ಜಗವ ಮೀರಿದ ಪುತ್ತೂರು ಮಹಾಲಿಂಗೇಶ್ವರನ ಭಕ್ತಿ ಬಂಧ

ಆಫ್ರಿಕಾ ದೇಶದಿಂದ ದೈವದ ಸೇವೆಗಾಗಿ ಪುತ್ತೂರಿಗೆ ಬಂದ ದೈವಾರಾಧಕ ಅರುಣ್‌ ಸಾಲ್ಮರ

Team Udayavani, Nov 26, 2019, 5:27 AM IST

2511RJH5

ವಿಶೇಷ ವರದಿಪುತ್ತೂರು: ಸೀಮೆಯ ಒಡೆಯ, ಪುತ್ತೂರಿನ ಉಳ್ಳಾಯ ಎಂದು ಭಕ್ತಿಯಿಂದ ಕರೆಸಲ್ಪಡುವ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರು ಹಾಗೂ ಆತನ ಭಕ್ತರ ನಡುವೆ ಇರುವ ಭಾವನಾತ್ಮಕ ಅವಿನಾಭಾವ ಸಂಬಂಧಕ್ಕೆ ಎಲ್ಲೆಯಿಲ್ಲ. ಇದಕ್ಕೆ ಉದಾಹರಣೆಯಾಗಿ ಮತ್ತೂಂದು ಸಾಕ್ಷಿ ಸಿಕ್ಕಿದೆ.

ದೇವಾಲಯದಲ್ಲಿ ನಡೆಯುವ ಉತ್ಸವಗಳ ಸಂದರ್ಭದಲ್ಲಿ ಸೇವೆ ಸಲ್ಲಿಸುವ ಅಥವಾ ದೇವತಾ ಚಾಕರಿ ಮಾಡುವ ಹಲವು ಮನೆಯವರು ಪೂರ್ವಶಿಷ್ಟ ಸಂಪ್ರದಾಯವನ್ನು ಇಂದಿಗೂ ಪಾಲಿಸಿಕೊಂಡು ಬಂದಿದ್ದಾರೆ. ಜಗತ್ತಿನ ಯಾವುದೇ ಭಾಗದಲ್ಲಿ ಇದ್ದರೂ ಪುತ್ತೂರು ಮಹಾಲಿಂಗೇಶ್ವರನ ಉತ್ಸವದ ಸೇವೆ ಮಾಡಲು ಅವರು ಬಂದೇ ಬರುತ್ತಾರೆ.

ಆಫ್ರಿಕಾದಿಂದ ಬಂದರು
ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದಂತೆ ದೈವಾರಾಧನೆ ಸೇವೆ ಸಲ್ಲಿಸುವ ಕುಟುಂಬವೊಂದು ಸಾಲ್ಮರದಲ್ಲಿದೆ. ಈ ಕುಟುಂಬದ ಸದಸ್ಯ ಅರುಣ್‌ ಸಾಲ್ಮರ ದೇವಾಲಯದಲ್ಲಿ ನಡೆಯುವ ಎರುಕುಳ ದೈವ, ಕೊರಗ ಕೋಲ ಮತ್ತು ಅಂಙಣತ್ತಾಯ ದೈವಗಳ ದೈವಾರಾಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಅದಕ್ಕಾಗಿ ಅವರು ಆಫ್ರಿಕಾದಿಂದ ಆಗಮಿಸಿ ಸೇವೆ ನೀಡಿದ್ದಾರೆ.

ಶ್ರೀ ರಾಮಕೃಷ್ಣ ಮಠದ ಉದ್ಯೋಗಿಯಾಗಿರುವ ಅರುಣ್‌ ಈ ಬಾರಿ ನ. 23ರಂದು ನಡೆದ ಪೂಕರೆ ಉತ್ಸವದಲ್ಲಿ ಕೊರಗ ಕೋಲ ಮತ್ತು ಎರುಕುಳ ದೈವದ ದೈವಾರಾಧನೆ ಸೇವೆಗಾಗಿ ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಪುತ್ತೂರಿಗೆ ಆಗಮಿಸಿದ್ದಾರೆ.

