ಬದುಕು ಬದಲಾಗಲು ಸಾಕಲ್ಲವೇ ಆರು ಸೂತ್ರ?

ಬಾಡಿಬಿಲ್ಡರ್‌ ಆಗಿ, ಹಾಲಿವುಡ್‌ ಹೀರೋ ಆಗಿ, ರಾಜಕಾರಣಿಯಾಗಿ ನಾನು ಯಶಸ್ವಿಯಾದದ್ದು ಹೇಗೆ?

Team Udayavani, Nov 27, 2019, 5:32 AM IST

as-34

ಅಂದುಕೊಂಡಂತೆಯೇ ಮಿಸ್ಟರ್‌ ಯೂನಿವರ್ಸ್‌ ಆದೆ! ನಂತರ ಹಾಲಿವುಡ್ ಹೋಗಿ ನಾಯಕ ನಟ ಆಗುತ್ತೇನೆ ಎಂಬ ಕನಸನ್ನು ಹಂಚಿಕೊಂಡಾಗಲೂ ಜನರಿಂದ ನಕಾರಾತ್ಮಕ ಮಾತುಗಳು ಎದುರಾದವು. ಸಿನೆಮಾ ನಂತರ ರಾಜಕಾರಣಕ್ಕೆ ಧುಮುಕಲು ಮುಂದಾದಾಗಲೂ ಇವೇ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಸತ್ಯಏನೆಂದರೆ, ಈ ಮಾತುಗಳಿಂದಾಗಿ ನಾನು ನಿಜಕ್ಕೂ ಅಧೀರನಾಗಿದ್ದುಂಟು, ನನ್ನ ಸಾಮರ್ಥ್ಯದ ಮೇಲೆ ಅನುಮಾನ ಪಟ್ಟದ್ದುಂಟು.

