ಹಸಿ ತ್ಯಾಜ್ಯ ಬಳಸಿ ಪೈಪ್ ಗೊಬ್ಬರ ತಯಾರಿ
Team Udayavani, Nov 26, 2019, 4:23 PM IST
ರಾಮನಗರ: ಪೈಪ್ ಗೊಬ್ಬರ! ಆಶ್ಚರ್ಯ ಬೇಡ. ಹಸಿ ತ್ಯಾಜ್ಯವನ್ನು ಪೈಪ್‌ನಲ್ಲಿ ಹಾಕಿ ಗೊಬ್ಬರ ತಯಾರಿಸುವ ನೂತನ ವಿಧಾನವಿದು. ಮನೆ, ಶಾಲೆ, ಕಚೇರಿ , ಹೋಟೆಲ್ ಹೀಗೆ ಎಲ್ಲಿ ಬೇಕಾದರು, ಯಾರು ಬೇಕಾದರು ಈ ವಿಧಾನವನ್ನು ಅನುಸರಿಸಿ ಗೊಬ್ಬರವನ್ನು ತಯಾರಿಸಿ ಮರ, ಗಿಡಗಳಿಗೆ ಬಳಸಿಕೊಳ್ಳಬಹುದು. ಪೈಫ್ ಗೊಬ್ಬರದ ಬಗ್ಗೆ ತಾಪಂ ಆವರಣದಲ್ಲಿ ಪ್ರಾತ್ಯಕ್ಷಿಕೆ ನಡೆಯಿತು.
ಪೈಪ್ ಗೊಬ್ಬರ ವಿಧಾನವೇನು?: ಪೈಪ್ ಗೊಬ್ಬರ ತಯಾರಿಸಲು ದೊಡ್ಡ ಸ್ಥಳವೇನು ಅಗತ್ಯವಿಲ್ಲ. ಒಂದುವರೆ ಅಡಿ ಅಗಲ ಉದ್ದದ ಎರಡು ಸ್ಥಳ ಸಾಕು. ಮನೆಯಲ್ಲಿ ದಿನ ನಿತ್ಯ ಒಂದು ಕೆ.ಜಿ. ಹಸಿ ಕಸ ಉತ್ಪತ್ತಿ ಆಗುತ್ತಿದ್ದರೆ 6 ಇಂಚು ಅಗಲ, 6 ಅಡಿ ಉದ್ದದ 2 ಪೈಪು ಬೇಕು. ಒಂದು ಕೆ.ಜಿ.ಗಿಂತ ಅಧಿಕ ಹಸಿ ತ್ಯಾಜ್ಯ ಉತ್ಪತ್ತಿಯಾದರೆ 8 ಇಂಚು ಅಗಲದ ಪೈಪು ಅಗತ್ಯವಿದೆ. ಒಂದೂವರೆ ಅಗಲದ ಎರಡೂ ಕಡೆಯ ಭೂಮಿಯನ್ನು 1 ರಿಂದ 1.5 ಅಡಿ ಆಳ ತೋಡಿಕೊಳ್ಳಿ. ನಂತರ ಎರಡೂ ಪೈಪ್‌ಗ್ಳನ್ನು ಪ್ರತ್ಯೇಕವಾಗಿ ಕಂಬದಂತೆ ನಿಲ್ಲಿಸಿ ಅಲ್ಲಾಡದಂತೆ ಸಿದ್ಧತೆ ಮಾಡಿಕೊಳ್ಳಬೇಕು.
