ಹಂತಹಂತವಾಗಿ ಅಭಿವೃದ್ಧಿ ಹೊಂದಿ ಶತಮಾನ ಪೂರೈಸಿದ ಶಾಲೆ

ಕೊಡಂಗಾಯಿ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ

Team Udayavani, Nov 26, 2019, 5:00 AM IST

2311VTL-KOD

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

ವಿಟ್ಲ: ವಿಟ್ಲಪಟ್ನೂರು ಗ್ರಾಮದ ಕೆಳಗಿನ ಮೂರುಕಜೆಯಲ್ಲಿ ಹಿರಿಯರು 1912ರಲ್ಲಿ ಶಾಲೆ ಆರಂಭಿಸಿದರು. ತೆಂಗಿನಗರಿ ಮತ್ತು ಮುಳಿಹುಲ್ಲಿನ ಛಾವಣಿಯಲ್ಲಿ ನೆಲದಲ್ಲೇ ಕುಳಿತು ಪಾಠ ಕೇಳುವ ವ್ಯವಸ್ಥೆ ಆರಂಭಿಸಿದರು. ಕೆಲವು ಸಮಯಗಳ ಬಳಿಕ ಪರ್ತಜೆ ವೆಂಕಟ್ರಮಣ ಭಟ್‌ ಭೂಮಿ ಖರೀದಿಸಿದರು.

ಅನಂತರ ಶಾಲೆ ತಾ| ಬೋರ್ಡ್‌ ಆಡಳಿತಕ್ಕೆ ಒಳಪಟ್ಟಿತ್ತು.ಅನಂತರ ಪರ್ತಜೆ ವೆಂಕಟ್ರಮಣ ಭಟ್‌ ಅವರ ಪುತ್ರ ಆಗಿನ ಪಂಚಾಯತ್‌ ಅಧ್ಯಕ್ಷ ಮೂರ್ಕಜೆ ನಾರಾಯಣ ಭಟ್‌ ಅವರು ಸ್ವಂತ ಖರ್ಚಿನಲ್ಲಿ ಮುಖ್ಯ ರಸ್ತೆಯ ಬಳಿ ಶಾಲೆಗೆ ಒಂದು ಹಂಚಿನ ಕಟ್ಟಡವನ್ನು ನಿರ್ಮಿಸಿ, ಬಾಡಿಗೆ ನೆಲೆಯಲ್ಲಿ ಸರಕಾರಕ್ಕೆ ಕೊಟ್ಟರು. ಪೂರ್ಲಪ್ಪಾಡಿ ಗೌಡ ಮಾಸ್ತರರು ಆಗ ಶಿಕ್ಷಕರಾಗಿದ್ದರು.

ಸ್ವಂತ ಕಟ್ಟಡಕ್ಕೆ ಸ್ಥಳಾಂತರ
ನದಿಗೆ ಸೇತುವೆಯಿಲ್ಲದೇ ಇದ್ದುದರಿಂದ ವಿಟ್ಲಪಟ್ನೂರು ಗ್ರಾಮದ ಒಂದು ಭಾಗದ ವಿದ್ಯಾರ್ಥಿಗಳು ಮಂಕುಡೆ, ಎತ್ತುಕಲ್ಲು ಇತ್ಯಾದಿ ಶಾಲೆಗೆ ತೆರಳಿದ್ದರು. 1983ರಲ್ಲಿ ನದಿಯ ಮತ್ತೂಂದು ಭಾಗದಲ್ಲಿ ಸುಮಾರು 1.48 ಎಕ್ರೆ ಸರಕಾರಿ ಸ್ಥಳ ಮಂಜೂರಾಗಿ ಸರಕಾರದ ಅನುದಾನ ಮತ್ತು ಊರ ವಿದ್ಯಾಭಿಮಾನಿಗಳ ಸಹಕಾರದಿಂದ ಕಟ್ಟಡ ನಿರ್ಮಾಣವಾಯಿತು. ಆಗ ನದಿಗೆ ಸೇತುವೆಯೂ ನಿರ್ಮಾಣವಾಗಿತ್ತು. ಶಾಲೆ ಬಾಡಿಗೆ ಕಟ್ಟಡದಿಂದ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಜನಪ್ರತಿನಿಧಿಗಳು, ದಾನಿಗಳು ನೀಡಿದ ಕೊಡುಗೆ ಹಾಗೂ ಶ್ರೀಕ್ಷೇತ್ರ ಧರ್ಮಸ್ಥಳದಿಂದ ಅನುದಾನಗಳು ಬಂದು ಶೌಚಾಲಯ, ಕೊಠಡಿ, ಆವರಣಗೋಡೆ, ಮೈದಾನ, ನಲಿಕಲಿ, ಅಕ್ಷರ ದಾಸೋಹ ಕಟ್ಟಡಗಳು ನಿರ್ಮಾಣಗೊಂಡವು.

