ಮುಚ್ಚಿದ್ದ ಶಾಲೆಗೆ ಮರುಜೀವ


Team Udayavani, Nov 25, 2019, 3:39 PM IST

mandya-tdy-1

ಭಾರತೀನಗರ: ಮೂಲಭೂತ ಸೌಕರ್ಯ ಕೊರತೆ ಹಾಗೂ ಶಿಕ್ಷಕರು-ಮಕ್ಕಳಿಲ್ಲದ ಪರಿಣಾಮ ಕಳೆದ ಒಂದು ವರ್ಷದಿಂದ ಮುಚ್ಚಿದ್ದ ಸರ್ಕಾರಿ ಶಾಲೆಯೊಂದನ್ನು ಜಾಗೃತ ಯುವಕರ ತಂಡ ಪುನರುಜ್ಜೀವನಗೊಳಿಸಿದೆ.

ಇಲ್ಲಿಗೆ ಸಮೀಪದ ಎಸ್‌.ಐ.ಹೊನ್ನಲ ಗೆರೆಯಲ್ಲಿ 1 ರಿಂದ 6ನೇ ತರಗತಿಯುಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸುಣ್ಣ ಬಣ್ಣ ಕಂಡು ತನ್ನ ಹಿಂದಿನ ವೈಭವಕ್ಕೆ ಮರಳಿ ನಿಂತಿದೆ. ವಿವಿಧ ಖಾಸಗಿ ಶಾಲೆಗಳಲ್ಲಿ ದಾಖಲಾಗಿದ್ದ ಮಕ್ಕಳನ್ನು ಯುವಕರ ತಂಡ ಆಂದೋಲನ ನಡೆಸಿ, ಪೋಷಕರ ಮನವೊಲಿಸಿ 43 ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆ ತಂದಿದ್ದಾರೆ.

ಆಂದೋಲನ ನಡೆಸಿದ್ದರು: ಈ ಶಾಲೆಗೆ ಎಸ್‌ .ಐ.ಹೊನ್ನಲಗೆರೆ, ಹೊಸೂರು ಮತ್ತು ಬಾನಗಳ್ಳಿಯಿಂದ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮಾಡುತ್ತಿದ್ದರು. ಆದರೆ ಶಿಕ್ಷಕರಿಲ್ಲದೆ, ಮೂಲ ಸೌಕರ್ಯವೂ ಇಲ್ಲದ್ದರಿಂದ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಿದ್ದರು. ಹೀಗಾಗಿ 2018-19ನೇ ಸಾಲಿನಲ್ಲಿ ಮಕ್ಕಳೇ ಇಲ್ಲದೆ ಶಾಲೆ ಬಾಗಿಲು ಮುಚ್ಚಿತ್ತು. ಈ ಪರಿಸ್ಥಿತಿಯಿಂದ ಮನನೊಂದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮರಿಗೌಡ, ಮುಖ್ಯ ಶಿಕ್ಷಕ ಶಿವಕುಮಾರ್‌, ಗ್ರಾಮಸ್ಥರಾದ ನಾಗರಾಜು, ಶ್ರೀನಿವಾಸ್‌, ನವೀನ್‌, ಮಾದೇಗೌಡ, ಬಾನಗಳ್ಳಿ ರಮೇಶ್‌, ರಾಮು ಶಾಲೆ ಸ್ಥಿತಿಗತಿ ಕುರಿತಂತೆ ಜಾಲತಾಣಗಳಲ್ಲಿ ಹಾಕಿ ನೆರವಿಗಾಗಿ ಮನವಿ ಮಾಡಿದರು. ಅಲ್ಲದೆ ಮೂರು ಗ್ರಾಮಗಳಲ್ಲಿ ಆಂದೋಲನ ನಡೆಸಿ ಮಕ್ಕಳನ್ನು ಮರಳಿ ಸರ್ಕಾರಿ ಶಾಲೆಗೆ ಕರೆತರುವ ನಿರ್ಧಾರ ಕೈಗೊಂಡರು.

