ವಾಕಿಂಗ್‌ ಹೋಗೂದಂದ್ರ ಸುಮ್ನ ಆಯ್ತೇನ್ರೀ…

ಹೋಗುವುದು ಕಷ್ಟ, ಹೋಗದಿದ್ದರೂ ಕಷ್ಟ

Team Udayavani, Nov 27, 2019, 5:37 AM IST

as-9

ಒಬ್ರು (ಗಂಡಸು )ಬರ್ತಿದ್ರು ವಾಕಿಂಗ್‌ಗೆ . ಅವರು ಮೊಬೈಲ್‌ ಸ್ಪೀಕರ್‌ ಆನ್‌ ಇಟ್ಟು ಹಾಡು ಕೇಳ್ಕೊàತ ಬರ್ತಿದ್ರು. ಅವು ಎಂಥಾ ಹಾಡ್ರಿ? “ದೇಖೋರೆ ದೇಖೋರೆ ಬಾಳೆದಿಂಡು’, “ಚಳಿ ಚಳಿ ತಾಳೆನು ಈ ಚಳಿಯಾ… ’ ಇಂಥಾವ. ನಂಗಂತೂ ಮೈ ಪರಚಿಕೊಳ್ಳೋ ಹಂಗ ಆಗೋದ್ರಿ.. ವಾಕಿಂಗ್‌ ಹೋಗದ ಮನ್ಯಾಗ ಕೂತ್ರ, ಮಕ್ಳು – “ಅಮ್ಮಾ, ನಿನ್ನ ವೆಯಿಟ್‌ ಜಾಸ್ತಿ ಆಗ್ಲಿಕತ್ತೇದ’ ಅಂತ ಅಣಕಿಸೋರು.

ನನ್ನ ಜೀವನದಾಗ ಭಾಳ ಬ್ಯಾಸರದ ಕೆಲಸ ಅಂದ್ರ ಈ ವಾಕಿಂಗ್‌ ರೀ . ವಾಕಿಂಗ್‌ ಹೋಗೋದು ಚೊಲೋ ಬಿಡ್ರಿ. ಆರೋಗ್ಯಕ್ಕೂ ಒಳ್ಳೇದು. ಬಿ.ಪಿ., ಶುಗರ್‌, ಕೊಲೆಸ್ಟ್ರಾಲ್‌, ಮಂಡಿನೋವು, ತೂಕ ಎಲ್ಲಾ ಕಡಿಮಿ ಆಗ್ತದ ಇದ್ರಿಂದ ಅಂತ ಎಲ್ಲಾರಿಗೂ ಗೊತ್ತು ಬಿಡ್ರಿ.. ಈಗ ನಾನು ಹೇಳ್ಬೇಕು ಅಂದದ್ದು, ವಾಕಿಂಗ್‌ ಹೋಗೋದ್ರಿಂದ ಆಗೋ ಉಪಯೋಗದ ಬಗ್ಗೆ ಅಲ್ಲ ..

ವಾಕಿಂಗ್‌ ಅಂತ ಹೋಗೋದೇನು ಕಡಿಮಿ ತ್ರಾಸಿನ ಕೆಲಸನೇನ್ರೀ?ಲಗೂ ಎದ್ದು , ಚೊಲೋ ಸೀರಿ ಉಟಗೊಂಡು, ತಲಿ ಬಾಚಿಕೊಂಡು ಹೊಂಡಬೇಕು. ಮುಂಜಾನೆ ಮುಂಜಾನೆ ಎಸ್ಟ್ ತಯಾರಾಗಿ ಬಂದಿರ್ತಾರ್ರೀ ಮಂದೀ. ಅಬಬಬಾ!

