ರಣಹೇಡಿ: ಡಿ ಗ್ಲಾಮ್ ಪಾತ್ರದಲ್ಲಿ ಗ್ಲಾಮರಸ್ ಗೊಂಬೆ ಐಶ್ವರ್ಯಾ!
Team Udayavani, Nov 26, 2019, 8:00 AM IST
ಪ್ರತೀ ನಟಿಯರೂ ಸಹ ಕನಸಿನ ಪಾತ್ರವೊಂದನ್ನು ಮನಸೊಳಗೆ ಸಾಕಿಕೊಂಡಿರುತ್ತಾರೆ. ಅದೆಷ್ಟು ಪಾತ್ರಗಳನ್ನು ನಿರ್ವಹಿಸಿ ಭಾರೀ ಪ್ರಸಿದ್ಧಿ ಪಡೆದುಕೊಂಡಾದ ನಂತರವೂ ಬಹುತೇಕರಲ್ಲಿ ಕನಸಿನ ಪಾತ್ರ ಹಾಗೆಯೇ ಉಳಿದುಕೊಂಡಿರುತ್ತದೆ. ಆದರೆ ಆರಂಭಿಕ ಹೆಜ್ಜೆಗಳಲ್ಲಿಯೇ ಅಂಥಾ ಕನಸಿನ ಪಾತ್ರ ತಾನೇ ತಾನಾಗಿ ಹುಡುಕಿಕೊಂಡು ಬರೋದು ಕೆಲವೇ ಕೆಲ ಅದೃಷ್ಟವಂತೆಯರನ್ನು ಮಾತ್ರ. ಈ ಹಿಂದೆ ರವಿ ಹಿಸ್ಟರಿ ಚಿತ್ರದಲ್ಲಿ ನಾಯಕಿಯರಲ್ಲೊಬ್ಬರಾಗಿ ನಟಿಸಿದ್ದ ಐಶ್ವರ್ಯಾ ರಾವ್ ಕೂಡಾ ಆ ಸಾಲಿನಲ್ಲಿ ಸೇರಿಕೊಳ್ಳುತ್ತಾರೆ. ಯಾಕೆಂದರೆ, ರಣಹೇಡಿ ಚಿತ್ರದ ಮೂಲಕ ಅವರ ಕನಸಿನಂಥಾ ಪಾತ್ರ ಅವರಿಗೆ ದಕ್ಕಿದೆ.
ಮನು ಕೆ ಶೆಟ್ಟಿಹಳ್ಳಿ ನಿರ್ದೇಶನದ ರಣಹೇಡಿ ಚಿತ್ರದಲ್ಲಿ ಐಶ್ವರ್ಯಾ ಪಾತ್ರಕ್ಕೆ ಗ್ಲಾಮರ್‌ನ ಯಾವ ಅಂಶಗಳೂ ಇಲ್ಲ. ಈ ಹಿಂದೆ ರವಿ ಹಿಸ್ಟರಿ ಚಿತ್ರದಲ್ಲಿ ಮಾಡ್ ಲುಕ್ಕಿನಲ್ಲಿ ಮಿಂಚಿದ್ದ ಐಶ್ವರ್ಯಾ ಇಲ್ಲಿ ಪಕ್ಕಾ ಕೂಲಿಕಾರರ ಹುಡುಗಿಯಾಗಿ ನಟಿಸಿದ್ದಾರೆ. ಬಳ್ಳಾರಿ ಸೀಮೆಯಿಂದ ಮಂಡ್ಯಕ್ಕೆ ಕಬ್ಬು ಕಟಾವಿಗೆ ಬರುವ ಕೂಲಿಕಾರರ ಕುಟುಂಬದ ಹುಡುಗಿಯಾಗಿ ಐಶ್ವರ್ಯಾ ನಟಿಸಿದ್ದಾರೆ. ಓರ್ವ ನಟಿಯಾಗಿ ಥರ ಥರದ ಪಾತ್ರಗಳನ್ನು ನಿರ್ವಹಿಸಬೇಕೆಂಬ ಆಸೆ ಹೊಂದಿರುವವರು. ರಣಹೇಡಿಯಲ್ಲಿ ಅವರಿಗೆ ಅದಕ್ಕೆ ತಕ್ಕುದಾದ ಪಾತ್ರವೇ ಸಿಕ್ಕಿದೆಯಂತೆ. ಈ ಪಾತ್ರದಲ್ಲಿ ಐಶ್ವರ್ಯಾ ಎಂಥವರೂ ಮೆಚ್ಚಿಕೊಳ್ಳುವಂತೆ ನಟಿಸಿದ್ದಾರೆಂಬ ಮೆಚ್ಚುಗೆ ಚಿತ್ರತಂಡದಲ್ಲಿದೆ.
