ಮಖಾನ ಸವಿರುಚಿ


Team Udayavani, Nov 27, 2019, 4:26 AM IST

as-7

ತಾವರೆ ಹೂವು ಎಲ್ಲರಿಗೂ ಗೊತ್ತಿದೆ. ಆದರೆ, ತಾವರೆ ಬೀಜದಿಂದ ಮಾಡಬಹುದಾದ ಅಡುಗೆಗಳ ಬಗ್ಗೆ ಹೆಚ್ಚಿನವರಿಗೆ ಗೊತ್ತಿರಲಿಕ್ಕಿಲ್ಲ. ಮಖಾನ, ಲೋಟಸ್‌ ಸೀಡ್ಸ್‌, ಫಾಕ್ಸ್‌ ನಟ್ಸ್‌ ಎಂದು ಕರೆಸಿಕೊಳ್ಳುವ ತಾವರೆ ಬೀಜ, ಈಗ ಎಲ್ಲ ಅಂಗಡಿಗಳಲ್ಲೂ ಸಿಗುತ್ತದೆ. ರುಚಿಗಷ್ಟೇ ಅಲ್ಲ, ಅದನ್ನು ನಿಯಮಿತವಾಗಿ ಬಳಸುವುದರಿಂದ ತೂಕ ನಿಯಂತ್ರಣವೂ ಸಾಧ್ಯವಿದೆ. ಷಿಾವರೆ ಬೀಜಗಳನ್ನು ಬಳಸಿ ಮಾಡಬಹುದಾದ ರೆಸಿಪಿಗಳು ಇಲ್ಲಿವೆ.

1. ಮಖಾನ ರಾಯತ
ಬೇಕಾಗುವ ಸಾಮಗ್ರಿ: ಮೊಸರು- 1 ಕಪ್‌, ಮಖಾನ (ತಾವರೆ ಬೀಜ)- 1 ಕಪ್‌, ಗರಂ ಮಸಾಲ- ಅರ್ಧ ಚಮಚ, ಜೀರಿಗೆ ಪುಡಿ- 1 ಚಮಚ, ಒಣಮೆಣಸಿನಪುಡಿ- 1 ಚಮಚ, ಕೊತ್ತಂಬರಿ ಸೊಪ್ಪು- 1 ಕಪ್‌, ರುಚಿಗೆ ಉಪ್ಪು, ಎಣ್ಣೆ- 2 ಚಮಚ.

ಮಾಡುವ ವಿಧಾನ: ಬಾಣಲೆಗೆ ಎಣ್ಣೆ ಹಾಕಿ, ಮಖಾನವನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಒಂದು ಬೌಲ್‌ನಲ್ಲಿ ಮೊಸರು ಹಾಕಿ, ಮೇಲೆ ಹೇಳಿದ ಎಲ್ಲ ಮಸಾಲೆ ಪುಡಿಗಳನ್ನು ಸೇರಿಸಿ, ಉಪ್ಪು ಹಾಕಿ, ಮಿಶ್ರಣ ಮಾಡಿ. ಹುರಿದ ಮಖಾನ ಹಾಕಿ ಕೂಡಿಸಿ. ನಂತರ, ಹೆಚ್ಚಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರಾಯತ ತಯಾರು. ಪಲಾವ್‌, ರೈಸ್‌ಬಾತ್‌ಗಳೊಂದಿಗೆ ಇದನ್ನು ಸವಿಯಬಹುದು.

2. ಮಖಾನ ಪಾಯಸ
ಬೇಕಾಗುವ ಸಾಮಗ್ರಿ: ಹುರಿದ ಮಖಾನ- 1 ಕಪ್‌, ಹಾಲು- 3 ಕಪ್‌, ತುಪ್ಪ- 2 ಚಮಚ, ದ್ರಾಕ್ಷಿ-ಗೋಡಂಬಿ- 2 ಚಮಚ, ಏಲಕ್ಕಿ ಪುಡಿ- ಅರ್ಧ ಚಮಚ, ಸಕ್ಕರೆ- 2 ಕಪ್‌.

