ಹಿಮಾಲಯ ಚಾರಣಕ್ಕೆ ಪ್ರೋತ್ಸಾಹ


Team Udayavani, Nov 27, 2019, 12:35 PM IST

27-November-10

ಶಿಕಾರಿಪುರ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಶಾಲಾ- ಕಾಲೇಜುಗಳ ಶೈಕ್ಷಣಿಕ ಪ್ರವಾಸ ಹೋಗುವುದಕ್ಕೆ ಅರ್ಥಿಕ ಸಮಸ್ಯೆ. ಅಂಥದ್ದರಲ್ಲಿ ಹಿಮಾಲಯ ಶಿಖರ ಏರುವುದು ಎಂದರೆ ತಮಾಷೆಯಾಗಿ ಕಾಣಬಹುದು. ಇಂತದ್ದರಲ್ಲಿ ಬಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಿಮಾಲಯ ಪರ್ವತಾರೋಹಣಕ್ಕೆ ಸರ್ಕಾರ ಉಚಿತ ಸೌಲಭ್ಯ ಕಲ್ಪಿಸಿದೆ.

ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಉಚಿತ ಹಿಮಾಲಯ ಪರ್ವತ ರೋಹಣ ಯೋಜನೆಯೊಂದನ್ನು ರೂಪಿಸಲಾಗಿದೆ.

ಈ ಯೋಜನೆಯಲ್ಲಿ ಶಿವಮೊಗ್ಗ ಜಿಲ್ಲೆಯ 2 ಪದವಿ ವಿದ್ಯಾರ್ಥಿಗಳು ಆಯ್ಕೆಯಾಗಿ ಭಾಗವಹಿಸಿ ಅದರ ಅನುಭವನ್ನು ಪಡೆದುಕೊಂಡಿದ್ದಾರೆ. ರಾಜ್ಯದಲ್ಲಿ ಈ ವರ್ಷ 60 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಈ ತಂಡದಲ್ಲಿ 21 ಯುವತಿಯರು 39 ಯುವಕರು ಇದ್ದರು.

ಆಯ್ಕೆ ಹೇಗೆ; ಕರ್ನಾಟಕದಿಂದ ಜನರಲ್‌ ತಿಮ್ಮಯ್ಯ ಅಕಾಡೆಮಿ ವತಿಯಿಂದ ಪ್ರತಿ ವರ್ಷ ಪರ್ವತಾರೋಹಣಕ್ಕೆ ಅರ್ಹ ಅಭ್ಯರ್ಥಿಗಳ ಅರ್ಜಿ ಕರೆಯಲಾಗುತ್ತದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಲ್ಲಿ ದೈಹಿಕ ಮತ್ತು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ಅದರಲ್ಲಿ ಆಯ್ಕೆಯಾದ ಅಭ್ಯರ್ಥಿಗಳನ್ನು ದೆಹಲಿಯ ಇಂಡಿಯನ್‌ ಮೌಂಟ್‌ ಪೌಂಡೇಶನ್‌ ಗೆ ಕಳುಹಿಸಲಾಗುತ್ತದೆ. ದೇಶದಲ್ಲಿ ಒಟ್ಟು 5 ಪರ್ವತಾರೋಹಣ ಸಂಸ್ಥೆಗಳಿದ್ದು ಅದರ ಮೂಲಕ ಶಿಬಿರಾರ್ಥಿಗಳನ್ನು ಹಿಮಾಲಯಕ್ಕೆ ಕಳುಹಿಸಬಹುದು ಎಂದು ನಿಶ್ಚಿಯಿಸುತ್ತಾರೆ. ಪ್ರತಿಯೊಬ್ಬ ಅಭ್ಯರ್ಥಿಯ ಸಂಪೂರ್ಣ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರವೇ ಭರಿಸುತ್ತದೆ.

ಶಿವಮೊಗ್ಗ ಜಿಲ್ಲೆಯ ಇಬ್ಬರು ವಿದ್ಯಾರ್ಥಿಗಳು ಆಯ್ಕೆ: ಈ ಪರೀಕ್ಷೆಯಲ್ಲಿ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು ಇಬ್ಬರೂ ಶಿಕಾರಿಪುರ ತಾಲೂಕಿನವರೇ ಆಗಿದ್ದಾರೆ. ರಾವುಲ್‌ ಬಿ.ಆರ್‌. ಬಳ್ಳೂರು, ಸಂತೋಷ್‌ ನಾಯ್ಕ, ಮುಳಕೊಪ್ಪ ಪದವಿ ವಿದ್ಯಾರ್ಥಿಗಳಾಗಿದ್ದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವ್ಯಾಸಾಂಗ ಮಾಡುತ್ತಿದ್ದಾರೆ.