ಸೇವೆ ಮರೆಯಲಿಲ್ಲ
40 ವರ್ಷ ವಯಸ್ಸಿನ ಅರುಣ್‌ ಸಾಲ್ಮರ ಅವರು ತಮ್ಮ ತಂದೆಯ ಕಾಲಾನಂತರ ಪುತ್ತೂರು ಸೀಮೆಯೊಡೆಯನ ಸನ್ನಿಧಿಯಲ್ಲಿ ದೈವಾರಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು 15 ವರ್ಷಗಳಿಂದ ಶ್ರೀ ರಾಮಕೃಷ್ಣ ಮಠದ ಮೈಸೂರು ಮತ್ತು ಕೋಲ್ಕಾತ್ತಾದ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ದೇವಾಲಯದ ದೈವಾರಾಧನೆಯ ಸೇವೆಗಾಗಿ ಆಗಮಿಸುವುದನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿದ್ದಾರೆ. ಪ್ರಸ್ತುತ ಕೆಲವು ಸಮಯಗಳಿಂದ ಇವರು ದಕ್ಷಿಣ ಆಫ್ರೀಕಾದ ಡರ್ಬಾನ್‌ನಲ್ಲಿರುವ ಶ್ರೀ ರಾಮಕೃಷ್ಣ ಮಠದಲ್ಲಿ ಸೇವೆ ಸಲ್ಲಿಸುತ್ತಿದ್ದು, ಶ್ರೀ ದೇವರ ಸೇವೆಗಾಗಿ ಡರ್ಬಾನ್‌ನಿಂದ ಆಗಮಿಸಿ ಎರುಕುಳ ದೈವದ ಸೇವೆ ನೆರವೇರಿಸಿದ್ದಾರೆ.

ದಕ್ಷಿಣ ಆಫ್ರಿಕಾದ ಡರ್ಬಾನ್‌ನಿಂದ ಇಲ್ಲಿಗೆ ಆಗಮಿಸಿ ಮತ್ತೆ ತೆರಳಲು ಅವರಿಗೆ 1ಲಕ್ಷ ರೂ. ವಿಮಾನದ ಟಿಕೆಟ್‌ ವೆಚ್ಚ ತಗಲುತ್ತದೆ. ಆದರೆ ಹಿರಿಯರ ಕಾಲದಿಂದಲೂ ಮಾಡಿಕೊಂಡು ಬಂದಿರುವ ದೈವಾರಾಧನೆಯ ಸೇವೆಯನ್ನು ತಪ್ಪಿಸಬಾರದು ಮತ್ತು ಸೀಮೆಯೊಡೆಯನೊಂದಿಗಿನ ಅಚಲ ನಂಬಿಕೆಯೇ ಇದಕ್ಕೆ ಮೂಲ ಕಾರಣವಾಗಿದೆ ಎನ್ನುತ್ತಾರವರು.

ದೈವಾರಾಧಾಕನಾಗಿ…
ಪೂಕರೆ ಉತ್ಸವದಂದು ಶ್ರೀ ದೇವರನ್ನು ಸ್ವಾಗತಿಸಿ ಉತ್ಸವದಲ್ಲಿ ಕೊಂಡೊಯ್ಯುವ ಎತ್ತಿನ ಮುಖವಾಡ ಧರಿಸುವ ಎರುಕುಳ ದೈವ ಹಾಗೂ ದೇವಾಲಯದ ಹೊರಾಂಗಣದಲ್ಲಿ ನೆಲೆಸಿರುವ ಅಂಗಣತ್ತಾಯ ದೈವಗಳು ಪ್ರಮುಖ ಕ್ಷೇತ್ರದ ದೈವಗಳಾಗಿ ಗೌರವಿಸಲ್ಪಡುತ್ತವೆ. ಎರುಕುಳ ದೈವದ ಸೇವೆ ಪೂಕರೆ ಉತ್ಸವದ ಸಂದರ್ಭ ನಡೆದರೆ ಅಂಙಣತ್ತಾಯ ದೈವದ ಸೇವೆ ಜಾತ್ರೆಯ ಸಂದರ್ಭ ನಡೆಯುತ್ತದೆ. ಈ ಎರಡೂ ದೈವಗಳ ದೈವಾರಾಧಕರಾಗಿ ಸೇವೆ ಅರುಣ್‌ ಸಾಲ್ಮರ ಸೇವೆ ನೀಡುತ್ತಿದ್ದಾರೆ.