ನಾನು ದೇಹದಾಢ್ಯ ಪಟುವಾಗಿ, ಹಾಲಿವುಡ್‌ ಹೀರೋ ಆಗಿ, ಉದ್ಯಮಿಯಾಗಿ, ರಾಜಕಾರಣಿಯಾಗಿ ಅದ್ಹೇಗೆ ಯಶಸ್ವಿಯಾದೆ ಎಂದು ಎಲ್ಲರೂ ನನ್ನನ್ನು ಪ್ರಶ್ನಿಸುತ್ತಾರೆ. ಆರಂಭಿಕ ವರ್ಷಗಳಲ್ಲಿ ನಾನು ಬಾಡಿ ಬಿಲ್ಡರ್‌ ಆಗಬೇಕು ಎಂದು ಕನಸು ಕಂಡಾಗ “ಅದೆಲ್ಲ ಎಲ್ಲರಿಗೂ ಸಾಧ್ಯ ಆಗುವಂಥದ್ದಲ್ಲ, ನಿನಗಿದೆಲ್ಲ ಬೇಕಾ?’ ಎಂದು ಪ್ರಶ್ನಿಸಿದವರು ಅನೇಕರು. ಆ ಸಮಯದಲ್ಲಿ ಆಸ್ಟ್ರಿಯಾದಲ್ಲಿ ಬಾಡಿಬಿಲ್ಡಿಂಗ್‌ ಕ್ರೇಜ್‌ ಇರಲೇ ಇಲ್ಲ. ಮಿಸ್ಟರ್‌ ಯೂನಿವರ್ಸ್‌ ಆಗಬೇಕೆಂಬ ನನ್ನ ಕನಸು ಈಡೇರಬೇಕಿದ್ದರೆ ಅಮೆರಿಕಕ್ಕೆ ಹೋಗಬೇಕು ಎಂದೆನಿಸಿತು. ಅಂದುಕೊಂಡಂತೆಯೇ ಮಿಸ್ಟರ್‌ ಯೂನಿವರ್ಸ್‌ ಆದೆ! ನಂತರ ಹಾಲಿವುಡ್‌ಗೆ ಹೋಗಿ ನಾಯಕ ನಟನಾಗುತ್ತೇನೆ ಎಂದಾಗಲೂ ಜನರಿಂದ ನಕಾರಾತ್ಮಕ ಮಾತುಗಳನ್ನು ಕೇಳಿದ್ದೇನೆ, ಸಿನೆಮಾ ನಂತರ ರಾಜಕಾರಣಕ್ಕೆ ಧುಮುಕಲು ಮುಂದಾದಾಗಲೂ ಇವೇ ಮಾತುಗಳನ್ನು ಕೇಳಿಸಿಕೊಂಡಿದ್ದೇನೆ. ಸತ್ಯವೇನೆಂದರೆ, ಈ ಮಾತುಗಳಿಂದಾಗಿ ನಾನು ನಿಜಕ್ಕೂ ಅಧೀರನಾಗಿದ್ದುಂಟು, ನನ್ನ ಸಾಮರ್ಥ್ಯದ ಮೇಲೆ ಅನುಮಾನಪಟ್ಟದ್ದುಂಟು. ಆದರೆ ಈ ಭಯ, ಅನುಮಾನಗಳನ್ನು ಮೂಲೆಗೆ ತಳ್ಳುತ್ತಾ ಬೆಳೆದೆ. ಬಾಡಿಬಿಲ್ಡರ್‌ ಆಗಿ, ಹಾಲಿವುಡ್‌ಹೀರೋ ಆಗಿ, ನಂತರ ಅಮೆರಿಕದ ಅತ್ಯದ್ಭುತ ರಾಜ್ಯವಾದ ಕ್ಯಾಲಿಫೋರ್ನಿಯಾದ ಗವರ್ನರ್‌ ಆಗಲು ನಿನಗೆ ಹೇಗೆ ಸಾಧ್ಯವಾಯಿತು? ಎಂಬ ಮತ್ತದೇ ಪ್ರಶ್ನೆಗೆ ಉತ್ತರಿಸುವುದಾದರೆ, ನಾನು ಹೇಳುವುದಿಷ್ಟೆ. ನಾನು ಪ್ರತಿ ದಿನ ನನಗೆ ನಾನೇ ಸವಾಲೊಡ್ಡಿಕೊಳ್ಳುತ್ತಾ ಬದುಕಿದವನು(ಈ 72ರ ಇಳಿವಯಸ್ಸಲ್ಲೂ ಇದೇ ಗುಣವಿದೆ), ನನ್ನದೇ ನಿಯಮಗಳನ್ನು ರೂಪಿಸಿ ಆ ನಿಯಮಗಳಿಗೆ ಬದ್ಧನಾಗಿ ಬದುಕುತ್ತಾ ಬಂದವನು. ಸ್ಪಷ್ಟವಾಗಿ ಹೇಳಬೇಕೆಂದರೆ ನನ್ನ ಇದುವರೆಗಿನ ಯಶಸ್ಸಿಗೆ-ಸಂತೃಪ್ತ ಜೀವನಕ್ಕೆ ಒಟ್ಟು ಆರು ಸೂತ್ರಗಳು ಕಾರಣ. ನನ್ನಂತೆಯೇ ಕನಸುಗಳನ್ನು ಕಂಡು ಎತ್ತರಕ್ಕೇರಲು ಬಯಸುವ ಅಗಣಿತ ಯುವ ಪಡೆ ಇದೆಯೆಂಬುದು ನಾನು ಬಲ್ಲೆ. ಅವರಿಗೆ ಸಹಕಾರಿಯಾಗಲೆಂದು ಈ ಆರು ಸೂತ್ರಗಳನ್ನು ಇಲ್ಲಿ ಕೊಡುತ್ತಿದ್ದೇನೆ.

1) ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ
ನಿಮ್ಮದೇ ದೃಷ್ಟಿಕೋನವನ್ನು ಬೆಳೆಸಿಕೊಳ್ಳಿ. ಅದು ನಿಮ್ಮ ಅಪ್ಪ-ಅಮ್ಮನ ಒತ್ತಡದಿಂದಲೋ, ಶಿಕ್ಷಕರು-ಸಹಪಾಠಿಗಳಿಂದಲೋ ರೂಪಪಡೆದಿರಬಾರದು. ಆ ದೃಷ್ಟಿಕೋನ ನಿಮ್ಮ ಸ್ವಂತದ್ದಾಗಿರಬೇಕು. ನಾನು ಚಿಕ್ಕವನಿದ್ದಾಗಲೇ, ಮುಂದೊಂದು ದಿನ ಬಾಡಿಬಿಲ್ಡಿಂಗ್‌ನಲ್ಲಿ ವಿಶ್ವ ಚಾಂಪಿಯನ್‌ ಆಗಬೇಕು ಎಂದು ನಿರ್ಧರಿಸಿದೆ. ಕೇವಲ ಕಾಂಪಿಟೇಷನ್‌ಗಳನ್ನು ಗೆಲ್ಲುವುದಷ್ಟೇ ಅಲ್ಲ, ಪ್ರಪಂಚದ ಅತಿಹಾಸದಲ್ಲೇ ಅತ್ಯಂತ ಯಶಸ್ವಿ ಬಾಡಿಬಿಲ್ಡರ್‌ ಆಗಬೇಕು ಎಂಬ ಗುರಿ ನನ್ನದಾಗಿತ್ತು! ಆ ಗುರಿ ಈಡೇರಲು ದಿನವೂ ನನ್ನ ಪರಿಶ್ರಮ ಹೇಗಿರಬೇಕು ಎನ್ನುವುದನ್ನೆಲ್ಲ ಅಧ್ಯಯನ ಮಾಡಿದೆ, ಆಹಾರ ಕ್ರಮವನ್ನು ಬದಲಿಸಿಕೊಂಡೆ, ನಿದ್ರೆಯ ವೇಳೆಯಲ್ಲಿ ಬದಲಾವಣೆಗಳನ್ನು ಮಾಡಿಕೊಂಡೆ, ಅನವಶ್ಯಕ ಸಂಗತಿಗಳ ಮೇಲೆ ಸಮಯ ವ್ಯಯಿಸುವುದನ್ನು ಬಿಟ್ಟುಬಿಟ್ಟೆ. ಎಲ್ಲಕ್ಕಿಂತ ಮುಖ್ಯವಾಗಿ ನನಗೆ ನಾನೇ ಹಲವು ನಿಬಂಧನೆಗಳನ್ನು-ನಿಯಮಗಳನ್ನು ಹೇರಿಕೊಂಡು, ಅದಕ್ಕೆ ತಕ್ಕಂತೆ ಪರಿಶ್ರಮ ಪಡುತ್ತಾ ಬಂದೆ. ನನ್ನ ಪೋಷಕರಿಗೆ ನನ್ನ ವಿಷಯದಲ್ಲಿ ಬೇರೆಯದ್ದೇ ಕನಸುಗಳು ಇದ್ದವು. ಅಪ್ಪನಂತೆಯೇ ನಾನೂ ಕೂಡ ಪೊಲೀಸ್‌ ಅಧಿಕಾರಿಯಾಗಬೇಕು ಎಂಬ ಕನಸು ಅಮ್ಮನಿಗಿತ್ತು. ಅಲ್ಲದೇ ಹೈದಿ ಎನ್ನುವ ನಮ್ಮೂರಿನ ಸುಂದರ ಯುವತಿಯನ್ನೇ ಮದುವೆಯಾಗಿ, ಆಕೆಯೊಂದಿಗೆ ಬದುಕು ಕಟ್ಟಿಕೊಂಡು, ಮಕ್ಕಳನ್ನು ಮಾಡಿಕೊಂಡು ಆರಾಮಾಗಿ ಅಲ್ಲೇ ಇರಬೇಕು ಎಂದು ಅವರಿಬ್ಬರೂ ಬಯಸಿದ್ದರು. ಆದರೆ ನನಗೆ ಆಸ್ಟ್ರಿಯಾದಿಂದ ಹೊರಬಿದ್ದು ಅಮೆರಿಕ ಸೇರಿ ಚಾಂಪಿಯನ್‌ ಆಗಬೇಕೆಂಬ ಬಯಕೆಯಿತ್ತು. ಈ ನಿರ್ಧಾರದ ಹಿಂದೆ ಅಚಲ ನಂಬಿಕೆ ಮತ್ತು ಅಗಾಧ ಆತ್ಮವಿಶ್ವಾಸವಿತ್ತು. ನಿಮ್ಮ ಮೇಲೆ ನಿಮಗೆ ನಂಬಿಕೆ ಇರಲಿ, ನಿಮಗೊಂದು ವಿಷನ್‌ ಇರಲಿ. ಆಗ ಮಾತ್ರ ಗುರಿ ಮುಟ್ಟಬಲ್ಲಿರಿ. ಆದರೆ ಗುರಿ ತಲುಪಲು ವಿಪರೀತವೆನಿಸುವಷ್ಟು ಪರಿಶ್ರಮ ಅತ್ಯಗತ್ಯ.

