ಕುಂದಾಪುರ: ತೆರಾಲಿ ಪೂರ್ವಭಾವಿ ಭಾತೃತ್ವ ಬಾಂಧವ್ಯ ದಿನ
Team Udayavani, Nov 26, 2019, 5:18 AM IST
ಕುಂದಾಪುರ: ಉಡುಪಿ ಧರ್ಮ ಪ್ರಾಂತ್ಯದಲ್ಲೆ ಅತ್ಯಂತ ಪುರಾತನವಾದ ಈ ವರ್ಷ 450 ವರ್ಷದ ಸಂಭ್ರಮಾಚರಣೆಯ ಪವಿತ್ರ ರೋಜರಿ ಮಾತೆಗೆ ಸಮರ್ಪಿಸಲ್ಪಟ್ಟ ಕುಂದಾಪುರದ ಇಗರ್ಜಿಯಲ್ಲಿ ಈ ವರ್ಷದ ತೆರಾಲಿ ಹಬ್ಬದ ಅಚರಣೆಯ ಪ್ರಯುಕ್ತ ಪೂರ್ವಭಾವಿಯಾಗಿ ನಡೆಯುವ ಕೊಂಪ್ರಿ ಆಯ್ತಾರ್ ಭಾತೃ ಬಾಂಧವ್ಯ ದಿನವನ್ನು ವಿಶ್ವಾಸದ ಯಾತ್ರೆಯಲ್ಲಿ ಯೇಸು ಪ್ರಭುವಿನ ಜತೆ ಎಂಬ ಧ್ಯೇಯದೊಂದಿಗೆ ಪರಮ ಪ್ರಸಾದದ ಆರಾಧನೆ ರವಿವಾರದಂದು ನಡೆಯಿತು.
ರೋಜರಿ ಮಾತಾ ದೇವಾಲಯದಲ್ಲಿ ಪವಿತ್ರ ಬಲಿದಾನವನ್ನು ಅರ್ಪಿಸಿದ ಅಪಾರ ಭಕ್ತರು ಮತ್ತು ಅನೇಕ ಧರ್ಮದ ಭಗಿನಿಯರು ಬಣ್ಣದ ಮೇಣದ ಬತ್ತಿಗಳನ್ನು ಬೆಳಗಿಸಿದರು. ಪರಮ ಪ್ರಸಾದದ ಪುರಮೆರವಣಿಗೆಯು ಭಕ್ತಿ ಗಾಯನ, ಸಂಗೀತ, ಬ್ಯಾಂಡ್, ಬಣ್ಣ ಬಣ್ಣದ ಕೊಡೆಗಳ ಜತೆ ಕುಂದಾಪುರದ ಮುಖ್ಯ ರಸ್ತೆಗಳಲ್ಲಿ ವೈಭವದೊಂದಿಗೆ ನೆರವೇರಿತು. ಸಂತ ಮೇರಿಸ್ ವಿದ್ಯಾ ಸಂಸ್ಥೆಯ ಮೈದಾನದಲ್ಲಿ ಪರಮ ಪ್ರಸಾದದ ಆರಾಧನೆ ಕನ್ನಡದಲ್ಲಿ ನಡೆಯಿತು.
ಧಾರ್ಮಿಕ ವಿಧಿಯನ್ನು ನಡೆಸಿದ ಶಿವಮೊಗ್ಗ ಧರ್ಮಪ್ರಾಂತ್ಯದ ಕಬ್ಳೆ ಚರ್ಚ್‌ನ ಧರ್ಮಗುರು ಫಾ| ರಿಚಾರ್ಡ್ ಪಾಯ್ಸ , ದ್ರವ್ಯ ಮತ್ತು ಯೇಸು ಸ್ವಾಮಿಗೆ ಜತೆ ಜತೆಯಾಗಿ ನಾವು ಸೇವೆ ಮಾಡಲು ಸಾಧ್ಯವಿಲ್ಲ. ಪ್ರಾಪಂಚಿಕ ಸುಖದ ಜತೆ ಯೇಸುವಿನ ಭಕ್ತಿ ಆಚರಿಸಲು ಅಸಾಧ್ಯ. ಅಲ್ಲಿ ಪರಿಶುದ್ಧ ವಿಶ್ವಾಸ ಇರುವುದಿಲ್ಲ. ನಮ್ಮ ಪರಿಶುದ್ಧ ವಿಶ್ವಾಸಕ್ಕಾಗಿ ಯೇಸು ಸ್ವಾಮಿ ಕಾಯುತ್ತಿದ್ದಾರೆ. ನಾವು ನಮ್ಮ ಜೀವಿತದಲ್ಲಿ ಯೇಸುವಿಗೆ ಮೊದಲ ಆದ್ಯತೆ ನೀಡಬೇಕು. ಜೀವ-ಮರಣ, ನ್ಯಾಯ-ಅನ್ಯಾಯ, ನೀತಿ-ಅನೀತಿ ಇದರಲ್ಲಿ ಯಾವುದು ಉತ್ತಮವೆಂದು ಆಯ್ಕೆ ಮಾಡಿಕೊಳ್ಳುವುದು ನಿಮ್ಮದಾಗಿದೆ ಎಂದು ಸಂದೇಶ ನೀಡಿದರು.
