ಹಳಿಯೇರಲಿ ಆಡಳಿತ ಮತ್ತೆ ಮಹಾ ಬದಲಾವಣೆ


Team Udayavani, Nov 27, 2019, 5:02 AM IST

as-32

ಮಹಾರಾಷ್ಟ್ರದ ರಾಜಕೀಯ ಇನ್ನೊಂದು ಅನೂಹ್ಯವಾದ ತಿರುವು ತೆಗೆದುಕೊಂಡಿದೆ. ಸುಪ್ರೀಂ ಕೋರ್ಟ್‌ ಬುಧವಾರವೇ ಬಹುಮತ ಸಾಬೀತುಪಡಿಸಲು ಆದೇಶಿಸಿದ ಬಳಿಕ ಮೂರು ದಿನಗಳ ಹಿಂದೆಯಷ್ಟೇ ರಾತೋರಾತ್ರಿ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದ ದೇವೇಂದ್ರ ಫ‌ಡ್ನವೀಸ್‌ ಮತ್ತು ಅಜಿತ್‌ ಪವಾರ್‌ ರಾಜೀನಾಮೆ ನೀಡಿದ್ದಾರೆ. ಈಗ ಸರಕಾರ ರಚಿಸುವ ಸರದಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸನ್ನೊಳಗೊಂಡಿರುವ ಮೈತ್ರಿಕೂಟದ್ದು.

ಬುಧವಾರವೇ ಬಹುಮತ ಸಾಬೀತುಪಡಿಸಬೇಕೆಂದು ಬಿಜೆಪಿಗೆ ಸುಪ್ರೀಂ ಕೋರ್ಟ್‌ ಆದೇಶಿಸಿದ್ದು ಸಮುಚಿತವಾದ ತೀರ್ಪು. ಒಂದು ವೇಳೆ ಬಹುಮತ ಸಾಬೀತುಪಡಿಸಲು ಕಾಲಾವಕಾಶ ನೀಡಿದ್ದರೆ ಕುದುರೆ ವ್ಯಾಪಾರ ನಡೆಯುವ ಸಾಧ್ಯತೆಯಿತ್ತು. ಈ ಮಟ್ಟಿಗೆ ಸುಪ್ರೀಂ ಕೋರ್ಟ್‌ ಕೈಗೊಂಡಿರುವ ತೀರ್ಮಾನ ಭವಿಷ್ಯದಲ್ಲಿ ಮೇಲ್ಪಂಕ್ತಿಯಾಗಬಹುದು.

ಅತಿ ದೊಡ್ಡ ಪಕ್ಷವಾಗಿದ್ದರೂ ಸರಳ ಬಹುಮತಕ್ಕೆ 40 ಸ್ಥಾನಗಳ ಕೊರತೆ ಎದುರಿಸುತ್ತಿರುವ ಬಿಜೆಪಿ, ಅಜಿತ್‌ ಪವಾರ್‌ ಬೆಂಬಲವನ್ನು ನಂಬಿ ಸರಕಾರ ರಚಿಸಿದ್ದು ಒಂದು ಅವಸರದ ನಡೆ ಮಾತ್ರವಲ್ಲ ರಾಜಕೀಯ ದುಸ್ಸಾಹಸವೂ ಹೌದು. ಎನ್‌ಸಿಪಿಯ ಕನಿಷ್ಠ 25 ಶಾಸಕರು ಅಜಿತ್‌ ಪವಾರ್‌ ಜೊತೆಗೆ ಬರುತ್ತಾರೆ ಹಾಗೂ ಸುಮಾರು 20 ಮಂದಿ ಪಕ್ಷೇತರರ ಬೆಂಬಲ ಸಿಕ್ಕಿದರೆ ಬಹುಮತ ಸಾಬೀತುಪಡಿಸಬಹುದು ಎಂಬ ಬಿಜೆಪಿ ಲೆಕ್ಕಾಚಾರ ಬುಡಮೇಲಾದದ್ದು ಎನ್‌ಸಿಪಿ ಶಾಸಕರು ನಿಷ್ಠೆ ಬದಲಾಯಿಸಲು ನಿರಾಕರಿಸಿದುದರಿಂದ. ಪರಿಣಾಮವಾಗಿ ದೇವೇಂದ್ರ ಫ‌ಡ್ನವೀಸ್‌ ಸ್ಥಿತಿ ಕಳೆದ ವರ್ಷ ಕರ್ನಾಟಕದಲ್ಲಿ ಯಡಿಯೂರಪ್ಪನವರು ಎದುರಿಸಿದ ಪರಿಸ್ಥಿತಿಯಂತಾಗಿದೆ.