ಏನೇನು ಸೌಲಭ್ಯ: ಈ ಪ್ರಾಮಾಣಿಕ ಪ್ರಯತ್ನಕ್ಕೆ ಪ್ರತಿಫ‌ಲವೆಂಬಂತೆ ಇದೇ ಶಾಲೆಯಲ್ಲಿ ಓದಿ, ಬೆಂಗಳೂರಿನಲ್ಲಿದ್ದ ಬಾನಗಳ್ಳಿ ತಾರಾನಂದ ಅವರು ಬೆಂಗಳೂರಿನ “ಕನ್ನಡ ಮನಸ್ಸುಗಳು’ ತಂಡಕ್ಕೆ ವಿಷಯ ತಿಳಿಸಿದ್ದರು. ಕೂಡಲೇ ನೆರವಿಗೆ ಬಂದ ಅನುಷಾ, ಅಭಿ ಇತರರು ಈ ಶಾಲೆಯ ಸುಣ್ಣಬಣ್ಣದ ವೆಚ್ಚ ಭರಿಸಿದರು. ಬಳಿಕ ಶಾಲೆಗೆ ಶುಕ್ರದೆಸೆ ಆರಂಭವಾಯಿತು.

ದಾನಿ ಎಂಜಿನಿಯರ್‌ ಬಸವೇಗೌಡರು ಎಲ್ಲಾ 43 ಮಕ್ಕಳಿಗೂ ಎರಡು ಜೊತೆ ಸಮವಸ್ತ್ರ, ಶೂ, ನೋಟ್‌ಬುಕ್‌ ಮತ್ತಿತರ ಲೇಖನ ಸಾಮಗ್ರಿ ನೀಡಿದ್ದಾರೆ. ಮಾತ್ರವಲ್ಲ ಸರ್ಕಾರದಿಂದ ಇರುವ ಮೂವರು ಶಿಕ್ಷಕರೊಂದಿಗೆ ಇದೇ ಯುವಜನರ ತಂಡ ಮೂವರು ಶಿಕ್ಷಕರನ್ನು ನೇಮಕ ಮಾಡಿಕೊಂಡು ವೇತನ ಪಾವತಿಸುವ ಮೂಲಕ ಉತ್ತಮ ಶೈಕ್ಷಣಿಕ ವಾತಾವರಣ ಮೂಡಿಸಿದೆ. ಈ ಮೂಲಕ ಖಾಸಗಿ ಶಾಲೆಗಳತ್ತ ಪೋಷಕರು ತಿರುಗಿಯೂ ನೋಡದಂತೆ ಮಾಡಿರುವುದು ರಾಜ್ಯದಲ್ಲೇ ಮಾದರಿ ಪ್ರಯತ್ನವಾಗಿದೆ.

 

-ಅಣ್ಣೂರು ಸತೀಶ್‌

ಟಾಪ್ ನ್ಯೂಸ್

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mandya-Temple

Mandya: ದಲಿತರ ದೇಗುಲ ಪ್ರವೇಶ: ಮೂರ್ತಿ ಹೊತ್ತೊಯ್ದ ಸವರ್ಣೀಯರು!

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

Ashok-Mandya

Waqf Notice: ಕೂಡಲೇ ವಕ್ಫ್ ಮಂಡಳಿ ರದ್ದು ಮಾಡಿ: ಆರ್‌. ಅಶೋಕ್‌ ಆಗ್ರಹ

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

Mandya: ಸ್ನೇಹಿತನ ಪತ್ನಿ ಜತೆ ಅಕ್ರಮ ಸಂಬಂಧ; ಸಕ್ಕರೆನಾಡಲ್ಲಿ ಯುವಕನ ಕೊಲೆ!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

parthagali

Udupi: ಶ್ರೀಕೃಷ್ಣ ಮಠ: ಗೀತೋತ್ಸವಕ್ಕೆ ಪರ್ತಗಾಳಿ ಶ್ರೀಗಳಿಗೆ ಆಹ್ವಾನ

kalaranga

Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ

kapu-marigudi

Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.