2) ಕೆಲ ನಿಯಮಗಳನ್ನು ಮುರಿಯಿರಿ
ಫ್ರಾಂಕೋ ಕೊಲಂಬು ಹೆಸರನ್ನು ನೀವೂ ಕೇಳಿರುತ್ತೀರಿ. ಇಟಲಿಯ ಈ ಬಾಡಿಬಿಲ್ಡಿಂಗ್‌ ವಿಶ್ವಚಾಂಪಿಯನ್‌ನ ಗಾತ್ರ ಕೇವಲ 5 ಅಡಿ 5 ಇಂಚು. ಮಿಸ್ಟರ್‌ ಯೂನಿವರ್ಸ್‌ ಅಥವಾ ಮಿಸ್ಟರ್‌ ಒಲಿಂಪಿಯಾ ಅಥವಾ ಅದರಂಥದ್ದೇ ದೊಡ್ಡ ಟೈಟಲ್‌ಗಳನ್ನು ಗೆಲ್ಲಬೇಕೆಂದರೆ ಕುಳ್ಳಗಿರಬಾರದು ಎಂಬ ಅಘೋಷಿತ ನಿಯಮವೊಂದು ಚಾಲ್ತಿಯಲ್ಲಿತ್ತು. ಆದರೆ ಈ ನಿಯಮವನ್ನು ಫ್ರಾಂಕೋ ಕೊಲಂಬು ಮುರಿದ. ನೀನು ಕುಳ್ಳ ಮಾರಾಯ ನಿನಗೆ ಮಿಸ್ಟರ್‌ ಯೂನಿವರ್ಸ್‌ ಪಟ್ಟ ದಕ್ಕುವುದಿಲ್ಲ ಎಂದು ಜನ ಅವನಿಗೆ ಸಲಹೆ ನೀಡಲು ಮುಂದೆ ಬಂದಾಗ, ಫ್ರಾಂಕೋ ಹೇಳಿದ- “ಕುಳ್ಳರಿಗೆ ಪ್ರಶಸ್ತಿ ಕೊಡಲ್ಲ? ಅಂತ ಯಾವ ಪುಸ್ತಕದಲ್ಲಿ ಬರೆದಿದ್ದಾರೆ? ಇದು ಅಘೋಷಿತ ನಿಯಮವಷ್ಟೇ, ಆ ನಿಯಮವನ್ನ ನಾನು ಮುರಿದು, ಹೊಸ ನಿಯಮ ರಚಿಸುತ್ತೇನೆ ನೋಡುತ್ತಿರಿ!’ ಹೇಳಿದಂತೆಯೇ ಫ್ರಾಂಕೋ ಕೊಲಂಬು ಮಿಸ್ಟರ್‌ ಯೂನಿವರ್ಸ್‌ ಪಟ್ಟ ಗಿಟ್ಟಿಸಿದ. ಅದೂ ಒಂದು ಬಾರಿಯಲ್ಲ, ಬರೋಬ್ಬರಿ ಮೂರು ಬಾರಿ! ತದನಂತರ ಮಿಸ್ಟರ್‌ ವರ್ಲ್x ಪ್ರಶಸ್ತಿ ಗೆದ್ದದ್ದಷ್ಟೇ ಅಲ್ಲದೆ, ಮಿಸ್ಟರ್‌ ಒಲಿಂಪಿಯಾ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ! ನಾನೂ ಕೂಡ ಇದನ್ನೇ ಮಾಡಿದ್ದು. ಭಿನ್ನ ಇಂಗ್ಲಿಷ್‌ ಉಚ್ಚಾರಣೆ ಇರುವವರು ಹಾಲಿವುಡ್‌ನ‌ ಬೆಳೆಯಲು ಸಾಧ್ಯವಾಗಲ್ಲ ಎಂದು ಎದುರಾದವರೆಲ್ಲ ಹೇಳಿದರು, ಆದರೆ ನಾನು ಕೇಳಿದೆ- ಹಾಗೆಂದು ಯಾವ ಪುಸ್ತಕದಲ್ಲಿ ಬರದಿದೆ? ಈ ಅಘೋಷಿತ ನಿಯಮವನ್ನು ಮುರಿದೆ. ಇತಿಹಾಸದಲ್ಲಿ ಇಂಥ ಸಾಧನೆ ಬೇರೆ ಯಾರಿಂದಾದರೂ ಸಾಧ್ಯವಾಗಿದೆಯೇ-ಇಲ್ಲವೇ ಎನ್ನುವುದಕ್ಕೆಲ್ಲ ತಲೆಕೆಡಿಸಿಕೊಳ್ಳಲಿಲ್ಲ. ನಟನಾ ತರಗತಿಗಳಿಗೆ ಸೇರಿಕೊಂಡೆ, ಉಚ್ಚಾರಣೆಯ ಪಾಠಗಳನ್ನು ಹೇಳಿಸಿಕೊಂಡು, ಹಾಲಿವುಡ್‌ ಭಾಷಾಶೈಲಿಯನ್ನು ಕಲಿತೆ. ಇದ್ಯಾವುದೂ ಸುಲಭವಾಗಿರಲಿಲ್ಲ, ಆದರೆ ಅಸಾಧ್ಯವೂ ಅಲ್ಲ ಎನ್ನುವುದಂತೂ ನನಗೆ ಖಾತ್ರಿಯಿತ್ತು.