ಯಾವ ಯಾವ ಸ್ಥಳಗಳ ಭೇಟಿ: ದೆಹಲಿಯ ಐಎಂಎಫ್‌ ಸಂಸ್ಥೆಯಿಂದ ಜಮ್ಮು- ಕಾಶ್ಮೀರ್‌, ಲಾಡಖ್‌, ಲೇ, ಕಾರ್ಗಿಲ್‌ ಯುದ್ದಭೂಮಿ, ಜೋಜಿಲಾ ಪಾಸ್‌, ಸಿಯಾಚಿನ್‌ ಗಡಿಗೆ ತೆರಳಿದ್ದಾರೆ. ತಂಡದ ಶಿಬಿರಾರ್ಥಿಗಳನ್ನು ಮಾರ್ಗದರ್ಶನ ಮಾಡಲು ನುರಿತ ಶಿಕ್ಷಕರಿದ್ದು ಹಿಮ ಪ್ರದೇಶದಿಂದ ಪರ್ವತವನ್ನು ಸೇರುವುದು ಸವಾಲಿನ ಕೆಲಸ. ಸಾವಿರಾರು ಅಡಿ ಎತ್ತರದ ಪ್ರದೇಶಗಳಲ್ಲಿ ಪರ್ವತಾರೋಹಣ ನಡೆಸಲಾಗುತ್ತದೆ. ಪರ್ವತಾರೋಹಣದ ಉದ್ದೇಶ: ಮುಖ್ಯವಾಗಿ ಸರ್ಕಾರ ದಕ್ಷಿಣ ಭಾರತದಿಂದ ಶಿಬಿರಾರ್ಥಿಗಳನ್ನು ಕಳುಹಿಸುವುದು ಪ್ರತಿಯೊಬ್ಬ ವಿದ್ಯಾರ್ಥಿಯೂ ಹಿಮಾಲಯದ ಬಗ್ಗೆ ಓದುವಾಗ ನಾನು ಈ ಶಿಖರವನ್ನು ಏರಬೇಕು ಎನ್ನುವ ಆಸೆಯನ್ನು ಹೊಂದಿರುತ್ತಾರೆ. ಅದರೆ ಬಡತನ ಆಸೆಯನ್ನು
ಕುಗ್ಗಿಸುತ್ತದೆ ಮತ್ತು ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಹೇಗೆ ರಕ್ಷಿಸಬೇಕು ಹಾಗೂ ಹಿಮಾಲಯದಲ್ಲಿ ಸೈನಿಕರ ಕಷ್ಟ ಪರಿಶ್ರಮ, ಮೈನಸ್‌ ಡಿಗ್ರಿಯಲ್ಲಿ ನಮ್ಮ ಸೈನಿಕರು ದೇಶಸೇವೆ ಮಾಡುವುದು ಹೇಗೆಂದು ತಿಳಿಯುವುದು, ಅದರ ಅನುಭವದ ಬಗ್ಗೆ ಈ ರೀತಿ ಹತ್ತು ಹಲವು ದೇಶಾಭಿಮಾನ ಹಾಗೂ ಸಂಕಷ್ಟದ ಸಂದರ್ಭದಲ್ಲಿ ಜನರ ರಕ್ಷಣೆಯ ಕುರಿತು ಶಿಬಿರದಲ್ಲಿ ತರಬೇತಿ ನೀಡಲಾಗುತ್ತದೆ. ಈ ಮೂಲಕ ಪರ್ವತ ಏರುವುದಕ್ಕೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ.