ನಂತರ ಒಂದು ಪೈಪಿನೊಳಗೆ 1ಲೀಟರ್ ಸಗಣಿನೀರು ಮತ್ತು 1 ಲೀಟರ್ ಬೆಲ್ಲದ ನೀರನ್ನು ಸುರಿಯಬೇಕು. ನಂತರ ದಿನನಿತ್ಯ ಹಸಿ ತ್ಯಾಜ್ಯವನ್ನು ಆ ಪೈಪ್‌ನೊಳಕ್ಕೆ ಹಾಕುತ್ತಿರುವ ಬೇಕು. ಆಗೊಮ್ಮೆ, ಈಗೊಮ್ಮೆ ಒಂದಿಷ್ಟು ಬೆಲ್ಲದ ಚೂರನ್ನು ಹಾಕಿದರೆ ಒಳಿತು. 30 ದಿನಗಳ ನಂತರ ಪೈಪ್‌ಗೆ ಮುಚ್ಚಳ ಬಿಗಿದು, ತಿಂಗಳ ಕಾಲ ತೆರೆಯಬಾರದು. ಹೀಗೆ ಒಂದು ಪೈಪನ್ನು ಮುಚ್ಚಿದ ನಂತರ ಮತ್ತೂಂದು ಪೈಪ್‌ನ ಬಳಕೆಯನ್ನು ಆರಂಭಿಸಬೇಕು. ತಿಂಗಳಲ್ಲಿ ಹಸಿ ತ್ಯಾಜ್ಯ ಗೊಬ್ಬರವಾಗಿರುತ್ತದೆ. ತಿಂಗಳ ನಂತರ ಪೈಪನ್ನು ಭೂಮಿಯಿಂದ ಹೊರತೆಗೆದು ಗೊಬ್ಬರವನ್ನು ಬಳಸಿಕೊಳ್ಳಬಹುದು. ಈ ವಿಧಾನದಲ್ಲಿ ಯಾವುದೇ ವಾಸನೆಗೆ ಅವಕಾಶವಿಲ್ಲ. ಹಸಿ ತ್ಯಾಜ್ಯವನ್ನು ರಸ್ತೆ ಬದಿ ಸುರಿದು ಅದು ಕೊಳೆತು ಸಾಂಕ್ರಮಿಕ ರೋಗಗಳಿಗೆ ಕಾರಣವಾಗುವ ಭಯವಿಲ್ಲ. ಉಳಿದ ಅನ್ನ, ಹೆಚ್ಚಿದ ತರಕಾರಿ, ಹಣ್ಣಿನ ಸಿಪ್ಪೆ ಇತ್ಯಾದಿ ಹಸಿ ತ್ಯಾಜ್ಯವನ್ನು ಬಳಸಿ ಗೊಬ್ಬರ ತಯಾರಿಸಿಕೊಳ್ಳುವ ಸರಳ ಹಾಗೂ ಸುಲಭದ ವಿಧಾನವಿದು.
ಕಸದ ಸಮಸ್ಯೆಗೆ ಪರಿಣಾಮಕಾರಿ ಉತ್ತರ: ಪೈಪ್ ಗೊಬ್ಬರದ ವಿಧಾನವನ್ನು ಕಂಡುಕೊಂಡ ಜಸ್ವತ್ ಗೌಡ ನಗರದ ತಾಪಂ ಆವರಣದಲ್ಲಿ ಈ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿ ಅಂಗನವಾಡಿ, ಶಾಲಾ – ಕಾಲೇಜುಗಳು, ಸರ್ಕಾರಿ ಕಚೇರಿಗಳಲ್ಲಿ ಈ ಸರಳ ವಿಧಾನವನ್ನು ಅನುಸರಿಸಿ ಮಾದರಿಯಾಗಬೇಕು ಎಂದು ಸ್ಥಳದಲ್ಲಿದ್ದ ಸಾರ್ವಜನಿಕರಿಗೆ ಸಲಹೆ ನೀಡಿದರು.