3) ಸೋಲಲು ಹಿಂಜರಿಯದಿರಿ
ಈ ಮಾತನ್ನು ಜಗತ್ತಿನ ಖ್ಯಾತನಾಮರು, ಸಾಧು-ಸಂತರು, ಪ್ರೇರಣಾದಾಯಕ ಭಾಷಣಕಾರರು, ಹಿರಿಯರು ಎಷ್ಟೊಂದು ಹೇಳಿಬಿಟ್ಟಿದ್ದಾರೆಂದರೆ, ಇದು ತೀರಾ ಸವಕಲು ವಾಕ್ಯವೆಂದೇ ಗೋಚರಿಸುತ್ತದೆ. ಆದರೆ ಈ ವಾಕ್ಯಕ್ಕೆ ಇರುವ ಶಕ್ತಿ ಮಾತ್ರ ಸವಕಲಾಗಿಯೇ ಇಲ್ಲ. ರಿಸ್ಕ್ಗಳನ್ನೇ ತೆಗೆದುಕೊಳ್ಳದೇ ಹೋಗಿದ್ದರೆ, ಮಿಸ್ಟರ್‌ ಯೂನಿವರ್ಸ್‌ ಆಗಬಲ್ಲೆ ಎಂಬ ಕನಸನ್ನು ಬೆನ್ನತ್ತದೇ ಹೋಗಿದ್ದರೆ, ಇಂದಿಗೆ ನಾನು ಹೈದಿಯನ್ನೇ ಮದುವೆಯಾಗಿ ಆಸ್ಟ್ರಿಯಾದಲ್ಲೇ ಇದ್ದುಬಿಡುತ್ತಿದ್ದೆನೇನೋ! 200 ಬಸ್ಕಿ ಹೊಡೆಯುವ ವ್ಯಕ್ತಿ, 220 ಬಸ್ಕಿ ಹೊಡೆಯಲು ಬಯಸುತ್ತಾನೆ ಎಂದುಕೊಳ್ಳಿ. ಅವನು ಹೆಚ್ಚು ಯೋಚಿಸದೇ 220 ಬಸ್ಕಿ ಹೊಡೆದುಮುಗಿಸಿಬಿಡಬೇಕು. ನನ್ನಿಂದ ಸಾಧ್ಯವಾಗುವುದಿಲ್ಲವೋ ಏನೋ ಎಂಬ ಭಯವಿದ್ದರೆ ಅವನು ಪ್ರಯತ್ನಿಸುವುದಕ್ಕೇ ಹೋಗುವುದಿಲ್ಲ. ಅನೇಕರು ಅದದೇ ಸಾಮಾನ್ಯ ಜೀವನವನ್ನೇ ಪುನರಾವರ್ತಿಸುತ್ತಾ, ಮೊದಲಿದ್ದ ಪರಿಸ್ಥಿತಿಯಲ್ಲೇ ಬದುಕು ಮುಗಿಸುವುದಕ್ಕೆ ಕಾರಣ, ಹಣೆಬರಹವಲ್ಲ, ಸೋಲುತ್ತೇನೆ ಎಂಬ ಭಯ. ಕೆಳಕ್ಕೆ ಬೀಳುವುದು ಸೋಲಲ್ಲ, ಕೆಳಕ್ಕೆ ಬಿದ್ದ ಮೇಲೆ ಮತ್ತೆ ಮೇಲೇಳಲು ತನಗೆ ಸಾಧ್ಯವೇ ಇಲ್ಲ ಎಂದು ಜೀವನವಿಡೀ ತೆವಳುತ್ತಾ ಬದುಕುವುದು ನಿಜವಾದ ಸೋಲು.