ನಾನು ಪತ್ರಿಕೆಯಲ್ಲಿ ಜನರಲ್‌ ತಿಮ್ಮಯ್ಯ ಅಕಾಡೆಮಿಯ ಪ್ರಕಟಣೆಯನ್ನು ನೋಡಿ ಅರ್ಜಿ ಹಾಕಿದೆ. ನೀವು ಆಯ್ಕೆಯಾಗಿದ್ದೀರ ಎಂದು ಪತ್ರ ಬಂತು. ನಂತರ ಮೆಡಿಕಲ್‌ ಮತ್ತು ದೈಹಿಕ ಪರೀಕ್ಷೆಗೆ ಬೆಂಗಳೂರಿನಲ್ಲಿ ಪರೀಕ್ಷೆ ಪಾಸ್‌ ಆಗಿ ನಮ್ಮನ್ನು ದೆಹಲಿಗೆ ಕಳುಹಿಸಿದರು. ನಮಗೆ ಸಂಪೂರ್ಣ ತರಬೇತಿ ನೀಡಿ ಹಿಮಾಲಯ ಪರ್ವತ ಶಿಖರ ಏರುವ ಅವಕಾಶ ಸಿಕ್ಕಿತು. ಇದರಿಂದ ನಾವು ಸಾಕಷ್ಟು ಕಲಿತಿದ್ದೇವೆ. ನಮ್ಮ ಸೈನಿಕರ ಕಷ್ಟ ಹಾಗೂ ಅವರ ದೇಶಾಭಿಮಾನ ನಮ್ಮ ಮೈ ರೋಮಾಂಚನಗೊಳಿಸಿತು. ನಮ್ಮ ಜೀವನದಲ್ಲಿ ಹಿಮಾಲಯ ಶಿಖರ ಏರುತ್ತೇವೆ ಎಂಬ ಕನಸು ಇರಲಿಲ್ಲ. ಈ ಯೋಜನೆಯಿಂದ ನಮ್ಮ ಕನಸ್ಸು ನನಸಾಗಿದೆ.
. ರಾವುಲ್‌ ಬಿ.ಆರ್‌,
ಹಿಮಾಲಯ ಶಿಖರ ಏರಿದ ವಿದ್ಯಾರ್ಥಿ

ಟಾಪ್ ನ್ಯೂಸ್

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

1-adani

Adani funding; 100 ಕೋಟಿ ನಿಧಿಯನ್ನು ಸ್ವೀಕರಿಸುವುದಿಲ್ಲ ಎಂದ ರೇವಂತ್ ರೆಡ್ಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

Waqf; Donated property is different, writing the property to the Waqf Board is different: C.T. Ravi

Waqf; ದಾನದ ಆಸ್ತಿ ಬೇರೆ, ಕಂಡವರ ಆಸ್ತಿ ವಕ್ಫ್‌ ಬೋರ್ಡ್‌ ಗೆ ಬರೆಯುವುದು ಬೇರೆ: ಸಿ.ಟಿ ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Untitled-1

Katpadi: ಹೆದ್ದಾರಿ ಅಂಚಿನಲ್ಲಿ ಅಪಾಯ!; ರಸ್ತೆ ಬದಿಯಲ್ಲಿ ಉದ್ದಕ್ಕೂ ಹೊಂಡಗುಂಡಿ

K.-J.-George

ಒಕ್ಕಲಿಗ ಸಂಘದ ಕಾರ್ಯಕ್ರಮದಲ್ಲಿ ಕೆ.ಜೆ.ಜಾರ್ಜ್ ಭಾಷಣಕ್ಕೆ ಆಕ್ಷೇಪ: ಕ್ಷಮೆಯಾಚಿಸಿದ ಸಚಿವರು

3

Gurupura: ನಾಡಕಚೇರಿ ಕಟ್ಟಡ ಉದ್ಘಾಟನೆಗೆ ಸಿದ್ಧ

KMC

Health Card: ಮಣಿಪಾಲ ಆರೋಗ್ಯಕಾರ್ಡ್ ನೋಂದಾವಣೆಗೆ ಐದು ದಿನ ಬಾಕಿ: ನ.30 ಕೊನೆಯ ದಿನ 

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

4

Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್‌ ಬಾಟಲಿ ಸದ್ದು  

Kharge

JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ

ಅಗ್ಗಕ್ಕೆ ಸೇಲಾದ ಪಾಂಡೆ, ಬೆಂಗಳೂರಿಗೆ ಬಂದ ಆಸೀಸ್‌ ಆಟಗಾರ

IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್‌ ಗೆ ಬಂಪರ್‌, ಬೆಂಗಳೂರಿಗೆ ಬಂದ ಡೇವಿಡ್

1-Chamundeshwari

Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ

chetah

Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.