ವಿಟ್ಲಪಟ್ನೂರು ಗ್ರಾಮದ ವ್ಯಾಪ್ತಿ
ವಿಟ್ಲಪಟ್ನೂರು ಗ್ರಾಮದ ವ್ಯಾಪ್ತಿಯಲ್ಲಿತ್ತು ಈ ಶಾಲೆಗೆ ಕೊಡಂಗಾಯಿ, ಕಾಪುಮಜಲು, ಪಂಜಿಗದ್ದೆ, ಬಲಿಪಗುಳಿ, ಕರ್ಕಳ ಇತ್ಯಾದಿ ಪ್ರದೇಶಗಳ ವಿದ್ಯಾರ್ಥಿಗಳು ಬರುತ್ತಿದ್ದರು. ಇಲ್ಲಿ ಪ್ರಸ್ತುತ 1 ಕಿ.ಪ್ರಾ.ಶಾಲೆ, 3 ಹಿ.ಪ್ರಾ. ಶಾಲೆಗಳಿವೆ.

ಶತಮಾನೋತ್ಸವ
2012-13ರಲ್ಲಿ ಶಾಲೆಯು ಪಳ್ಳಗದ್ದೆ ನಾರಾಯಣ ಭಟ್‌ ಗೌರವಾಧ್ಯಕ್ಷತೆಯಲ್ಲಿ ಶತಮಾನೋತ್ಸವವನ್ನು ಆಚರಿಸಿತು. ಬಲಿಪಗುಳಿ ರಾಮ ಭಟ್‌ ಧ್ವಜಸ್ತಂಭ ನಿರ್ಮಿಸಿಕೊಟ್ಟರು. ರಂಗ ಮಂದಿರವೂ ನಿರ್ಮಾಣವಾಯಿತು. ಈಗ 4 ಮಂದಿ ಶಿಕ್ಷಕರು, ಓರ್ವ ಗೌರವ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದಾರೆ. 57 ವಿದ್ಯಾರ್ಥಿಗಳಿದ್ದಾರೆ.

ಹಳೆ ವಿದ್ಯಾರ್ಥಿಗಳು
ಯೋಧ ನವೀನ ಕಾಪುಮಜಲು, ಅಮೆರಿಕದಲ್ಲಿ ಎಂಜಿನಿಯರ್‌ ಕೃಷ್ಣಮೂರ್ತಿ, ಆಸ್ಟ್ರೇಲಿಯದಲ್ಲಿ ವೈದ್ಯ ಡಾ| ರಮಾನಂದ ಬಲಿಪಗುಳಿ, ವಿಟ್ಲಪಟ್ನೂರು ಗ್ರಾ.ಪಂ. ಅಧ್ಯಕ್ಷ ರವೀಶ್‌ ಶೆಟ್ಟಿ ಕರ್ಕಳ, ಸದಸ್ಯ ನಾಗೇಶ್‌ ಶೆಟ್ಟಿ, ಡಾ| ಹಸೈನಾರ್‌, ಎಂಜಿನಿಯರ್‌ ಶರೀಫ್‌ ಚಣಿಲ, ಚಾರ್ಟರ್ಡ್‌ ಎಕೌಂಟೆಂಟ್‌, ಹರೀಶ್‌ ಶೆಟ್ಟಿ ಮುಂಬಯಿ ಮತ್ತಿತರರು ಈ ಶಾಲೆಯಲ್ಲಿ ವ್ಯಾಸಂಗ ಮಾಡಿದವರು.

ಹಿಂದಿನ ಮುಖ್ಯ ಶಿಕ್ಷಕರು
ಮುಖ್ಯ ಶಿಕ್ಷಕರಾಗಿ ಪಕ್ರು ಗೌಡ, ನಾರಾಯಣ ನಾೖಕ್‌, ರಾಮಕೃಷ್ಣ ಭಟ್‌, ರತ್ನಾವತಿ, ಸುನಂದಾ, ಮಲ್ಲಿಕಾ, ಸಾವಿತ್ರಿ ಮತ್ತಿತರ‌ರು ಸೇವೆ ಸಲ್ಲಿಸಿದ್ದಾರೆ.