4) ಗುರಿಯ ಮೇಲೆ ದಾಳಿ ಮಾಡಿ
ಮನುಷ್ಯನಿಗೆ ಒಂದು ರೀತಿಯ ಅಗ್ರೆಸಿವ್‌ ಗುಣ ಬೇಕು- ಅವನಲ್ಲೊಂದು ವೇಗವಿರಬೇಕು. ನದಿ ಎಷ್ಟೇ ಪ್ರಶಾಂತವಾಗಿ ಕಂಡರೂ ಅದರ ಆಂತರ್ಯದಲ್ಲೊಂದು ವೇಗವಿರುತ್ತದಲ್ಲ, ಆ ಗುಣ ಇಲ್ಲದೇ ಇದ್ದರೆ ಗಮ್ಯ ತಲುಪುವುದಕ್ಕೆ, ಕಲ್ಲುಬಂಡೆಗಳನ್ನು ಸೀಳಿ ಮುಂದೋಡುವುದಕ್ಕೆ ಸಾಧ್ಯವಾಗುವುದಿಲ್ಲ. ಪ್ರತಿದಿನ ನಿಮಗೆ ನೀವೇ ಕಷ್ಟಕರ ಚಾಲೆಂಜ್‌ ಹಾಕಿಕೊಂಡು ಅವನ್ನು ಎದುರಿಸಿ.

5)ಪರಿಶ್ರಮಕ್ಕಿಂತ ಪರಮಾಪ್ತ ಯಾರೂ ಇಲ್ಲ.
ಜನ ತಮಗೆ ವ್ಯಾಯಾಮ ಮಾಡುವುದಕ್ಕೋ, ಪುಸ್ತಕ ಓದುವುದಕ್ಕೋ ಅಥವಾ ಇನ್ಯಾವುದೇ ಕೆಲಸಕ್ಕೂ ತಮಗೆ ಸಮಯವೇ ಇಲ್ಲ ಎಂದು ಹೇಳಿದಾಗ ನನಗೆ ವಿಪರೀತ ಸಿಟ್ಟು ಬರುತ್ತದೆ. ನಿಮ್ಮ ಬಳಿ 24 ಗಂಟೆಗಳಿವೆ. ಆರು ಗಂಟೆ ಮಲಗುತ್ತೀರಿ, 18 ಗಂಟೆ ಉಳಿಯಿತು. ಕೆಲಸಕ್ಕೆ ಹೋಗುತ್ತೀರಿ- ಅಲ್ಲಿ 8-10 ಗಂಟೆ ಹಿಡಿಯುತ್ತದೆ. ಇಷ್ಟಾದರೂ ನಿಮ್ಮ ಬಳಿ 10 ಗಂಟೆ ಉಳಿಯಿತಲ್ಲವೇ? ನೀವು ನಿಜಕ್ಕೂ ಪ್ಲ್ರಾನ್‌ ಮಾಡಬೇಕಿರುವುದು ಈ ಹತ್ತುಗಂಟೆಗಳನ್ನು. ಪುಸ್ತಕ ಓದಿ, ಕುಟುಂಬದವರ ಜತೆ ಕಾಲ ಕಳೆಯಿರಿ, ಕನಿಷ್ಠ 30 ರಿಂದ 45 ನಿಮಿಷವಾದರೂ ವ್ಯಾಯಾಮಕ್ಕೆ ಸಮಯ ಉಳಿಸಿಕೊಳ್ಳಿ. ಆರೋಗ್ಯವಂತರಾಗಿ ಇರಲು ಮೂರುನಾಲ್ಕು ಗಂಟೆಗಳ ವ್ಯಾಯಾಮದ ಅಗತ್ಯವೇ ಇಲ್ಲ. ಅರ್ಧ ಗಂಟೆಯೂ ಬೇಕಾದಷ್ಟಾಯಿತು. ಆದರೆ ಈ ಅರ್ಧಗಂಟೆಯಿದೆಯಲ್ಲ, ಈ ಸಮಯವನ್ನು ಪೂರ್ಣ ಬಳಕೆ ಮಾಡಿಕೊಳ್ಳಿ. ಪೂರ್ತಿ ಪರಿಶ್ರಮ ಹಾಕಿಬಿಡಿ. ಕೆಲವೇ ದಿನಗಳಲ್ಲಿ ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದಲ್ಲಿ ಆಗುವ ಬದಲಾವಣೆಗಳು ಹಾಗೂ ಈ ಬದಲಾವಣೆಗಳಿಂದಾಗಿ ನಿಮ್ಮ ಬದುಕು ಹೇಗೆ ಪಲ್ಲಟಗೊಳ್ಳುತ್ತದೆ ಎನ್ನುವುದನ್ನು ನೋಡಿ ನಿಮಗೆ ಅಚ್ಚರಿಯಾದೀತು! ಈ ಮಾತು ಕೇವಲ ವ್ಯಾಯಾಮಕ್ಕಷ್ಟೇ ಸೀಮಿತವಲ್ಲ. ನೀವು ಬರಹಗಾರರಾಗಬೇಕು ಎಂದು ಬಯಸಿದರೆ ದಿನವೂ ಬರವಣಿಗೆಗಾಗಿ ಎಷ್ಟು ಸಮಯ ಎತ್ತಿಡುತ್ತೀರಿ? 100 ಪುಸ್ತಕಗಳ ಒಂದು ಕಾದಂಬರಿ ಬರೆಯಬೇಕೆಂದರೆ ದಿನವೂ ಅದಕ್ಕಾಗಿ ಎಷ್ಟು ಹೊತ್ತು ಎತ್ತಿಡುತ್ತೀರಿ? ಸಂಗೀತ ನಿಮ್ಮ ಪ್ಯಾಶನ್‌ ಆಗಿದ್ದರೆ ಅದಕ್ಕಾಗಿ ನೀವು ವಿನಿಯೋಗಿಸುವ ಸಮಯವೆಷ್ಟು? ವಿದ್ಯಾರ್ಥಿಯಾಗಿದ್ದರೆ, ಎಷ್ಟು ಸಮಯವನ್ನು ವಿದ್ಯಾರ್ಜನೆಗೆ ಬಳಸುತ್ತೀರಿ? ಒಟ್ಟಲ್ಲಿ ಸಮಯವನ್ನು ಸರಿಯಾಗಿ ಪ್ಲ್ರಾನ್‌ ಮಾಡಿಕೊಳ್ಳಲೇಬೇಕು, ಈ ವಿಷಯದಲ್ಲಿ ನೆಪಗಳೇ ನಿಮ್ಮ ವೈರಿಗಳು.