ವಯಸ್ಸಾದ ಹೆಣ್ಣುಮಕ್ಕಳೂ ಈಗ ಚೂಡಿದಾರ್‌ ಕಂಫ‌ರ್ಟಬಲ್‌ ಅನ್ಕೋತ, ಚೊಲೋ ಡ್ರೆಸ್‌ ಹಾಕ್ಕೊಂಡು, ಕಾಲಿಗೆ ಬೂಟು ಸಾಕ್ಸು , ಕೂದಲ ಹುರಮಂಜ (ಹಳ್ಳಿಗಳಲ್ಲಿ ಹೊಸ್ತಿಲಿಗೆ ಹಚ್ಚುವ ಬಣ್ಣ ) ಹಚ್ಚಿದಂಗ ಆಗಿರ್ತಾವು, ಕ್ಲಿಪ್‌ ಹಾಕ್ಕೊಂಡು ಸ್ಟೈಲ್‌ ಆಗಿ ಹೋಗ್ತಿರ್‌ತಾರ್ರೀ ..

ಇನ್ನು, ಹುಡುಗೀರು-ಹುಡಗೂರು ಟ್ರ್ಯಾಕ್‌ ಸೂಟು, ಬೂಟು ಹಾಕ್ಕೊಂಡು , ಕಿವಿಗೆ ಹೆಡ್‌ಫೋನ್‌ ಸಿಗಿಸಿಕೊಂಡು ನಿಮ್ಹಾನ್ಸ್ ನಿಂದ ತಪ್ಪಿಸಿಕೊಂಡು ಬಂದೋರ ಹಂಗ ಒಬ್ರ ತಲಿ ಅಲಗಾಡಿಸ್ಕೋತ ನಗೋದು , ಮಾತಾಡೋದು … ದಮ್ಮು ಹತ್ತಿಸಿಕೊಂಡು ಜಾಗಿಂಗ್‌ ಮಾಡೋದು …. ಇನ್ನೂ ಕೆಲವರು ಶಾಂತ ವಾತಾವರಣ ಇದ್ದಾಗ ಚಪ್ಪಾಳಿ ತಟ್ಟೋದು ಭಾರಿ ಕಿರಿ ಕಿರೀರಿ.

ವಾಕಿಂಗ್‌ ವಿಶೇಷ ಅಂದ್ರ, ಈ ಸಾಕಿದ ಜಾತಿ ನಾಯಿ ಮತ್ತು ಬೀದಿಯ ಕಂತ್ರಿ ನಾಯಿ.. ಅವು ಎದರಾಬದರಾ ಬಂದ ಕೂಡ್ಲೆ ಕೋರೆಹಲ್ಲು ಹೊರಗ್‌ ಹಾಕಿ ಒಂದಕ್ಕೊಂದು ಒದರಿದ್ದಾ ಒದರಿದ್ದು . ಸಾಕಿದ ನಾಯಿ ಮಾಲೀಕರಿಗೆ ವಾಕಿಂಗ್‌ ಬೇಕಾಗಿರಂಗಿಲರಿ. ನಾಯಿ ಬಹಿರ್ದೆಶೆಯ ದೊಡ್ಡ ಜವಾಬ್ದಾರಿ ಅವರ ಮ್ಯಾಲೆ ಇರ್ತ ದಲ್ಲ. ಅವರ ಮನಿ ಅಂಗಳ ಸ್ವತ್ಛ ಇರಬೇಕ್ರಿ. ರೋಡ್‌ ಒಳಗ ಅವು ಮೂಸಿ ನೋಡ್ಕೊತ ಕಂಬ ಕಂಡಲ್ಲೇ ಕಾಲು ಎತ್ಕೊತ ತಮ್ಮ ಕೆಲಸ ಮುಗಿಸಿದ್ರ ಇವ್ರು ನಿರಾಳ ಆಗ್ತಾರ್ರೀ. ಅವು ನಮ್ಮ ಹತ್ರ ಬಂದು ಗುರ್ರ ಅಂದ್ರ ಅದ್ರ ಮಾಲೀಕ್ರು- “ಅಯ್ಯೋ ರಾಕ್ಸಿ ಅವ್ರು ಆಂಟಿ ಅಲ್ವ, ಕೂಗಬಾರ್ಧು ಡಿಯರ್‌’ ಅಂತಾರ್ರೀ! ಇವರ ಮನ್ಯಾಗಿನ ಮಕ್ಕಳಿಗೂ ಇಷ್ಟು ಸಂಸ್ಕಾರ ಕಲಸಿ ರ್ತಾರೋ, ಇಲ್ಲೋ ನಾಯಿಗೆ ಮಾತ್ರ ಎಲ್ಲ ಕಲಸ್ತಾರ…