ಇಂಥ ಸಂದರ್ಭದಲ್ಲಿ ವಿವೇಚನೆಯ ನಡೆಯಿಡಬೇಕಾದದ್ದು ಸಂವಿಧಾನದ ರಕ್ಷಣೆಯ ಹೊಣೆ ಹೊತ್ತಿರುವ ರಾಜ್ಯಪಾಲರು. ಆದರೆ ಮಹಾರಾಷ್ಟ್ರದ ಬೆಳವಣಿಗೆಗಳನ್ನು ಗಮನಿಸುವಾಗ ರಾಜ್ಯಪಾಲರ ತೀರ್ಮಾನಗಳ ಮೇಲೂ ಸಂದೇಹಗಳು ಮೂಡುವುದು ಸಹಜ. ಫ‌ಡ್ನವೀಸ್‌ ಸರಕಾರ ರಚಿಸಲು ಕೋರಿಕೆ ಮಂಡಿಸಿದಾಗ ಕನಿಷ್ಠ ಶಾಸಕರ ಪರೇಡ್‌ ನಡೆಸಲು ರಾಜ್ಯಪಾಲರು ಹೇಳಿದ್ದರೆ ಈ ಎಲ್ಲ ಗೊಂದಲಗಳು ಉಂಟಾಗುತ್ತಿರಲಿಲ್ಲ. ಬರೀ ಒಂದು ಬೆಂಬಲ ಪತ್ರವನ್ನು ನಂಬಿ ಬೆಳಕು ಹರಿಯುವ ಮೊದಲೇ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ಪ್ರಮಾಣವಚನ ಬೋಧಿಸುವ ಜರೂರತ್ತು ಏನಿತ್ತು? ಬೊಮ್ಮಾಯಿ ಸರಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೇಳಿರುವ, ಅಂತಿಮವಾಗಿ ಸರಕಾರದ ಸ್ಥಿರತೆ ಸಾಬೀತಾಗಬೇಕಿರುವುದು ಸದನದಲ್ಲಿ ಎಂಬ ಮಾತನ್ನು ಇಂಥ ಅಗ್ನಿಪರೀಕ್ಷೆಗಳ ಸಂದರ್ಭದಲ್ಲಿ ರಾಜ್ಯಪಾಲರು ನೆನಪಿಸಿಕೊಳ್ಳಬೇಕು.