ಮಾಡುವ ವಿಧಾನ: ಮೊದಲು ಒಂದು ಬಾಣಲೆಗೆ 2 ಚಮಚ ತುಪ್ಪ ಹಾಕಿ ದ್ರಾಕ್ಷಿ ಗೋಡಂಬಿ ಹಾಕಿ ಹುರಿಯಿರಿ, ದಪ್ಪ ತಳದ ಪಾತ್ರೆಗೆ ಹಾಲು ಹಾಕಿ ಕುದಿಯಲು ಇಡಿ. ಒಂದು ಕುದಿ ಬಂದ ನಂತರ ಸಕ್ಕರೆ ಹಾಕಿ ಕೂಡಿಸಿ. ಈಗ ಹುರಿದ ಮಖಾನ ಹಾಕಿ ಚೆನ್ನಾಗಿ ಕೈಯಾಡಿಸಿ. ದ್ರಾಕ್ಷಿ ಗೋಡಂಬಿ ಹಾಕಿ ಗಟ್ಟಿಯಾಗುವವರೆಗೆ ಕುದಿಸಿ ಕೆಳಗಿಳಿಸಿ.

3. ಪಾಲಕ್‌ ಮಖಾನ ಕರಿ
ಬೇಕಾಗುವ ಸಾಮಗ್ರಿ: ಪಾಲಕ್‌ ಸೊಪ್ಪು- 1 ಕಂತೆ, ಟೊಮೇಟೊ- 2, ಮಖಾನ- 2 ಕಪ್‌, ಜೀರಿಗೆ- 1 ಚಮಚ, ಹಸಿಮೆಣಸಿನಕಾಯಿ- 2, ಗರಂ ಮಸಾಲ- 1 ಚಮಚ, ಒಣಮೆಣಸಿನಪುಡಿ- ಅರ್ಧ ಚಮಚ, ಅರಿಶಿನ- ಅರ್ಧ ಚಮಚ, ಹಾಲು- 2 ಚಮಚ, ಉಪ್ಪು ರುಚಿಗೆ.

ಮಾಡುವ ವಿಧಾನ: ಮೊದಲಿಗೆ ಪಾಲಕ್‌ ಸೊಪ್ಪನ್ನು ಚೆನ್ನಾಗಿ ತೊಳೆದು, ಜೊತೆಗೆ ಜೀರಿಗೆ, ಅರಿಶಿಣ, ಉಪ್ಪು, ಹಸಿಮೆಣಸಿನಕಾಯಿ ಹಾಕಿ ಕುಕ್ಕರ್‌ನಲ್ಲಿ ಬೇಯಿಸಿ. ತಣ್ಣಗಾದ ನಂತರ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಮಖಾನವನ್ನು ಹೊಂಬಣ್ಣಕ್ಕೆ ಹುರಿದು, ಅದೇ ಬಾಣಲೆಗೆ ಎಣ್ಣೆ, ಜೀರಿಗೆ ಹಾಕಿ, ಹೆಚ್ಚಿದ ಟೊಮೇಟೊ ಹಾಕಿ ಹದವಾಗಿ ಬೇಯಿಸಿ. ಎಲ್ಲ ಮಸಾಲೆ ಪುಡಿಗಳನ್ನು ಹಾಕಿ, ಸ್ವಲ್ಪ ನೀರು ಹಾಕಿ ಕುದಿಸಿ. ಇದಕ್ಕೆ ಹಾಲು, ರುಬ್ಬಿದ ಪಾಲಕ್‌ ಮಿಶ್ರಣವನ್ನು ಸೇರಿಸಿ ಕುದಿಸಿ. ನಂತರ ಮಖಾನ ಸೇರಿಸಿ 2 ನಿಮಿಷ ಕುದಿಸಿ. ಇದು ರೋಟಿ, ಜೀರಾ ರೈಸ್‌, ನಾನ್‌ಗಳೊಂದಿಗೆ ತಿನ್ನಲು ರುಚಿಯಾಗಿರುತ್ತದೆ.