ತಾಪಂ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಪೈಪ್ ಗೊಬ್ಬರ ವಿಧಾನಕ್ಕೆ ಹೆಚ್ಚಿನ ಸ್ಥಳವೇನು ಅಗತ್ಯವಿಲ್ಲ. ಹೆಚ್ಚು ವೆಚ್ಚವೂ ಆಗುವುದಿಲ್ಲ. ವಾಸನೆ, ಇತ್ಯಾದಿಯ ತೊಂದರೆಯಿಲ್ಲ ಹೀಗಾಗಿ ಈ ಪ್ರಾತ್ಯಕ್ಷಿಕೆಯನ್ನುಪಿಡಿಒಗಳು, ಶಾಲಾ-ಕಾಲೇಜಿನ ಶಿಕ್ಷಕರಿಗೆ ನೀಡಲಾಗಿದೆ ಎಂದರು. ತಾಪಂ ಇಒ ಶಿವಕುಮಾರ್ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಸಮಸ್ಯೆಗಳು ಇದ್ದರೆವಾಟ್ಸಪ್ ಮಾಡಿ: ತಾಲೂಕಿನ ಗ್ರಾಮೀಣ ಭಾಗದಲ್ಲಿ ಚರಂಡಿ ಅವ್ಯವಸ್ಥೆ, ವಿದ್ಯುತ್ ಕಂಬ ದುರಸ್ತಿ ಇತ್ಯಾದಿ ಸಮಸ್ಯೆಗಳಿದ್ದರೆ, ಅಂತಹ ಗ್ರಾಮಗಳ ನಿವಾಸಿಗಳು ತಮ್ಮ ವಾಟ್ಸಪ್ ಸಂಖ್ಯೆಯ ಮೂಲಕ ಮಾಹಿತಿ ಕೊಡುವಂತೆ ತಾಪಂ ಅಧ್ಯಕ್ಷ ಗಾಣಕಲ್ ನಟರಾಜ್ ತಿಳಿಸಿದರು. ತಮಗೆ ಮಾಹಿತಿ ಲಭ್ಯವಾದ ಕೂಡಲೆ ಅದನ್ನು ಸಂಬಂಧಿಸಿದ ಅಧಿಕಾರಿಗಳಿಗೆ ಕಳುಹಿಸಿ ಸರಿಪಡಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದರು. ಮಾಹಿತಿಗೆ ಗಾಣಕಲ್ ನಟರಾಜ್ ಅವರ ವಾಟ್ಸಪ್ ಸಂಖ್ಯೆ: 9845743444.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
By Election: ಚನ್ನಪಟ್ಟಣದಲ್ಲಿ ಧರ್ಮ-ಅಧರ್ಮದ ನಡುವೆ ಚುನಾವಣೆ: ಎಚ್.ಡಿ.ಕುಮಾರಸ್ವಾಮಿ
By Poll: ರಣರಂಗವೂ ಇಲ್ಲ, ಚದುರಂಗವೂ ಇಲ್ಲ, ಜನರೇ ಪಟ್ಟಿ ಮಾಡಿ, ಅಂಕ ನೀಡ್ತಾರೆ: ಡಿಕೆಶಿ
By Election: ಮಾತೃ ಹೃದಯಗಳಲ್ಲಿ ಕಣ್ಣೀರು ಸಹಜ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ
By Election: ರಾಜ್ಯ ಸರ್ಕಾರ ನಿರ್ಜೀವ, ನಿಂತ ನೀರು: ಕೇಂದ್ರ ಸಚಿವ ವಿ.ಸೋಮಣ್ಣ ಟೀಕೆ
By Election: ಕಣ್ಣೀರು ಹಾಕುವವರಿಗೆ ಮತ ನೀಡಬಾರದು: ಅಭ್ಯರ್ಥಿ ಸಿ.ಪಿ.ಯೋಗೇಶ್ವರ್
MUST WATCH
ಹೊಸ ಸೇರ್ಪಡೆ
Davanagere: ಇನ್ಶೂರೆನ್ಸ್ ಹಣಕ್ಕಾಗಿ ಸಂಬಂಧಿಯ ಕೊಲೆ; 24 ಗಂಟೆಯೊಳಗೆ ನಾಲ್ವರ ಬಂಧನ
Udupi: ನ. 9-11ರ ವರೆಗೆ 3 ದಿನಗಳ ಹರಿದಾಸ ಸಾಹಿತ್ಯ ಅಂತಾರಾಷ್ಟ್ರೀಯ ಸಮ್ಮೇಳನ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Salman Khan: ಕ್ಷಮೆ ಕೇಳಿ ಇಲ್ಲವೇ 5 ಕೋಟಿ ಕೊಡಿ: ನಟ ಸಲ್ಮಾನ್‌ಗೆ ಮತ್ತೂಂದು ಬೆದರಿಕೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.