ಶತಮಾನೋತ್ಸವ ಪ್ರಯುಕ್ತ ಹಮ್ಮಿಕೊಂಡ ಅನೇಕ ಕಾರ್ಯಕ್ರಮಗಳು ಅನುಷ್ಠಾನಗೊಂಡಿವೆ. ಈಗ ಶಾಲೆಗೆ ಸುಸಜ್ಜಿತ ತರಗತಿ ಕೊಠಡಿಗಳು ಹಾಗೂ ವ್ಯವಸ್ಥಿತ ಶೌಚಾಲಯದ ಆವಶ್ಯಕತೆಯಿದೆ. ವಿಟ್ಲಪಟ್ನೂರು ಗ್ರಾ.ಪಂ. ಆವರಣಗೋಡೆ ನಿರ್ಮಿಸಿಕೊಟ್ಟಿದೆ. ಜನಪ್ರತಿನಿಧಿಗಳು, ಎಸ್‌ಡಿಎಂಸಿ, ಊರಿನ ವಿದ್ಯಾಭಿಮಾನಿಗಳು ಅತ್ಯಪೂರ್ವ ಸಹಕಾರ ನೀಡುತ್ತಿದ್ದಾರೆ.
-ಸರೋಜಾ ಎ., ಮುಖ್ಯ ಶಿಕ್ಷಕಿ.

1989ರಲ್ಲಿ ಈ ಶಾಲೆಗೆ ಸೇರಿದ್ದೆ. ಆಗ ಸುನಂದಾ ಟೀಚರ್‌, ರತ್ನಾಭಾಯಿ ಟೀಚರ್‌ ಪಾಠ ಮಾಡಿದ್ದರು. ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಿಗೆ ತುಂಬಾ ಪ್ರೋತ್ಸಾಹ ನೀಡಿದ್ದರು. ಶಿಸ್ತು, ಉತ್ತಮ ಬೋಧನೆ, ಅಲ್ಲಿನ ವಿವಿಧ ರೀತಿಯ ಪ್ರೋತ್ಸಾಹವು ನಮ್ಮನ್ನು ಬೆಳೆಸಿದೆ. ಶಾಲೆಯ ಶತಮಾನೋತ್ಸವ ಸಂಭ್ರಮಾಚರಣೆ ಅತ್ಯುತ್ತಮವಾಗಿ ನಡೆದಿತ್ತು. ಈ ಶಾಲೆ ಇನ್ನಷ್ಟು ಪ್ರಗತಿ ಸಾಧಿಸಲಿ.
-ಡಾ| ರಮಾನಂದ ಬಲಿಪಗುಳಿ,
ಆಸ್ಟ್ರೇಲಿಯದಲ್ಲಿ ವೈದ್ಯರು
ಹಿರಿಯ ವಿದ್ಯಾರ್ಥಿ

-  ಉದಯಶಂಕರ್‌ ನೀರ್ಪಾಜೆ

ಟಾಪ್ ನ್ಯೂಸ್

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

NEW-SCHOOL

ಗುಣಮಟ್ಟದ ಶಿಕ್ಷಣಕ್ಕೆ ಹೆಸರಾದ ಜಿಲ್ಲೆಯ ಮೊದಲ ಕ್ರಿಶ್ಚಿಯನ್‌ ಪ್ರೌಢಶಾಲೆಗೆ 121ರ ಸಂಭ್ರಮ

430514561342IMG-20191203-WA0023

ಅನಂತೇಶ್ವರ ದೇಗುಲದ ಪೌಳಿಯಲ್ಲಿ ಪ್ರಾರಂಭವಾದ ಶಾಲೆಗೆ 128ರ ಸಂಭ್ರಮ

sx-22

ಸ್ವಾತಂತ್ರ್ಯಹೋರಾಟಗಾರರನ್ನು ನೀಡಿದ ಶಾಲೆಗೆ 111 ವರ್ಷಗಳ ಸಂಭ್ರಮ

ds-24

112 ವರ್ಷ ಕಂಡಿರುವ ಮೂಡುಬಿದಿರೆಯ ಡಿ.ಜೆ. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ

ds-35

ಮನೆಯ ಚಾವಡಿಯಲ್ಲಿ ಪ್ರಾರಂಭಗೊಂಡಿದ್ದ ಶಾಲೆಗೆ 105ರ ಸಂಭ್ರಮ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ

10-madikeri

Madikeri: ಹಾಡಹಗಲೇ ಹಾರ್ಡ್ ವೇರ್ ಅಂಗಡಿಗೆ ನುಗ್ಗಿ ಒಂಟಿ ಮಹಿಳೆಯ ಸರಗಳ್ಳತನ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

ಪತ್ರಕರ್ತರಿಂದ…ಪತ್ರಕರ್ತರಿಗಾಗಿ… ಕಷ್ಟದಲ್ಲಿ ಕೈಹಿಡಿಯುವ ಆಪದ್ಭಾಂಧವ!

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.