ಇನ್ನು ಪಾಕ್ ಕಿರಿಕ್ ಮಾಡಿದ್ರೆ ಉಡೀಸ್! ಹೊಸ ಮಾದರಿ ಇಸ್ರೇಲ್ ಕ್ಷಿಪಣಿಗಳ ನಿಯೋಜನೆ
280 ಕೋಟಿ ರೂ. ವೆಚ್ಚದಲ್ಲಿ ಖರೀದಿ
Team Udayavani, Nov 26, 2019, 7:52 PM IST
ಜಮ್ಮು: ಇಸ್ರೇಲ್ ನಿರ್ಮಿತ ಹೊಸ ತಲೆಮಾರಿನ ಟ್ಯಾಂಕ್ ವಿರೋಧಿ ಸ್ಪೈಕ್ ಕ್ಷಿಪಣಿಗಳನ್ನು (ಎಟಿಜಿಎಂ) ಸೇನೆ ಈಗ ಗಡಿನಿಯಂತ್ರಣ ರೇಖೆಯಲ್ಲಿ ನಿಯೋಜಿಸಿದೆ.
ಬಾಲಾಕೋಟ್ ದಾಳಿ ಬಳಿಕ ತುರ್ತು ಖರೀದಿ ಒಪ್ಪಂದ ಅನ್ವಯ ಸೇನೆ ಇಸ್ರೇಲ್‌ನಿಂದ ಕ್ಷಿಪಣಿಗಳನ್ನು ಖರೀದಿಸಿದೆ. ಒಟ್ಟು 210 ಕ್ಷಿಪಣಿಗಳು ಮತ್ತು 12 ಲಾಂಚರ್‌ಗಳು ಇದ್ದು, 280 ಕೋಟಿ ರೂ. ಮೌಲ್ಯದ ಒಪ್ಪಂದ ಇದಾಗಿದೆ. ಈಗಾಗಲೇ ಇದು ಸೇನೆ ಕೈ ಸೇರಿದ್ದು ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲ್ಪಟ್ಟಿದೆ. ಉಡಾವಣೆ ಬಳಿಕ ನಿರ್ದೇಶಿತ ಗುರಿಗೆ ಹೋಗಿ ಕ್ಷಿಪಣಿ ಅಪ್ಪಳಿಸುತ್ತದೆ. ಇದಕ್ಕೆ ಪುಟ್ಟ ಕಂಪ್ಯೂಟರೀಕೃತ ವ್ಯವಸ್ಥೆಯಾಗಿದ್ದು, ಜಗತ್ತಿನಲ್ಲೇ ಅತಿ ನಿಖರವಾಗಿ ಗುರಿ ಛೇದಿಸಬಲ್ಲ ಎಟಿಜಿಎಂಗಳೆಂಬ ಹೆಗ್ಗಳಿಕೆ ಇವುಗಳಿವೆ.
ಏನಿದು ಎಟಿಜಿಎಂ ಸ್ಪೈಕ್ ಕ್ಷಿಪಣಿಗಳು?
ಈ ಕ್ಷಿಪಣಿಗಳು ಟ್ಯಾಂಕ್ ನಿರೋಧಕ ಕ್ಷಿಪಣಿಗಳು. ಯುದ್ಧ ಟ್ಯಾಂಕ್‌ಗಳನ್ನು ಉಡಾಯಿಸಬಲ್ಲವು. ಬಹುಮುಖ್ಯವಾಗಿ ಬಂಕರ್‌ಗಳ ಧ್ವಂಸಕ್ಕೂ ಉಪಯೋಗಿಸಲಾಗುತ್ತದೆ. ಇವುಗಳು ಗೈಡೆಡ್ ಕ್ಷಿಪಣಿಗಳಾಗಿದ್ದು, ಉಡಾವಣೆ ಬಳಿಕ ಗುರಿಗೆ ಅಪ್ಪಳಿಸುವವರೆಗೆ ನಿಯಂತ್ರಿಸಬಹುದು. ಗುರಿಯನ್ನೂ ಬದಲು ಮಾಡಿಕೊಳ್ಳಬಹುದು. ಸೇನೆಯ ಸೈನಿಕರು ಇಬ್ಬರು ಕೂತು ಇದನ್ನು ಉಡಾಯಿಸಬಹುದು. ಅಥವಾ ಪ್ರತ್ಯೇಕ ವ್ಯವಸ್ಥೆಯಲ್ಲಿ ಉಡಾಯಿಸಬಹುದು. ಸಣ್ಣದಿದ್ದರೂ ಅತಿ ಪ್ರಬಲವಾಗಿರುತ್ತವೆ. ಹೆಚ್ಚಿನ ಹಾನಿಯುಂಟು ಮಾಡುತ್ತವೆ. ಒಟ್ಟು ನಾಲ್ಕು ಕಿ.ಮೀ. ವ್ಯಾಪ್ತಿಯಲ್ಲಿ ಇವುಗಳನ್ನು ಬಳಸಬಹುದು.
ಇವುಗಳನ್ನು ಉಗ್ರರ ಅಡಗುದಾಣ ಅಥವಾ ಕದನ ವಿರಾಮ ಉಲ್ಲಂಘನೆಗೆ ಪಾಕ್ ಮಿಲಿಟರಿ ಬಳಸುವ ಗುಪ್ತ ನೆಲೆಗಳನ್ನು ಧ್ವಂಸಗೊಳಿಸಲು, ಬಂಕರ್‌ಗಳನ್ನು ಉಡಾಯಿಸಲು ಸೇನೆ ಇವುಗಳನ್ನು ಬಳಸುವ ಉದ್ದೇಶ ಹೊಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು
Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ
Sopore Encounter: ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಯೋಧ ಹುತಾತ್ಮ
RG ಕರ್ ಆಸ್ಪತ್ರೆ ವೈದ್ಯೆ ಪ್ರಕರಣ-ಅಪರಾಧಿ ಸಂಜಯ್ ರಾಯ್ ಗೆ ಜೀವಾವಧಿ ಶಿಕ್ಷೆ
CowUrine: ಗೋಮೂತ್ರವು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ: ಐಐಟಿ ಮದ್ರಾಸ್ ನಿರ್ದೇಶಕ
MUST WATCH
ಹೊಸ ಸೇರ್ಪಡೆ
Brahmavar: ಆನ್‌ಲೈನ್ ವ್ಯವಹಾರ ಹೆಸರಲ್ಲಿ ಲಕ್ಷಾಂತರ ರೂ. ಮೋಸ
Udupi ಗಾಂಜಾ ಮಾರಾಟ ಪ್ರಕರಣ: ಆರೋಪಿಗೆ ಜೈಲು ಶಿಕ್ಷೆ
Donald Trump 2.0; 47ನೇ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಆಡಳಿತ ಆರಂಭ
Dharwad High Court: ಹಂಪಿ ನರಹರಿ ತೀರ್ಥರ ವೃಂದಾವನ ಪೂಜೆ ಯಥಾಸ್ಥಿತಿಗೆ
Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.