ಸಮಯದ ಬೆನ್ನೇರಿ… : ಕಾಲವನ್ನು ತಡೆಯೋರು ಯಾರೂ ಇಲ್ಲ


Team Udayavani, Nov 26, 2019, 2:05 AM IST

Josh–Time

ಸಮಯ ಪಾಲನೆಗೆ ಅಪಾರ ಮಹತ್ವ ಕೊಡುತ್ತಿದ್ದ ಸರ್‌ ಎಂ.ವಿಶ್ವೇಶ್ವರಯ್ಯನವರು ‘ಟೈ ಇಸ್‌ ಮನಿ’ ಅನ್ನುತ್ತಿದ್ದರಂತೆ. ಅಂದರೆ, ಹಣದಂತೆಯೇ ಸಮಯ ಕೂಡ ಅಮೂಲ್ಯವಾದುದು ಎಂಬುದು ಅವರ ಮಾತಿನ ಅರ್ಥ. ಈ ದಿನಗಳಲ್ಲಿ, ಯಾವ್ಯಾವುದೋ ಕಾರಣಗಳಿಂದಾಗಿ, ಸಮಯ ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ಪರಸ್ಪರರ ಮಧ್ಯೆ ಅಪನಂಬಿಕೆ, ಭಿನ್ನಾಭಿಪ್ರಾಯ ಉಂಟಾಗುತ್ತದೆ. ಜಗಳಗಳೂ ಒಗಿ ಬಿಡುತ್ತವೆ.

ಅಯ್ಯೋ, ನಮ್ಮ ಸ್ಪಾಫ್ಗೆ ಟೈಂ ಸೆನ್ಸ್‌ ಅನ್ನುವುದೇ ಇಲ್ಲಾರೀ. ಹೇಳಿದ ಟೈಂಗೆ ಸರಿಯಾಗಿ ಕೆಲಸ ಮುಗಿಸೋದಿಲ್ಲ. ಸಂಜೆ 6 ಗಂಟೆಗೆ ಕೆಲಸ ಮುಗಿಸಿಬಿಸಿ ಬಿಡಿ ಅಂದರೆ, ರಾತ್ರಿ ಒಂಭತ್ತೂವರೆಗೆ ಮುಗಿಸ್ತಾರೆ. ಅದಕ್ಕೆ ಏನೇನೋ ಕಾರಣ ಹೇಳ್ತಾರೆ. ಈ ಥರ ಲೇಟ್‌ ವರ್ಕ್‌ನಿಂದಾಗಿ, ಅಂದುಕೊಂಡ ಸಮಯಕ್ಕೆ ಟಾರ್ಗೆಟ್‌ ರೀಚ್‌ ಆಗಲು ಆಗ್ತಾ ಇಲ್ಲ. ಸೋ, ವಿಪರೀತ ಲಾಸ್‌ ಆಗ್ತಾ ಇದೆ…’ ಒಂದು ಸಂಸ್ಥೆ ಅಥವಾ ಫ್ಯಾಕ್ಟರಿಯ ಮಾಲೀಕ, ತನ್ನ ಜೊತೆಗಿದ್ದವರೊಂದಿಗೆ ಅಸಮಾಧಾನದಿಂದಲೇ ಹೀಗೆ ಹೇಳುತ್ತಾನೆ…

– ಸಂದರ್ಶನ ಇರೋದು ಹನ್ನೊಂದು ಗಂಟೆಗೆ ಅಂತ ಗೊತ್ತಿತ್ತು. ಒಂಭತ್ತು ಗಂಟೆಗೇ ಮನೆ ಬಿಟ್ಟೆ. ಆದರೂ, ಟ್ರಾಫಿಕ್‌ ಕಾರಣದಿಂದ ಅರ್ಧಗಂಟೆ ತಡವಾಗಿ ತಲುಪುವಂತಾಯ್ತು…’ ಇಂಟರ್‌ವ್ಯೂಗೆ ಬಂದ ಹುಡುಗ, ಸಂಕೋಚದಿಂದ ಚಡಪಡಿಸುತ್ತಿರುತ್ತಾನೆ.

