ಪ್ರವಾಹಕ್ಕೆ ತತ್ತರಿಸಿದ ಕೊಣ್ಣೂರ ಗ್ರಂಥಾಲಯ!


Team Udayavani, Nov 25, 2019, 1:16 PM IST

gadaga-tdy-3

ನರಗುಂದ: ಇತಿಹಾಸದಲ್ಲೇ ಭೀಕರವಾಗಿ ಅಪ್ಪಳಿಸಿದ ಮಲಪ್ರಭಾ ನದಿ ಪ್ರವಾಹಕ್ಕೆ ಸಂಪೂರ್ಣ ಜಲಾವೃತಗೊಂಡಿದ್ದ ತಾಲೂಕಿನ ಕೊಣ್ಣೂರ ಗ್ರಾಮ ಚೇತರಿಸಿಕೊಳ್ಳುತ್ತಿದೆ. ಈ ಮಧ್ಯೆ ಜಲಾವೃತಕ್ಕೆ ಅಲ್ಲಿನ ಗ್ರಾಮ

ಪಂಚಾಯತ್‌ ಗ್ರಂಥಾಲಯ ಕೂಡ ತತ್ತರಿಸಿದ್ದು ಸಾಕಷ್ಟು ಹಾನಿಗೊಳಗಾಗಿದೆ. ಇದರಿಂದ ಓದುಗರಿಗೆ ಪುಸ್ತಕ ಕೊರತೆ ಎದುರಾಗಿದೆ. ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡ ಗ್ರಾಮದ ವಿಎಸ್‌ಎಸ್‌ ಬ್ಯಾಂಕ್‌ ಪಕ್ಕದ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯ ಪ್ರವಾಹ ಹೊಡೆತದಿಂದ ಇನ್ನೂ ಚೇತರಿಸಿಕೊಳ್ಳುತ್ತಿದೆ. ಪರಿಣಾಮ ಓದುಗರು ಸ್ವತ್ಛತೆಗಾಗಿ ಪರದಾಡುವಂತಾಗಿದೆ.

5500 ಪುಸ್ತಕಗಳು: ಆ.8ರ ಬಳಿಕ 2 ಬಾರಿ ಪ್ರವಾಹಕ್ಕೆ ಕೊಣ್ಣೂರ ಜಲಾವೃತಗೊಂಡ ಸಂದರ್ಭದಲ್ಲಿ ಗ್ರಂಥಾಲಯ ಕಟ್ಟಡಕ್ಕೂ ಹಾನಿಯಾಗಿ ಚೇತರಿಸಿಕೊಳ್ಳುತ್ತಿದೆ. 5500 ಪುಸ್ತಕಗಳಿದ್ದು, 2 ಸಾವಿರಕ್ಕೂ ಹೆಚ್ಚು ಪುಸ್ತಕ ಪ್ರವಾಹಕ್ಕೆ ಹಾಳಾಗಿವೆ. ಇಡೀ ಕಟ್ಟಡವೇ ಜಲಾವೃತ ಪರಿಣಾಮ ಒಳಗಿನ ಸಾಮಗ್ರಿ, ಪುಸ್ತಕಗಳಿಗೆ ಬಹಳ ಧಕ್ಕೆಯಾಗಿದೆ. ಅಳಿದುಳಿದ 3500ಕ್ಕೂ ಹೆಚ್ಚು ಪುಸ್ತಕ ರಕ್ಷಿಸಲಾಗಿದೆ.

ಕಿರಿದಾದ ಕಟ್ಟಡ: ಹೆದ್ದಾರಿಗೆ ಹತ್ತಿರವಿರುವ ಗ್ರಂಥಾಲಯಕ್ಕೆ ಕಟ್ಟಡ ಕಿರಿದಾಗಿದೆ. ಹೀಗಾಗಿ ಹೆಚ್ಚುವರಿ ಸೌಲಭ್ಯಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ಮುಂದಾದರೂ ಸ್ಥಳ ಅಭಾವದಿಂದ ಇದ್ದುದರಲ್ಲೇ ಮುನ್ನಡೆಸಲಾಗಿದೆ.

ಸ್ವಚ್ಛತೆ ಕೊರತೆ: ಸ್ವತ್ಛತೆ ಕೊರತೆ ಗ್ರಂಥಾಲಯ ಮತ್ತು ಓದುಗರನ್ನು ಬಾಧಿಸುತ್ತಿದೆ. ಗ್ರಂಥಾಲಯ ಮುಂಭಾಗ ಬಲಕ್ಕೆ ಮೊಬೈಲ್‌ ನೆಟ್‌ವರ್ಕ್‌ ಟವರ್‌ ಇದ್ದು, ಜನರೇಟರ್‌ ಇರಿಸಿದ್ದರಿಂದ ಸುತ್ತಲೂ ಗಲೀಜು ವಾತಾವರಣ ಕಂಡು ಬಂದಿದೆ. ಮುಂಭಾಗದಲ್ಲೂ ಸ್ವಚ್ಛತೆ ಕೊರತೆ ಕಾಣಿಸಿದೆ. ಕಟ್ಟಡಕ್ಕೆ ಸುಣ್ಣ ಬಣ್ಣದ ಅಲಂಕಾರ ಅಗತ್ಯವಿದೆ. ತಾಲೂಕಿನಲ್ಲೇ ಬಹುದೊಡ್ಡ ಕೊಣ್ಣೂರ ಗ್ರಾಮದ ಗ್ರಾಮ ಪಂಚಾಯತ್‌ ಗ್ರಂಥಾಲಯ ಸುಧಾರಣೆಗೆ ಇಲಾಖೆ ಮುಂದಾಗಬೇಕಿದೆ. ಮುಖ್ಯವಾಗಿ ಕಟ್ಟಡಕ್ಕೆ ಬಣ್ಣ, ಹೆಚ್ಚುವರಿ ಪುಸ್ತಕಗಳ ಲಭ್ಯತೆಗೆ ನೆರವಾಗಬೇಕಿದೆ.