6)ಸಮಾಜಕ್ಕೆ ಏನು ಕೊಡುತ್ತೀರಿ?
ನಮಗೆ ಜೀವನದಲ್ಲಿ ಎಷ್ಟೋ ಜನ ಕಾಲೆಳೆಯುವವರು ಇರಬಹುದು. ಆದರೆ ನಾವು ಮೇಲೇರುವುದಕ್ಕೆ ಅದಕ್ಕಿಂತಲೂ ಹೆಚ್ಚು ಪ್ರೋತ್ಸಾಹದಾಯಕ ಜನರು ಕಾರಣರಾಗಿರುತ್ತಾರೆ. ನನ್ನ ಯಶಸ್ಸಿನ ಹಿಂದೆಯೂ ಸಾವಿರಾರು ಜನರ ಕೊಡುಗೆಯಿದೆ. ಇವರೆಲ್ಲರೂ ನಮಗೆ ಸಹಾಯ ಮಾಡಿದಾಗ, ನಾವು ಅವರಿಗೆ ಸಹಾಯ ಮಾಡಬೇಕಲ್ಲವೇ? ನಾನು ನನ್ನ ಕೈಲಾದ ಮಟ್ಟಿಗೆ ಸಮಾಜಕ್ಕೆ ಸೇವೆ ಮಾಡಲು, ಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿದ್ದೇನೆ. ಈ ಪ್ರಯತ್ನವನ್ನು ಮುಂದೆಯೂ ಮುಂದುವರಿಸುತ್ತೇನೆ. ಒಂದು ಸಮಾಜ ಸೇವಾ ಸಂಘಟನೆಯನ್ನು ಸೇರಿಕೊಳ್ಳಿ, ವೃದ್ಧರಿಗೆ ಆಸರೆಯಾಗಿ, ಬಡ ವಿದ್ಯಾರ್ಥಿಗಳಿಗೆ ಬೋಧಕರಾಗಿ, ಕಷ್ಟದಲ್ಲಿರುವವರಿಗೆ ಸಾಧ್ಯವಾದಷ್ಟೂ ಹಣ ಸಹಾಯ ಮಾಡಿ…. ನಿಮ್ಮ ಸುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಿ..ಇದ್ಯಾವುದೂ ಆಗದಿದ್ದರೆ, ನಾಲ್ಕು ಜನರಿಗೆ ಪ್ರೋತ್ಸಾಹ ತುಂಬುವ ಕೆಲಸವನ್ನಾದರೂ ಮಾಡಿ, ಕಾಲೆಳೆಯುವ ಕೆಲಸ ಬಿಟ್ಟು!

