ಒಳ ಮನಸ್ಸಲ್ಲಿತ್ತು ಗೀಳು ಚಟದ ಮೂಲ


Team Udayavani, Nov 27, 2019, 4:00 AM IST

as-4

ಚೊಚ್ಚಲ ಬಸುರಿಯಲ್ಲಿ ಸೀರೆ ಕೊಡಿಸುವ ಮಾತಿರಲಿ, ತಿನ್ನಲು ಸೀಬೆಕಾಯಿ ಬೇಕೆನಿಸಿದರೂ ಆತ ಕೊಡಿಸಲಿಲ್ಲ. ಬಾಣಂತನಕ್ಕೆ ತವರಿಗೆ ಹೋಗಿಬರುವಷ್ಟರಲ್ಲಿ ಮನೆಯಲ್ಲಿದ್ದ ಗಾಡ್ರೇಜ್‌ ಬೀರು ಮಾಯವಾಗಿತ್ತು. ಎರಡನೇ ಮಗುವಾಗುವ ಹೊತ್ತಿಗೆ ತವರಿನವರು, ಆಕೆಯನ್ನು ಗಂಡನ ಮನೆಗೆ ತಿರುಗಿ ಕಳಿಸಲಿಲ್ಲ. ಮಕ್ಕಳು ಕೂಡಾ ತವರಿನಲ್ಲಿಯೇ ಬೆಳೆದರು.

ಆಕೆಗೆ ಇತ್ತೀಚೆಗೆ ಗೀಳು ಚಟ ಎಂಬ ಮಾನಸಿಕ ಕಾಯಿಲೆ ಶುರುವಾಗಿದೆ. ಪದೇ ಪದೆ ಕೈ ತೊಳೆಯುತ್ತಾರೆ. ದೇವರಿಗೆ ಅಪವಿತ್ರವಾಗುತ್ತದೆ ಎಂಬ ಭಯದಲ್ಲಿ ದೇವರ ವಿಗ್ರಹಗಳನ್ನೂ, ಪೂಜಾ ಸಾಮಗ್ರಿಗಳನ್ನೂ ದಿನವೂ ಶುಚಿ ಮಾಡುತ್ತಲೇ ಇರುತ್ತಾರೆ. ಯಾರೊಂದಿಗೂ ಮಾತು ಬೇಕಿಲ್ಲ. ಆಕೆಯ ಇಬ್ಬರು ಮಕ್ಕಳಿಗೂ ಮದುವೆಯಾಗಿ, ಅವರವರ ಸಂಸಾರದಲ್ಲಿ ಹಾಯಾಗಿದ್ದಾರೆ. ಆದರೆ, ಆಕೆಗೆ ಮಾತ್ರ ನೆಮ್ಮದಿಯಿಲ್ಲ. ಮನೋವೈದ್ಯರು ಮಾತ್ರೆಗಳನ್ನು ಬರೆದುಕೊಟ್ಟು, ನನ್ನ ಬಳಿ ಸಮಾಲೋಚನೆಗೆ ಕಳಿಸಿದ್ದರು.