 ಮ್ಯಾಗಜಿನ್‌ಗೆ ಗ್ರಾಪಂ ನೆರವು:  ಗ್ರಂಥಾಲಯಕ್ಕೆ 3 ಕನ್ನಡ ದಿನಪತ್ರಿಕೆ ಪೂರೈಕೆಯಿದೆ. ಮ್ಯಾಗಜಿನ್‌ಗೆ ಅನುದಾನ ಲಭ್ಯವಿಲ್ಲ. ಗ್ರಂಥಾಲಯ ಮೇಲ್ವಿಚಾರಕ ಪ್ರವೀಣ ವಾಸನ ಮನವಿ ಮೇರೆಗೆ ನೆರವಿಗೆ ಮುಂದಾದ ಅಲ್ಲಿನ ಗ್ರಾಮ ಪಂಚಾಯತ್‌, ಒಂದು ಮ್ಯಾಗಜಿನ್‌, ಉದ್ಯೋಗ ವಾರ್ತೆ ವೆಚ್ಚ ಭರಿಸಿ ಓದುಗರಿಗೆ ನೆರವಾಗಿದೆ.

ನಿರ್ದೇಶಕರ ಭೇಟಿ :  ಮಲಪ್ರಭಾ ಪ್ರವಾಹದಿಂದ ಧಕ್ಕೆಯಾದ ಕೊಣ್ಣೂರ ಗ್ರಂಥಾಲಯಕ್ಕೆ ಇತ್ತೀಚೆಗೆ ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಸತೀಶಕುಮಾರ ಹೊಸಮನಿ ಭೇಟಿ ನೀಡಿದ್ದಾರೆ. ಧಕ್ಕೆಯಾದ ಸಾಮಗ್ರಿ, ಹೆಚ್ಚುವರಿ ಪುಸ್ತಕ ದಾಸ್ತಾನು ಬಗ್ಗೆ ಭರವಸೆ ನೀಡಿದ್ದಾರೆ.

ಪ್ರವಾಹಕ್ಕೆ ಧಕ್ಕೆಯಾಗಿದೆ:  ಮಲಪ್ರಭಾ ಪ್ರವಾಹದಿಂದ ಕಟ್ಟಡ ಜಲಾವೃತವಾಗಿತ್ತು. ಸುಮಾರು 2 ಸಾವಿರದಷ್ಟು ಪುಸ್ತಕಗಳಿಗೆ ಧಕ್ಕೆಯಾಗಿದೆ. ಇಲಾಖೆ ನಿರ್ದೇಶಕರು ಭೇಟಿ ನೀಡಿ ಪರಿಶೀಲಿಸಿ ಅಗತ್ಯ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದಾರೆ. –ಪ್ರವೀಣ ವಾಸನ. ಗ್ರಂಥಾಲಯ ಮೇಲ್ವಿಚಾರಕರು.

 

-ಸಿದ್ಧಲಿಂಗಯ್ಯ ಮಣ್ಣೂರಮಠ

ಟಾಪ್ ನ್ಯೂಸ್

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

9-ullala

Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

BGT: ಆಸೀಸ್‌ ಮಾಧ್ಯಮದ ವಿರುದ್ದ ವಿರಾಟ್‌ ಗರಂ: ಏರ್‌ಪೋರ್ಟ್‌ ನಲ್ಲಿ ವರದಿಗಾರ್ತಿ ಜತೆ ಜಗಳ

8-belthangady

Belthangady: ಕ್ರಿಸ್ಮಸ್‌ ಹಬ್ಬಕ್ಕೆ ವಿದ್ಯುತ್ ಅಲಂಕಾರ ಮಾಡುವ ವೇಳೆ ಶಾಕ್: ಬಾಲಕ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು

Chikkamagaluru: ಎಮ್ಮೆ ಹುಡುಕಲು ಹೋದವರ ಮೇಲೆ ಕಾಡಾನೆ ದಾಳಿ; ಮಗ ಪರಾರಿ, ತಂದೆ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

24-

Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ

18-gadaga

Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ‌

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾವು

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kadur: ದೇಗುಲ ಕಂಪೌಂಡ್‌ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

9

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

8

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ

0055

BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ‌ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.