ಹಾಗೆಂದು ಇಂದಿನ ಬೆಳವಣಿಗೆಯೊಂದಿಗೆ ಮಹಾರಾಷ್ಟ್ರದ ಗೊಂದಲ ಮುಕ್ತಾಯವಾಯಿತು ಎಂದು ಹೇಳುವಂತಿಲ್ಲ. ಅಲ್ಲೀಗ ಸರಕಾರ ರಚಿಸಲು ಮುಂದಾಗಿರುವುದು ಸೈದ್ಧಾಂತಿಕವಾಗಿ ಪರಸ್ಪರ ವಿರುದ್ಧ ಧ್ರುವಗಳಂತಿರುವ ಪಕ್ಷಗಳು. ಒಂದು ಸಮಯದಲ್ಲಿ ವಿದೇಶಿಯೊಬ್ಬರು ಕಾಂಗ್ರೆಸ್‌ ನಾಯಕತ್ವ ವಹಿಸಿಕೊಳ್ಳುವುದು ತರವಲ್ಲ ಎಂಬ ಧಾಟಿಯಲ್ಲಿ ಮಾತನಾಡಿ ಕಾಂಗ್ರೆಸ್‌ನಿಂದ ದೂರವಾದ ಶರದ್‌ ಪವಾರ್‌ ಅವರು ಈಗ ಅದೇ ಕಾಂಗ್ರೆಸ್‌ನ ಆಪ್ತಮಿತ್ರರಾಗಿದ್ದಾರೆ. ಇದಕ್ಕಿಂತ ಹೆಚ್ಚಾಗಿ ಹಿಂದುತ್ವವನ್ನು ಪ್ರತಿಪಾದಿಸುತ್ತಾ, ತನ್ನ ಅಸ್ತಿತ್ವದುದ್ದಕ್ಕೂ ಕಾಂಗ್ರೆಸ್‌ ಅನ್ನು ಕಟುವಾಗಿ ಟೀಕಿಸುತ್ತಾ ಬಂದಿದ್ದ ಶಿವಸೇನೆಯು ಕಾಂಗ್ರೆಸ್‌ ಜತೆ ಕೈ ಜೋಡಿಸಿದೆ. ಇತ್ತ ಜಾತ್ಯತೀತತೆಯ ಬಗ್ಗೆ ಮಾತನಾಡುವ ಕಾಂಗ್ರೆಸ್‌ಗೆ ಶಿವಸೇನೆಯ ಹಿನ್ನೆಲೆ ಮರೆತುಹೋಯಿತೇ? ಅಥವಾ ಇದು ಜಾಣ ಮರೆವೇ ಎನ್ನುವ ಪ್ರಶ್ನೆ ಏಳುತ್ತದೆ. ಸೈದ್ಧಾಂತಿಕವಾಗಿ ಸಂಬಂಧವೇ ಇಲ್ಲದಂತಿರುವ ಈ ಮೂರೂ ಪಕ್ಷಗಳು ಸರ್ಕಾರವನ್ನು ಹೇಗೆ ಮುನ್ನಡೆಸಿಕೊಂಡು ಹೋಗಲಿವೆಯೋ ಎನ್ನುವ ಕುತೂಹಲ ಮತ್ತು ಗೊಂದಲ ಮಹಾರಾಷ್ಟ್ರ ಮತದಾರರದ್ದು. ಹಲವು ಪಕ್ಷಗಳು ಸೇರಿಕೊಂಡು ರಚಿಸಿದ ಖೀಚಡಿ ಸರಕಾರಗಳ ಆಡಳಿತ ವೈಖರಿಯನ್ನು ದೇಶದ ಜನರು ಈಗಾಗಲೇ ಸಾಕಷ್ಟು ಸಲ ನೋಡಿದ್ದಾರೆ. ಎಲ್ಲ ಭಿನ್ನಮತಗಳನ್ನು ನಿವಾರಿಸಿಕೊಂಡು ಐದು ವರ್ಷ ಜನಾನುರಾಗಿಯಾದ ಆಡಳಿತ ನೀಡಲು ಸಾಧ್ಯವಾದರೆ ಈ ಸರಕಾರ ದೇಶದ ರಾಜಕೀಯ ಭವಿಷ್ಯದ ದಿಕ್ಸೂಚಿಯಾಗಲೂ ಬಹುದು. ಆದರೆ ಹಾಗೇ ಆದೀತು ಎಂಬ ನಂಬಿಕೆ ಮಾತ್ರ ಯಾರಲ್ಲೂ ಇಲ್ಲ. ವಿಧಾನಸಭೆಗೆ ಚುನಾವಣೆ ನಡೆದು ಒಂದು ತಿಂಗಳು ಕಳೆದಿದ್ದರೂ ರಾಜ್ಯದ ರಾಜಕೀಯ ಅಸ್ಥಿರತೆ ಮುಂದುವರಿದಿದೆ.

ಇದರಿಂದ ಸಮಸ್ಯೆಯಾಗಿರುವುದು ಆಡಳಿತ ವ್ಯವಸ್ಥೆಗೆ. ಪ್ರಜಾತಂತ್ರದಲ್ಲಿ ಅತಂತ್ರ ಜನಾದೇಶ ಬರುವುದು ತಪ್ಪೇನಲ್ಲ. ಆದರೆ ಇಂಥ ಪರಿಸ್ಥಿತಿ ಎದುರಾಗಲೆಲ್ಲ ನಡೆಯುವ ಕೊಳಕು ರಾಜಕೀಯ ಆಟಗಳು ಮಾತ್ರ ಜನಸಾಮಾನ್ಯರು ಪ್ರಜಾತಂತ್ರದ ಮೇಲಿಟ್ಟ ನಂಬಿಕೆಯನ್ನು ಹುಸಿ ಗೊಳಿಸಬಹುದು. ಹೀಗಾಗದಂತೆ ನೋಡಿಕೊಳ ಬೇಕಾದುದು ಸಂವಿಧಾನ ರಕ್ಷಕರ ಹೊಣೆ.

