಾಗಿರುವ ಬಿಜೈಯ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾಲಯ ಪರಿಚಯದಿಂದ ದೂರವೇ ಉಳಿದಿದೆ. 1960ರ ಮೇ 4ರಂದು ಆರಂಭವಾದ ಈ ಮ್ಯೂಸಿಯಂ ದ್ವಿತೀಯ ಮಹಾಯುದ್ಧದಲ್ಲಿ ಸೇನಾ ವೈದ್ಯ ರಾಗಿದ್ದ ಕರ್ನಲ್ ಮಿರಾಜರ್ ಅವರ ಕೊಡುಗೆ. ತಮ್ಮ ತಾಯಿ ಶ್ರೀಮಂತಿ ಬಾಯಿ ಅವರ ಸ್ಮರಣಾರ್ಥ ಈ ಮ್ಯೂಸಿ ಯಂನ್ನು ಸ್ಥಾಪಿಸಿದ್ದರು.
ಅನಂತರ ಪ್ರಾಚೀನತೆಯ ಸೊಗಡು ಸಾರ್ವಜನಿಕರಿಗೆ ತಿಳಿಯುವಂತಾಗಲಿ ಎಂಬ ಕಾರಣಕ್ಕಾಗಿ ಅಪ ರೂಪದ ದಾಖಲೆಗಳನ್ನೊಳಗೊಂಡ ಈ ಮ್ಯೂಸಿಯಂನ್ನು ಸರ ಕಾರಕ್ಕೆ ಹಸ್ತಾಂತರಿಸಿದ್ದರು. ಆದರೆ ಪ್ರವಾಸಿ ಗರ ಮುಖ್ಯ ಆಕರ್ಷಣೆಯ ಕೇಂದ್ರವಾಗ ಬೇಕಿದ್ದ ಮ್ಯೂಸಿಯಂಗೆ ಪ್ರವಾಸಿಗರನ್ನು ಸೆಳೆ ಯಲು ಮಾಡಬೇಕಾದ ಯಾವುದೇ ಕೆಲ ಸಗಳನ್ನು ಇಲ್ಲಿನ ಆಡಳಿತ ವರ್ಗ ಮಾಡದೇ ಇರುವುದರಿಂದ ಪುರಾತನ ಮ್ಯೂಸಿಯಂ ಜನರಿಂದ ದೂರವೇ ಉಳಿ ಯುವಂತಾಗಿದೆ.
ನಾಮಫಲಕವಿಲ್ಲದ ಕಟ್ಟಡ
ಬಿಜೈಯ ಗುಡ್ಡ ಪ್ರದೇಶದಲ್ಲಿ ಈ ಮ್ಯೂಸಿಯಂ ಇದೆ. ಮುಖ್ಯ ರಸ್ತೆ ಬದಿಯಲ್ಲಿ ಮ್ಯೂಸಿಯಂಗೆ ದಾರಿ ತೋರಿಸುವ ಬೋರ್ಡ್ ಇದೆ. ಮ್ಯೂಸಿಯಂನ ಆವರಣದಲ್ಲಿ ಹಸುರು ಬೋರ್ಡ್‌ನಲ್ಲಿ ಮ್ಯೂಸಿಯಂನ ಹೆಸರು ಬರೆಯಲಾಗಿದೆ. ಆದರೆ ಮುಂದೆ ಹೋದಾಗ ಮೂರ್‍ನಾಲ್ಕು ಕಟ್ಟಡಗಳು ಕಾಣಿಸಿಕೊಳ್ಳುವುದರಿಂದ ಮ್ಯೂಸಿಯಂ ಯಾವುದು ಎಂದು ತತ್‌ಕ್ಷಣಕ್ಕೆ ತಿಳಿಯುವುದಿಲ್ಲ. ಸುಮಾರು ಮುಕ್ಕಾಲು ಎಕ್ರೆ ವ್ಯಾಪ್ತಿಯಲ್ಲಿರುವ ಕಟ್ಟಡದಲ್ಲಿ ಎಲ್ಲಿಯೂ ಮ್ಯೂಸಿಯಂ ಎಂದು ಸೂಚಿಸುವ ನಾಮಫಲಕವಾಗಲೀ, ಬರೆದಿರುವ ಕುರುಹುಗಳು ಇಲ್ಲ.