ಸೈನಿಕನ ಸೇವೆ
ಪುತ್ತೂರಿನ ಉಳ್ಳಾಯನ ಚಾಕರಿಗಾಗಿ ತೆಂಕಿಲದ ಕುಟುಂಬವೊಂದರ ದೇಶದ ರಕ್ಷಣಾ ವಿಭಾಗದಲ್ಲಿರುವ ಮೂರು ಮಂದಿ ಜಾತ್ರೆಯ ಸಂದರ್ಭದಲ್ಲಿ ತಪ್ಪದೇ ಹಾಜರಾಗುವ ಕುರಿತು “ಉದಯವಾಣಿ’ ಸುದಿನದಲ್ಲಿ 2017ರ ಎ. 17 ರಂದು ವರದಿ ಪ್ರಕಟಿಸಲಾಗಿತ್ತು. ಇಂತಹ ಹಲವು ಮಂದಿ ತಾವು ಯಾವುದೇ ವೃತ್ತಿಯನ್ನು ಮಹಾಲಿಂಗೇಶ್ವರ ಸೇವೆಯನ್ನು ಮರೆಯದೆ ನಡೆಸುತ್ತಿರುವುದು ನೆನಪಿಸುವಂತದ್ದು.

ದಾರಿ ತೋರಿದ ದೇವರು
ಮಹಾಲಿಂಗೇಶ್ವರ ದೇವಾಲ ಯದಲ್ಲಿ ನಮ್ಮ ಹಿರಿಯರ ಕಾಲದಿಂದಲೂ ದೈವಾರಾಧಕರ ಸೇವೆ ಮಾಡುತ್ತಿದ್ದೇವೆ. ನನ್ನ ಬದುಕಿ ನಲ್ಲಿ ಬೆಳಕಿನ ದಾರಿ ತೋರಿಸಿದ ಮಹಾಲಿಂಗೇಶ್ವರ ದೇವರು ನನ್ನನ್ನು ಸೇವೆಗಾಗಿ ಕರೆಸಿಕೊಂಡಿದ್ದಾನೆ. ಸೀಮೆಯೊಡೆಯನ ಸೇವೆಯನ್ನು ಮಾಡುವುದು ಭಕ್ತಿಯ ಕೆಲಸ ಎಂದು ನಾನು ನಂಬುತ್ತೇನೆ.
– ಅರುಣ್‌ ಸಾಲ್ಮರ
ದೈವಾರಾಧಕ, ಪುತ್ತೂರು.

ಟಾಪ್ ನ್ಯೂಸ್

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

Hassan: ಅಂಗಾಂಗ ದಾನ ಮಾಡಿ ಸಾವಿನಲ್ಲೂ ಸಾರ್ಥಕ್ಯ ಮೆರೆದ ಕಾರ್ಮಿಕನ ಕುಟುಂಬ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

HIGH COURT: ಬಿಎಸ್‌ವೈ ವಿರುದ್ಧದ ಪೋಕ್ಸೋ ಪ್ರಕರಣ: ವಿಚಾರಣೆ ಮುಂದಕ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Belthangady: ಗೋ ಅಕ್ರಮ ಸಾಗಾಟ ತಡೆದ ಬಜರಂಗ ದಳ ಕಾರ್ಯಕರ್ತರು

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

Sullia: ಬೈಕ್‌ ಮೇಲೆ ಜಿಗಿದ ಕಡವೆ; ಸವಾರರಿಗೆ ಗಾಯ

4

Punjalkatte: ರಾಯಿ; ಯುವಕ ನೇಣು ಬಿಗಿದು ಆತ್ಮಹತ್ಯೆ

Untitled-5

Puttur: ಮಾದಕ ಪದಾರ್ಥ ಸಹಿತ ಆರೋಪಿ ಸೆರೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು: ತಿಮ್ಮಾಪುರ

R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ

“ಬಳ್ಳಾರಿ ಜಿಲ್ಲಾಸ್ಪತ್ರೆ: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

Ballari District Hospital: ಬಾಣಂತಿಯರ ಸಾವಿಗೆ ವೈದ್ಯರಲ್ಲ, ದ್ರಾವಣ ಕಾರಣ’

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

ನಕ್ಸಲರ ಪತ್ತೆಗೆ ಶಿವಮೊಗ್ಗ ಪೊಲೀಸರು ಸಜ್ಜು : ಎಎನ್‌ಎಫ್‌ ಮಾದರಿಯಲ್ಲಿ ವಿಶೇಷ ಪೊಲೀಸ್‌ ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.