– “12 ಗಂಟೆಗೆ ರೆಕಾರ್ಡ್‌ ಸಬ್ಮಿಟ್‌ ಮಾಡ್ತೇನೆ ಅಂದಿದ್ದು ನಿಜ ಸಾರ್‌.ನನ್ನ ಕೆಲ್ಸವೆಲ್ಲಾ ಮುಗಿದಿದೆ. ಆದ್ರೆ ಸ್ಪೈರಲ್‌ ಬೈಂಡಿಂಗ್‌ ಆಗಿಲ್ಲ. ಆ ಶಾಪ್‌ನವರು ಇವತ್ತು ರಜೆ ಹಾಕಿದ್ದಾರೆ. ನಾಳೆ ಬೆಳಗ್ಗೆ ತನಕ ಟೈಂ ಕೊಡಿ ಪ್ಲೀಸ್‌ ‘ ವಿದ್ಯಾರ್ಥಿಯೊಬ್ಬ, ಪ್ರೊಫೆಸರ್‌ ಮುಂದೆ ಹೀಗೆ ದೀನನಾಗಿ ಪ್ರಾರ್ಥಿಸುತ್ತಿರುತ್ತಾನೆ !

– ಇವೆಲ್ಲಾ ಟೈಂ ಮ್ಯಾನೇಜ್‌ಮೆಂಟ್‌ ಪಾಲಿಸಲು ಆಗದಿದ್ದಾಗ ಎದುರಾಗುವ ಪ್ರಸಂಗಗಳು. ಸಮಯಕ್ಕೆ, ಸಮಯ ಪಾಲನೆಗೆ ಅಪಾರ ಮಹತ್ವ ಕೊಡುತ್ತಿದ್ದ ಸರ್‌ ಎಂ.ವಿಶ್ವೇಶ್ವರಯ್ಯನವರು “ಟೈ ಇಸ್‌ ಮನಿ’ ಅನ್ನುತ್ತಿದ್ದರಂತೆ. ಅಂದರೆ, ಹಣದಂತೆಯೇ ಸಮಯ ಕೂಡ ಅಮೂಲ್ಯವಾದುದು ಎಂಬುದು ಅವರ ಮಾತಿನ ಅರ್ಥ. ಈ ದಿನಗಳಲ್ಲಿ, ಯಾವ್ಯಾವುದೋ ಕಾರಣಗಳಿಂದಾಗಿ, ಸಮಯ ಪಾಲನೆ ಮಾಡಲು ಸಾಧ್ಯವಾಗುವುದಿಲ್ಲ. ಪರಿಣಾಮವಾಗಿ, ಪರಸ್ಪರರ ಮಧ್ಯೆ ಅಪನಂಬಿಕೆ, ಭಿನ್ನಾಭಿಪ್ರಾಯ ಉಂಟಾಗುತ್ತದೆ.

ಜಗಳಗಳೂ ಒಗಿ ಬಿಡುತ್ತವೆ. ಒಪ್ಪಿಕೊಂಡ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಎಷ್ಟೋ ಜನ ಡಿಪ್ರಶನ್‌ಗೆ ಜಾರುವುದೂ ಉಂಟು. ತಡವಾಗಿ ಕೆಲಸ ಮುಗಿಸುತ್ತಾರೆ ಎಂಬ ಕಾರಣಕ್ಕೆ ಅದೆಷ್ಟೋ ಪ್ರಾಜೆಕ್ಟ್ಗಳು ಹಲವರ ಕೈತಪ್ಪಿದ್ದೂ ಉಂಟು. ನಿಗದಿತ ಸಮಯಕ್ಕೆ ಸರಿಯಾಗಿ ಇಂಟರ್‌ವ್ಯೂಗೆ ಹೋಗದೆ ಕೆಲಸ ಕಳೆದುಕೊಂಡವರು ಎಷ್ಟು ಜನ ಬೇಕು? ಹಾಗೆಯೇ, 10 ಗಂಟೆಗೇ ಪರೀಕ್ಷೆ ಎಂದು ಗೊತ್ತಿದ್ದರೂ, + ಹತ್ತೂವರೆಯ ವೇಳೆಗೆ ಎಕ್ಸಾಂ ಹಾಲ್‌ನ ಬಾಗಿಲಲ್ಲಿ ನಿಂತು, ಏದುಸಿರು ಬಿಡುತ್ತಾ… ಸರ್‌, ಸರ್‌ ಸರ್‌ ಲೇಟಾಗಿಬಿಡು¤. ಇದೊಂದ್ಸಲ ಎಂಟ್ರಿ ಕೊಡಿ ಪ್ಲೀಸ್‌ ಅನ್ನುವವರ ಉದಾಹರಣೆಗಳು ಎಷ್ಟಿಲ್ಲ ಹೇಳಿ…