4. ಮಖಾನ ಫ್ರೈ
ಬೇಕಾಗುವ ಸಾಮಗ್ರಿ: ಮಖಾನ -200 ಗ್ರಾಂ, ಅರಿಶಿಣ ಪುಡಿ – ಅರ್ಧ ಚಮಚ, ಖಾರದ ಪುಡಿ – ಅರ್ಧ ಚಮಚ, ಚಾಟ್‌ ಮಸಾಲ – 1 ಚಮಚ, ಕಾಳುಮೆಣಸಿನ ಪುಡಿ – ಅರ್ಧ ಚಮಚ, ಎಣ್ಣೆ – 2 ದೊಡ್ಡ ಚಮಚ, ಉಪ್ಪು ರುಚಿಗೆ.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ತಾವರೆ ಬೀಜ ಹಾಕಿ, ಕಡಿಮೆ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಆಗ ಆ ಬೀಜಗಳು ಪಾಪ್‌ ಕಾರ್ನ್ನಂತೆ ಊದಿಕೊಳ್ಳುತ್ತವೆ. ಅದಕ್ಕೆ, ಉಪ್ಪು, ಅರಿಶಿಣ, ಖಾರದ ಪುಡಿ, ಚಾಟ್‌ ಮಸಾಲ, ಕಾಳುಮೆಣಸಿನ ಪುಡಿ ಸೇರಿಸಿದರೆ, ಕಾಫಿ, ಟೀ ಜೊತೆ ಸ್ನ್ಯಾಕ್ಸ್‌ನಂತೆ ಸವಿಯಬಹುದು.

-ಶ್ರುತಿ ಕೆ.ಎಸ್‌.

ಟಾಪ್ ನ್ಯೂಸ್

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

ಕುದೂರು; ಸ್ವಂತ ಖರ್ಚಲ್ಲಿ ಶಿಕ್ಷಕನಿಂದ ವಿದ್ಯಾರ್ಥಿಗಳಿಗೆ ವಿಮಾನ ಪ್ರವಾಸ!

1-JMM

Jharkhand; ಸಿಎಂ ಆಗಿ ಹೇಮಂತ್ ಸೊರೇನ್ ಪ್ರಮಾಣ ವಚನ ಸ್ವೀಕಾರ

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

ಪ್ರಯಾಣಿಕರಿಗೆ ಟಿಕೆಟ್‌ ಅಗತ್ಯವಿಲ್ಲದ ಭಾರತದ ಏಕೈಕ ಉಚಿತ ರೈಲು ಪ್ರಯಾಣದ ಬಗ್ಗೆ ಗೊತ್ತಾ?

Renukaswamy Case: ಬೆನ್ನುನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?

Renukaswamy Case:ಬೆನ್ನು ನೋವು ಬಳಿಕ ದರ್ಶನ್‌ಗೆ ಮತ್ತೊಂದು ಸಮಸ್ಯೆ; ವಕೀಲರು ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

156

Nikhil Kumarswamy: ಸೋತ ನಿಖಿಲ್‌ಗೆ ಜಿಲೆಯ ಪಕ್ಷ ಸಂಘಟನೆ ಹೊಣೆ

Vijayapura: ಬಿಚ್ಚಿಟ್ಟರೆ ಬಣ್ಣ ಬಯಲು, ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು: ಯತ್ನಾಳ್

ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ

fir

Karnataka ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿರುದ್ಧ ಲೈಂಗಿ*ಕ ದೌರ್ಜನ್ಯ ಪ್ರಕರಣ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

1-ajmir

Ajmer dargah ಶಿವ ದೇವಾಲಯ?; ಕೋಮು ಸೌಹಾರ್ದತೆಗೆ ಭಂಗ ತರುವ ಕುತಂತ್ರ: ಖಾದಿಮರ ಮನವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.