ಹದಿನೆಂಟನೇ ವರ್ಷಕ್ಕೆ ಆಕೆ ಮದುವೆಯಾದಾಗ, ಸಂಸಾರದ ಬಗ್ಗೆ ಕಣ್ಣು ತುಂಬಾ ಬಣ್ಣಬಣ್ಣದ ಕನಸುಗಳಿದ್ದವು. ವಾಸ್ತವದಲ್ಲಿ ಆಕೆಗೆ ಸಿಕ್ಕಿದ್ದು ಕುಡುಕ ಗಂಡ. ತಂದೆಯ ಮನೆಯಲ್ಲಿ ತೃಪ್ತಿಯಿಂದ ಬದುಕಿದ್ದ ಹುಡುಗಿಗೆ ವಠಾರದ ಬದುಕು ಕಷ್ಟವಾಗುತ್ತಿತ್ತು. ಹತ್ತು ಮನೆಗಳಿಗೆ ಇದ್ದ ಒಂದೇ ಪಾಯಿಖಾನೆಗೆ ಹೋಗಿ-ಬರುವಾಗ ಗಲೀಜು ಎನಿಸುತ್ತಿತ್ತು. ಜೊತೆಗೆ ಹೆದರಿಕೆಯೂ ಆಗುತ್ತಿತ್ತು. ಗಂಡನ ಜೊತೆಗೆ ಸ್ನೇಹವಿದ್ದಿದ್ದರೆ, ವಠಾರದ ಕಷ್ಟದ ಬದುಕಿಗೆ ಹೊಂದಿಕೊಳ್ಳುತ್ತಿದ್ದರೇನೋ. ಆದರೆ, ಇಸ್ಪೀಟು-ಕುಡಿತದ ಚಟಕ್ಕೆ ಬಿದ್ದವನು, ಮೂರು ಸಲ ಮಾಂಗಲ್ಯದ ಸರವನ್ನೇ ಅಡವಿಟ್ಟವನು, ಆಕೆಯ ಸ್ನೇಹವನ್ನು ಉಳಿಸುತ್ತಾನೆಯೇ? ಚೊಚ್ಚಲ ಬಸುರಿಯಲ್ಲಿ ಸೀರೆ ಕೊಡಿಸುವ ಮಾತಿರಲಿ, ತಿನ್ನಲು ಸೀಬೆಕಾಯಿ ಬೇಕೆನಿಸಿದರೂ ಆತ ಕೊಡಿಸಲಿಲ್ಲ. ಬಾಣಂತನಕ್ಕೆ ತವರಿಗೆ ಹೋಗಿಬರುವಷ್ಟರಲ್ಲಿ ಮನೆಯಲ್ಲಿದ್ದ ಗಾಡ್ರೇಜ್‌ ಬೀರು ಮಾಯವಾಗಿತ್ತು. ಎರಡನೇ ಮಗುವಾಗುವ ಹೊತ್ತಿಗೆ ತವರಿನವರು, ಆಕೆಯನ್ನು ಗಂಡನ ಮನೆಗೆ ತಿರುಗಿ ಕಳಿಸಲಿಲ್ಲ. ಮಕ್ಕಳು ಕೂಡಾ ತವರಿನಲ್ಲಿಯೇ ಬೆಳೆದರು.

ವ್ಯಕ್ತಿಯೊಬ್ಬ ಗೀಳು ಚಟಕ್ಕೆ ಬೀಳಲು ಮುಖ್ಯ ಕಾರಣ ಖನ್ನತೆ ಮತ್ತು ಉದ್ವಿಘ್ನತೆ. ಸಂಬಂಧಿಕರ ಮಕ್ಕಳ ಮದುವೆಗಳಲ್ಲಿ ಹಾಲು ತುಪ್ಪ ಬಿಡುವಾಗ, ಗಂಡನಿದ್ದರೂ ವಿಧವೆಯಂತೆ ಬದುಕಿದೆನಲ್ಲಾ ಎಂಬುದೇ ಆಕೆಗೆ ಖನ್ನತೆಯಾಗಿ ಬೆಳೆಯಿತು. ಪಾರ್ಕ್‌ನಲ್ಲಿ ವೃದ್ಧ ದಂಪತಿಗಳನ್ನು ನೋಡಿದಾಗ ಅವ್ಯಕ್ತ ನೋವು. ಸಂಗಾತಿಯಿಲ್ಲದೆ, ಬದುಕು ಸಹ್ಯವಾಗುವುದಿಲ್ಲ. ದೇವರಿಗೆ ತಾನೇನೋ ಅಪಚಾರ ಮಾಡಿದ್ದರಿಂದಲೇ ತನಗೆ ಒಂಟಿತನದ ಶಾಪ ತಟ್ಟಿದೆ ಎಂದು ಆಕೆ ದೃಢವಾಗಿ ನಂಬಿದ್ದರು. ಆ ರೀತಿ ಮನಸ್ಸು ಮಾಡಿಕೊಳ್ಳುವ pairing ಅನ್ನು ಆಪ್ತ ಸಮಾಲೋಚನೆಯಲ್ಲಿ ಬದಲಾಯಿಸಬೇಕು. ಆಗ ದೇವರ ಕೋಣೆಯನ್ನು ಶುಚಿಯಾಗಿಡುವ ಹುಚ್ಚು/ಗೀಳು ಕಡಿಮೆಯಾಗುತ್ತದೆ. ಕೈ ತೊಳೆಯುವ ಚಟಕ್ಕೆ ಮುಕ್ತಿ ದೊರಕುತ್ತದೆ.

ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಸ್ವಂತ ತಂದೆಯಿಂದ ತೊಂದರೆಯಾಯಿತು. ಬೆಳೆದ ಮೇಲೆ, ಅಮ್ಮನ ವೃದ್ಧಾಪ್ಯದಿಂದ ಮತ್ತೆ ಆ ಮಕ್ಕಳಿಗೆ ತೊಂದರೆಯಾಗಬಹುದು ಎಂಬ ಆಕೆಯ ಒಳ ಮನಸ್ಸಿನ ನೋವನ್ನು ಕೌನ್ಸೆಲಿಂಗ್‌ ಹಂತದಲ್ಲಿ ಗುರುತಿಸಲಾಯಿತು. ವೃದ್ಧಾಶ್ರಮ ಎಂದರೆ, ಮಕ್ಕಳಿಂದ ತಿರಸ್ಕರಿಸಲಾದವರು ಇರುವ ಜಾಗವಲ್ಲ, ಬದಲಿಗೆ ಒಂಟಿಯಾಗಿರುವವರಿಗೆ ಸ್ನೇಹದ ಸೌಭಾಗ್ಯವನ್ನು ಕೊಡುವ ಜಾಗ ಎಂಬುದು ಆಕೆಯ ನಿಲುವು. ವೃದ್ಧಾಶ್ರಮ ಸೇರುವ ಆಕೆಯ ಮನದಾಳದ ಇಂಗಿತವನ್ನು ಕೌಟುಂಬಿಕಾ ಸಲಹೆಯಲ್ಲಿ, ಆಕೆಯ ಮಕ್ಕಳಿಗೆ ತಿಳಿಸಿ ಹೇಳಲಾಯ್ತು. ಆನಂತರ ಆಕೆಯ ಮನಸ್ಸು ಕೂಡಾ ನಿರಾಳವಾಯಿತು.

ದುಃಖಭರಿತವಾದ ಆಲೋಚನೆಗಳು ಪುನರಾವರ್ತಿತವಾಗುವುದನ್ನು ಕಡಿಮೆ ಮಾಡಲು ನಿಧಾನಗತಿಯ ಕ್ರಮಬದ್ಧ ಉಸಿರಾಟ ಸಹಕಾರಿ. ದಿನಕ್ಕೆ ನಾಲ್ಕು ಸಲ ಅಭ್ಯಾಸ ಮಾಡಬೇಕು. ಮನೋವೈದ್ಯರ ಮದ್ದು ಮತ್ತು ಕೌನ್ಸೆಲಿಂಗ್‌ ಮೂಲಕ ಗೀಳು-ಚಟವನ್ನು ಹೋಗಲಾಡಿಸಬಹುದು.

ಕೊನೆಯ ಮಾತು: ಕುಡಿತ ಮತ್ತು ಇಸ್ಪೀಟು ಕೇವಲ ಒಬ್ಬ ವ್ಯಕ್ತಿಯನ್ನು ಹಾಳುಮಾಡುವುದಿಲ್ಲ. ಆ ಚಟಗಳು ಕೌಟುಂಬಿಕ ಸ್ವಾಸ್ಥ್ಯವನ್ನೇ ಹಾಳುಮಾಡುತ್ತಿವೆ.

ಡಾ. ಶುಭಾ ಮಧುಸೂದನ್‌
ಚಿಕಿತ್ಸಾ ಮನೋವಿಜ್ಞಾನಿ

ಟಾಪ್ ನ್ಯೂಸ್

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Padubidri

Padubidire: “ಬಲೆ ಬಲಿಪುಗ’ 3 ಕಿ.ಮೀ. ಬರಿಗಾಲ ಮ್ಯಾರಥಾನ್‌ ಓಟ

cOurt

Pakshikere: ಮೂವರ ಸಾವಿನ ಪ್ರಕರಣ: ತಾಯಿ, ಪುತ್ರಿಗೆ ಜಾಮೀನು ಮಂಜೂರು

police

Gangolli: ಕ್ರಿಮಿನಲ್‌ ಹಿನ್ನೆಲೆ: ಮೂವರ ಮೇಲೆ ಪ್ರಕರಣ ದಾಖಲು

theft-temple

Koteshwara: ಶೋ ರೂಮ್‌ನಲ್ಲಿ ಕಳವಿಗೆ ಯತ್ನ

Accident-logo

Sulya: ನಿಲ್ಲಿಸಿದ್ದ ಕಾರಿಗೆ ಬಸ್‌ ಢಿಕ್ಕಿ; ಜಖಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.