ಉದ್ದೇಶಪೂರ್ವಕ ಅಲ್ಲ
ಒಪ್ಪಿಕೊಂಡ ಕೆಲಸವನ್ನು ತಡವಾಗಿ ಮುಗಿಸುವ ಗುಣ ಕೆಲವರಿಗೆ ಇರಬಹುದು. ಆದರೆ, ಎಲ್ಲರೂ ಹಾಗಿರೋದಿಲ್ಲ. ಒಬ್ಬ ವ್ಯಕ್ತಿಗೆ ಒಂದು ಕೆಲಸ ವಹಿಸಿದಾಗ ಆ ವ್ಯಕ್ತಿಯ ಪರಿಶ್ರಮ, ಆಸಕ್ತಿ ಮತ್ತು ನೈಪುಣ್ಯ- ಇದಿಷ್ಟೂ ಗೊತ್ತಾಗಿಬಿಡುತ್ತದೆ. ಹಾಗಾಗಿ, ಕೆಲಸ ಕೊಟ್ಟವರ ಮುಂದೆ ಖೀsಛಿ lಛಿss ಅನ್ನಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ. ಬೇಗ ಕೆಲಸ ಮುಗಿಸಿ, ಮೇಲಧಿಕಾರಿಯ ಮೆಚ್ಚುಗೆ ಪಡೆಯಬೇಕು ಎಂಬುದೇ ಎಲ್ಲರ ಆಸೆಯಾಗಿರುತ್ತದೆ. ಆದರೆ, ಅನಿರೀಕ್ಷಿತವಾಗಿ ಏನೋ ಎಡವಟ್ಟು ಜೊತೆಯಾಗಿ, ಎಲ್ಲಾ ಅಂದಾಜುಗಳೂ ಉಲ್ಟಾ ಆಗಿಬಿಡುತ್ತವೆ !

ಹಾಗೆಯೇ, ಸಂದರ್ಶನಕ್ಕೆ ತಡವಾಗಿ ಹೋಗುವ, ಪರೀಕ್ಷೆ ಶುರುವಾಗಿ ಅರ್ಧಗಂಟೆ ಕಳೆದು ಮೇಲೆ ಎಕ್ಸಾಂ ಹಾಲ್‌ ತಲುಪುವ; ಅತಿಥಿಗಳನ್ನು, ಬಂಧುಗಳನ್ನು ಕಾಯಿಸುವ ಉದ್ದೇಶ ಯಾರಿಗೂ ಇರುವುದಿಲ್ಲ. ಒಪ್ಪಿಕೊಂಡ ಕೆಲಸ ಮುಗಿಸಲು ಒಂದೆರಡು ದಿನ ಸಾಕೆಂದು; ಸಂದರ್ಶನ/ಪರೀಕ್ಷೆಯ ಹಾಲ್‌ ಬಂಧುಗಳಿರುವ ಹೋಟೆಲ್‌, ಪಾರ್ಕ್‌ ತಲುಪಲು ಒಂದೆರಡು ಗಂಟೆಯಷ್ಟೇ ಸಾಕೆಂದು ಲೆಕ್ಕ ಹಾಕಿರುತ್ತಾರೆ. ಆದರೆ, ಅಲ್ಲಿಯೂ ಏನೋ ಅವಘಡವಾಗಿ, ಅಂದಾಜು ಮಾಡುವುದಕ್ಕಿಂತ ಐದಾರು ಗಂಟೆಗಳ ಹೆಚ್ಚುವರಿ ಸಮಯ ಬೇಕಾಗುತ್ತದೆ. ಪರಿಣಾಮ -” ಟೈಂ ಸೆನ್ಸೇ ಇಲ್ಲ ಕಣ್ರೀ ನಿಮಗೆ’ ಎಂಬ ಟೀಕೆಗೆ ಗುರಿಯಾಗಬೇಕಾಗುತ್ತದೆ.

ಬ್ಯಾಲೆನ್ಸ್‌ ಮಾಡುವುದು ಹೇಗೆ?
ಹಾಗಾದರೆ, ಹೇಳಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಲು ಸಾಧ್ಯವಿಲ್ಲವಾ? ಅಂದುಕೊಂಡ ಸಮಯಕ್ಕೆ ಸರಿಯಾಗಿ, ಸ್ಥಳ ತಲುಪಲು ಸಾಧ್ಯವಿಲ್ಲವಾ?- ಖಂಡಿತ ಸಾಧ್ಯವಿದೆ. ಅದಕ್ಕೆ ಏನು ಮಾಡಬೇಕು ಗೊತ್ತೆ? ಒಂದು ಕೆಲಸ ಮುಗಿಸಲು ಎರಡು ದಿನ ಬೇಕಾಗುತ್ತೆ ಅಂದುಕೊಳ್ಳಿ. ಆಗ, ಮೂರು ದಿನದೊಳಗೆ ಮುಗಿಸಿಕೊಡ್ತೇನೆ ಎಂದೇ ಹೇಳಬೇಕು. ಹೀಗಾದಾಗ, ದಿಢೀರನೆ ತಲೆನೋವು ಬಂದರೆ, ಕರೆಂಟ್‌ ಕೈಕೊಟ್ಟರೆ, ಅತಿ ಮುಖ್ಯ ಅತಿಥಿಗಳು ಮನೆಗೆ ಬಂದರೆ… ಹೆಚ್ಚುವರಿಯಾಗಿ ಪಡೆದ ಸಮಯದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್‌ ಮಾಡಿ, ಒಪ್ಪಿದ ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸಬಹುದು.