ನನ್ನ ಗೆಳತಿ ಒಬ್ಬಾಕಿ ಬರ್ತಿದ್ಲು ನನ್ನ ಜೊತಿ ವಾಕಿಂಗ್‌ಗೆ . ಅಕಿ ವಾಕಿಂಗ್‌ ಮುಗಸಿ ಮನಿ ಮುಟ್ಟಿದಾಗಿಂದಮತ್ತ ಮಾರನೇದಿನ ವಾಕಿಂಗ್‌ ಬರೋ ತನಕ ಮನಿ ಒಳಗ್‌ ಏನೇನಾತು ಸುದ್ದಿ ಹೇಳಿ ಹೇಳಿ ತಲಿ ತಿಂದಿದ್ದಳ್ರಿ. ಅದಕ್ಕಾ ಅಕಿ ಜೊತಿ ಹೋಗೋದ ಬಿಟ್ಟೆ. ಬ್ಯಾರೆ ಟೈಮ್‌ ಮಾಡ್ಕೊಂಡೆ .ಒಬ್ರು (ಗಂಡಸು )ಬರ್ತಿದ್ರು ವಾಕಿಂಗ್‌ಗೆ . ಅವರು ಮೊಬೈಲ್‌ ಸ್ಪೀಕರ್‌ ಆನ್‌ ಇಟ್ಟು ಹಾಡು ಕೇಳ್ಕೊತ ಬರ್ತಿದ್ರು. ಅವು ಎಂಥಾ ಹಾಡ್ರಿ? “ದೇಖೋರೆ ದೇಖೋರೆ ಬಾಳೆದಿಂಡು’, “ಚಳಿ ಚಳಿ ತಾಳೆನು ಈ ಚಳಿ ಯಾ… ’ ಇಂಥಾವ. ನಂಗಂತೂ ಮೈ ಪರಚಿಕೊಳ್ಳೋ ಹಂಗ ಆಗೋದ್ರಿ.. ವಾಕಿಂಗ್‌ ಹೋಗದ ಮನ್ಯಾಗ ಕೂತ್ರ, ಮಕ್ಳು – “ಅಮ್ಮಾ, ನಿನ್ನ ವೆಯಿಟ್‌ ಜಾಸ್ತಿ ಆಗ್ಲಿಕತ್ತೇದ’ ಅಂತ ಅಣ ಕಿ ಸೋರು, ಅವ ತ್ತೂಂದಿನ, ಮಗ ಕೆಲಸದಿಂದ ಸಂಜಿಕೆ ಮನಿಗೆ ಬಂದು ಕೇಳಿದ- “ಇವತ್‌ ವಾಕ್‌ ಹೋಗಿದ್ದೇನಮ್ಮಾ?’ ಅಂತ. “ಹೂಂ ಹೋಗಿದ್ದೆ. ಕರೆಕ್ಟ್ 45 ನಿಮಿಷ ಮಾಡಿದೆ ವಾಕ್‌’ ಅಂದೆ. ಅದಕ್ಕ ಮಗಾ ಅಂದ- “ಸುಳ್ಳು ಹೇಳ್ಬ್ಯಾಡ ಬಿಡಮ್ಮ. ನೀ ಆನ್‌ಲೈನ್‌ ಇದ್ದಿ ಫೇಸ್ಬುಕ್ ಒಳಗ್‌ ಎಂಟೂವರಿ ತನಕ. ಕಾಮೆಂಟ್‌ ಹಾಕ್ಕೋತಾ ಕೂತಿದ್ದೀ, ಹೌದಿಲ್ಲೋ?  ’