ಐಶ್ವರ್ಯಾ ಪಾಲಿಗೆ ರವಿ ಹಿಸ್ಟರಿ ಮೊದಲ ಚಿತ್ರ. ಅದರ ಮೂಲಕವೇ ಗಮನ ಸೆಳೆದಿದ್ದ ಅವರಿಗೆ ರಣಹೇಡಿ ಎರಡನೇ ಅನುಭವ. ಈ ಎರಡನೇ ಹೆಜ್ಜೆಯಲ್ಲಿ ಅವರಿಗೆ ಸವಾಲಿನ ಪಾತ್ರವೇ ಸಿಕ್ಕಿದೆ. ಅದು ಯಾವುದೇ ಒನಪು ವಯ್ಯಾರಗಳಿಲ್ಲದ ಕಷ್ಟ ಜೀವಿಯಾದ ಹೆಣ್ಣುಮಗಳ ಪಾತ್ರ. ಅದನ್ನು ನಿರ್ವಹಿಸಲು ಹಲವಾರು ತಿಂಗಳುಗಳ ಕಾಲ ಐಶ್ವರ್ಯಾ ಮಾನಸಿಕವಾಗಿ ಸಿದ್ಧತೆ ನಡೆಸಿದ್ದಾರಂತೆ. ಆ ನಂತರದಲ್ಲಿ ಕರ್ಣ ಕುಮಾರ್‌ಗೆ ಜೋಡಿಯಾಗಿ ನಟಿಸಿರೋ ಐಶ್ವರ್ಯಾ ಬಡ ಕೂಲಿಕಾರ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದಾರೆ. ಅವರೇ ಹೇಳಿಕೊಳ್ಳುವ ಪ್ರಕಾರ ಅಪರೂಪದ ಕಥೆಯನ್ನೊಳಗೊಂಡಿರುವ ಈ ಚಿತ್ರ ಅವರ ವೃತ್ತಿ ಬದುಕಿನಲ್ಲಿ ಮಹತ್ವದ್ದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pani movie: ಕನ್ನಡದಲ್ಲಿ ಜೋಜು ಜಾರ್ಜ್ ಪಣಿ
Dasarahalli Kannada Movie: ದಾಸರಹಳ್ಳಿಯಲ್ಲಿ ಧರ್ಮ ಸಂಘರ್ಷ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Megha Movie: ನಾನು ಎಂಟು ಸಾರಿ ಕೇಳಿದ ಕಥೆಯಿದು…: ಕಿರಣ್ ರಾಜ್
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Yadagiri: ಗ್ಯಾರಂಟಿಗಳಿಂದ ಹಿಂದೆ ಸರಿಯಲ್ಲ: ಸಚಿವ ದರ್ಶನಾಪುರ
Gundlupete:ಮರಿಯಾನೆ ಬೇಟೆಗೆ ಹೊಂಚುಹಾಕುತ್ತಿದ್ದ ಹುಲಿ ಮೇಲೆ ತಾಯಿಯಾನೆ ದಾಳಿ:ವಿಡಿಯೋ ವೈರಲ್
Pakistan: ಪಾಕ್ ಸೇನೆ ಮತ್ತು ಇಮ್ರಾನ್ ಸಂಘರ್ಷ- ಯುಎಇ ಮಧ್ಯಸ್ಥಿಕೆ ವಹಿಸಲಿ: ಐಎಸ್ ಐ
IPL 2025: ಮೆಗಾ ಹರಾಜಿನ ಬಳಿಕ ಎಲ್ಲಾ ಹತ್ತು ತಂಡಗಳು ಹೀಗಿವೆ ನೋಡಿ
UV Fusion: ಕರ್ನಾಟಕ: ನಮ್ಮೆಲ್ಲರ ಉಸಿರಾಗಲಿ ಕನ್ನಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.