ಟಾಪ್ ನ್ಯೂಸ್

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Ignoring MES is better than banning it: Satish Jarakiholi

Belagavi; ಎಂಇಎಸ್‌ ನಿಷೇಧಕ್ಕಿಂತ ನಿರ್ಲಕ್ಷ್ಯ ಮಾಡುವುದು ಉತ್ತಮ: ಸತೀಶ್‌ ಜಾರಕಿಹೊಳಿ

Raichur: hit for setting firecrackers in front of house

Raichur: ಮನೆ ಮುಂದೆ ಪಟಾಕಿ ಹಚ್ಚಿದ್ದಕ್ಕೆ ಕೊಲೆ!

Voyager 1 encountered a problem in interstellar space 25 billion km away

25 ಬಿಲಿಯನ್ ಕಿ.ಮೀ ದೂರದ ಅಂತರತಾರಾ ಬಾಹ್ಯಾಕಾಶದಲ್ಲಿ ಸಮಸ್ಯೆಗೆ ಸಿಲುಕಿದ ವೊಯೇಜರ್ 1

12-bng

Bengaluru: ನಗರದಲ್ಲಿ ಪರಭಾಷಿಕರಿಗೆ ಕನ್ನಡ ಭಾಷೆ ಕಲಿಸುವ “ಆಟೋ ಅಜ್ಮಲ್‌’


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-editorial

Editorial: ಸುವರ್ಣ ಕರ್ನಾಟಕ: ವಿಕಾಸಕ್ಕೆ ಕಾರ್ಯಸೂಚಿ ಅಗತ್ಯ

cyber crime

Cyber ​​crime ತಡೆ: ವಿವೇಚನೆಯೇ ಕೀಲಿಕೈ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ಹುಸಿ ಬೆದರಿಕೆ ಸಂದೇಶ ನಿರ್ದಾಕ್ಷಿಣ್ಯ ಕ್ರಮ ಅಗತ್ಯ

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ರಾಜ್ಯಗಳ ನಡುವಿನ ಸಂಬಂಧದ ಸೂಕ್ಷ್ಮತೆ ಮರೆಯಬಾರದು

ಗ್ರಾಮೀಣರ ಆರೋಗ್ಯ ಸುರಕ್ಷೆ ಮಹತ್ವಾಕಾಂಕ್ಷೆ ಈಡೇರಲಿ

State Govt: ಗ್ರಾಮೀಣರ ಆರೋಗ್ಯ ಸುರಕ್ಷೆ ಮಹತ್ವಾಕಾಂಕ್ಷೆ ಈಡೇರಲಿ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

Shocking: ದೀಪಾವಳಿ ಸಂಭ್ರಮದಲ್ಲಿದ್ದ ಚಿಕ್ಕಪ್ಪ- ಸೋದರಳಿಯನನ್ನು ಗುಂಡಿಕ್ಕಿ ಹತ್ಯೆ…

ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

Dr Bibek Debroy: ಪಿಎಂ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷ ಡಾ.ಬಿಬೇಕ್ ಡೆಬ್ರಾಯ್ ನಿಧನ

26

Waqf ವಿವಾದ ಹಿನ್ನೆಲೆ ಭೂದಾಖಲೆ ಪರಿಶೀಲನೆಗೆ ವಿಎಚ್‌ಪಿ ಮನವಿ

25

Mangaluru: ಇಂದು ಹಲ್ಮಿಡಿ ಶಾಸನದ ಪ್ರತಿಕೃತಿ ಅನಾವರಣ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Sandalwood: ಗೆಲುವಿನ ಓಟದಲ್ಲಿ ಮಂಕಾದ ಹೊಸಬರು; ಕೈ ಹಿಡಿಯದ ಪ್ರೇಕ್ಷಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.