ಜೈವಿಕ ಇಂಧನ ಪಾರ್ಕ್‌ಗೆ ಸಿಕ್ಕಿಲ್ಲ ಉದ್ಘಾಟನೆ ಭಾಗ್ಯ
Team Udayavani, Nov 26, 2019, 1:47 PM IST
ಕಕ್ಕೇರಾ: ತಿಂಥಣಿ ಗ್ರಾಮದ ಬಳಿ ಇರುವ ರಾಜ್ಯದ ಎರಡನೇ ಜೈವಿಕ ಇಂಧನ ಪಾರ್ಕ್ ಗೆ ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.
10ರಂದು ಅಂತಾರಾಷ್ಟ್ರೀಯ ಜೈವಿಕ ಇಂಧನ ದಿನಾಚರಣೆದಂದು ಉದ್ಘಾಟನೆಯಾಗಲಿದೆ ಎಂದು ಸಂಬಂಧಿಸಿದ ಅಧಿಕಾರಿಗಳೇ ಹೇಳಿದ್ದರು. ಆದರೂ ಈಗ ನಾಲ್ಕು ತಿಂಗಳಾದರೂ ಇನ್ನೂ ಉದ್ಘಾಟನೆಯಾಗದೇ ದಿನ ದೂಡಲಾಗುತ್ತಿದೆ.
ತಿಂಥಣಿ ಗ್ರಾಮದ ಬಳಿ 2016-17ನೇ ಸಾಲಿನಲ್ಲಿ ಸುಮಾರು 1 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಪಾರ್ಕ್ ನಿರ್ಮಿಸಲಾಗಿದೆ. ಬಹುತೇಕ ಕಟ್ಟಡ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಗತಿಸಿವೆ. ಈ ಬಗ್ಗೆ ಸಕ್ತ ಕಾಳಜಿ ಇಲ್ಲದಂತಾಗಿದೆ ಎಂಬ ಮಾತು ಕೇಳಿ ಬಂದಿದೆ. ಅಧಿಕಾರಿಗಳು ಜೈವಿಕ ಇಂಧನ ಪಾರ್ಕ್ ಕಚೇರಿಯಲ್ಲಿಯೇ ಉಳಿದುಕೊಂಡು ಅಭಿವೃದ್ಧಿಗೊಳಿಸಲು ಹಾಗೂ ವಿವಿಧ ಜಾತಿ ಮರಗಳನ್ನು ನಾಶವಾಗದಂತೆ ಪಾಲನೆ-ಪೋಷಣೆ ಮಾಡಿಕೊಂಡು ಹೋಗಬೇಕು. ಇಲ್ಲಿ ಖಾಯಂ ಅಧಿಕಾರಿಗಳೇ ಇಲ್ಲ. ಶಹಾಪುರ ಭೀಮರಾಯನ ಗುಡಿ ಪ್ರಧಾನ ಅನ್ವೇಷಕರೇ ಇದರ ಉಸ್ತುವಾರಿ ವಹಿಸಿಕೊಂಡು ಹೋಗುತ್ತಿದ್ದಾರೆ. ಈ ಭಾಗದ ರಾಯಚೂರು ಮತ್ತು ಯಾದಗಿರಿ ಜಿಲ್ಲಾ ಪ್ರದೇಶವನ್ನೊಳಗೊಂಡ ರೈತರಿಗೆ ಜೈವಿಕ ಇಂಧನದ ಬಗ್ಗೆ ತರಬೇತಿ ನೀಡಿ ಪ್ರೋತ್ಸಾಯಿಸಲು ಉಪಯುಕ್ತವಾಗಲು ಕಚೇರಿ ಸ್ಥಾಪಿಸಲಾಗಿದೆ. ಅದು ಈಗ ಇದ್ದೂ ಇಲ್ಲದಂತಾಗಿದೆ.
ಕಚೇರಿಯಲ್ಲಿ ಜೈವಿಕ ಸಸ್ಯಗಳ ಬಗ್ಗೆ ರೈತರಿಗೆ ತರಬೇತಿ ನೀಡಲು ದೊಡ್ಡ ಹಾಲ್ ಕೂಡ ಇದೆ. ಇಲ್ಲಿಯೇ ಕಾರ್ಯಕ್ರಮ ನಡೆಸಿ ಪ್ರತಿಯೊಬ್ಬ ರೈತರಿಗೆ ತರಬೇತಿ ನೀಡುವುದರ ಜತೆಗೆ ಪ್ರೋತ್ಸಾಯಿಸಿ ಬಂಜರು ಭೂಮಿಯಲ್ಲಿ ಜೈವಿಕ ಸಸಿ ನೆಡುವಂತೆ ಪ್ರೇರಿಪಿಸುವುದಾಗಿದೆ.
ಆದರೆ ಇನ್ನೂ ಉದ್ಘಾಟನೆ ಇಲ್ಲದೆ ಈ ಒಂದು ಕಚೇರಿ ಯಾರಿಗೂ ಅಷ್ಟೊಂದು ಉಪಯುಕ್ತವಾಗಿಲ್ಲದಿರುವುದು ಬೇಸರ ತರಿಸಿದೆ. ಸುತ್ತಲಿನ ಶಾಲಾ ವಿದ್ಯಾರ್ಥಿಗಳಿಗೂ ಜೈವಿಕ್ ಇಂಧನ ಹಾಗೂ ಸಸ್ಯಗಳ ಕುರಿತು ಅರಿವು ಮೂಡಿಸಬೇಕು. ಜೈವಿಕ್ ಇಂಧನ ಪಾರ್ಕ್‌ಗೆ ಭೇಟಿ ನೀಡಿದಾಗ ಆಡಳಿತಾತ್ಮಕ ಅಧಿಕಾರಿಗಳು ಶಾಲಾ ಮಕ್ಕಳಿಗೆ ಸಂಪೂರ್ಣ ಮಾಹಿತಿ ನೀಡಬೇಕು. ಆದರೆ ಅಧಿಕಾರಿಗಳು ತಮಗೆ ತಿಳಿದಾಗ ಕಚೇರಿ ಬರುವುದರಿಂದ ವಿದ್ಯಾರ್ಥಿಗಳಿಗೆ ಮಾಹಿತಿ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.
ಪರಿಸರ ಸ್ನೇಹಿ ಜೈವಿಕ ಇಂಧನ ಪಾರ್ಕ್ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಸಿದ್ಧ ಗೊಂಡಿರುವ ಆಡಳಿತ ಕಚೇರಿಯನ್ನು ಆದಷ್ಟು ಬೇಗ ಉದ್ಘಾಟಿಸಿ ಈ ಭಾಗದ ರೈತರಿಗೆ ತರಬೇತಿ ಸಿಗಬೇಕು. ಹಾಗೇ ಅಧಿಕಾರಿಗಳಿಂದ ಅಗತ್ಯ ಮಾಹಿತಿ ದೊರಕುವಂತಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.
-ಬಾಲಪ್ಪ ಎಂ. ಕುಪ್ಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.