ನವೆಂಬರ್ ನಾಲ್ಕನೇ ರವಿವಾರ ಪ್ರಪಂಚಾದ್ಯಂತ ಯೇಸುವನ್ನು ಕ್ರಿಸ್ತ ರಾಜನೆಂಬ ಹಬ್ಬ ಆಚರಿಸಲು ಪರಮ ಪ್ರಸಾದದ ಸಂಭ್ರಮ ಆಚರಿಸಲು ಆರಂಭವಾಗಿ ಕೆಲವು ದಶಕಗಳಾದವು. ಆದರೆ 450 ವರ್ಷ ಇತಿಹಾಸ ಇರುವ ಕುಂದಾಪುರ ಕ್ರೈಸ್ತ ಪವಿತ್ರ ಸಭೆ ಇದಕ್ಕಿಂತ ಹಿಂದೆಯೇ ಹಲವಾರು ವರ್ಷಗಳ ಮೊದಲೇ ನವೆಂಬರ್ ನಾಲ್ಕನೆ ರವಿವಾರ ಕುಂದಾಪುರ ಪವಿತ್ರ ರೋಜರಿ ಮಾತಾ ಇಗರ್ಜಿ ತೆರಾಲಿಯ ಪೂರ್ವಭಾವಿಯಾಗಿ ಭಾÅತೃ ಬಾಂಧವ್ಯದ ರವಿವಾರ ಹಾಗೂ ಪರಮಪ್ರಸಾದದ ಸಂಭ್ರಮ ಆಚರಿಸುವುದು ನಡೆಯುತ್ತ ಬಂದಿದೆ.
ಈ ಧಾರ್ಮಿಕ ವಿಧಿಯ ನೆರವೇರಿಕೆಯಲ್ಲಿ ಕುಂದಾಪುರ ರೋಜರಿ ಮಾತೆ ಇಗರ್ಜಿಯ ಪ್ರಧಾನ ಧರ್ಮಗುರು ಫಾ| ಸ್ಟ್ಯಾನಿ ತಾವ್ರೊ ಕಾರ್ಯಕ್ರಮದ ಉಸ್ತುವಾರಿ ವಹಿಸಿಕೊಂಡು ವಂದಿಸಿದರು. ಸಹಾಯಕ ಧರ್ಮಗುರು ಫಾ| ವಿಜಯ್ ಡಿ’ಸೋಜಾ ದಿನದ ಮಹತ್ವ ತಿಳಿಸಿದರು. ಸಂತ ಮೇರಿಸ್ ಜೂ.ಕಾಲೇಜಿನ ಪ್ರಾಂಶುಪಾಲ ಧರ್ಮಗುರು ಫಾ| ಪ್ರವೀಣ್ ಅಮೃತ್ ಮಾರ್ಟಿಸ್ ಸಹಕರಿಸಿದರು.
ಈ ಪ್ರಾರ್ಥನ ವಿಧಿಯಲ್ಲಿ ಹಲವು ಧರ್ಮಭಗಿನಿಯರು, ಪಾಲನ ಮಂಡಳಿ ಉಪಾಧ್ಯಕ್ಷ ಜೇಕಬ್ ಡಿ’ಸೋಜಾ, ಕಾರ್ಯದರ್ಶಿ ಫೆಲ್ಸಿಯಾನ್ ಡಿ’ಸೋಜಾ, ಆಯೋಗಗಳ ಸಂಚಾಲಕಿ ಪ್ರೇಮಾ ಡಿ’ಕುನ್ಹಾ, ವಾಳೆಯ ಗುರಿಕಾರರು, ಪಾಲನ ಮಂಡಳಿ ಸದಸ್ಯರು, ಇಗರ್ಜಿಯ ಹಲವು ಸಂಘ ಸಂಸ್ಥೆಯ ಪದಾಧಿಕಾರಿಗಳು ಸದಸ್ಯರು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Kundapura: ಅಕಾಲಿಕ ಮಳೆ; ಭತ್ತ ಕಟಾವಿಗೆ ಅಡ್ಡಿ; ಬೆಳೆ ನಾಶದ ಭೀತಿಯಲ್ಲಿ ರೈತರು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
MUST WATCH
ಹೊಸ ಸೇರ್ಪಡೆ
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.