ಹೇಳಿ, ಬದುಕು ಬಂಗಾರವಾಗಲು ಈ ಆರು ಸೂತ್ರಗಳು ಸಾಕಲ್ಲವೇ?

ಅರ್ನಾಲ್ಡ್‌ ಶ್ವಾರ್ಜನೆಗ್ಗರ್‌ , ನಟ, ಉದ್ಯಮಿ, ರಾಜಕಾರಣಿ

ಟಾಪ್ ನ್ಯೂಸ್

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

Charmady Ghat: ಬಿದಿರುತಳ ಅರಣ್ಯದಲ್ಲಿ ಕಾಡ್ಗಿಚ್ಚು

1-eewq

ತುಬಚಿ- ಬಬಲೇಶ್ವರ ಏತ ನೀರಾವರಿ: 3,048 ಎಕರೆ ಸ್ವಾಧೀನ, ಹಣ ಬಿಡುಗಡೆಗೆ ಎಂ.ಬಿ.ಪಾಟೀಲ ಸೂಚನೆ

1-5555

Vijayapura; ಕಾರ್ಮಿಕರ ಕೂಡಿ ಹಾಕಿ ರಾಕ್ಷಸಿ ಕೃತ್ಯ: ಎಲ್ಲ 5 ಆರೋಪಿಗಳ ಬಂಧನ

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

Tarikere: ತಂದೆ ಸಾವಿನ ವಿಷಯ ಗೊತ್ತಿಲ್ಲದೆ ಹಸೆಮಣೆ ಏರಿದ ಮಗಳು!

renukaacharya

BJP Rift; ಯತ್ನಾಳ್ ಒಬ್ಬ 420, ಗೋಮುಖ ವ್ಯಾಘ್ರ: ರೇಣುಕಾಚಾರ್ಯ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೊರೊನಾ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ಕೋವಿಡ್ ಸಂದಿಗ್ಧದಲ್ಲಿ ಎಲ್ಲ ಸವಾಲಿಗೂ ಸಿದ್ಧ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ವೇಟರ್‌ನಿಂದ ವೈರಸ್‌ವರೆಗೆ ಇರಾನಿ ಪಯಣ

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ಉದ್ಯಮಿಯಾಗಲು ಯಾವ ಮನಃಸ್ಥಿತಿ ಮುಖ್ಯ?

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ವಿಶ್ವದ ಅತೀ ದೊಡ್ಡ ಲಸಿಕಾ ಅಭಿಯಾನಕ್ಕೆ  ಆಲ್‌ ದಿ ಬೆಸ್ಟ್‌

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

ಮುಂದಾಲೋಚನೆ, ಧೈರ್ಯ ನಿಮ್ಮ ಶಕ್ತಿಯಾಗಲಿ!

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

Honnavar: ಗೋಹ*ತ್ಯೆ ಪ್ರಕರಣ: ಬಿಜೆಪಿ ತೀವ್ರ ಆಕ್ರೋಶ

14

Sullia: ಚರಂಡಿಯಲ್ಲಿ ಸಿಲುಕಿದ ಶಾಲಾ ವಾಹನ

byndoor

Shirva: ಕಾರು ಢಿಕ್ಕಿ; ದ್ವಿಚಕ್ರ ಸವಾರನಿಗೆ ಗಾಯ

car-parkala

Kaup: ಉದ್ಯಾವರ; ಮಹಿಳೆಗೆ ಬೈಕ್‌ ಢಿಕ್ಕಿ

2

Udupi: ವೇಶ್ಯಾವಾಟಿಕೆ; ಓರ್ವನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.