ಜನರೇ ಬರುವುದಿಲ್ಲ
ಶ್ರೀಮಂತಿ ಬಾಯಿ ಮ್ಯೂಸಿಯಂ ಇರುವ ಬಗ್ಗೆ ಬಹುತೇಕ ಜನರಿಗೆ ತಿಳಿದಿಲ್ಲ. ಅಲ್ಲದೆ, ಈ ಮ್ಯೂಸಿಯಂನ್ನು ಜನಾಕರ್ಷಣೆಗೊಳಪಡಿಸುವ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯದೇ ಇರುವುದರಿಂದ ಇಲ್ಲಿಗೆ ಪ್ರವಾಸಿಗರು ಮಾತ್ರವಲ್ಲ, ಸ್ಥಳೀಯ ಜನರೂ ಬರುತ್ತಿಲ್ಲ ಎಂದು ಇಲ್ಲಿನ ಕೆಲವು ಸಿಬಂದಿ ಹೇಳುತ್ತಾರೆ. ಐತಿಹಾಸಿಕ ಘಟನೆಗಳಿಗೆ ಸಂಬಂಧಿಸಿದಂತಹ ಯಾವುದೇ ಕಾರ್ಯಕ್ರಮಗಳು ಇಲ್ಲಿ ನಡೆಯುವುದಿಲ್ಲ. ಅಪರೂಪಕ್ಕೊಮ್ಮೊಮ್ಮೆ ನಾಣ್ಯ, ಅಂಚೆ ಚೀಟಿ ಪ್ರದರ್ಶನದಂತಹ ಕಾರ್ಯಕ್ರಮಗಳು ನಡೆಯುತ್ತವೆಯಾದರೂ ಅದಕ್ಕೂ ಜನ ಬರುವುದು ವಿರಳ.
ಅಭಿವೃದ್ಧಿಗೆ ಆದ್ಯತೆ ನೀಡಿ
ಮ್ಯೂಸಿಯಂನಲ್ಲಿ ಪುರಾತನ ಕಡತಗಳು, ಕ್ರಿ.ಶ. 1624ರ ತಾಮ್ರಪಟ ಶಾಸನ, ನಾಣ್ಯ ಸಂಗ್ರಹ, 11, 16ನೇ ಶತ ಮಾನದ ಕಂಚು, ತಾಮ್ರದಲ್ಲಿ ಮಾಡಿದ ದೇವರ ವಿಗ್ರಹಗಳು, 16ನೇ ಶತಮಾನದ ಅಡುಗೆ ಪರಿಕರಗಳು, ನೂತನ ಶಿಲಾ ಯುಗ, ಆದಿ ಶಿಲಾಯುಗದ ಪಳೆಯುಳಿಕೆಗಳು, ತಾಳೆಗರಿ ಗ್ರಂಥ, ಆಗಿನ ಸಂದರ್ಭ ಯುದ್ಧಕ್ಕೆ ಬಳಸುತ್ತಿದ್ದ ಫಿರಂಗಿ, ಕೋವಿ, ಆಯುಧಗಳು, 19ನೇ ಶತಮಾನದ ದೀಪಸ್ತಂಭ, ವೀಣೆ, ನಗಾರಿ ಸೇರಿದಂತೆ ಪುರಾತನ ಕಾಲದ ಹಲವಾರು ವಸ್ತುಗಳು ಈ ವಸ್ತು ಸಂಗ್ರಹಾಲಯದಲ್ಲಿವೆ. ಅಪರೂಪಕ್ಕೆ ನೋಡಲು ಸಿಗುವ ಇಂತಹ ವಸ್ತುಗಳನ್ನು ವೀಕ್ಷಿಸಲು ಜನರೂ ಆಸಕ್ತರಾಗಿರುವುದರಿಂದ ಪುರಾತತ್ವ ಇಲಾಖೆಯು ಇದರ ಅಭಿವೃದ್ಧಿಗೆ ಗಮನ ಕೊಡುವುದು ಅವಶ್ಯವಾಗಿದೆ.