ಹಿಂಗೆಲ್ಲಾ ಆಗ್ತಾ ವ ನೋಡ್ರೀ. ಅದ ಕ್ಕೆ, ಹೊರಗ್‌ ಯಾಕ ಹೋಗ್ಬೇಕು ವಾಕ್‌ ಅಂತ ಟೆರೇಸ್‌ ಮ್ಯಾಲ್‌ ಮಾಡ್ತೇನ್ರಿ. ಅಲ್ಯರ ಏನ್‌ ಸುಖಾ ಅದ ಬಿಡ್ರಿ. ಆಜು ಬಾಜೂ ಅಪಾರ್ಟ್‌ಮೆಂಟ್‌ ಇಂದ 4-5 ಜೋಡಿ ಕಣ್ಣು ನನ್ನ ನೋಡೋದು ಗೊತ್ತಾಗಲಿಕತ್ತು. ಯಾಕ ಹಿಂಗ್‌ ನೋಡ್ತಾರ ಅನ್ಕೊಂಡು ನಾನು ಸೀರೀ ಸೆರಗು ಸರಿ ಮಾಡ್ಕೊಂಡೆ, ಕೂದಲ ಸರಿ ಮಾಡ್ಕೊಂಡೆ ..ಎಲ್ಲಾ ಸರಿ ಇತ್ತು.¤ಅವರು ಅನ್ನೋದು ಕೇಳ್ತು- “ಅಯ್ಯೋ ಬೆಳಗ್ಗೆ ಬೆಳಗ್ಗೆ ಇರೋ ಕೆಲಸ ಬಿಟ್ಟು ನಮಗೆ ವಾಕ್‌ ಮಾಡ್ತಾ ಕೂಡೋಕೆ ಆಗಲ್ಲಪ್ಪ . ಇದೆಲ್ಲಾ ಮನೇಲಿ ಕೆಲ್ಸ ಇಲ್ದೇ ಖಾಲಿ ಇರೋರಿಗೆ ಸರಿಬಿಡಿ’ …..

ನಾ ಆದ್ರೂ ಬಿಟ್ಟಿಲ್ಲರಿ ವಾಕ್‌ ಮಾಡೋದು. ಈಗ, ಅತ್ತ ಇತ್ತ ನೋಡದಂತೆ ಕುರುಡನ ಮಾಡಯ್ಯ, ಅತ್ತ ಇತ್ತ ಕೇಳದಂತೆ ಕಿವುಡನ ಮಾಡಯ್ಯ ಅನ್ನೋ ಥರ ಇತೇನ್ರಿ..  ಹಿಂಗೆ ಮಾತಿಲ್ಲದೆ, ಕಥಿ ಇಲ್ಲದೆ ಬಾಯಿ ಮುಚ್ಕೊಂಡು ಒಬ್ಬೇಕಿನ ನಡಿಯೋ ಈ ವಾಕಿಂಗ್‌ ನಂಗ ದೊಡ್ಡ ಶಿಕ್ಷೆ ಆಗೇದ ನೋಡ್ರಿ…

 -ಲತಾ ಜೋಶಿ

ಟಾಪ್ ನ್ಯೂಸ್

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

MB-Patil-Minister

Waqf Notice: ಒಂದಿಂಚು ಜಮೀನು ವಕ್ಫ್‌ಗೆ ಹೋಗಲು ಬಿಡಲ್ಲ: ಸಚಿವ ಎಂ.ಬಿ.ಪಾಟೀಲ್‌

1-horoscope

Daily Horoscope: ವಧೂವರಾನ್ವೇಷಿಗಳಿಗೆ ಯಶಸ್ಸಿನ ಭರವಸೆ, ಸ್ವರ್ಣೋದ್ಯಮಿಗಳಿಗೆ ಹೇರಳ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.