ಸಂದರ್ಶನದ/ಪರೀಕ್ಷೆ ನಡೆವ/ರೈಲು-ಬಸ್‌ ನಿಲ್ದಾಣ ತಲುಪಲೂ ಇದೇ ಸೂತ್ರ ಅನುಸರಿಸಬೇಕು. ಯಾವುದೇ ಸ್ಥಳ ತಲುಪಲು ಎರಡು ಗಂಟೆ ಬೇಕಾಗುತ್ತದೆ ಅಂದರೆ, ಒಂದೂವರೆ ಗಂಟೆ ಮೊದಲೇ ಪ್ರಯಾಣ ಆರಂಭಿಸಬೇಕು. ಆಗ ಬೈಕ್‌ ಪಂಚರ್‌/ಟ್ರಾಫಿಕ್‌/ಬಸ್‌ ಸಿಗದೇ ಇರುವುದು -ಮುಂತಾದ ಸಮಸ್ಯೆಗಳಿಗೆ ಸಿಕ್ಕಿಕೊಂಡರೂ, ಅದರಿಂದ ಪಾರಾಗಿ ನಿಗದಿತ ವೇಳೆಗೆ ಸ್ಥಳ ತಲುಪಬಹುದು.

ಇನ್ನು, ಕೆಲಸ ಕೊಡುವವರ ವಿಷಯಕ್ಕೆ ಬಂದರೆ ಒಂದು ದಿನ ಮೊದಲೇ ಕೆಲಸ ಮುಗಿಸಲು ಹೇಳಬೇಕು. ( ಅಂದರೆ, ಮೂರು ದಿನದಲ್ಲಿ ಕೆಲಸ ಮುಗಿಸಬೇಕೆಂಬ ಉದ್ದೇಶ ನಿಮಗಿದ್ದರೆ, ಎರಡೇ ದಿನದಲ್ಲಿ ಈ ಕೆಲಸ ಮುಗಿಸಿ ಎಂದೇ ಹೇಳಬೇಕು) ಆಗ ಯಾವುದಾದರೂ ಅನಿರೀಕ್ಷಿತ ತೊಂದರೆ ಎದುರಾದರೂ, ಒಂದು ದಿನ ತಡವಾಗಿಯಾದಾರೂ ( ಅಂದರೆ, ನೀವು ಪ್ಲಾನ್‌ ಮಾಡಿದ್ದ ಸಮಯಕ್ಕೆ ಸರಿಯಾಗಿ) ಕೆಲಸ ಮುಗಿಯುತ್ತದೆ. ಹೀಗೆ ಲೆಕ್ಕಾಚಾರದೊಂದಿಗೆ ಕೆಲಸ ಮಾಡಿಬಿಟ್ಟರೆ, Time is money ಎಂಬ ಮಾತು ಸಾರ್ವಕಾಲಿಕ ಸತ್ಯವಾಗುತ್ತದೆ.

– ಎ.ಆರ್‌. ಮಣಿಕಾಂತ್‌

ಟಾಪ್ ನ್ಯೂಸ್

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Siddu–Muniyappa

Ration Card: ಬಡವರಿಗೆ ಬಿಪಿಎಲ್‌ ಕಾರ್ಡ್‌ ತಪ್ಪದಂತೆ ನೋಡಿಕೊಳ್ಳಿ: ಸಿಎಂ ಸೂಚನೆ

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು

Session: ವಕ್ಫ್ ಜೊತೆ ಬಿಪಿಎಲ್‌ ಹೋರಾಟಕ್ಕೆ ಬಿಜೆಪಿ ಸಜ್ಜು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

Delhi Pollution: ಅಸ್ತಮಾ, ಶ್ವಾಸಕೋಶ ಕ್ಯಾನ್ಸರ್‌ ಭೀತಿ!

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

IPL-2025: ಓಂಕಾರ್‌ ಸಾಳ್ವಿ ಆರ್‌ಸಿಬಿ ಬೌಲಿಂಗ್‌ ಕೋಚ್‌

Siddu-Somanna

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.