ಮುತುವರ್ಜಿ ವಹಿಸುವೆ
ಬಿಜೈಯ ಶ್ರೀಮಂತಿ ಬಾಯಿ ಸರಕಾರಿ ವಸ್ತು ಸಂಗ್ರಹಾ ಲಯ ಮತ್ತು ಇತರ ಕೆಲವು ಇಂತಹ ಪ್ರಾಚೀನ ವಸ್ತು ಸಂಗ್ರಹಾಲಯಗಳನ್ನು ಅಭಿವೃದ್ಧಿ ಗೊಳಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುವುದು. ಉಪಚು ನಾವಣೆಗಳು ಮುಗಿದ ನಂತರ ಸಂಬಂಧ ಪಟ್ಟ ಇಲಾಖೆಗೆ ಈ ಬಗ್ಗೆ ಪತ್ರ ಬರೆಯಲಾಗುವುದು.
- ಡಿ. ವೇದವ್ಯಾಸ ಕಾಮತ್, ಶಾಸಕರು
ಆವರಣದಲ್ಲಿ ನಾಮಫಲಕ 1960ರಲ್ಲಿ ಶ್ರೀಮಂತಿ ಬಾಯಿ ಮ್ಯೂಸಿಯಂ ಆರಂಭವಾಗಿದ್ದು, ಅನಂತರ ಸರಕಾರಕ್ಕೆ ಹಸ್ತಾಂತರಗೊಂಡಿತು. ವಸ್ತು ಸಂಗ್ರಹಾ ಲಯವನ್ನು ಸೂಚಿಸುವ ನಾಮ ಫಲಕ ಪ್ರವೇಶ ಆವರಣದಲ್ಲಿದೆ. ಹಸುರು ಬೋರ್ಡ್ ನಲ್ಲಿ ಮ್ಯೂಸಿಯಂನ ಹೆಸರು ಬರೆಯಲಾಗಿದೆ. ಇದರಿಂದ ಸಂಗ್ರಹಾಲಯ ಎಲ್ಲಿದೆ ಎಂದು ತಿಳಿಯುತ್ತದೆ.
- ಧನಲಕ್ಷ್ಮೀ ಅಮ್ಮಾಳ್, ವಸ್ತು ಸಂಗ್ರಹಾಲಯ ಅಧಿಕಾರಿ
- ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Protest: ಬಾಂಗ್ಲಾದಲ್ಲಿ ಚಿನ್ಮಯ ಕೃಷ್ಣದಾಸ ಪ್ರಭು ಬಂಧನ ಖಂಡಿಸಿ ಮಂಗಳೂರಿನಲ್ಲಿ ಪ್ರತಿಭಟನೆ
Train: ಮುರುಡೇಶ್ವರ ಎಕ್ಸ್‌ಪ್ರೆಸ್ ಸಮಯ ಬದಲಾವಣೆ ಬೇಡ
Mangaluru: ಮದ್ಯ ಅಕ್ರಮ ಸಾಗಾಟ, ದಾಸ್ತಾನು; ಆರೋಪಿ ಖುಲಾಸೆ
National Highway ಅವ್ಯವಸ್ಥೆ ಸಂಬಂಧಿಸಿ ನಾಗರಿಕರ ಅಹವಾಲಿಗೆ ವೇದಿಕೆ
Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Dandeli: ಕೆನರಾ ಬ್ಯಾಂಕ್ ಎಟಿಎಂ ಕೇಂದ್ರದೊಳಗೆ ಹಾವು ಪ್ರತ್ಯಕ್ಷ
BGT 2024: ಟೀಂ ಇಂಡಿಯಾಗೆ ಶುಭ ಸುದ್ದಿ; ತಂಡಕ್ಕೆ ಮರಳಿದ ಪ್ರಮುಖ ಆಟಗಾರ
ED Raids: ಬೆಳ್ಳಂಬೆಳಗ್ಗೆ ಉದ್ಯಮಿ ರಾಜ್ ಕುಂದ್ರಾ ಮನೆ, ಕಚೇರಿ ಮೇಲೆ ಇಡಿ ದಾಳಿ…
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.